ಆದಾಯ ತರುವ 6 ತೆರಿಗೆ ರಹಿತ ಬಾಂಡುಗಳು

ಭಾರತದಲ್ಲಿ ತೆರಿಗೆ ಮುಕ್ತ ಆದಾಯ ಪಡೆಯಲು ಬಾಂಡುಗಳು ಅತ್ಯುತ್ತಮ ಸಾಧನಗಳಾಗಿವೆ. ಒಟ್ಟಾರೆಯಾಗಿ ಆರ್ಥಿಕತೆಯಲ್ಲಿ ಬಡ್ಡಿದರವು ಕುಸಿತ ಕಾಣುತ್ತಿದ್ದರು ಕೆಲ ಬಾಂಡುಗಳ ಮೂಲ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲದೆ ಅವುಗಳ ಮೂಲ ಬೆಲೆಗಳಲ್ಲಿ ಹೆಚ್ಚಳವಾಗುವುದನ್ನು ಕಾಣಬಹುದಾಗಿದೆ. ಅದಾಗ್ಯೂ, ವೈಯಕ್ತಿಕವಾಗಿ ಹೆಚ್ಚಿನ ಫಲವನ್ನು ಕೊಡುವುದಾಗಿಯೂ ಘೋಷಿಸುತ್ತವೆ. ಅವುಗಳ ಸಂಕ್ಷೀಪ್ತ ಚಿತ್ರಣ ಇಲ್ಲಿದೆ ನೊಡಿ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ N6 ಸರಣಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ N6 ಸರಣಿ

ಈ ಬಾಂಡುಗಳು 1210 ರೂ. ಗಳಿಗೆ ವ್ಯವಹಾರ ನಡೆಸಿವೆ. ಇಷ್ಟಾದರೂ 8.75% ರಷ್ಟು ಆರೋಗ್ಯಕರ ಕೂಪನ್ ದರವನ್ನು ಘೋಷಿಸಿವೆ. ಮಾರ್ಚ್ 2017 ಈ ಬಾಂಡುಗಳ ಮುಂದಿನ ಬಡ್ಡಿ ಪಾವತಿ ದಿನಾಂಕ ಆಗಿರುತ್ತದೆ.

HUDCO N2 ಬಾಂಡುಗಳು

HUDCO N2 ಬಾಂಡುಗಳು

ಹೆಚ್ಚು ತೆರಿಗೆ ಪಾವತಿ ಮಾಡುವವರಿಗೆ HUDCO N2 ಬಾಂಡುಗಳು ಉತ್ತಮವಾದವುಗಳಾಗಿವೆ. ಈ ಬಾಂಡುಗಳು 8.2% ಬಡ್ಡಿದರವನ್ನು ಘೋಷಿಸಿದ್ದು, ಪ್ರತಿ ವರ್ಷ ಮಾರ್ಚ್ 5 ರಂದು ಬಡ್ಡಿಯನ್ನು ಪಾವತಿಸಲಾಗುತ್ತದೆ. ಭಾರತೀಯ ರೇಲ್ವೆಗಿಂತಲೂ ಕೂಪನ್ ದರ ಅತ್ಯುತ್ತಮವಾಗಿದೆ. ಬಡ್ಡಿದರದಲ್ಲಿನ ಕುಸಿತದಿಂದಾಗಿ ಇಳುವರಿಯಲ್ಲೂ ಕುಸಿತ ಕಂಡಿದ್ದರೂ ಬಾಂಡುಗಳು ಬೆಲೆಯನ್ನು ಗಳಿಸಿವೆ.

HUDCO N3 ಬಾಂಡುಗಳು

HUDCO N3 ಬಾಂಡುಗಳು

HUDCO N3 ಬಾಂಡುಗಳು ಹೆಚ್ಚುಕಡಿಮೆ ಹೋಲಿಕೆವುಳ್ಳವುಗಳಾಗಿವೆ. ಇವು 8.1% ಕೂಪನ್ ದರವನ್ನು ಮಾತ್ರ ಕೊಡುತ್ತವೆ.
ಈ ಬಾಂಡುಗಳ ಪ್ರಸ್ತುತ ದರ 1107 ರೂ. ಆಗಿದ್ದು, ಮಾರ್ಚ್ 5, 2016 ಕ್ಕೆ ಮುಂದಿನ ಪಾವತಿ ದಿನಾಂಕ ಇದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

NSE ಅನುಸಾರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ((NHAI) ಬಾಂಡುಗಳ ಬೆಲೆ 1151 ರೂ. ಆಗಿದೆ. ಇವುಗಳ ಕೂಪನ್ ದರ 8.2% ರಷ್ಟಿದೆ. ಅಕ್ಟೋಬರ್ 1, 2016 ಈ ಬಾಂಡುಗಳ ಮುಂದಿನ ಪಾವತಿ ದಿನಾಂಕ ಆಗಿರುತ್ತದೆ.

REC N6 ಬಾಂಡುಗಳು

REC N6 ಬಾಂಡುಗಳು

ಇವುಗಳು ಇನ್ನೊಂದು ಪ್ರಕಾರದ ಬಾಂಡುಗಳಾಗಿದ್ದು, ಕೂಪನ್ ರದ ಅಥವಾ ಬಡ್ಡಿದರ 8% ಕ್ಕಿಂತಲೂ ಹೆಚ್ಚಿನದಾಗಿರುತ್ತದೆ. ಸಾಮಾನ್ಯವಾಗಿ ಬಡ್ಡಿದರ 8.46% ರಷ್ಟಿರುತ್ತದೆ.
ಇದು ಅತ್ಯುತ್ತಮವಾದ ಬಾಂಡುಗಳಲ್ಲಿ ಒಂದಾಗಿದ್ದು ಬಡ್ಡಿ ಮತ್ತು ಕೂಪನ್ ದರ ಉತ್ತಮವಾಗಿದೆ. ಮುಂದಿನ ಪಾವತಿ ದಿನಾಂಕ ಡಿಸೆಂಬರ್ 1, 2016.

ಭಾರತೀಯ ರೇಲ್ವೆ N7 ಸರಣಿ

ಭಾರತೀಯ ರೇಲ್ವೆ N7 ಸರಣಿ

ಭಾರತೀಯ ರೇಲ್ವೆ N7 ಸರಣಿಯ ತೆರಿಗೆ ಮುಕ್ತ ಬಾಂಡುಗಳು 8.23% ರಷ್ಟು ಬಡ್ಡಿದರವನ್ನು ಘೋಷಿಸಿವೆ. ತೆರಿಗೆ ರಹಿತ ಬಾಂಡುಗಳಿಗೆ ಹೋಲಿಸಿದಂತೆ ಇವುಗಳ ಕೂಪನ್ ದರ ಕೂಡ ಚೆನ್ನಾಗಿದೆ. NSE ಅನುಸಾರ ಬಾಂಡುಗಳ ಪ್ರಸ್ತು ಬೆಲೆ 1105 ರೂ. ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+