1 ಕೋಟಿ ಕವರೆಜ್ ಕೊಡುವ ಬೆಸ್ಟ್ ಇನ್ಸೂರೆನ್ಸ್ ಪಾಲಿಸಿಗಳನ್ನು ಮಾಡಿಸಿದ್ದರೆ ಬಾಳು ಬಂಗಾರ

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಪ್ರತಿಯೊಬ್ಬರು ತಮ್ಮ ಹಣಕಾಸಿನ ಖಜಾನೆಯಲ್ಲಿ ಟರ್ಮ್ ಇನ್ಸೂರೆನ್ಸ್ ಎನ್ನುವ ಉತ್ಪನ್ನವನ್ನು ಹೊಂದಿರಬೇಕು. ಇದು ಜೀವನಕ್ಕೆ ಒಂದು ಭರವಸೆಯ ಬೆಳಕಾಗಿ ಕಾರ್ಯನಿರ್ವಹಿಸುತ್ತದೆ. ಕಷ್ಟ ಕಾಲದಲ್ಲಿ ಅದರಲ್ಲೂ ಅಫಘಾತದಂತಹ ಸಂದರ್ಭಗಳಲ್ಲಿ ಹಣಕಾಸು ಭದ್ರತೆ ಒದಗಿಸುತ್ತದೆ. ಬಡವರಾಗಲಿ ಅಥವಾ ಶ್ರೀಮಂತರಾಗಲಿ ಪ್ರತಿ ಕುಟುಂಬಗಳು ಇಂತಹ ಟರ್ಮ್ ಇನ್ಸೂರೆನ್ಸ್ ಪಾಲಿಸಿಗಳನ್ನು ಹೊಂದಿರುವುದು ಸುರಕ್ಷಿತ ವಿಧಾನ. ಸಂಬಳ ಪಡೆಯುವವರು, ಉತ್ತಮ ಆದಾಯ ಮತ್ತು ಕಡಿಮೆ ಆದಾಯವಿರುವ 25-40ರ ನಡುವಿನ ವ್ಯಕ್ತಿಗಳಿಗೆ ಈ ವಿಮೆ ತುಂಬಾ ಸೂಕ್ತವಾಗಿದೆ.(ಜೀವ ವಿಮೆ ಖರೀದಿಸುವ ಮುನ್ನ 10 ಅಂಶ ನೋಡಿ...)

  ಹಾಗಿದ್ದರೆ 1 ಕೋಟಿ ಕವರೆಜ್ ತಂದು ಕೊಡುವ ಬೆಸ್ಟ್ ಇನ್ಸೂರೆನ್ಸ್ ಪಾಲಿಸಿಗಳು ಯಾವುವು ಎಂಬುದನ್ನು ತಿಳಿಯೋಣ.....

  ಎಸ್ಬಿಐ ಲೈಫ್ ಇ-ಶೀಲ್ಡ್

  ಕೈಗೆಟುಕುವ ಕಡಿಮೆ ಪ್ರೀಮಿಯಂ ದರ ರೂ. 3,500ರಲ್ಲಿ ವ್ಯಕ್ತಿಗಳು ತಮ್ಮ ಕುಟುಂಬಕ್ಕೆ ಅತ್ಯುತ್ತಮ ಹಣಕಾಸು ಭದ್ರತೆ ಒದಗಿಸಬಹುದು. ಇ-ಶೀಲ್ಡ್ ಕವರ್ ಪಾಲಿಸಿ ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸಲು ವಿಮಾದಾರರಿಗೆ ಭರವಸೆ ನೀಡುತ್ತದೆ. ಈ ಯೋಜನೆಯು ಭಿನ್ನ ಆಯ್ಕೆ ಮತ್ತು ಹೆಚ್ಚೆಚ್ಚು ಕವರೆಜ್ ಆಯ್ಕೆಯನ್ನು ಹೊಂದಿರುತ್ತದೆ. ಆಕಸ್ಮಿಕ ಸಾವಿನ ಪ್ರಯೋಜನ ಮೂಲ ಮೊತ್ತಕ್ಕೆ ಸಮನಾಗಿರುತ್ತದೆ ಅಥವಾ ಹೆಚ್ಚುಕಡಿಮೆ ರೂ. 50 ಲಕ್ಷಕ್ಕಿಂತ ಕಡಿಮೆಯಿರುತ್ತದೆ. ಸೆಕ್ಷನ್ 80ಸಿ ಮತ್ತು ಸೆಕ್ಷನ್ 10 (10)ಡಿ ಅಡಿಯಲ್ಲಿ ತೆರಿಗೆಯ ಪ್ರಯೋಜನಗಳು ಕೂಡ ಅನ್ವಯವಾಗುತ್ತವೆ.

  ಐಸಿಐಸಿಐ ಪ್ರು ಐಪಿಟ್ರೇಟ್ ಸ್ಮಾರ್ಟ್ ಲೈಫ್ ಕವರ್

  ICICIpru ಟರ್ಮ್ ಪ್ಲಾನ್ ಹೆಚ್ಚು ಮಾರಾಟವಾಗುವ ಯೋಜನೆಯಾಗಿದೆ. ಇನ್ ಬಿಲ್ಟ್ ಟರ್ಮಿನಲ್ ಮತ್ತು ಅಂಗವೈಕಲ್ಯದ ಸೌಲಭ್ಯಗಳನ್ನು ಒಳಗೊಂಡಿದೆ. ತಿಂಗಳಿಗೆ ಕೇವಲ ರೂ. 490 ದರದಲ್ಲಿ ಲಭ್ಯವಿದ್ದು, ವಿಮಾದಾರರು ತಮ್ಮ ಕುಟುಂಬವನ್ನು ರೂ. 1 ಕೋಟಿ ಮೊತ್ತದವರೆಗೆ ಸುರಕ್ಷಿತವಾಗಿರಿಸಿಕೊಳ್ಳಬಹುದು. ಈ ಯೋಜನೆ 34 ವಿಧದ ಕಾಯಿಲೆಗಳಿಗೆ ಅನ್ವಯಿಸುತ್ತಿದ್ದು, 1 ಕೋಟಿವರೆಗೆ ಪ್ರಯೋಜನ ನೀಡುತ್ತದೆ. ಒಂದು ವೇಳೆ ಆಕಸ್ಮಿಕ ಅಪಘಾತದಿಂದ ವಿಮೆದಾರ ಸಾವನ್ನಪ್ಪಿದಲ್ಲಿ ನಾಮಿನಿಗೆ ಮೊತ್ತವನ್ನು ಪಾವತಿಸಲಾಗುತ್ತದೆ. ಅಪಘಾತದಲ್ಲಿ ಸಂಪೂರ್ಣ ಸ್ವಾಧೀನ ಕಳೆದುಕೊಂಡಲ್ಲಿ ಅಥವಾ ಕಾಯಿಲೆಗಳಿಗೆ ಒಳಗಾದಲ್ಲಿ ರೂ. 1 ಕೋಟಿವರೆಗೆ ಪಾವತಿಸಲಾಗುತ್ತದೆ.

  ಅವಿವಾ ಐ-ಲೈಫ್

  ಅವಿವಾ ಐ- ಲೈಫ್ 10 ವರ್ಷಗಳ ಟರ್ಮ್ ಪ್ಲಾನ್ ಮೂಲಕ ಧೂಮಪಾನ ಮಾಡದ ಪುರುಷ 18 ವರ್ಷ ವಯಸ್ಸಿನವರು ರೂ. 1 ಕೋಟಿ ಮೊತ್ತವನ್ನು ತೆರಿಗೆ ಇಲ್ಲದೆ ದಿನಕ್ಕೆ 16 ರೂ. ನಂತೆ ಪಡೆಯಬಹುದು.
  ವಾರ್ಷಿಕ ಪ್ರೀಮಿಯಂ ಮೊತ್ತವು ರೂ. 5840 ಆಗಿರುತ್ತದೆ. ಈ ಟರ್ಮ್ ಪ್ಲಾನ್ ಎಲ್ಲಾ ವಿಧದ ಸಾವುಗಳನ್ನು ಒಳಗೊಂಡಂತೆ ಸ್ತ್ರೀಯರಿಗೆ 5% ರಿಯಾಯಿತಿ ನೀಡುತ್ತದೆ. ಹೆಚ್ಚುವರಿಯಾಗಿ, ರೂ. 1 ಕೋಟಿ ಪ್ರೀಮಿಯಂ ಮೊತ್ತದ ಮೇಲೆ ರಿಯಾಯಿತಿ ಸಹ ನೀಡಲಾಗುತ್ತದೆ.

  ಎಚ್ಡಿಎಫ್ಸಿ ಲೈಫ್ ಕ್ಲಿಕ್ 2 ಪ್ರೊಟೆಕ್ಟ್

  ಧೂಮಪಾನ ಮಾಡದಿರುವ 18 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ತಿಂಗಳಿಗೆ ರೂ. 683ರ ನಾಮಿನಲ್ ದರದಲ್ಲಿ ರೂ. 1 ಕೋಟಿ ಮೌಲ್ಯದ ಪಾಲಿಸಿ ಲಭ್ಯವಿರುತ್ತದೆ. ಆಕಸ್ಮಿಕ ಮರಣ ಹೊಂದರೆ ಚಂದಾದಾರರಿಗೆ ಪಾಲಿಸಿಯ ಪ್ರಯೋಜನಗಳನ್ನು ಹೆಚ್ಚಿಸಬಹುದು. ಅಪಘಾತದಿಂದ ಮರಣ ಹೊಂದಲ್ಲಿ ನಾಮಿನಿಗೆ ಮೊತ್ತದ ಎರಡು ಪಟ್ಟು ಮೌಲ್ಯ ನೀಡಲಾಗುತ್ತದೆ. ಅಲ್ಲದೆ, ಅಪಘಾತವು ಕೆಲವು ಅಂಗವಿಕಲತೆಗೆ ಕಾರಣವಾದರೆ, ವಿಮೆದಾರರಿಗೆ ಮಾಸಿಕ ಆಧಾರದ ಮೇಲೆ 60,000 ರೂಪಾಯಿ ನೀಡಲಾಗುತ್ತದೆ. ನಿರ್ದಿಷ್ಟಪಡಿಸಿದ ಕೆಲ ಕಾಯಿಲೆಗಳ ಅನಾರೋಗ್ಯ ದೃಢಪಟ್ಟರೆ ವಿಮಾದಾರರಿಗೆ ರೂ. 20 ಲಕ್ಷ ಮೊತ್ತ ಸಿಗುತ್ತದೆ.

  ಮ್ಯಾಕ್ಸ್ ಲೈಫ್ ಆನ್ಲೈನ್ ಟರ್ಮ್ ಪ್ಲಾನ್ ಪ್ಲಸ್

  ವಿಮಾದಾರರು ತಿಂಗಳಿಗೆ ಅತಿ ಕಡಿಮೆ ಪ್ರೀಮಿಯಂ ಮೊತ್ತ ರೂ. 576ಕ್ಕೆ 1 ಕೋಟಿ ಕವರೆಜ್ ಲಾಭ ಪಡೆಯಬಹುದು. ಈ ಪಾಲಿಸಿಯ ಕನಿಷ್ಠ ಮತ್ತು ಗರಿಷ್ಠ ಪ್ರವೇಶ ವಯಸ್ಸು 18 ಮತ್ತು 60 ವರ್ಷಗಳಾಗಿದ್ದು, ಈ ಪಾಲಿಸಿಯನ್ನು NRIಗಳು ಸಹ ಪಡೆಯಬಹುದುಆಗಿದೆ. ಎಲ್ಐಸಿ ಪಾಲಿಸಿ: 10 ಉತ್ತಮ ಪಾಲಿಸಿ ಮತ್ತು ಪ್ರಯೋಜನಗಳು

  English summary

  Best Term Insurance Plans With Rs 1 Crore Coverage

  Term insurance is a must have product in one's financial instrument basket, which provides for a financial cover that takes on financial responsibility of the life insured in the event of death. The bread-winner of the family can't ignore term insurance at any cost i.e. it a must have product for them.
  Story first published: Wednesday, May 31, 2017, 12:14 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more