ಪಿಎಫ್ ವಿತ್ ಡ್ರಾ ಮಾಡುವ ಮುನ್ನ ಇಲ್ಲೊಮ್ಮೆ ನೋಡಿ...

ಇಪಿಎಫ್ ಬಡ್ಡಿದರವನ್ನು ಪ್ರತಿ ವರ್ಷವೂ ಪರಿಷ್ಕರಿಸಲಾಗುತ್ತದೆ. 2016-17ನೇ ಸಾಲಿನಲ್ಲಿ ಉಳಿತಾಯ ಖಾತೆಗಳ ಮೇಲೆ ಶೇ. 8.65ರಷ್ಟು ಬಡ್ಡಿದರ ನಿಗದಿ ಪಡಿಸಲಾಗಿದ್ದು, ಇದು ಕಳೆದ ಏಳು ವರ್ಷಗಳಲ್ಲಿ ಅತಿ ಕಡಿಮೆ ಬಡ್ಡಿದರ ಆಗಿದೆ.

ವೇತನ ಪಡೆಯುತ್ತಿರುವ ಯಾವುದೇ ಉದ್ಯೋಗಿಗೆ ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್) ಬಹಳ ಮುಖ್ಯವಾಗುತ್ತದೆ. ಒಂದು ದೃಷ್ಟಿಯಲ್ಲಿ ಹೇಳುವುದಾದರೆ ಇದು ಆತನ ಜೀವನಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಇಪಿಎಫ್ ಬಡ್ಡಿದರವನ್ನು ಪ್ರತಿ ವರ್ಷವೂ ಪರಿಷ್ಕರಿಸಲಾಗುತ್ತದೆ. 2016-17ನೇ ಸಾಲಿನಲ್ಲಿ ಉಳಿತಾಯ ಖಾತೆಗಳ ಮೇಲೆ ಶೇ. 8.65ರಷ್ಟು ಬಡ್ಡಿದರ ನಿಗದಿ ಪಡಿಸಲಾಗಿದ್ದು, ಇದು ಕಳೆದ ಏಳು ವರ್ಷಗಳಲ್ಲಿ ಅತಿ ಕಡಿಮೆ ಬಡ್ಡಿದರ ಆಗಿದೆ.

ಪಿಎಫ್ ಮತ್ತು ಟ್ಯಾಕ್ಸ್ ಡಿಟಕ್ಟಡ್ ಆಟ್ ಸೋರ್ಸ್(ಟಿಡಿಎಸ್) ನಡುವಿನ ಸಂಬಂಧವನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಇಪಿಎಫ್ ವಿಥ್ ಡ್ರಾ ಮಾಡಬೇಕಾದಾಗ ಈ ಪ್ರಮುಖ ಅಂಶಗಳು ಗೊತ್ತಿರಬೇಕಾಗುತ್ತದೆ. ಯಾವ ಯಾವ ಸಂದರ್ಭದಲ್ಲಿ ವಿಥ್ ಡ್ರಾ ಮಾಡುವಾಗ ಟಿಡಿಎಎಸ್ ಅನ್ವಯವಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಈ ಆದಾಯಗಳ ಮೇಲೆ ಟಿಡಿಎಸ್ ಕಡಿತವಾಗುತ್ತದೆ ಏಕೆ?

1. ಖಾತೆ ವರ್ಗಾವಣೆ

1. ಖಾತೆ ವರ್ಗಾವಣೆ

ಉದ್ಯೋಗಿಗಳು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಅಥವಾ ಒಂದು ಕೆಲಸ ಬಿಟ್ಟು ಇನ್ನೊಂದು ಕೆಲಸಕ್ಕೆ ಸೇರಲು ಬಯಸುತ್ತಿರುತ್ತಾರೆ. ಉದ್ಯೋಗಿಗಳು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ತಮ್ಮ ಇಪಿಎಫ್ ಟ್ರಾನ್ಸಫರ್ ಮಾಡಿದರೆ ಟಿಡಿಎಸ್ ಅನ್ವಯವಾಗುವುದಿಲ್ಲ.

2. ಅನಾರೋಗ್ಯ

2. ಅನಾರೋಗ್ಯ

ಪಾಲಿಸಿದಾರ ಅಥವಾ ಉದ್ಯೋಗಿ ಅಥವಾ ಇಪಿಎಫ್ ಖಾತೆ ಯಾರ ಹೆಸರಿನಲ್ಲಿದೆಯೋ ಅವರು ಅನಾರೋಗ್ಯಕ್ಕೆ ಒಳಗಾದರೆ ಅವರ ಖಾತೆಯಿಂದ ಟಿಡಿಎಸ್ ಕಡಿತವಾಗುವುದಿಲ್ಲ.

3. 5 ವರ್ಷ ಅವಧಿ

3. 5 ವರ್ಷ ಅವಧಿ

ಇಪಿಎಫ್ ಖಾತೆ ಹೊಂದಿರುವ ವ್ಯಕ್ತಿ 5 ವರ್ಷದ ಅವಧಿ ಮುಗಿದ ನಂತರ ಹಣ ವಿಥ್ ಡ್ರಾ ಮಾಡಿದರೆ ಟಿಡಿಎಸ್ ಕಡಿತ ಆಗುವುದಿಲ್ಲ. ಕನಿಷ್ಟ ಐದು ವರ್ಷ ಪೂರೈಸಬೇಕಾಗುತ್ತದೆ. ಆಗ ಮಾತ್ರ ಟಿಡಿಎಸ್ ಅನ್ವಯಿಸುವುದಿಲ್ಲ.

4. ಕನಿಷ್ಟ ಮೊತ್ತ

4. ಕನಿಷ್ಟ ಮೊತ್ತ

ಉದ್ಯೋಗಿ ತನ್ನ ಪಿಎಫ್ ಖಾತೆಯಲ್ಲಿ ರೂ. 30 ಸಾವಿರ ಗಿಂತ ಕಡಿಮೆ ಹೊಂದಿದ್ದರೆ ಹಾಗೂ ಉದ್ಯೋಗಿ ಐದು ವರ್ಷಕ್ಕಿಂತ ಕಡಿಮೆ ಅವಧಿ ಕೆಲಸ ಮಾಡಿದ್ದರೆ ಟಿಡಿಎಸ್ ಇರುವುದಿಲ್ಲ.

5. ಫಾರ್ಮ್ 15ಜಿ/15ಎಚ್

5. ಫಾರ್ಮ್ 15ಜಿ/15ಎಚ್

ಉದ್ಯೋಗಿ 30 ಸಾವಿರಕ್ಕಿಂತ ಹೆಚ್ಚು ಹಣ ವಿಥ್ ಡ್ರಾ ಮಾಡಲು ಬಯಸಿದಾಗ ಫಾರ್ಮ್ 15ಜಿ/15ಎಚ್ ಹಾಜರುಪಡಿಸಿದರೆ ಟಿಡಿಎಸ್ ನಿಂದ ಮುಕ್ತಿ ಪಡೆಯಬಹುದು. ಇದರ ನಿಯಮ ಷರತ್ತುಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

6. ಯಾವ ಸಂದರ್ಭದಲ್ಲಿ ಟಿಡಿಎಸ್ ಕಟ್ಟಬೇಕಾಗುತ್ತದೆ?

6. ಯಾವ ಸಂದರ್ಭದಲ್ಲಿ ಟಿಡಿಎಸ್ ಕಟ್ಟಬೇಕಾಗುತ್ತದೆ?

 - 30 ಸಾವಿರಕ್ಕಿಂತ ಅಧಿಕ ಮೊತ್ತದ ಹಣ ಡ್ರಾ ಮಾಡಲು ಮುಂದಾದ ಉದ್ಯೋಗಿ 5 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ್ದರೆ,
- 15ಜಿ/15ಎಚ್ ನಮೂನೆಯನ್ನು ಹಾಜರು ಪಡಿಸದೇ ಇದ್ದಲ್ಲಿ ಶೇ. 10 ರಷ್ಟು ಟಿಡಿಎಸ್ ಕಟ್ಟಬೇಕಾಗುತ್ತದೆ.
- ಅತಿ ಹೆಚ್ಚು ಅಂದರೆ ಶೇ. 34 .608 ರಷ್ಟು ಮೊತ್ತವನ್ನು ಟಿಡಿಎಸ್ ಆಗಿ ಕಟ್ಟಬೇಕಾದ ಸಂದರ್ಭವೂ ಬರಬಹುದು.

ಕೊನೆ ಮಾತು

ಕೊನೆ ಮಾತು

ನೀವು ಇಪಿಎಫ್ ಹಣ ವಿಥ್ ಡ್ರಾ ಮಾಡಲು ಮುಂದಾಗುತ್ತೀರಿ ಎಂದಾದರೆ ಪ್ಯಾನ್ ನಂಬರ್ ಜತೆ 15ಜಿ/15ಎಚ್ ನಮೂನೆ ಅಡಿ ನಂ.19ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ಕಾಲಕಾಲಕ್ಕೆ ಬದಲಾಗುವ ಷರತ್ತು ಮತ್ತು ನಿಯಮಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.(kannadagoodreturns.in)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+