ಪೋಸ್ಟ್ ಆಫೀಸ್ ಪೇಮೆಂಟ್ಸ್ ಬ್ಯಾಂಕ್ ಆರಂಭ, 5.5% ಬಡ್ಡಿದರ ಘೋಷಣೆ!

ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(ಐಪಿಪಿಬಿ), ಸೋಮವಾರ ರಾಂಚಿ ಮತ್ತು ರಾಯಪುರದಲ್ಲಿ ಮೂಲ ಹಣಕಾಸು ಸೇವಾಸೌಲಭ್ಯಗಳನ್ನು ಒದಗಿಸಲು ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದೆ.

ಇಂಡಿಯ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(ಐಪಿಪಿಬಿ), ಸೋಮವಾರ ರಾಂಚಿ ಮತ್ತು ರಾಯಪುರದಲ್ಲಿ ಮೂಲ ಹಣಕಾಸು ಸೇವಾಸೌಲಭ್ಯಗಳನ್ನು ಒದಗಿಸಲು ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದೆ.

ಅಂಚೆ ಪೇಮೆಂಟ್ಸ್ ಬ್ಯಾಂಕ್ ಮೂಲ ಬಂಡವಾಳವು ರೂ. 800 ಕೋಟಿಗಳಷ್ಟಿದ್ದು, ಕೇಂದ್ರ ಸರ್ಕಾರ ಈಗಾಗಲೇ ರೂ. 275 ಕೋಟಿಯನ್ನು ಪಾವತಿಸಿದೆ.

ಅಂಚೆ ಇಲಾಖೆ ಉದ್ದೇಶ

ಅಂಚೆ ಇಲಾಖೆ ಉದ್ದೇಶ

ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಟ ಒಂದಾದರೂ ಅಂಚೆ ಪೇಮೆಂಟ್ಸ್ ಬ್ಯಾಂಕ್‌ ಹೊಂದುವುದು ಭಾರತೀಯ ಅಂಚೆ ಇಲಾಖೆಯ ಉದ್ದೇಶವಾಗಿದೆ. ಹೀಗಾಗಿ ಅಂಚೆ ಇಲಾಖೆಯ ಒಂದು ಸಾವಿರ ಎಟಿಎಂಗಳನ್ನು ಐಪಿಪಿಬಿ ಗೆ ವರ್ಗಾಯಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ. ಪಿ. ಸಿಂಗ್‌ ಹೇಳಿದ್ದಾರೆ.

ಗರಿಷ್ಠ 1 ಲಕ್ಷದಷ್ಟು ಠೇವಣಿ

ಗರಿಷ್ಠ 1 ಲಕ್ಷದಷ್ಟು ಠೇವಣಿ

ದೇಶದಾದ್ಯಂತ ಸೆಪ್ಟೆಂಬರ್‌ ತಿಂಗಳ ಹೊತ್ತಿಗೆ 650 ಪೇಮೆಂಟ್ಸ್ ಬ್ಯಾಂಕ್ ಶಾಖೆಗಳನ್ನು ಆರಂಭಿಸುವ ಗುರಿ ಇದೆ ಎಂದು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಹೇಳಿದ್ದಾರೆ. ಪೇಮೆಂಟ್ಸ್ ಬ್ಯಾಂಕ್‌ಗಳು ಪ್ರತಿ ಖಾತೆಯಲ್ಲಿ ಗರಿಷ್ಠ ರೂ. 1 ಲಕ್ಷದವರೆಗೆ ಠೇವಣಿ ಸ್ವೀಕರಿಸಲಿವೆ.

5.5% ಬಡ್ಡಿದರ

5.5% ಬಡ್ಡಿದರ

ರೂ. 25,000 ಠೇವಣಿ ಮೇಲಿನ ತ್ರೈಮಾಸಿಕದ ಅವಧಿ ಮೇಲೆ ಶೇ. 4.5ರಷ್ಟು ಬಡ್ಡಿದರ, 25 ಸಾವಿರದಿಂದ 50 ಸಾವಿರದ ನಡುವಿನ ಮೊತ್ತಕ್ಕೆ ಶೇ. 5ರಷ್ಟು ಹಾಗೂ ರೂ. 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ಶೇ. 5.5ರಷ್ಟು ಬಡ್ಡಿದರ ಒದಗಿಸಲಿದೆ.

ಅರುಣ್‌ ಜೇಟ್ಲಿ ಹೇಳಿಕೆ

ಅರುಣ್‌ ಜೇಟ್ಲಿ ಹೇಳಿಕೆ

ಮುಂದಿನ ದಿನಗಳಲ್ಲಿ ಪೇಮೆಂಟ್ಸ್ ಬ್ಯಾಂಕ್‌ಗಳು ಸಾಂಪ್ರದಾಯಿಕ ಬ್ಯಾಂಕ್‌ಗಳಿಗೆ ಬಲವಾದ ಸ್ಪರ್ಧೆ ಒಡ್ಡಲಿವೆ ಎಂದು ಪೇಮೆಂಟ್ಸ್ ಬ್ಯಾಂಕ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಗ್ರಾಮೀಣ ಭಾಗಕ್ಕೆ ಅನುಕೂಲ

ಗ್ರಾಮೀಣ ಭಾಗಕ್ಕೆ ಅನುಕೂಲ

ಪೇಮೆಂಟ್ಸ್ ಬ್ಯಾಂಕ್ ಗಳ ಜಾರಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರ ಮನೆ ಬಾಗಿಲಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ. ಪೇಮೆಂಟ್ಸ್ ಬ್ಯಾಂಕ್‌ಗಳು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಮತ್ತು ಬ್ಯಾಂಕಿಂಗ್‌ ವ್ಯವಸ್ಥೆ ಮೇಲೆ ಹಲವು ಪರಿಣಾಮ ಬೀರಲಿದೆ ಎಂದು ಅರುಣ್‌ ಜೇಟ್ಲಿ ಹೇಳಿದರು.

ಪೇಟಿಎಂ ಮತ್ತು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್

ಪೇಟಿಎಂ ಮತ್ತು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್

ಈಗಾಗಲೇ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ದೇಶದಾದ್ಯಂತ ರೂ. 3,000 ಕೋಟಿ ಆರಂಭಿಕ ಬಂಡವಾಳದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದು, ಉಳಿತಾಯ ಖಾತೆಗಳ ಮೇಲೆ ಶೇ. 7.25ರಷ್ಟು ಬಡ್ಡಿದರ ಘೋಷಿಸಿದೆ. ದೇಶದ ಪ್ರಮುಖ ಮೊಬೈಲ್ ವಾಲೆಟ್ ಮತ್ತು ಇ-ಕಾಮರ್ಸ್ ಕಂಪನಿ 'ಪೇಟಿಎಂ' ಪೇಮೆಂಟ್ ಬ್ಯಾಂಕ್ ಗಳನ್ನು ಆರಂಭಿಸಲು ಆರ್ಬಿಐನಿಂದ ಪರವಾನಗಿ ಪಡೆದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+