Englishहिन्दी മലയാളം தமிழ் తెలుగు

2017ರ ಹಣಕಾಸು ಯೋಜನೆಗೆ 10 ಸಲಹೆ

Written By: Siddu
Subscribe to GoodReturns Kannada

ಒಂದು ಸಂವತ್ಸರ ಕಳೆದು 2017ರ ಹೊಸ ವರ್ಷದ ಕಡೆಗೆ ಪಯಣ ಮುಂದುವರೆಸಿದ್ದೇವೆ. 2016ರಲ್ಲಿ ಹಲವು ಯೋಜನೆಗಳನ್ನು ಮಾಡಿ ಕೆಲವರು ಅದನ್ನು ಸಾಧಿಸಿದ್ದರೆ, ಇನ್ನೂ ಕೆಲವರೂ ಸಾಧಿಸಿಲ್ಲ. ಹಲವಾರು ಏಳು-ಬೀಳು, ಸಿಹಿ-ಕಹಿ, ಸೋಲು-ಗೆಲುವುಗಳ ನಡುವೆ ಇನ್ನೊಂದು ವರ್ಷ ಕಳೆದಿದೆ.

ಹೊಸ ವರ್ಷಕ್ಕೆ ಹೊಸ ಕನಸುಗಳೊಂದಿಗೆ, ಹೊಸ ಯೋಜನೆಗಳೊಂದಿಗೆ ಪಯಣ ಮುಂದುವರೆಸಬೇಕಿದೆ. ನೀವು ಹೊಸ ವರ್ಷಕ್ಕಾಗಿ ಹಣಕಾಸು ಯೋಜನೆಗಳನ್ನು ರೂಪಿಸಲು ಬಯಸಿದ್ದರೆ ಈ ಅಂಶಗಳನ್ನು ತಪ್ಪದೆ ನೋಡಿ.

1. ನಿವೃತ್ತಿ ಉಳಿತಾಯ ಹೆಚ್ಚಿಸಿ

ನಿವೃತ್ತಿ ನಂತರದ ಸುಭದ್ರ ಜೀವನಕ್ಕಾಗಿ ವೃತ್ತಿ ಬದುಕಿನಲ್ಲಿ ನಿವೃತ್ತಿ ಉಳಿತಾಯ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಇದು ನಿವೃತ್ತಿ ನಂತರದ ಜೀವನಕ್ಕೆ ಸುರಕ್ಷತೆ ನೀಡುತ್ತದೆ.
3 ಅಂಶ ನಿನಪಿನಲ್ಲಿಡಿ:
1. ನಿವೃತ್ತಿ ಉಳಿತಾಯ ಹೆಚ್ಚು ಮಾಡಲು ನಿವೃತ್ತಿ ಹಣ ಇದೆಯೆಂಬುದನ್ನು ಮರೆಯಬೇಕು.
2. ತೆರಿಗೆ ಪ್ರಯೋಜನಗಳನ್ನು ಸಂಪೂರ್ಣವಾಗಿ ಬಳಸಬೇಕು.
3. ಖಾತೆ ಪರಿಶೀಲಿಸುವುದರ ಮೂಲಕ ಪ್ರತಿ ತಿಂಗಳ ವಿತ್ ಡ್ರಾವಲ್ ಸ್ವಯಂಚಾಲಿತವಾಗಿ ಗಮನಿಸುತ್ತಿರಬೇಕು.

2. ಹೂಡಿಕೆ ಪುನರ್ ವಿಂಗಡಿಸಿ

ಹೌದು. ಇದು ತುಂಬಾ ಮುಖ್ಯ ವಿಚಾರ. ಪ್ರಸ್ತುತ ಷೇರು ಮೌಲ್ಯಗಳು ಏರುಪೇರುಗಳಿಗೆ ಒಳಗಾಗುತ್ತಿದ್ದು, ದೀರ್ಘಾವಧಿ ಕಾರ್ಯಕ್ಷಮತೆ ಮುಖ್ಯ ಎಂಬುದನ್ನು ನೆನಪಿಡಿ. ನಿಯಮಿತವಾದ ಆಧಾರದ ಮೇಲೆ ಸ್ಟಾಕ್ ಅಲೊಕೇಷನ್ ಹಿಂದಿರುಗಿದಾಗ ಹೂಡಿಕೆ ಮಾಡುವುದು ಉತ್ತಮ. 2017ರಲ್ಲಿ ಹೂಡಿಕೆ ಮಾಡುವಾಗ ಮಾರುಕಟ್ಟೆಯ ಸ್ಟ್ರಾಟಜಿ ಗಮನದಲ್ಲಿರಿಸಿ ಮುಂದಾಲೋಚನೆ ಮೇಲೆ ನಿರ್ಧರಿಸಿ.

3. ಪಿಪಿಎಫ್

2017ರ ಸಾಲಿನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ತುಂಬಾ ಸುರಕ್ಷಿತ ಮತ್ತು ಉತ್ತಮ ಹೂಡಿಕೆಗಳಲ್ಲಿ ಒಂದು. ಭಾರತದ ಸರ್ಕಾರದಿಂದ ನಿಯಂತ್ರಿಸಲ್ಪಡುವುದರಿಂದ ಇದು ಸುರಕ್ಷಿತ. ಪಿಪಿಎಫ್ ಬಡ್ಡಿದರ ಶೇ. 8.1ರಷ್ಟು ಇದೆ. ಬೇರೆ ಠೇವಣಿಗಳಿಗೆ ಹೋಲಿಸಿದರೆ ಅತ್ಯುತ್ತಮ. ಬಡ್ಡಿ ಆದಾಯ ಸಂಪೂರ್ಣವಾಗಿ ತೆರಿಗೆ ರಹಿತವಾಗಿದೆ. ತೆರಿಗೆ ಇಲಾಖೆಯ 80C ಸೆಕ್ಷನ್ ಅಡಿಯಲ್ಲಿ ತೆರಿಗೆ ಪ್ರಯೋಜನ ಪಡೆಯಬಹುದು.

4. ಎಸ್ಟೇಟ್ ಯೋಜನೆ ಮರೆಯಬೇಡಿ

ಕುಟುಂಬಕ್ಕಾಗಿ ಎಸ್ಟೇಟ್ ಮತ್ತು ತುರ್ತು ಯೋಜನೆಗಳನ್ನು ಮಾಡಲು ಮರೆಯಬೇಡಿ. 2017ರಲ್ಲಿ ಮನೆ ಖರೀದಿ ಮಾಡುವ ಯೋಜನೆ ನಿಮ್ಮದಾಗಿದಲ್ಲಿ ಕ್ರೆಡಿಟ್ ಸ್ಕೋರ್ ಹೆಚ್ಚಿಸಿ ಹಾಗೂ ಅನಗತ್ಯ ವೆಚ್ಚ ತಪ್ಪಿಸಿ ಕರಾರುವಕ್ಕಾದ ಯೋಜನೆ ರೂಪಿಸಿ.
ಕುಟುಂಬಕ್ಕಾಗಿ ತುರ್ತು ಯೋಜನೆಗಳನ್ನು ರೂಪಿಸಿ. ನಿಮ್ಮ ನಂತರ ಕುಟುಂಬಕ್ಕೆ ಯಾವುದೇ ತೊಂದರೆಗಳು ಉಂಟಾಗದಂತೆ ನೋಡಿಕೊಳ್ಳಿ.
ಪರ್ಸನಲ್ ಸೇವಿಂಗ್ಸ್, ಉದ್ಯೋಗಿಗಳ ಪ್ರಯೋಜನ, ಲೈಫ್ ಇನ್ಸೂರೆನ್ಸ್ ಕುಟುಂಬಕ್ಕೆ ಸುರಕ್ಷತೆ ನೀಡಬಲ್ಲವು.

5. ದೀರ್ಘಾವಧಿ ಹೂಡಿಕೆ

ಯಶಸ್ಸು ಅನ್ನುವುದು ತಕ್ಷಣದಲ್ಲಿ ಸಿಗುವಂತದ್ದಲ್ಲ. ಇದು ಮ್ಯಾರಾಥಾನ್ ಪಯಣ ಇದ್ದಂತೆ. ಮಾರುಕಟ್ಟೆಯಲ್ಲಿನ ಏಳುಬೀಳುಗಳ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳದೆ ದೀರ್ಘಾವಧಿ ಯೋಜನೆಗಳಲ್ಲಿ ಇನ್ವೆಸ್ಟ್ ಮಾಡಿ. ರಿಯಲ್ ಎಸ್ಟೇಟ್, ಷೇರು, ಈಕ್ವಿಟಿ, ಪಿಪಿಎಫ್, ಗೋಲ್ಡ್, ಐಪಿಒ, ಬಾಂಡ್ ಗಳಲ್ಲಿ ಹೂಡಿಕೆ ಮಾಡಿ.

6. ಲಿಕ್ವಿಡ್/ಮ್ಯೂಚುವಲ್ ಫಂಡ್ಸ್

ಸರ್ಕಾರದ ಭದ್ರತೆಗಳೊಂದಿಗೆ ಮ್ಯೂಚುವಲ್ ಫಂಡ್ಸ್ ಹೂಡಿಕೆ ಮಾಡುವುದು ಉತ್ತಮ ಆಯ್ಕೆ. ಪ್ರಸ್ತುತ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇವು ಉತ್ತಮ ಪ್ರತಿಫಲ ಸಿಗುತ್ತಿದೆ.

7. ನಿಮ್ಮ ಡೆಬ್ಟ್ ನಿರ್ವಹಣೆ

ಸ್ಟ್ರಾಟೆಜಿಕ್ ಡೆಬ್ಟ್ ಮ್ಯಾನೆಜ್ಮೆಂಟ್ ಯೋಜನೆ ಇಲ್ಲದೇ ಡೆಬ್ಟ್ ನಿರ್ವಹಣೆಯಲ್ಲಿ ಯಶಸ್ಸು ಸಾಧಿಸುವುದು ಕಷ್ಟ. ಕ್ರೆಡಿಟ್ ಕಾರ್ಡ್ ಡೆಬ್ಟ್, ಪರ್ಸನಲ್ ಲೋನ್, ಸ್ಟೂಡೆಂಟ್ ಲೋನ್ಸ್, ಹೌಸಿಂಗ್ ಡೆಬ್ಟ್ ಮೇಲೆ ಸರಿಯಾದ ನಿಯಂತ್ರಣ ಹಾಗೂ ಅನಗತ್ಯ ವೆಚ್ಚಕ್ಕೆ ಅವಕಾಶ ಕೊಡಬಾರದು.
ಉತ್ತಮ ಸಾಲ ನಿರ್ವಹಣೆ ಜಾಣ್ಮೆ ನಿಮ್ಮದಾಗಿದ್ದರೆ ಭವಿಷ್ಯದಲ್ಲಿ ಅನವಶ್ಯಕ ಖರ್ಚುವೆಚ್ಚಗಳಿಂದ ತಪ್ಪಿಸಿಕೊಳ್ಳಬಹುದು. ಹೊರಗಡೆ ಊಟ/ತಿಂಡಿ, ಟೀ, ಚಾಟ್ಸ್ ತಿನ್ನುವ ಬದಲು ಮನೆಯಿಂದ ತೆಗೆದುಕೊಂಡು ಹೋಗುವುದು ಅತ್ಯುತ್ತಮ ವಿಧಾನ.

8. ಹಣದ ಕುರಿತು ಆತ್ಮೀಯರೊಂದಿಗೆ ಚರ್ಚಿಸಿ

ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ ಹಣಕಾಸು ಯೋಜನೆಗಳನ್ನು ರೂಪಿಸುವುದರಿಂದ ನಿಮ್ಮ ಸಂಬಂಧಗಳು ಚೆನ್ನಾಗಿರುವುದಲ್ಲದೇ, ನಿಮ್ಮ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಣಕಾಸು ಗುರಿ ಮತ್ತು ಭವಿಷ್ಯತ್ತಿನ ಕುರಿತು ಸಮಗ್ರವಾಗಿ ಚರ್ಚಿಸಿ. ಮಕ್ಕಳಿಗೂ ಹಣಕಾಸು ವ್ಯವಹಾರ ಮತ್ತು ಉಳಿತಾಯ ಮಹತ್ವದ ಬಗ್ಗೆ ಅರಿವು ಮೂಡಿಸಿ.

9. ಇನ್ಸೂರೆನ್ಸ್ ಕವರೇಜ್ ಅವಲೋಕಿಸಿ

ನಿಮ್ಮ ಮೂಲಭೂತ ಅಗತ್ಯತೆ ಮತ್ತು ಉದ್ದೇಶಗಳ ಹಿನ್ನೆಲೆಯಲ್ಲಿ ವಿಮೆಗಳನ್ನು ಖರೀದಿಸಿ ನಿಯಮಿತವಾಗಿ ಇನ್ಸೂರೆನ್ಸ್ ಕವರೇಜ್ ಬಗ್ಗೆ ಅವಲೋಕನ ಮಾಡುತ್ತಿರಿ. ಜೀವ ವಿಮೆ, ಆರೋಗ್ಯ ವಿಮೆ, ಅಂಗವೈಕಲ್ಯ ವಿಮೆ, ಕಾರು ವಿಮೆ ಮತ್ತು ಗೃಹ ಮಾಲೀಕರ ವಿಮೆಗಳನ್ನು ಪರಿಶೀಲನೆ ಮಾಡುತ್ತಿರಬೇಕು. ವಿಮೆಗಳ ಅಡಿಯಲ್ಲಿ ಅಡಿಷನಲ್ ಇನ್ಸೂರೆನ್ಸ್ ಕವರೇಜ್ ಅಗತ್ಯತೆ ಅರಿತುಕೊಳ್ಳಿ. ಇದರಿಂದ ಸುರಕ್ಷಿತ ಮತ್ತು ಸುಭದ್ರ ಭವಿಷ್ಯತ್ತಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ.

10. ಮಕ್ಕಳಿಗಾಗಿ ಯೋಜನೆ ರೂಪಿಸಿ

2017ರಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯೋಜನೆ ರೂಪಿಸಲು ಮರೆಯದಿರಿ. ಇದು ನಿಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ದಾರಿದೀಪ ಆಗಬಲ್ಲದು. ಸುಕನ್ಯಾ ಸಮೃದ್ಧಿ ಯೋಜನೆ, ಸಮತೋಲಿತ ನಿಧಿ, ಈಕ್ವಿಟಿ ಮ್ಯೂಚುವಲ್ ಫಂಡ್, ಗೋಲ್ಡ್ ಗಳಲ್ಲಿ ಹೂಡಿಕೆ ಮಾಡಿ.

English summary

Financial Planning Tips For 2017

From making a financial plan to keeping yourself accountable for finances in the new year, here are some tips to help you. 2017 financial planes are given here.
Story first published: Monday, January 2, 2017, 12:08 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC