For Quick Alerts
ALLOW NOTIFICATIONS  
For Daily Alerts

ಫಿಕ್ಸೆಡ್ ಡಿಪಾಸಿಟ್ ಮೇಲೆ ಹೆಚ್ಚಿನ ಆದಾಯ ಗಳಿಸುವುದು ಹೇಗೆ?

ಎಫ್‌ಡಿ ಗಳ ಮೇಲೆ ಸಿಗುವ ಬಡ್ಡಿದರ, ಹೆಚ್ಚುವರಿ ಪ್ರತಿಫಲ, ಆದಾಯ ತೆರಿಗೆ, ಬ್ಯಾಂಕುಗಳ ನಿಯಮಾವಳಿ ಅಂಶಗಳ ಬಗ್ಗೆ ಅರಿತುಕೊಳ್ಳುವುದು ಕೂಡ ಅಷ್ಟೇ ಮುಖ್ಯ ಆಗಿರುತ್ತದೆ.

By Siddu
|

ನಮ್ಮ ದೇಶದಲ್ಲಿ ಬ್ಯಾಂಕು ಠೇವಣಿಗಳು ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿರುವುದರಿಂದ ಹೆಚ್ಚಿನ ಜನರು ಫಿಕ್ಸೆಡ್ ಡಿಪಾಸಿಟ್ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಎಫ್‌ಡಿ ಗಳ ಮೇಲೆ ಸಿಗುವ ಬಡ್ಡಿದರ, ಹೆಚ್ಚುವರಿ ಪ್ರತಿಫಲ, ಆದಾಯ ತೆರಿಗೆ, ಬ್ಯಾಂಕುಗಳ ನಿಯಮಾವಳಿ ಅಂಶಗಳ ಬಗ್ಗೆ ಅರಿತುಕೊಳ್ಳುವುದು ಕೂಡ ಅಷ್ಟೇ ಮುಖ್ಯ ಆಗಿರುತ್ತದೆ.

ಇತ್ತಿಚಿನ ದಿನಗಳಲ್ಲಿ FD ಮೇಲೆ ಹಲವು ಬ್ಯಾಂಕುಗಳು ವಿಭಿನ್ನ ದರದಲ್ಲಿ ಬಡ್ಡಿಯನ್ನು ಪಾವತಿಸುತ್ತವೆ. ಕಳೆದ ಕೆಲ ವರ್ಷಗಳಲ್ಲಿ ಬಡ್ಡಿದರ ಪ್ರಮಾಣದಲ್ಲಿ ಕುಸಿತ ಕಾಣುತ್ತಿರುವುದು ಗಮನಿಸಬಹುದು.ಫಿಕ್ಸೆಡ್ ಡಿಪಾಸಿಟ್ ಹೂಡಿಕೆಗೆ ಮುನ್ನ ಇಲ್ಲೊಮ್ಮೆ ನೋಡಿ

ಹೀಗಾಗಿ ನಿಮ್ಮ ಫಿಕ್ಸೆಡ್ ಡಿಪಾಸಿಟ್ ಗಳ ಮೇಲೆ ಹೆಚ್ಚು ಲಾಭ, ಉತ್ತಮ ಬಡ್ಡಿದರ ಹಾಗೂ ಗಳಿಕೆ ಪಡೆಯುವುದು ಜಾಣ ನಡೆ ಆಗಿರುತ್ತದೆ.
ಫಿಕ್ಸೆಡ್ ಡಿಪಾಸಿಟ್ ಗಳ ಮೇಲೆ ಹೆಚ್ಚು ಆದಾಯ ಗಳಿಸುವ ಕೆಲ ಮಹತ್ವದ ಸಂಗತಿಗಳು ಇಲ್ಲಿವೆ ನೋಡಿ...

1. ಬಡ್ಡಿದರ ಮತ್ತು ಇಳುವರಿ ನಡುವಿನ ವ್ಯತ್ಯಾಸ ಅರಿಯಿರಿ

1. ಬಡ್ಡಿದರ ಮತ್ತು ಇಳುವರಿ ನಡುವಿನ ವ್ಯತ್ಯಾಸ ಅರಿಯಿರಿ

FD ಖಾತೆ ಹೊಂದಿರುವ ಪ್ರತಿಯೊಬ್ಬ ಗ್ರಾಹಕರು ತಪ್ಪದೆ ಅರಿಯಬೇಕಾದ ವಿಚಾರವೆಂದರೆ ಬಡ್ಡಿದರ ಮತ್ತು ಇಳುವರಿ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದು. ಉದಾ: ಬ್ಯಾಂಕು ಪ್ರತಿ ವರ್ಷ ಶೇ. 7ರಷ್ಟು ಬಡ್ಡಿದರ ಕೊಡುತ್ತದೆ ಎಂದು ತಿಳಿಸಿದರೆ ತ್ರೈಮಾಸಿಕಕ್ಕೆ ಎಷ್ಟಾಗುತ್ತದೆ ಎಂಬುದನ್ನು ಅರಿಯಬೇಕು. ಅಂದರೆ ನಿಮ್ಮ FD ಜತೆ ಬಡ್ಡಿದರ ಸೇರ್ಪಡೆಯಾಗಿ ಆ ಬಡ್ಡಿದರದ ಮೇಲೂ ಇಳುವರಿ ಸಿಗುತ್ತದೆ. ಬಡ್ಡಿದರ ಪ್ರತಿ ತ್ರೈಮಾಸಿಕಕ್ಕೆ ಸೇರ್ಪಡೆಗೊಳ್ಳುತ್ತ ಹೋದಲ್ಲಿ ಸಿಗುವ ಇಳುವರಿ ಹೆಚ್ಚಾಗುತ್ತ ಹೋಗುತ್ತದೆ.
ಒಂದು ವೇಳೆ ಯಾವುದೇ ಕಂಪನಿ ಒಂದು ವರ್ಷಕ್ಕೆ ಶೇ. 7.10ರಷ್ಟು ಬಡ್ಡಿದರ ಕೊಡುತ್ತದೆ ಎಂದು ಹೇಳಿದರೆ ಆ ಕಂಪನಿಗಿಂತಲೂ ಬ್ಯಾಂಕು FD ಉತ್ತಮವಾಗಿರುತ್ತದೆ.

2. ನಿಮ್ಮ ಪತ್ನಿಯ ಹೆಸರಿನಲ್ಲಿ ಹೂಡಿಕೆ ಮಾಡಲು ಮರೆಯದಿರಿ

2. ನಿಮ್ಮ ಪತ್ನಿಯ ಹೆಸರಿನಲ್ಲಿ ಹೂಡಿಕೆ ಮಾಡಲು ಮರೆಯದಿರಿ

ನೀವು ಈಗಾಗಲೇ ಪ್ರತಿ ತಿಂಗಳು ಉತ್ತಮ ಸಂಬಳ ಪಡೆಯುತ್ತಿದ್ದಲ್ಲಿ ಇಲ್ಲವೇ ಸ್ವಂತ ಉದ್ಯೋಗದಿಂದ ಉತ್ತಮ ಆದಾಯ ಗಳಿಸುತ್ತಿದ್ದಲ್ಲಿ ನಿಮ್ಮ ಸಂಗಾತಿಯ ಹೆಸರಿನಲ್ಲಿ ಖಾತೆ ತೆರೆಯುವುದು ಅತ್ಯುತ್ತಮ. ಬಡ್ಡಿ ಆದಾಯದ ಮೇಲೆ ತೆರಿಗೆ ಇರುವುದರಿಂದ ನಿಮ್ಮ ಜತೆ ಸಂಗಾತಿ ಹೆಸರಲ್ಲೂ ಹಣ ಹೂಡಿಕೆ ಮಾಡಿದರೆ ಇಬ್ಬರ ಹೂಡಿಕೆಗಳ ಮೇಲೂ ಬಡ್ಡಿ ಆದಾಯ ಮತ್ತು ಹೆಚ್ಚುವರಿ ಇಳುವರಿ ನಿರೀಕ್ಷಿಸಬಹುದು.
ನಿಮ್ಮ ಪತ್ನಿಗೆ ಉದ್ಯೋಗ ಇಲ್ಲದಿದ್ದಾಗ ಅಥವಾ ಬಡ್ಡಿ ಆದಾಯ ಅಥವಾ ಯಾವುದೇ ಆದಾಯದ ಮೂಲ ಇಲ್ಲದಿದ್ದಾಗ ಹೂಡಿಕೆ ಮಾಡುವುದು ಉತ್ತಮ ವಿಚಾರ.

3. 15g ಮತ್ತು 15h ಫಾರ್ಮ್ ಹಸ್ತಾಂತರಿಸಲು ಮರೆಯಬೇಡಿ

3. 15g ಮತ್ತು 15h ಫಾರ್ಮ್ ಹಸ್ತಾಂತರಿಸಲು ಮರೆಯಬೇಡಿ

ತೆರಿಗೆ ಪಾವತಿ ಮಾಡುವ ಆದಾಯ ಇಲ್ಲದಿದ್ದಾಗ 15g ಮತ್ತು 15h ಫಾರ್ಮ್ ಹಸ್ತಾಂತರಿಸಲು ಮರೆಯಬೇಡಿ.
ಉದಾ: ನಿಮ್ಮ ಆದಾಯ ರೂ. 2.5 ಲಕ್ಷಕ್ಕಿಂತ ಕಡಿಮೆ ಇದ್ದಾಗಲೂ ಸಹ ಟಿಡಿಎಸ್ ಕಡಿತವಾಗುತ್ತದೆ. ಆದರೆ ಅಂತಹ ಸಂದರ್ಭದಲ್ಲಿ ನೀವು 15g ಮತ್ತು 15h ಫಾರ್ಮ್ ಒದಗಿಸುವುದು ಉತ್ತಮ. ಇದರಿಂದಾಗಿ ಟಿಡಿಎಸ್ ಕಡಿತವಾಗುವುದಿಲ್ಲ. ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವಾಗ ಚಿಂತೆ ಪಡಬೇಕಾದ ಅಗತ್ಯ ಇರುವುದಿಲ್ಲ.

4. ಕಂಪನಿ ಫಿಕ್ಸೆಡ್ ಡಿಪಾಸಿಟ್ಸ್

4. ಕಂಪನಿ ಫಿಕ್ಸೆಡ್ ಡಿಪಾಸಿಟ್ಸ್

ಇದು ಕೂಡ ಉತ್ತಮ ಐಡಿಯ ಎಂದು ಹೇಳಬಹುದು. ನಿಮಗೆ ಬ್ಯಾಂಕು FDಗಳಲ್ಲಿ ಹೂಡಿಕೆ ಮಾಡುವ ಹವ್ಯಾಸ ಇದ್ದರೆ ಕಂಪನಿಯಲ್ಲೂ ಹೂಡಿಕೆ ಮಾಡಲು ಪ್ರಯತ್ನಿಸಬಹುದು.
ಉದಾ: ಡಿಎಚ್ಎಫ್ಎಲ್ ಕಂಪನಿ AAA ದರ್ಜೆಯ ಡಿಪಾಸಿಟ್ಸ್ ಹೊಂದಿದ್ದು, ಶೇ. 8.6ರಷ್ಟು ಬಡ್ಡಿದರ ಒದಗಿಸುತ್ತದೆ. ಬ್ಯಾಂಕುಗಳು ಕೊಡುವ ಶೇ. 7.2 ಬಡ್ಡಿದರಕ್ಕೆ ಹೋಲಿಸಿದರೆ ಇದು ಹೆಚ್ಚಾಗಿದೆ.

5. ಹೆಚ್ಚು ಬ್ಯಾಲೆನ್ಸ್ ಇದ್ದಾಗ ಏನು ಮಾಡಬೇಕು?

5. ಹೆಚ್ಚು ಬ್ಯಾಲೆನ್ಸ್ ಇದ್ದಾಗ ಏನು ಮಾಡಬೇಕು?

ನಿಮ್ಮ ಉಳಿತಾಯ ಖಾತೆಯಲ್ಲಿ ಹೆಚ್ಚು ಬ್ಯಾಲೆನ್ಸ್ ಇದ್ದರೆ, ಅದನ್ನು ಫಿಕ್ಸೆಡ್ ಡಿಪಾಸಿಟ್ ಖಾತೆಗೆ ಸ್ವಿಪ್ ಮಾಡುವುದು ಉತ್ತಮ. ಉಳಿತಾಯ ಖಾತೆಗಿಂತಲೂ ಫಿಕ್ಸೆಡ್ ಡಿಪಾಸಿಟ್ಸ್ ಖಾತೆಗಳಲ್ಲಿ ಬಡ್ಡಿದರ ಹಾಗೂ ಹೆಚ್ಚು ಇಳುವರಿ ಸಿಗುತ್ತದೆ. ಅಲ್ಲದೆ ಉಳಿತಾಯ ಖಾತೆಯಲ್ಲಿರುವ ಹಣ ಅನವಶ್ಯಕವಾಗಿ ಖರ್ಚಾಗುವ ಸಾಧ್ಯತೆ ಇರುತ್ತದೆ.

6. ಬಡ್ಡಿದರ ಎಲ್ಲಿ ಹೋಗುತ್ತದೆ?

6. ಬಡ್ಡಿದರ ಎಲ್ಲಿ ಹೋಗುತ್ತದೆ?

ಸಾಧ್ಯವಾದರೆ ಸ್ಥಿರ ಠೇವಣಿಗಳ ಮೇಲೆ ಹೆಚ್ಚು ಆದಾಯ ಮತ್ತು ಇಳುವರಿ ಪಡೆಯಲು ಪ್ರಯತ್ನಿಸಿ. ಇದು ಉಳಿತಾಯ ಮತ್ತು FD ಹಿನ್ನೆಲೆಯಲ್ಲಿ ವೃತ್ತಿಪರರು ನೀಡುವ ಪ್ರಮುಖ ಸಲಹೆ.
ಬಡ್ಡಿದರಗಳು ಕುಸಿಯಬಹುದೆಂದು ನೀವು ನಿರೀಕ್ಷಿಸಿದಲ್ಲಿ ದೀರ್ಘಾವಧಿ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಕೂಡ ಹೆಚ್ಚು ಬಡ್ಡಿದರ ಗಳಿಸಬಹುದು. ಆದಾಗ್ಯೂ, ಬಡ್ಡಿದರಗಳು ಕುಸಿಯುತ್ತಿದ್ದರೆ ಕಡಿಮೆ ಅವಧಿ ಅಂದರೆ ಒಂದು ವರ್ಷದ ಕಾಲಾವಧಿ ಮೇಲೆ ಹೂಡಿಕೆ ಮಾಡುವುದು ಪ್ರಸ್ತುತ ಆಯ್ಕೆ ಆಗಿರಲಿ.

English summary

How to Earn More Money From Fixed Deposits?

These days fixed deposits are offering a very low rate of interest. In fact, in the last few years, interest rates have fallen sharply. It is hence time to make the best of your deposits and get a higher interest rate from the same.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X