ಆನ್ಲೈನ್ ಮೂಲಕ ತೆರಿಗೆ ಕಟ್ಟಲು 6 ವೆಬ್ಸೈಟ್ ಗಳು ಲಭ್ಯ: ಕೆಲವು ಉಚಿತ

ಇದು ತೆರಿಗೆ ಆದಾಯವನ್ನು ಕಟ್ಟುವ ಸಮಯವಾಗಿದ್ದು, ಕೆಲವರು ತೆರಿಗೆಯನ್ನು ಪಾವತಿಸಿರಬಹುದು ಅಥವಾ ಮತ್ತೆ ಕೆಲವರು ತಮ್ಮ ಕೆಲಸದ ಒತ್ತಡದಲ್ಲಿ ಪಾವತಿಸದೆ ಇರಬಹುದು. ನಿಮ್ಮ ಆದಾಯ 5 ಲಕ್ಷಕ್ಕಿಂತಲೂ ಹೆಚ್ಚಿದ್ದಲ್ಲಿ ತೆರಿಗೆ ಆದಾಯವನ್ನು ಆನ್ಲೈನ್ ಮೂಲಕ ಕಟ್ಟಬಹುದಾಗಿದೆ. ಆನ್ಲೈನ್ ಮೂಲಕ ತೆರಿಗೆಯನ್ನು ಪಾವತಿಸಬಹುದಾದ 6 ವೆಬ್ಸೈಟ್ ಗಳು ಇಲ್ಲಿವೆ ನೋಡಿ.

HR ಬ್ಲಾಕ್

HR ಬ್ಲಾಕ್

ಇದು ಭಾರತದಲ್ಲಿ ತುಂಬಾ ಪ್ರಸಿದ್ದವಾಗಿರುವ ವೆಬ್ಸೈಟ್ ಆಗಿದೆ. ಓದುಗರಿಗೆ ಈ ಸೈಟ್ ನಲ್ಲಿ ಉಪಕರಣಗಳು ಸಹಜವಾಗಿ ಲಭ್ಯವಿದ್ದು ಫಾರ್ಮ್ 16 ರ ಮಾಹಿತಿ ಇರುತ್ತದೆ. ಫಾರ್ಮ್ ತುಂಬುವಾಗ ಇದು ಸ್ವಯಂಚಾಲಿತವಾಗಿ ಖಾಲಿ ಇರುವ ಜಾಗ ತುಂಬಿಕೊಳ್ಳುವುದರಿಂದ ಸಮಯದ ಉಳಿತಾಯವೂ ಆಗುತ್ತದೆ.
ಒಂದು ಸಲ ನೀವು ತೆರಿಗೆ ಪಾವತಿಸಿದ ನಂತರ ಆದಾಯ ತೆರಿಗೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಯಾವಾಗಲೂ ಲಭ್ಯವಿರುತ್ತದೆ. ಜೊತೆಗೆ ಸೈಟಿನ ಟೀಮ್ ನವರು ಕರೆ ಮಾಡಿ ಮಾಹಿತಿಯನ್ನು ಸಹ ಒದಗಿಸುತ್ತಾರೆ.

Cleartax (ಕ್ಲಿಯರ್ ಟ್ಯಾಕ್ಷ್)

Cleartax (ಕ್ಲಿಯರ್ ಟ್ಯಾಕ್ಷ್)

Cleartax ಆನ್ಲೈನ್ ಸೈಟ್ ಮುಖಾಂತರ ಉಚಿತವಾಗಿ ಆದಾಯ ತೆರಿಗೆಯನ್ನು ಕಟ್ಟಬಹುದಾಗಿದೆ. ನಿಮ್ಮ ಇಮೇಲ್ ಮುಖಾಂತರ ಲಾಗಿನ್ ಆಗಿ ಪ್ರಕ್ರಿಯೆಯನ್ನು ಆರಂಭಿಸಬೇಕು. ಇದೊಂದು ಸರಳವಾದ software ಆಗಿದ್ದು, ವೈಯಕ್ತಿಕ ತೆರಿಗೆ ಆದಾಯ ಪಾವತಿಸುವವರ ನೆಚ್ಚಿನ ತಾಣವಾಗಿದೆ.

Tax Spanner (ಟ್ಯಾಕ್ಷ್ ಸ್ಪ್ಯಾನ್ನರ್)

Tax Spanner (ಟ್ಯಾಕ್ಷ್ ಸ್ಪ್ಯಾನ್ನರ್)

ತೆರಿಗೆ ಆದಾಯವನ್ನು ಪಾವತಿಸುವಾಗ ಟ್ಯಾಕ್ಷ್ ಸ್ಪ್ಯಾನ್ನರ್ ವಿಧಿಸುವ ಶುಲ್ಕ ಬದಲಾಗುತ್ತಿರುತ್ತದೆ. 10 ನಿಮಿಷದ ಒಳಗಾಗಿ ಆದಾಯ ತೆರಿಗೆಯನ್ನು ಪಾವತಿಸುವ ಭರವಸೆಯನ್ನು ನೀಡುತ್ತದೆ. ಈ ಸೈಟ್ ನಲ್ಲಿ ಉಚಿತವಾಗಿ ಯಾವುದೇ ಸೌಲಭ್ಯಗಳು ಲಭ್ಯವಿರುವುದಿಲ್ಲ.

Tax Smile (ಟ್ಯಾಕ್ಷ್ ಸ್ಮೈಲ್)

Tax Smile (ಟ್ಯಾಕ್ಷ್ ಸ್ಮೈಲ್)

5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ತೆರಿಗೆದಾರರು ಈ ಸೈಟ್ ಮುಖಾಂತರ ಉಚಿತವಾಗಿ ಆದಾಯ ತೆರಿಗೆಯನ್ನು ಕಟ್ಟಬಹುದಾಗಿದೆ. ನೀವು ಸೈಟ್ ಮುಖಾಂತರ ಫಾರ್ಮ್ 16 ಅಪ್ಲೋಡ್ ಮಾಡಬಹುದು. ತೆರಿಗೆ ಆದಾಯವನ್ನು ಪಾವತಿಸುವಾಗ ಸ್ನೇಹಿ ಪ್ರಕ್ರಿಯೆಯನ್ನು ಅನುಸರಿಸಬಹುದಾಗಿದೆ.

Vittena (ವಿಟ್ಟೆನಾ)

Vittena (ವಿಟ್ಟೆನಾ)

ಇದು ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಇ-ರಿಟರ್ನ್ ಮಧ್ಯವರ್ತಿಯಾಗಿ ಹಾಗೂ ಕಾರ್ಪೋರೇಟ್ ಅಡಿಟರ್ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಂಪನಿ ಹೊಸದಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದೆ.
ಇದು ಉಚಿತವಾಗಿ ಲಭ್ಯವಿಲ್ಲದಿದ್ದರೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿದೆ.

ಭಾರತ ಸರ್ಕಾರದ ವೆಬ್ಸೈಟ್ (Government of India website)

ಭಾರತ ಸರ್ಕಾರದ ವೆಬ್ಸೈಟ್ (Government of India website)

ತೆರಿಗೆ ಆದಾಯವನ್ನು ಉಚಿತವಾಗಿ ಪಾವತಿಸಲು ಈ ಆದಾಯ ತೆರಿಗೆ ವೆಬ್ಸೈಟ್ ಗೆ ಲಾಗಿನ್ ಆಗಬಹುದು. ಪ್ರಾರಂಭದ ದಿನಗಳಲ್ಲಿ ತುಂಬಾ ನಿಧಾನವಾಗಿದ್ದ ಈ ಸೈಟ್ ಇತ್ತೀಚಿನ ದಿನಗಳಲ್ಲಿ ತುಂಬಾ ಸುಧಾರಿಸಿದೆ. ಸರ್ವರ್ ಸೇವೆ ತುಂಬಾ ಚೆನ್ನಾಗಿದ್ದು, ಇಮೇಲ್ ಮುಖಾಂತರ ಕುಂದುಕೊರತೆಗಳನ್ನು ತಿಳಿಸಬಹುದಾಗಿದೆ. ಅಲ್ಲದೆ ಸಹಾಯವಾಣಿ ಸೌಲಭ್ಯವನ್ನು ಕಲ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+