ನಿಮ್ಮ ಗ್ರಾಹಕ ಗುರುತಿಸಿ(ಕೆವೈಸಿ) ಎಂಬುದು ಗ್ರಾಹಕರ ಗುರುತು/ದಾಖಲಾತಿಗಳನ್ನು ಪರಿಶೀಲಿಸುವ ಒಂದು ಪ್ರಕ್ರಿಯೆಯಾಗಿದೆ.
ನಿಮ್ಮ ಗ್ರಾಹಕ ಗುರುತಿಸಿ(ಕೆವೈಸಿ) ಎಂಬುದು ಗ್ರಾಹಕರ ಗುರುತು/ದಾಖಲಾತಿಗಳನ್ನು ಪರಿಶೀಲಿಸುವ ಒಂದು ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆ ಬ್ಯಾಂಕು ವ್ಯವಹಾರ, ಬ್ಯುಸಿನೆಸ್, ಸರ್ಕಾರಿ ಸಂಬಂಧಿತ ವ್ಯವಹಾರ ಹಾಗೂ ಸೌಲಭ್ಯಗಳನ್ನು ಪಡೆಯುವಾಗ ಅನುಸರಿಸಬೇಕಾಗುತ್ತದೆ.
ಬ್ಯಾಂಕು ಖಾತೆ, ಡಿಮ್ಯಾಟ್ ಖಾತೆ, ವಿಮಾ ಖಾತೆ ತೆರೆಯುವಾಗ ಹಾಗೂ ಇನ್ನಿತರ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯುವಾಗ ಇದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ(ಯುಐಡಿಎಐ) ಗುರುತಿನ ದಾಖಲಾತಿಯಾಗಿ ಪ್ರಮುಖ ಪಾತ್ರವಹಿಸುತ್ತದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಪ್ರಕಾರ ಇ-ಕೆವೈಸಿ ಪ್ರಕ್ರಿಯೆ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಸೇವಾಕ್ಷೇತ್ರದ ಹಿನ್ನೆಲೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ. ಹಾಗೂ ಮಾರುಕಟ್ಟೆಯಲ್ಲಿ ಹೊಸ ನಾವಿನ್ಯತೆಗೆ, ಸಾಮರ್ಥ್ಯಕ್ಕೆ ನಾಂದಿ ಹಾಡಲಿದೆ.
ಹೀಗಾಗಿ ಪ್ರತಿಯೊಬ್ಬ ಭಾರತೀಯನಿಗೆ ಈ ಆಧಾರ್ ಇ-ಕೆವೈಸಿ ಸೇವೆ ಪಡೆಯುವುದು ಯಾಕೆ ಮುಖ್ಯವಾಗಿರುತ್ತದೆ? ಇದರ ಕಾರಣ ಮತ್ತು ಮಹತ್ವ ಏನು? ಇತ್ಯಾದಿ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.
ನಕಲಿ ದಾಖಲಾತಿಗಳ ನಿವಾರಣೆ
ಇ-ಕೆವೈಸಿ ಪ್ರಕ್ರಿಯೆಯಿಂದಾಗಿ ಪ್ರಸ್ತುತ ಇರುವ ನಕಲಿ ದಾಖಲಾತಿಗಳ ಹಾವಳಿ ಇನ್ನು ಮುಂದೆ ಕಡಿಮೆಯಾಗಲಿದೆ. ಮಧ್ಯಸ್ಥಗಾರರ ಕುತಂತ್ರದಿಂದಾಗಿ ಗುರುತಿನ ಚೀಟಿಗಳಲ್ಲಿ ಅನೇಕ ವಂಚನೆಗಳು ಆಗುತ್ತಿರುತ್ತವೆ.
ಇನ್ನು ಮುಂದೆ ಯುಐಡಿಎಐ ಮೂಲಕ ನೇರವಾಗಿ ಇ-ಕೆವೈಸಿ ದಾಖಲಾತಿಗಳನ್ನು ಒದಗಿಸುವುದರಿಂದ ಇಂತಹ ನಕಲಿ ದಾಖಲಾತಿ ಹಾಗೂ ವಂಚನೆಗಳ ಪ್ರಮಾಣ ಕಡಿಮೆಯಾಗಲಿದೆ.
ನಿರಾಕರಣೀಯ ಅಲ್ಲ
ಇ-ಕೆವೈಸಿ ಮೂಲಕ ನಿವಾಸ ವಿಳಾಸ ದೃಢೀಕರಣ ಹಾಗೂ ಡಿಜಿಟಲ್ ಸಹಿಯ ಮುಖಾಂತರ ಪ್ರಕ್ರಿಯೆ ಮುನ್ನಡೆಸುವುದರಿಂದ ಯುಐಡಿಎಐ ಪೂರೈಸುವ ಇ-ಕೆವೈಸಿ ಡೆಟಾ ಎಲ್ಲಾ ವ್ಯವಹಾರಗಳನ್ನು ಸುರಕ್ಷಿತವಾಗಿ ನಿರ್ವಹಿಸುತ್ತದೆ. ಅಲ್ಲದೇ ಯಾವುದೇ ಅಡೆತಡೆ ಹಾಗೂ ನಿರಾಕರಣೆ ಮಾಡಲು ಸಾಧ್ಯವಿರುವುದಿಲ್ಲ.
ಯಂತ್ರ ಓದಬಲ್ಲದು
ಯುಐಡಿಎಐ ಪೂರೈಸುವ ಇ-ಕೆವೈಸಿ ಡೆಟಾ ಹಾಗೂ ವಿದ್ಯುನ್ಮಾನ ಸಹಿಯನ್ನು ಯಂತ್ರ ಓದಬಲ್ಲದು. ಸೇವೆ ಒದಗಿಸುವವರು ನೇರವಾಗಿ ಈ ಡೆಟಾಗಳನ್ನು ಗ್ರಾಹಕರ ಸೇವಾ ಹಾಗೂ ಆಡಿಟ್ ಇತ್ಯಾದಿ ಉದ್ದೇಶಗಳನ್ನು ಪೂರೈಸಲು ಸಂಗ್ರಹಿಸಿಡಬಹುದು. ಮಾನವ ಹಸ್ತಕ್ಷೇಪವಿಲ್ಲದೆಯೇ ಕಡಿಮೆ ವೆಚ್ಚ ಮತ್ತು ದೋಷಮುಕ್ತವಾಗಿ ಈ ಪ್ರಕ್ರಿಯೆ ನಡೆಸಬಹುದು.
ಸ್ನೇಹಪರ ನಿಯಂತ್ರಣ
ಸೇವಾದಾರರು ಪರಿಶೋಧನೆಗಾಗಿ ಇ-ಕೆವೈಸಿ ಎಲ್ಲಾ ವಿನಂತಿಗಳನ್ನು ಸಚಿವಾಲಯಕ್ಕೆ ಒದಗಿಸಬಹುದು.
ಸಚಿವಾಲಯ/ನಿಯಂತ್ರಕರು ಇ-ಕೆವೈಸಿ ದತ್ತಾಂಶಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಸಂಗ್ರಹ ಅವಧಿ, ಸಂಗ್ರಹ ವಿಧಾನ ಹಾಗೂ ಇನ್ನಿತರ ವಿಷಯಗಳ ನಿಯಮಗಳನ್ನು ರೂಪಿಸಬಹುದು.
ಗ್ರಾಹಕರ ಸಮ್ಮತಿಯೊಂದಿಗೆ
ಗ್ರಾಹಕರ ಅನುಮತಿಯೊಂದಿಗೆ ಮಾತ್ರ ಇ-ಕೆವೈಸಿ ದತ್ತಾಂಶಗಳನ್ನು ಆಧಾರ್ ದೃಢೀಕರಣದ ಮೂಲಕ ಮಾತ್ರ ಒದಗಿಸಲಾಗುತ್ತದೆ. ಗ್ರಾಹಕರ ನಿವಾಸ ಮತ್ತು ದಾಖಲಾತಿ ಗೌಪ್ಯತೆ ರಕ್ಷಿಸುವುದು ಮುಖ್ಯವಾಗಿರುತ್ತದೆ.
ಇ-ಕೆವೈಸಿ ವೈಶಿಷ್ಟ್ಯ
ಇ-ಕೆವೈಸಿ ಪ್ರಕ್ರಿಯೆ ಸಂಪೂರ್ಣವಾಗಿ ಕಾಗದ ರಹಿತವಾಗಿರುತ್ತದೆ. ವಿದ್ಯುನ್ಮಾನ, ಕಡಿಮೆ ವೆಚ್ಚದಿಂದಾಗಿ ಇ-ಕೆವೈಸಿ ಹೆಚ್ಚು ಅಂತರ್ಗತವಾಗಿರುತ್ತದೆ. ಜತೆಗೆ ಆರ್ಥಿಕ ಸೇರ್ಪಡೆಗೆ ಅನುವು ಮಾಡಿಕೊಡುತ್ತದೆ.
ಕಡಿಮೆ ವೆಚ್ಚ
ಸಾಮಾನ್ಯವಾಗಿ ಇ-ಕೆವೈಸಿ ಹೊರತುಪಡಿಸಿದ ಯಾವುದೇ ಪ್ರಕ್ರಿಯೆಗಳಲ್ಲೂ ಹೆಚ್ಚೆಚ್ಚು ವೆಚ್ಚಗಳನ್ನು ಗ್ರಾಹಕರು ಭರಿಸುವುದನ್ನು ನೋಡಿದ್ದೇವೆ.
ಆದರೆ ಇ-ಕೆವೈಸಿಯಲ್ಲಿ ಕಾಗದ ಪರಿಶೀಲನಾ ಪ್ರಕ್ರಿಯೆ, ಕಾರ್ಯನಿರ್ವಹಣೆ ಮತ್ತು ದತ್ತಾಂಶ ಸಂಗ್ರಹಕ್ಕೆ ಯಾವುದೇ ಹೆಚ್ಚಿನ ವೆಚ್ಚ ತಗಲುವುದಿಲ್ಲ. ಭ್ರಷ್ಟಾಚಾರದ ಅವಕಾಶ ಕಡಿಮೆ ಇರುತ್ತದೆ.
ತಕ್ಷಣದ ಪ್ರಕ್ರಿಯೆ
ಇ-ಕೆವೈಸಿ ಸ್ವಯಂಚಾಲಿತ ಪ್ರಕ್ರಿಯೆ ಆಗಿದೆ. ಇ-ಕೆವೈಸಿ ಡೆಟಾ ನೈಜತೆಯಿಂದ ಒಳಗೊಂಡಿರುತ್ತದೆ. ಅಲ್ಲದೇ ಯಾವುದೇ ವ್ಯಕ್ತಿಯ ಹಸ್ತಕ್ಷೇಪ, ಒತ್ತಡಗಳು ಈ ಪ್ರಕ್ರಿಯೆಯಲ್ಲಿ ಇರುವುದಿಲ್ಲ.


Click it and Unblock the Notifications