For Quick Alerts
ALLOW NOTIFICATIONS  
For Daily Alerts

ಆಮ್ ಆದ್ಮಿ ಭೀಮ ಯೋಜನೆ ಪ್ರಯೋಜನಗಳೇನು?

18 ರಿಂದ 59 ವರ್ಷದ ನಡುವಿನ ವ್ಯಕ್ತಿಗಳು ಆಮ್ ಆದ್ಮಿ ಭೀಮ ಯೋಜನೆಗೆ ಅರ್ಹರಾಗಿರುತ್ತಾರೆ.

By Siddu
|

ಭಾರತದ ಸರ್ಕಾರದ ಹಣಕಾಸು ಸಚಿವಾಲಯ ಸಾಮಾಜಿಕ ಭದ್ರತೆ ಯೋಜನೆಗಳಾಗಿ ಆಮ್ ಆದ್ಮಿ ಭೀಮ ಯೋಜನಾ ಮತ್ತು ಜನಶ್ರೀ ಭೀಮ ಯೋಜನೆಗಳ ವಿಲೀನವನ್ನು ಅನುಮೋದಿಸಿದೆ. ನಾಗರಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, 01-01-2013ರಿಂದ ಕಾರ್ಯರೂಪಕ್ಕೆ ತರಲಾಗಿದೆ. (10 ಉತ್ತಮ ಎಲ್ಐಸಿ ಪಾಲಿಸಿ)

ಆಮ್ ಆದ್ಮಿ ಭೀಮ ಯೋಜನೆ ಅಡಿ ಸಾರ್ವಜನಿಕರಿಗೆ ದೊರಕುವ ಸೌಲಭ್ಯಗಳ ವಿವರ ಇಲ್ಲಿ ನೀಡಲಾಗಿದೆ.

1. ಅರ್ಹತೆ

1. ಅರ್ಹತೆ

1. 18 ರಿಂದ 59 ವರ್ಷದ ನಡುವಿನ ವ್ಯಕ್ತಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.
2. ಸಾಮಾನ್ಯವಾಗಿ ವ್ಯಕ್ತಿ ಕುಟುಂಬದ ಮುಖ್ಯಸ್ಥನಾಗಿರಬೇಕು ಅಥವಾ ಸಂಪಾದನೆ ಮಾಡುತ್ತಿರುವ ಬಿಪಿಎಲ್ ಕುಟುಂಬದ ಸದಸ್ಯನಾಗಿರಬೇಕು ಅಥವಾ ವೃತ್ತಿಪರ ಗುಂಪು/ಗ್ರಾಮೀಣ ಭೂರಹಿತ ಕುಟುಂಬ ಆಗಿರಬೇಕು.

2. ನೋಡಲ್ ಏಜೆನ್ಸಿ

2. ನೋಡಲ್ ಏಜೆನ್ಸಿ

ಕೇಂದ್ರ ಸಚಿವ ಇಲಾಖೆ/ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶ/ಯಾವುದೇ ಇತರ ಸಾಂಸ್ಥಿಕ ವ್ಯವಸ್ಥೆ/ಯಾವುದೇ ನೋಂದಾಯಿತ ಎನ್ಜಿಒ ಮೂಲಕ ನಿಯಮಗಳ ಪ್ರಕಾರ ಯೋಜನೆಯನ್ನು ನಿರ್ವಹಿಸಲು ನೇಮಿಸಲ್ಪಟ್ಟ ಸಂಸ್ಥೆಗಳನ್ನು ನೋಡಲ್ ಏಜೆನ್ಸಿ ಎನ್ನುತ್ತಾರೆ. ಗ್ರಾಮೀಣ ಭೂರಹಿತ ಕುಟುಂಬ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ / ಕೇಂದ್ರಾಡಳಿತ ಪ್ರದೇಶ ಈ ಯೋಜನೆಯನ್ನು ನಿರ್ವಹಿಸಲು ನೋಡಲ್ ಏಜೆನ್ಸಿಯನ್ನು ನೇಮಕ ಮಾಡಿರುತ್ತದೆ.

3. ದಾಖಲಾತಿಗಳು

3. ದಾಖಲಾತಿಗಳು

- ರೇಷನ್ ಕಾರ್ಡ್
- ಜನನ ನೋಂದಣಿ ಪತ್ರ
- ಶಾಲಾ ಪ್ರಮಾಣಪತ್ರ
- ಮತದಾರರ ಪಟ್ಟಿ
- ಸರ್ಕಾರಿ ಇಲಾಖೆ/ಪ್ರಸಿದ್ದ ಉದ್ಯೋಗದಾತರಿಂದ ನೀಡಲ್ಪಟ್ಟ ಗುರುತಿನ ಕಾರ್ಡ್
- ಆಧಾರ್ ಕಾರ್ಡ್

4. ಪ್ರೀಮಿಯಂ

4. ಪ್ರೀಮಿಯಂ

ಈ ಯೋಜನೆ ಅಡಿ ಸದಸ್ಯರು ವಾರ್ಷಿಕವಾಗಿ ರೂ. 200 ಪಾವತಿಸಬೇಕಾಗಿದ್ದು, ರೂ. 30,000 ಕವರೆಜ್ ಸಿಗುತ್ತದೆ. ಇದರಲ್ಲಿ 50% ಸಾಮಾಜಿಕ ಭದ್ರತಾ ನಿಧಿಯಿಂದ ಸಬ್ಸಿಡಿ ನೀಡಲಾಗುವುದು. ಗ್ರಾಮೀಣ ಭೂರಹಿತ ಕುಟುಂಬ(RLH) ಉಳಿದ 50% ಪ್ರೀಮಿಯಂ ಮೊತ್ತ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶದಿಂದ ಪಡೆದುಕೊಳ್ಳಬಹುದು. ಉಳಿದ ಔದ್ಯೋಗಿಕ ಗುಂಪಿನವರು 50% ಪ್ರೀಮಿಯಂ ನೋಡಲ್ ಏಜೆನ್ಸಿ ಮತ್ತು /ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶಗಳಿಂದ ಪಡೆಯಬಹುದು. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

English summary

What rae the benefits of Aam Aadmi Bima Yojna?

insurance news, Aam Aadmi Bima Yojna, lic policies, what is aam aadmi bima yojna, aam aadmi bima yojna in kannada, Aam Aadmi Bima Yojna, kannada news, benefits of Aam Aadmi Bima Yojna, ministry of finance news, aam aadmi bima yojana news,ಆಮ್ ಆದ್ಮಿ ಭೀಮ ಯೋಜನೆ
Story first published: Friday, June 2, 2017, 12:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X