For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಕ್ಯಾನ್ಸರ್ ವಿಮಾ ಯೋಜನೆಗಳು

By Siddu
|

ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿನಂತೆ ಆರೋಗ್ಯವಂತರಾಗಿರಲು ಎಲ್ಲರೂ ಬಯಸುತ್ತಾರೆ. ಅದರಲ್ಲೂ ಕ್ಯಾನ್ಸರ್ ಎಂದಾಕ್ಷಣ ಎದೆಯಲ್ಲಿ ಒಮ್ಮೆ ದಿಗಿಲುಂಟಾಗುತ್ತದೆ. ಈ ಮಾರಕ ಕಾಯಿಲೆ ತುಂಬಾ ವೇಗವಾಗಿ ಹರಡುತ್ತಿದೆ. ಅಲ್ಲದೆ ಇದರ ಚಿಕಿತ್ಸೆಗೆ ತುಂಬಾ ಖರ್ಚು ಮಾಡಬೇಕಾಗುತ್ತದೆ. ತಕ್ಷಣದಲ್ಲಿ ಅಷ್ಟೊಂದು ಪ್ರಮಾಣದ ಹಣವನ್ನು ಹೊಂದಿಸುವುದು ಕಷ್ಟವಾಗುತ್ತದೆ.
ಹೀಗಾಗಿಯೇ ಮುಂಜಾಗ್ರತಾ ಕ್ರಮವಾಗಿ ಕ್ಯಾನ್ಸರ್ ನಿಂದ ರಕ್ಷಣೆ ಪಡೆಯಲು ಆರೋಗ್ಯ ಪಾಲಿಸಿಗಳನ್ನು ಮಾಡಿಸಬೇಕಾಗುತ್ತದೆ. ಇಂತಹ ವಿಮೆಗಳು ಕಷ್ಟಕಾಲದಲ್ಲಿ ಕೈಹಿಡಿಯುತ್ತವೆ. ನಮ್ಮ ದೇಶದಲ್ಲಿ ಅನೇಕ ಅತ್ಯುತ್ತಮ ಕ್ಯಾನ್ಸರ್ ವಿಮೆಗಳು ಲಭ್ಯವಿದ್ದು ಅವುಗಳ ಪರಿಚಯ ಇಲ್ಲಿದೆ ನೋಡಿ.

HDFC ಕ್ಯಾನ್ಸರ್ ಗೋಲ್ಡ್ ಯೋಜನೆ

HDFC ಕ್ಯಾನ್ಸರ್ ಗೋಲ್ಡ್ ಯೋಜನೆ

ಈ ವಿಮೆಯ ಮೂಲಕ ವಿವಿಧ ಲಾಭಗಳನ್ನು ಪಡೆಯಬಹುದಾಗಿದೆ. ಕ್ಯಾನ್ಸರ್ ಗೊತ್ತಾದ ಪ್ರಾರಂಭಿಕ ಹಂತದಲ್ಲಿಯೇ ಈ ವಿಮೆಯಲ್ಲಿ ನಿಮಗೆ ಉತ್ತಮವಾದ ಪ್ರೀಮಿಯಮ್ ಸೌಲಭ್ಯಗಳು ಸಿಗುತ್ತವೆ.
ಈ ಪಾಲಿಸಿಯ ಅಡಿಯಲ್ಲಿ ವಾರ್ಷಿಕವಾಗಿ 10% ರಷ್ಟು ಮೊತ್ತ ಹೆಚ್ಚಾಗುತ್ತದೆ. ಪ್ರಾರಂಭದಲ್ಲಿ ಕ್ಯಾನ್ಸರ್ ಇದೆಯೆಂದು ಪತ್ತೆಯಾದಲ್ಲಿ ಭಾರಿ ಮೊತ್ತದ ಹಣ ಸಿಗುತ್ತದೆ.
ಇದು 2000-3000 ರೂ. ಮೊತ್ತದ ವಿಮೆಯಾಗಿದ್ದು, ನಿಮಗೆ 10 ಲಕ್ಷದ ವ್ಯಾಪ್ತಿವರೆಗೆ ಹಣ ಸಿಗುತ್ತದೆ.

ಏಗೊನ್(Aegon) ಲೈಫ್ ಐ ಕ್ಯಾನ್ಸರ್

ಏಗೊನ್(Aegon) ಲೈಫ್ ಐ ಕ್ಯಾನ್ಸರ್

ಏಗೊನ್(Aegon) ಲೈಫ್ ಐ ಕ್ಯಾನ್ಸರ್ ಎಲ್ಲಾ ಪ್ರಕಾರದ ಕ್ಯಾನ್ಸರ್ ನಿಗ್ರಹಿಸಲು ಸಹಕಾರಿಯಾಗಿದೆ. ಇದರಲ್ಲಿ 100 ಕ್ಕಿಂತಲೂ ಹೆಚ್ಚಿನ ವಿಧದ ಕ್ಯಾನ್ಸರ್ ಪ್ರಕಾರಗಳು ಒಳಗೊಂಡಿವೆ. ಕ್ಯಾನ್ಸರ್ ಪತ್ತೆಯಾದಾಗ ಹಾಗೂ ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾಗ ನಿಮಗೆ 150% ರಷ್ಟು ಮೊತ್ತದ ಸೌಲಭ್ಯ ಒದಗಿಸಲಾಗುತ್ತದೆ.

ಭಾರ್ತಿ ಆಕ್ಷಾ

ಭಾರ್ತಿ ಆಕ್ಷಾ

ಇದು ಅತ್ಯುತ್ತಮವಾದ ಆರೋಗ್ಯ ವಿಮೆಯಾಗಿದೆ. ಭಾರ್ತಿ ಆಕ್ಷಾ ವಿಮೆ ಅನೇಕ ರೂಪಗಳಲ್ಲಿ ಹಾಗೂ ಕಷ್ಟಕರ ಹಂತಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಹಕಾರಿಯಾಗಿದೆ. ಈ ಯೋಜನೆಯ ಅಡಿಯಲ್ಲಿ 5 ಲಕ್ಷಗಳವರೆಗೆ ಸೌಲಭ್ಯವನ್ನು ಪಡೆಯಬಹುದಾಗಿದೆ.

HDFC ಕ್ಯಾನ್ಸರ್ ಪ್ಲಾಟಿನಮ್ ಯೋಜನೆ

HDFC ಕ್ಯಾನ್ಸರ್ ಪ್ಲಾಟಿನಮ್ ಯೋಜನೆ

ಇನ್ನುಳಿದ ಪಾಲಿಸಿಗಳಿಗೆ ಹೋಲಿಸಿದರೆ ಈ ಯೋಜನೆಯಡಿಯಲ್ಲಿ ಒಟ್ಟು ಮೊತ್ತದ ಮೇಲೆ ತಿಂಗಳಿಗೆ 1% ರಷ್ಟು ಮೊತ್ತ ನೀಡಲಾಗುತ್ತದೆ. ಹಣವನ್ನು ಹಿಂಪಡೆಯದಿದ್ದಲ್ಲಿ ಈ ಪಾಲಿಸಿಯ ಮೊತ್ತವನ್ನು 10% ರಷ್ಟು ವಾರ್ಷಿಕವಾಗಿ ಹೆಚ್ಚಿಸಲಾಗುತ್ತದೆ. ಪ್ರೀಮಿಯಮ್ ಮೊತ್ತ ಕೆವಲ 4300 ರೂ.ಗಳಾಗಿದ್ದು 10 ಲಕ್ಷ ಗಳವರೆಗೆ ಸೌಲಭ್ಯವನ್ನು ಪಡೆಯಬಹುದಾಗಿದೆ.

ಮ್ಯಾಕ್ ಬ್ಯುಪಾ

ಮ್ಯಾಕ್ ಬ್ಯುಪಾ

ಇದೊಂದು ಕ್ಯಾನ್ಸರ್ ಸಂಬಂಧಿತ ತುಂಬಾ ಮುಖ್ಯವಾದ ಪಾಲಿಸಿಯಾಗಿದ್ದು, ಕ್ಯಾನ್ಸರ್ ಅಷ್ಟೆ ಅಲ್ಲದೆ 20 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳು ಈ ಪಾಲಿಸಿಯ ವ್ಯಾಪ್ತಿಯಲ್ಲಿ ಗುಣಪಡಿಸಲಾಗುತ್ತವೆ. ಇದರಲ್ಲಿ ಹೃದಯ ರೋಗ, ಯಕೃತ್ತಿನ ರೋಗ, ಹಾಗೂ ಮೂಳೆ ಮಜ್ಜೆಯ ಕಸಿ ಸಂಬಂಧಿಸಿದ ಕಾಯಿಲೆಗಳು ಒಳಗೊಂಡಿರುತ್ತವೆ.
ಪಾಲಿಸಿ ಮೊತ್ತ 8500 ರೂ.ಗಳಾಗಿದ್ದು 10 ಲಕ್ಷ ಗಳವರೆಗೆ ಸೌಲಭ್ಯವನ್ನು ಪಡೆಯಬಹುದಾಗಿದೆ.

HDFC ಈರ್ಗೊ ವಿಮೆ

HDFC ಈರ್ಗೊ ವಿಮೆ

HDFC ಈರ್ಗೊ ಪಾಲಿಸಿ ಕ್ಯಾನ್ಸರ್ ಮತ್ತು ಇನ್ನಿತರ ಏಳು ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಇದರ ಪ್ರೀಮಿಯಮ್ ಮೊತ್ತ 8624 ರೂ. ಆಗಿದ್ದು, 10 ಲಕ್ಷದವರೆಗೆ ಸೌಲಭ್ಯಗಳನ್ನು ಪಡೆಯಬಹುದು.

Read more about: hdfc insurance ವಿಮೆ
English summary

A Look At The Best Cancer Insurance Plans in India

Well, this may sound frightening, but is true. Cancer is rapidly increasing, but is very much treatable. Treatment can be horribly expensive, which means you must take an insurance cover for cancer. Take a look at some of the best cancer insurance plans in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X