ಕೆಲವೊಂದು ಸಮಯ ನಮಗೆ ಗೊತ್ತೊಲ್ಲದೆಯೇ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿ ಬಿಡುತ್ತೇವೆ. ಈ ವೇಳೆ ನಮ್ಮ ಸಹಾಯಕ್ಕೆ ಬರುವುದು ಪರ್ಸನಲ್ ಲೋನ್ ಗಳು. ಹಲವಾರು ಸಂದರ್ಭಗಳಲ್ಲಿ ಪರ್ಸನಲ್ ಲೋನ್ ಅಗತ್ಯ ಬೀಳುತ್ತದೆ. ಈ ವೇಳೆ ನಾವು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕಾದದ್ದು ಅಗತ್ಯ.
ನಿಮ್ಮ ಖರ್ಚು ಆದಾಯವನ್ನು ಮೀರಿದಾಗಲೂ ಪರ್ಸನಲ್ ಲೋನ್ ಬೇಕಾಗುತ್ತದೆ. ಆದರೆ ನಿಮಗೆ ಸಾಲ ಕೊಡುವವರು ಲೆಕ್ಕ ಹಾಕುವುದು ನಿಮ್ಮ ಆದಾಯದ ಮೌಲ್ಯವನ್ನೇ ಅನ್ನೋದನ್ನ ಮರೆಯಬೇಡಿ. ನಿಮ್ಮ ಇಎಮ್ ಐ ಅಂದರೆ ಕಂತು ತುಂಬುವ ಶಕ್ತಿಯೂ ಸಾಲ ನೀಡಿಕೆಯಲ್ಲಿ ಪ್ರಮುಖವಾಗುತ್ತದೆ. ಪರ್ಸನಲ್ ಲೋನ್ ಗೆ ಅರ್ಜಿ ಹಾಕುವ ಮುನ್ನ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಮರುಪಾವತಿ ಮಾಡಿರಬೇಕು.[ಕ್ರೆಡಿಟ್ ಕಾರ್ಡ್ ಕೊಳ್ಳುವ ಮುನ್ನ 9 ಅಂಶ ತಲೆಯಲ್ಲಿರಲಿ]

ಪರ್ಸನಲ್ ಲೋನ್ ವಿವರಗಳು
* 50 ಸಾವಿರದಿಂದ 25 ಲಕ್ಷ ದವರೆಗೆ ಪರ್ಸನಲ್ ಲೋನ್ ಪಡೆಯಬಹುದು.
* ಸಾಲದ ಹಣ ಪಡೆಯುವಾಗ ಶೇ.1 ರಿಂದ 4 ರವರೆಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ
* ಒಂದು ವರ್ಷದಿಂದ 5 ವರ್ಷದ ಅವಧಿಗೆ ಸಾಲ ಪಡೆಯಬಹುದು
* ತಿಂಗಳ ಕಂತು ಅಥವಾ ಇಎಮ್ ಐ ನೀವು ಪಡೆದ ಸಾಲದ ಆಧಾರದಲ್ಲಿ ನಿರ್ಧರಿತವಾಗುವುದು.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳು
* ಸಾಲ ಪಡೆಯಲು ಬಯಸುವವನು ನಿರ್ದಿಷ್ಟ ಪ್ರಮಾಣದ ವೇತನ ಪಡೆಯುತ್ತಿರಬೇಕು ಅಥವಾ ವ್ಯಾಪಾರದಲ್ಲಿ ತೊಡಗಿರಬೇಕು
* ವಯಸ್ಸು 22 ರಿಂದ 59 ವರ್ಷದ ಒಳಗಿರಬೇಕು
* ಬ್ಯಾಂಕ್ ಖಾತೆ ಹೊಂದಿರಬೇಕು
* ಹಿಂದಿನ ವ್ಯವಹಾರ ಮತ್ತು ಮರುಪಾವತಿ ದಾಖಲಾತಿ ಉತ್ತಮವಾಗಿದ್ದರೆ ಒಳ್ಳೆಯದು
* ಕಳೆದ ಮೂರು ತಿಂಗಳಲ್ಲಿ ನೀವು ಸಾಲ ಪಡೆಯಲು ಹೋಗಿ ಬರಿಗೈಯಲ್ಲಿ ಬಂದ ದಾಖಲೆ ಇರಬಾರದು
* ಪ್ರತಿ ತಿಂಗಳು ಹಣ ಮರುಪಾವತಿ ಮಾಡುವ ಶಕ್ತಿ ಹೊಂದಿರಬೇಕು[ಕ್ಯಾನ್ಸಲ್ಡ್ ಚೆಕ್ ಗಳು ಎಲ್ಲೆಲ್ಲಿ ಉಪಯೋಗಕ್ಕೆ ಬರುತ್ತವೆ?]
ಸಾಲ ಪಡೆಯಲು ಏನೇನು ಬೇಕು?
* ಪಾಸ್ ಪೋರ್ಟ್ ಸೈಜ್ ಫೋಟೋ
* ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿ
* ಕೊನೆಯ ಮೂರು ತಿಂಗಳ ವೇತನ ಪತ್ರ(ಸ್ಯಾಲರಿ ಸ್ಲಿಪ್)
* ಕೊನೆಯ ಆರು ತಿಂಗಳ ನಿಮ್ಮ ಬ್ಯಾಂಕ್ ವ್ಯವಹಾರದ ದಾಖಲಾತಿ
* ಗುರುತಿನ ಪತ್ರ(ಯಾವುದಾದರೊಂದು): ಪಾನ್ ಕಾರ್ಡ್, ಪಾಸ್ ಪೋರ್ಟ್, ಚಾಲನಾ ಪರವಾನಗಿ, ಚುನಾವಣಾ ಪತ್ರ, ಸರ್ಕಾರಿ ನೌಕರರಾಗಿದ್ದರೆ ನಿರ್ದಿಷ್ಟ ಇಲಾಖೆಯ ಗುರುತಿನ ಚೀಟಿ.
* ವಿಳಾಸ ದೃಢೀಕರಣ(ಯಾವುದಾದರೊಂದು): ಪಾಸ್ ಪೋರ್ಟ್, ಚಾಲನಾ ಪರವಾನಗಿ, ಚುನಾವಣಾ ಪತ್ರ, ರೆಶನ್ ಕಾರ್ಡ್, ಬ್ಯಾಂಕ್ ಸ್ಟೇಟ್ ಮೆಂಟ್, ಬಾಡಿಗೆ ಕರಾರು, ದೂರವಾಣಿ ಬಿಲ್, ವಿದ್ಯುತ್, ನೀರಿನ ಬಿಲ್
ಕೊನೆ ಮಾತು: ದಿನದಿಂದ ದಿನಕ್ಕೆ ಪರ್ಸನಲ್ ಲೋನ್ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿದೇ ಅತಿ ದುಬಾರಿ ಬಡ್ಡಿ ತೆರುವ ಸಾಲ ಎಂದರೆ ಈ ಸಾಲಗಳೇ. ಒಮ್ಮೊಮ್ಮೆ ಶೇ. 24 ರವರೆಗೂ ಬಡ್ಡಿ ನೀಡಬೇಕಾಗಿ ಬರಬಹುದು. ನಿಮ್ಮ ಆದಾಯವನ್ನು ಲೆಕ್ಕ ಹಾಕಿಕೊಂಡು ಎಲ್ಲಾ ಕಾಗದ ಪತ್ರ ಪರಿಶೀಲಿಸಿ ಅತಿ ಅಗತ್ಯ ಎಂದೆನಿಸಿದಾಗ ಮಾತ್ರ ಪರ್ಸನಲ್ ಲೋನ್ ಪಡೆಯುವುದು ಒಳಿತು. (ಗುಡ್ ರಿಟರ್ನ್ಸ್.ಇನ್)


Click it and Unblock the Notifications