ಭಾರತದ ಅನೇಕ ವಿಮಾನಯಾನ ಕಂಪನಿಗಳು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಫರ್ ಗಳನ್ನು ಘೋಷಣೆ ಮಾಡಿವೆ. ಅವುಗಳಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳೇ ಸೇರಿವೆ.
ಹೀಗಾಗಿ ಗ್ರಾಹಕರಿಗೆ ಇದರ ಪ್ರಯೋಜನಗಳನ್ನು ಪಡೆಯಲು ಸುವರ್ಣ ಅವಕಾಶವಿದೆ. ಇದರ ಲಾಭವನ್ನು ತಪ್ಪದೆ ಪಡೆಯಿರಿ ಹಾಗೂ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿ ಆಚರಣೆ ಮಾಡಿ.
ಬಂಪರ್ ಆಫರ್ ಕೊಟ್ಟ ಕಂಪನಿಗಳ ಮಾಹಿತಿ ಇಲ್ಲಿದೆ ನೋಡಿ.
ಸ್ಪೈಸ್ ಜೆಟ್ ಸೇಲ್
ಸ್ಪೈಸ್ ಜೆಟ್ 'ಗ್ರೇಟ್ ಇಂಡಿಪೆಂಡೆನ್ಸ್ ಡೇ ಮಾರಾಟ'ವನ್ನು ಘೋಷಣೆ ಮಾಡಿದೆ.
ದೇಶಿಯ ವಿಮಾನ ಪ್ರಯಾಣಕ್ಕೆ ರೂ. 399 ಮತ್ತು ಅಂತರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ರೂ. 2,999 ಪ್ರಾರಂಭದ ಶುಲ್ಕವನ್ನು ನಿಗದಿಪಡಿಸಿದೆ.
ಬುಕಿಂಗ್ ಅವಧಿ: 9-8-2016 ರಿಂದ 15-8-2016
ಪ್ರಯಾಣದ ಅವಧಿ: 18-8-2016 ರಿಂದ 30-9-2016
ಷರತ್ತು ಅನ್ವಯ:
* ರಿಯಾಯಿತಿ ಒಂದು ಕಡೆಯ ಪ್ರಯಾಣದ ದರಗಳಿಗೆ ಮಾತ್ರ ಅನ್ವಯ
* ಈ ಆಫರ್ ಚಾನೆಲ್ ಗಳ ಮೂಲಕ ಮಾಡುವ ಬುಕಿಂಗ್ ಗೆ ಮಾತ್ರ ಅನ್ವಯ
* ಗ್ರೂಪ್ ಬುಕಿಂಗ್ ಗೆ ಇದು ಅನ್ವಯಿಸುವುದಿಲ್ಲ.
* ಈ ದರಗಳು ಮರುಪಾವತಿಸಬಹುದಾಗಿದೆ. (ಕೇವಲ ಶಾಸನಬದ್ದ ತೆರಿಗೆಗಳು ಮಾತ್ರ ಮರು ಪಾವತಿಸಲಾಗುತ್ತದೆ.)
* ಬದಲಾವಣೆ ಶುಲ್ಕ ಮತ್ತು ಶುಲ್ಕ ವ್ಯತ್ಯಾಸ ಬದಲಾಯಿಸಬಹುದು.
* ಈ ಪ್ರೊಮೊ ತಡೆರಹಿತ ವಿಮಾನಕ್ಕೆ ಅನ್ವಯಿಸುತ್ತದೆ.
* ವಿಮಾನ ವೇಳಾಪಟ್ಟಿ, ಸಮಯ ಮತ್ತು ಅಂಗೀಕಾರಗಳು ಬದಲಾವಣೆಗೆ ಒಳಪಡಬಹುದು.
ಇಂಡಿಗೋ ಸೇಲ್
ದೇಶಿಯ ವಿಮಾನ ಪ್ರಯಾಣದ ಮೇಲೆ ತುಂಬಾ ಕಡಿಮೆ ದರವನ್ನು ನಿಗದಿ ಮಾಡಿದ್ದು, ರೂ. 806ರಿಂದ ಪ್ರಾರಂಭವಾಗುತ್ತದೆ.(ಎಲ್ಲ ಸೇವೆಗಳು ಸೇರಿ)
ಬುಕಿಂಗ್ ಅವಧಿ: 9-8-2016 ರಿಂದ 15-8-2016
ಪ್ರಯಾಣದ ಅವಧಿ: 18-8-2016 ರಿಂದ 30-9-2016
ಷರತ್ತುಗಳು ಅನ್ವಯ:
* ಏಕಮುಖ ಸಂಚಾರಕ್ಕೆ ಮಾತ್ರ ಅನ್ವಯ
* ಸೀಮಿತ ಆಸನಗಳು
* ಆಯ್ಕೆ ಶುಲ್ಕದ ಮೇಲೆ ಮಾತ್ರ ದರಗಳು ಲಭ್ಯ
* ರಿಯಾಯಿತಿ ದರಗಳು ಕ್ಲಿಯರ್ ಟ್ರಿಪ್ ಸೈಟ್ ನಲ್ಲಿ ನೋಡಬಹುದು.
ಗೋ ಏರ್ ಸೇಲ್
ಗೋ ಏರ್ ಸೇಲ್ ದೇಶಿಯ ವಿಮಾನ ಪ್ರಯಾಣದ ಮೇಲೆ ತುಂಬಾ ಕಡಿಮೆ ದರವನ್ನು ನಿಗದಿ ಮಾಡಿದ್ದು, ರೂ. 899ರಿಂದ ಪ್ರಾರಂಭವಾಗುತ್ತದೆ.(ಎಲ್ಲ ಸೇವೆಗಳು ಸೇರಿ)
ಬುಕಿಂಗ್ ಅವಧಿ: 10-8-2016 ರಿಂದ 15-8-2016
ಪ್ರಯಾಣದ ಅವಧಿ: 13-8-2016 ರಿಂದ 15-8-2016
ಷರತ್ತುಗಳು ಅನ್ವಯ:
* ಸೀಮಿತ ಸೀಟುಗಳು ಮಾತ್ರ
* ಈ ದರಗಳಿಗೆ ಗ್ರೂಪ್ ರಿಯಾಯಿತಿ ಇರುವುದಿಲ್ಲ
* ಈ ಆಫರ್ ನ್ನು ಬೇರೆ ಪ್ರಯಾಣದ ಆಫರ್ ಜತೆ ಸೇರಿಸಲ್ಪಡುವುದಿಲ್ಲ.
* ಈ ಆಫರ್ ಮಕ್ಕಳಿಗೆ ಅನ್ವಯಿಸುವುದಿಲ್ಲ
* ರಿಯಾಯಿತಿ ದರಗಳು ಕ್ಲಿಯರ್ ಟ್ರಿಪ್ ಸೈಟ್ ನಲ್ಲಿ ಲಭ್ಯ
ಏರ್ ಇಂಡಿಯಾ ಸೇಲ್
ದೇಶಿಯ ಏಕಮುಖ ವಿಮಾನ ಪ್ರಯಾಣದ ಪ್ರಾರಂಭದ ದರ ರೂ. 1199 ಮತ್ತು ಅಂತರಾಷ್ಟ್ರೀಯ ಪ್ರಯಾಣದ ಪ್ರಾರಂಭದ ದರ ರೂ. 15,999 ನಿಗದಿಪಡಿಸಿದೆ.
ಬುಕಿಂಗ್ ಅವಧಿ: 9-8-2016 ರಿಂದ 15-8-2016
ಪ್ರಯಾಣದ ಅವಧಿ: ದೇಶಿಯ ಪ್ರಯಾಣ: 22-8 ರಿಂದ 30-9-2016ರ ವರೆಗೆ
ಅಂತರಾಷ್ಟ್ರೀಯ ಪ್ರಯಾಣ: 15-9 ರಿಂದ 15-12-2016 ರ ವರೆಗೆ
ಷರತ್ತುಗಳು ಅನ್ವಯ:
* ಮುಂಚಿತವಾಗಿ ಬುಕಿಂಗ್ ಮಾಡುವುದರ ಮೇಲೆ ಉತ್ತಮ ರಿಯಾಯಿತಿ
* ಈ ಆಫರ್ ತಡೆರಹಿತ ವಿಮಾನಗಳಿಗೆ ಮಾತ್ರ ಅನ್ವಯ
* ಈ ದರಗಳಿಗೆ ಗ್ರೂಪ್ ರಿಯಾಯಿತಿ ಇರುವುದಿಲ್ಲ
* ಈ ಆಫರ್ ಮಕ್ಕಳಿಗೆ ಅನ್ವಯಿಸುವುದಿಲ್ಲ


Click it and Unblock the Notifications