Englishहिन्दी മലയാളം தமிழ் తెలుగు

ಜಾಬ್ ಆಫರ್ ಸ್ವೀಕರಿಸುವ ಮುನ್ನ ಇಲ್ಲೊಮ್ಮೆ ನೋಡಿ...

Written By: Siddu
Subscribe to GoodReturns Kannada

ಉದ್ಯೋಗ ಪಡೆಯುವುದು ಎಷ್ಟು ಕಷ್ಟಕರ ಅನ್ನುವುದು ಎಲ್ಲರಿಗೂ ಗೊತ್ತು. ಉನ್ನತ ದರ್ಜೆಯ ಕಂಪನಿಗಳಲ್ಲಿ ನಮ್ಮ ನೆಚ್ಚಿನ ಉದ್ಯೋಗ ಪಡೆಯುವುದು ಎಲ್ಲರ ಕನಸಾಗಿರುತ್ತದೆ. ಉನ್ನತ ವ್ಯಾಸಂಗ, ಉತ್ತಮ ಕೌಶಲ್ಯ, ಜ್ಞಾನ, ಉತ್ತಮ ಸಂಘಟನಾ ಮತ್ತು ನಿರ್ವಹಣಾ ತಂತ್ರ, ಕಮ್ಯೂನಿಕೇಷನ್ ಎಲ್ಲವೂ ಚೆನ್ನಾಗಿದ್ದರೆ ಇಷ್ಟದ ಕೆಲಸ ಸಿಗುವುದು ಗ್ಯಾರಂಟಿ.

ಜಾಬ್ ಆಫರ್ ಸ್ವೀಕರಿಸುವ ಮುನ್ನ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿ ಈ ಅಂಶಗಳನ್ನು ತಪ್ಪದೇ ಗಮನಿಸಿಬೇಕು. ಅಲ್ಲದೇ ಉದ್ಯೋಗ ಆಯ್ಕೆಯನ್ನು ಈ 7 ಸಂಗತಿಗಳ ಆಧಾರದ ಮೇಲೆ ನಿರ್ಧರಿಸುವುದು ಒಳಿತು.

1. ಸಂಬಳ

ಜಾಬ್ ಆಫರ್ ಸ್ವೀಕರಿಸುವ ಮುನ್ನ ಪ್ರತಿಯೊಬ್ಬರೂ ಪರಿಗಣಿಸಬೇಕಾದ ಪ್ರಥಮ ಅಂಶವೇ ಸ್ಯಾಲರಿ. ಕಂಪನಿ ಒದಗಿಸುವ ಸಂಭಾವನೆ ನ್ಯಾಯೋಚಿತವೆ ಎಂಬುದನ್ನು ಅರಿಯಬೇಕು. ಹೆಚ್ಚಿನ ಕಂಪನಿಗಳು ಹೊಸಬರಿಗೆ ತುಂಬಾ ಕಡಿಮೆ ಸಂಬಳ ನೀಡುತ್ತವೆ. ಅದಕ್ಕಾಗಿ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೇರೆ ಯಾವ ಯಾವ ಕಂಪನಿಗಳಲ್ಲಿ ಉದ್ಯೋಗವಿದೆ ಎಂಬುದನ್ನು ತಿಳಿದುಕೊಳ್ಳಿ. ಅದಕ್ಕನುಗುಣವಾಗಿ ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ. ನಮ್ಮಿಷ್ಟದ ಕಂಪನಿಯಲ್ಲಿ ಉತ್ತಮವಾದ ಕೆಲಸದೊಂದಿಗೆ ಉತ್ತಮವಾದ ಸಂಬಳ ಪಡೆಯುವುದು ತುಂಬಾ ಮುಖ್ಯ.

2. ಕೆಲಸದ ವೇಳಾಪಟ್ಟಿ

ಜಾಬ್ ಆಫರ್ ಸ್ವೀಕರಿಸುವ ಮುನ್ನ ಕೆಲಸದ ವೇಳಾಪಟ್ಟಿ ನನಗೆ ಸರಿ ಹೊಂದುತ್ತದೆಯೇ ಎಂಬುದನ್ನು ನಿಮ್ಮಷ್ಟಕ್ಕೆ ಆಲೋಚಿಸಿ. ಅದರಲ್ಲಿ ಯಾವುದೇ ಗಡಿಬಿಡಿ, ಗೊಂದಲ ಬೇಡ. ಮನೆಯಿಂದ ಎಷ್ಟು ದೂರವಿದೆ, ವಾರಾಂತ್ಯದಲ್ಲೂ ಕೆಲಸಕ್ಕೆ ಬರಬೇಕೆ, ಎಷ್ಟು ಗಂಟೆ ಕೆಲಸ ಮಾಡಬೇಕು, ರಜಾ ದಿನಗಳಲ್ಲಿ ಕೆಲಸಕ್ಕೆ ಹೋಗಬೇಕೆ ಇತ್ಯಾದಿ ಅಂಶಗಳು ಗಮನದಲ್ಲಿರಲಿ. ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನಂತರ ನಿಮ್ಮ ನಿರ್ಧಾರ ತಿಳಿಸಬಹುದು.

3. ಸ್ಥಳ

ನೀವು ಕೆಲಸ ಮಾಡಬೇಕಾದ ಭವಿಷ್ಯತ್ತಿನ ಆಫೀಸ್ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಿ. ನೀವು ವಾಸವಾಗಿರುವ ಸ್ಥಳದಿಂದ ತುಂಬಾ ದೂರವಿದೆಯೇ ಇಲ್ಲ ಹತ್ತಿರವಿದೆಯೇ? ತುಂಬಾ ದೂರವಿದ್ದರೆ ತಿಂಗಳ ಸಂಬಳಕ್ಕಿಂತ ಪ್ರಯಾಣದ ವೆಚ್ಚವೇ ಜಾಸ್ತಿ ಆಗುತ್ತಿದೆಯೇ? ಪ್ರಯಾಣಕ್ಕೆ ತಗಲುವ ಸಮಯ ಎಷ್ಟು? ಪ್ರಯಾಣದ ವೆಚ್ಚವನ್ನು ಕಂಪನಿ ಭರಿಸುತ್ತದೆಯೇ? ಈ ಎಲ್ಲ ಸಂಗತಿಗಳನ್ನು ಗಮನಿಸಿ ಜಾಬ್ ಆಫರ್ ಒಪ್ಪಿಕೊಳ್ಳಿ.

4. ನಿಮ್ಮ ಸಹೋದ್ಯೋಗಿಗಳು

ಕೆಲವರಿಗೆ ಇದು ತುಂಬಾ ಬಾಹ್ಯ ಕಾರಣ ಎಂಬುದು ಗೊತ್ತು. ಆದರೆ ಕೆಲಸ ಮಾಡುವ ವಾತಾವರಣ ಚೆನ್ನಾಗಿರಬೇಕು. ನಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧವಿರಬೇಕು. ನಾವು ಹೆಚ್ಚಿನ ಸಮಯ ಆಫೀಸ್ ನಲ್ಲಿ ಕಳೆಯುವುದರಿಂದ ನಮ್ಮ ಸಹೋದ್ಯೋಗಿಗಳು ಕೂಡ ಅಷ್ಟೇ ಮುಖ್ಯ. ಕೆಲವರು ಅಹಂಕಾರಿಗಳು, ತೊಂದರೆ ಕೊಡುವವರು ಇದ್ದರೆ ಕೆಲವರು ಒಳ್ಳೆಯವರು ಇರುತ್ತಾರೆ. ನಿಮ್ಮ ಐಡಿಯಾ ಮತ್ತು ಮೌಲ್ಯಗಳಿಗೆ ಗೌರವ ಸಿಗುವಂತ ವಾತಾವರಣ ತುಂಬಾ ಮುಖ್ಯ.

5. ವೃತ್ತಿ ಭವಿಷ್ಯ

ಉನ್ನತ ವ್ಯಾಸಂಗ ಮುಗಿಸಿದ ತಕ್ಷಣ ಉದ್ಯೋಗ ಸಿಕ್ಕರೆ ಎಕ್ಸೈಟ್ ಆಗುವುದು ಸಹಜ. ಆದರೆ ಯಾವುದೇ ತರಾತುರಿ ಮಾಡದೆ ಹತ್ತಾರು ಬಾರಿ ಯೋಚಿಸಿ ವೃತ್ತಿ ಬದುಕಿನ ಭವಿಷ್ಯ ರೂಪಿಸಬೇಕಾಗುತ್ತದೆ. ಕಂಪನಿಯಿಂದ ಕರೆ ಬರದಿದ್ದರೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ತಾಳ್ಮಿಯಿಂದ ಬೇರೆ ಕಂಪನಿಗಳಿಗೆ ಪ್ರಯತ್ನಿಸಿ. ವೃತ್ತಿ ಬದುಕು ತುಂಬಾ ಮುಖ್ಯವಾಗಿರುವುದರಿಂದ ಬುದ್ದಿವಂತಿಕೆಯಿಂದ ಹಾಗೂ ಸಹನೆಯಿಂದ ಕಾಯಿರಿ. ವಿಷಾದ ಮಾಡಿಕೊಳ್ಳದೆ ಉತ್ತಮವಾದುದನ್ನೇ ಆಯ್ಕೆ ಮಾಡಿ.

6. ಉದ್ಯೋಗ ಜವಾಬ್ಧಾರಿಗಳು

ನೀವು ಜಾಬ್ ಆಫರ್ ಪಡೆದುಕೊಂಡ ನಂತರ ಖಚಿತವಾಗಿ ಏನು ಮಾಡಬೇಕು ಮತ್ತು ಕಂಪನಿ ನಿಮ್ಮಿಂದ ಏನನ್ನು ಬಯಸುತ್ತದೆ ಎಂಬುದನ್ನು ಅರಿಯಿರಿ. ವರ್ಕ್ ಪ್ರೊಫೈಲ್ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ. ಕಂಪನಿ ಬಯಸುವುದು ನಿಮ್ಮಿಂದ ಆಗುತ್ತದೆಯೇ? ನಿಮ್ಮ ಜವಾಬ್ಧಾರಿ ಸಂಬಂಧಿತ ವಿವರವುಳ್ಳ ಡಾಕ್ಯುಮೆಂಟ್ ಪಡೆದು ತದನಂತರ ನಿಮ್ಮ ಅಭಿಪ್ರಾಯ ತಿಳಿಸಿ.

7. ಇನ್ನಿತರ ಪ್ರಯೋಜನಗಳು

ಕಂಪನಿ ಕೊಡುವ ಸಂಬಳದೊಂದಿಗೆ ಬೇರೆ ಏನೇನು ಪ್ರಯೋಜನಗಳನ್ನು ಪಡೆಯಲಿದ್ದಿರಿ ಎಂಬುದನ್ನು ತಿಳಿದುಕೊಳ್ಳಿ. ನಿಮಗೆ ಡೆಂಟಲ್ ಪ್ಲಾನ್, ಆರೋಗ್ಯ ವಿಮೆ, ಬೇರೆ ಬೇರೆ ಸದಸ್ಯತ್ವ ಕಾರ್ಡ್, ಬೋನಸ್ ಲಭ್ಯವಿದೆಯೇ ನೋಡಿಕೊಳ್ಳಿ. ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಉತ್ತೇಜಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಮುಕ್ತಾಯ

ಯಾವುದೇ ಗಡಿಬಿಡಿ ಮಾಡಿಕೊಳ್ಳದೆ ಸಮಯವನ್ನು ತೆಗೆದುಕೊಂಡು ಎಲ್ಲ ಅಂಶಗಳನ್ನು ವಿವರವಾಗಿ ವಿಶ್ಲೇಷಿಸಿ ಸರಿಯಾದ ನಿರ್ಧಾರ ಮಾಡಿ ಉಜ್ವಲ ಭವಿಷ್ಯ ರೂಪಿಸಲು ಮುಂದಾಗಿ. ವೃತ್ತಿ ಜೀವನ ತುಂಬಾ ಮುಖ್ಯ ಆಗಿರುವುದರಿಂದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಯಾವುದೇ ಗೊಂದಲ ಅಥವಾ ಗಡಿಬಿಡಿ ಬೇಡ.

Read more about: job
English summary

Important Things To Consider Before Accepting A Job Offer

There aren’t so many things one should consider before accepting a job offer, you might say, since nowadays it's really hard to even get a job in the first place.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC