ಸಿಲಿಕಾನ್ ಸಿಟಿ ಎಂದೇ ಪ್ರಸಿದ್ದಿ ಪಡೆದಿರುವ ನಗರ ಬೆಂಗಳೂರು. ಜಾಗತಿಕವಾಗಿ ಐಟಿ-ಬಿಟಿ ಹಾಗೂ ನವೋದ್ಯಮಿಗಳ ಹಾಟ್ ಪೇವರಿಟ್ ತಾಣ. ಇಲ್ಲಿ ಅಸಂಖ್ಯಾತ ಐಟಿ-ಬಿಟಿ ಹಾಗೂ ನವೋದ್ಯಮಗಳು ನೆಲೆಯೂರಿ ಯಶಸ್ಸನ್ನು ಕಂಡಿವೆ.
ಸರ್ಕಾರಗಳು ನವೋದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ಕೊಡುತ್ತಿರುವುದರಿಂದ ಇದು ಎಲ್ಲರ ನೆಚ್ಚಿನ ಕ್ಷೇತ್ರವಾಗಿ ಬದಲಾಗುತ್ತಿದೆ. ಅದರಲ್ಲೂ ಕರ್ನಾಟಕ ಸರ್ಕಾರ ರಾಜ್ಯದಲ್ಲಿ 20 ಸಾವಿರ ಸ್ಟಾರ್ಟಪ್ಸ್(ನವೋದ್ಯಮ) ಗಳನ್ನು ಆರಂಭಿಸುವ ಗುರಿ ಹೊಂದಿದೆ. ಜತೆಗೆ ನವೋದ್ಯಮಗಳಿಗಾಗಿ ಅನೇಕ ಬ್ಯಾಂಕು ಹಾಗೂ ಫಂಡಿಂಗ್ ಕಂಪನಿಗಳು ಸಾಲ ನೀಡಲು ಮುಂದಾಗುತ್ತಿವೆ.
ಬೆಂಗಳೂರಿನಲ್ಲಿ ಈಗಾಗಲೇ ಸಾವಿರಾರು ನವೋದ್ಯಮಗಳಿದ್ದು, ಅವು ಮನೆ ಬಾಗಿಲಿಗೆ ಅನೇಕ ಸೇವೆಗಳನ್ನು ಪೂರೈಸುತ್ತಿವೆ. ಹೀಗಾಗಿ ನೀವು ಈ ಸ್ಟಾರ್ಟಪ್ಸ್ ಗಳ ಪ್ರಯೋಜನಗಳನ್ನು ಪಡೆಯಲು ಮರೆಯದಿರಿ. ಇವೆಲ್ಲವೂ ನಿಮ್ಮ ನೆರೆಹೊರೆಯಲ್ಲಿರುವ ಉದ್ಯಮಗಳಾಗಿದ್ದು, ಇಲ್ಲಿ ಕೆಲ ಸ್ಟಾರ್ಟಪ್ಸ್ ಗಳ ಮಾಹಿತಿ ನೀಡಲಾಗಿದೆ.
LookUp
ದೀಪಕ್ ರವೀಂದ್ರನ್ ಇದರ ಸಂಸ್ಥಾಪಕರು. ಲುಕ್ ಅಪ್ ಇದು ಒಂದು ಅಪ್ಲಿಕೇಶನ್ (ಆಪ್) ಆಗಿದ್ದು, ಇದರ ಮುಖಾಂತರ ಗ್ರಾಹಕರು ಚಾಟ್ ಮಾಡಿ ನಮ್ಮ ಹತ್ತಿರದ ಸ್ಟೋರ್ಸ್ ಗಳಿಂದ ಸರಕುಗಳನ್ನು ಖರೀದಿಬಹುದು.
ಈ ಅಪ್ಲಿಕೇಶನ್ (ಆಪ್) ಬಳಸಿ ಟ್ಟಿಟರ್ ನಲ್ಲಿ ನೇರವಾಗಿ ಟ್ವಿಟರ್ ಸಂದೇಶ ಕಳುಹಿಸುವ ಮುಖಾಂತರ ಬೇಕಾದ ವಸ್ತುಗಳನ್ನು ಆದೇಶ ಮಾಡಬಹುದು. ಇದರಿಂದಾಗಿ ನೀವು ವಸ್ತುಗಳ ಖರೀದಿಗಾಗಿ ಅಲೆಯಬೇಕಾದ ಅಗತ್ಯವಿರುವುದಿಲ್ಲ.
Phone: 080 4110 4799
Swiggy
ಶ್ರೀ ಹರ್ಷ ಮಜೇಟಿ, ನಂದನ್ ರೆಡ್ಡಿ, ರಾಹುಲ್ ಜೈಮಿನಿ ಈ ಮೂವರು ಇದರ ಸಂಸ್ಥಾಪಕರು.
ಇದು ಆಹಾರವನ್ನು ಆರ್ಡರ್ ಮತ್ತು ಡೆಲಿವರಿ (Online Food Order & Delivery ) ಮಾಡುವ ಕಂಪನಿಯಾಗಿದೆ. ನೀವು ಆನ್ಲೈನ್ ಮೂಲಕ ಆದೇಶ ಮಾಡಿದರೆ ನಿಮ್ಮ ನೆರೆಹೊರೆಯ ರೆಸ್ಟೋರೆಂಟ್ ಗಳಿಂದ ನಿಮಗೆ ಆಹಾರವ ಪೂರೈಸುತ್ತಾರೆ.
ರೆಸ್ಟೋರೆಂಟ್ ಗಳಿಂದ ಆದೇಶಗಳನ್ನು ಪಡೆದು ಶೀಘ್ರಗತಿಯಲ್ಲಿ ಡೆಲಿವರಿಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತದೆ. ಹೀಗಾಗಿ ನೀವು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ಕಾರ್ಡ್ ಮೂಲಕ ಅಥವಾ ನಗದು ಹಣವನ್ನು ಪಾವತಿಸಬಹುದು.
Zoomcar
ಗ್ರೆಗ್ ಮೊರಾನ್ ಮತ್ತು ಡೇವಿಡ್ ಬ್ಯಾಕ್ ಇದರ ಸಂಸ್ಥಾಪಕರು. Zoomcar ಇದು ಕಾರುಗಳನ್ನು ಬಾಡಿಗೆಗೆ ಪಡೆಯುವ ಕಂಪನಿಯಾಗಿದೆ. ಇಲ್ಲಿ ಯಾವುದೇ ತರಹದ ಪ್ರಯಾಣಕ್ಕಾಗಿ ಕಾರು ಬಾಡಿಗೆಗೆ ಪಡೆಯಬಹುದು. ಒಟ್ಟು ಗಂಟೆ ಮತ್ತು ಯಾವ ವಿಧದ ಕಾರು ಪ್ರಯಾಣ ಎಂಬುದರ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ. (Phone:080674 81200)
Newshunt
ವೀರು ಗುಪ್ತ ಎಂಬುವರು ಇದರ ಸ್ಥಾಪಕರು.
Newshunt ಇದು ಭಾರತದ ೧೨ ಸ್ಥಳೀಯ ಬಾಷೆಗಳಲ್ಲಿ ಲಭ್ಯವಿರುವ ಸುದ್ದಿ ಅಪ್ಲಿಕೇಶನ್(ಆಪ್) ಆಗಿದೆ. ಇದು ಎಲಲ್ಲ ವಿಧಾನಗಳಲ್ಲು ಕೆಲಸ ಮಾಡುತ್ತದೆ. ಜತೆಗೆ 2ME, Symbian, Blackberry, Android & iOS ಡಿವೈಸ್ ಗಳು ಒಳಗೊಂಡತೆ ಕಾರ್ಯನಿರ್ವಹಿಸುತ್ತದೆ. http://m.newshunt.com ಮೂಲಕ ನೀವು ನೇರವಾಗಿ ಪ್ರವೇಶಿಸಬಹುದು.
Mygola
ಇದು ಪ್ರಯಾಣಕ್ಕೆ ಸಂಬಂಧಿಸಿದ ಅಪ್ಲಿಕೇಶನ್(ಆಪ್) ಆಗಿದೆ. ಹೊಸ ವಿಚಾರಗಳನ್ನು, ಸಾಹಸಗಳನ್ನು ನಗರದಲ್ಲಿ ಮಾಡಲು ಇದು ಸಹಾಯ ಮಾಡುತ್ತದೆ. ಜತೆಗೆ ನೀವು ಭಾಗವಹಿಸಬಹುದಾಗಿದೆ.
ಹೊಸ ವಿಷಯ ಮತ್ತು ಸ್ಥಳೀಯ ಪ್ರತಿನಿತ್ಯದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
ಈ ಅಪ್ಲಿಕೇಶನ್(ಆಪ್) ಮೂಲಕ ನಿಮಗೆ ವಿವರವಾದ ನಕ್ಷೆ ಮತ್ತು ಸಾರಿಗೆ ಮಾಹಿತಿಯನ್ನು ನೀಡಲಾಗುತ್ತದೆ.
Drivojoy
ಅಮನ್ ಸಿಂಘಾಲ್ ಇದರ ಸ್ಥಾಪಕರು. Drivojoy ಮೂಲಕ ಬೈಕು ದುರಸ್ತಿ ಮತ್ತು ನಿರ್ವಹಣಾ ಸೇವೆಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒದಗಿಸಲಾಗುತ್ತದೆ.
Unbxd
ಪವನ್ ಸೊಂಡುರ್ ಮತ್ತು ಪ್ರಶಾಂತ ಕುಮಾರ್ ಸಂಸ್ಥಾಪಕರಾಗಿದ್ದಾರೆ.
ಇ-ಕಾಮರ್ಸ್ ಕಂಪನಿಗಳಿಗೆ ಅನೇಕ ಸೇವೆಗಳನ್ನು ಒದಗಿಸುತ್ತಿರುವ ಈ ಕಂಪನಿ ಹುಡುಕಾಟ, ಸಂಚರಣೆ, ಉತ್ಪನ್ನ ಶಿಫಾರಸ್ಸುಗಳು ಮತ್ತು ಇನ್ನೀತರ ಕ್ಷೇತ್ರದಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತದೆ. ಇ-ಕಾಮರ್ಸ್ ಕ್ಷೇತ್ರದಲ್ಲಿ ಕಾರ್ಯನಿರತ ಕಂಪನಿಗಳು ಅನೇಕ ಸಮಸ್ಯೆಗಳಿಗೆ Unbxd ಕಂಪನಿಯ ಸೇವೆಯನ್ನು ಪಡೆಯಬಹುದು.
Gapoon
ಗೃಹ ನಿರ್ವಹಣೆಗೆ ಸಂಬಂಧಿಸಿದ ಎಸಿ ರಿಪೇರಿ, ಮನೆ ಸ್ವಚ್ಚತೆ, ವಾಷಿಂಗ್ ಮಷಿನ್ ರಿಪೇರಿ, ಡ್ರಿಲ್ಲಿಂಗ್ ಮತ್ತು ಪಿಟ್ಟಿಂಗ್, ಒಳಾಂಗಣ ಬಣ್ಣ ಬಳೆಯುವುದು, ಸೊಳ್ಳೆ ಪರಿಹಾರ ಇತ್ಯಾದಿ ಎಲ್ಲ ಸಮಸ್ಯೆಗಳಿಗೆ Gapoon ಕಂಪನಿ ಸೆವೆಯನ್ನು ಒದಗಿಸುತ್ತದೆ.
Phone: 081058 26091


Click it and Unblock the Notifications