For Quick Alerts
ALLOW NOTIFICATIONS  
For Daily Alerts

ಚಿನ್ನ ಖರೀದಿಯ ಎಲ್ಲಾ ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯ

ಇನ್ನುಮುಂದೆ ಚಿನ್ನಾಭರಣ ಖರೀದಿಯ ಎಲ್ಲಾ ವಹಿವಾಟುಗಳ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ!

By Siddu
|

ಇನ್ನುಮುಂದೆ ಚಿನ್ನಾಭರಣ ಖರೀದಿಯ ಎಲ್ಲಾ ವಹಿವಾಟುಗಳ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ!

ಚಿನ್ನಾಭರಣಗಳ ಎಲ್ಲಾ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ವಿಸ್ತರಿಸಬೇಕೆಂದು ಪೈನಾನ್ಸಿಯಲ್ ರೆಗ್ಯುಲೇಟರಿ ಪ್ಯಾನೆಲ್ ಶಿಫಾರಸ್ಸು ಮಾಡಿದೆ.

ಗೋಲ್ಡ್ ಪಾಲಿಸಿ

ಗೋಲ್ಡ್ ಪಾಲಿಸಿ

ಭಾರತ ಸರ್ಕಾರ 2016ರ ರಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿ ಮಾಡುವವರು ಪ್ಯಾನ್ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂಬ ನಿಯಮ ಜಾರಿ ತಂದಿತ್ತು. ಆದರೆ ಇದೀಗ ಪ್ರತಿಯೊಂದು ಚಿನ್ನದ ವಹಿವಾಟುಗಳಿಗೂ ಪ್ಯಾನ್ ಕಡ್ಡಾಯ ಮಾಡುವ ಚಿಂತನೆಯಲ್ಲಿದೆ.

ಪ್ಯಾನ್ ಕಡ್ಡಾಯ ಏಕೆ?

ಪ್ಯಾನ್ ಕಡ್ಡಾಯ ಏಕೆ?

ಚಿನ್ನದ ವ್ಯವಹಾರಗಳು ಭೂಗತವಾಗಿ ಹೋಗುವುದನ್ನು ತಪ್ಪಿಸಲು ಎಲ್ಲಾ ಚಿನ್ನದ ಖರೀದಿಗಳನ್ನು ಡಿಪಾಸಿಟರಿನಂತಹ ವಿದ್ಯುನ್ಮಾನ ನೋಂದಾವಣೆ ಬಳಸಿಕೊಂಡು ದಾಖಲು ಮಾಡಬೇಕೆಂದು ಸಮಿತಿ ಸಲಹೆ ನೀಡಿದೆ. ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತೀಯ ಕುಟುಂಬಗಳು ಮನೆಗಳಲ್ಲಿ ಚಿನ್ನವನ್ನು ಕೂಡಿಟ್ಟು, ತೆರಿಗೆಯಿಂದ ತಪ್ಪಿಸಿಕೊಳ್ಳುತ್ತವೆ. ಹೀಗಾಗಿ ಮನೆಯಲ್ಲಿ ಕೂಡಿಡುವ ಚಿನ್ನದ ಪರಿಶೀಲನೆ ಇನ್ನೂ ಬಿಗಿಗೊಳ್ಳುತ್ತದೆ.

ಅಂಗಸಂಸ್ಥೆ ರಚನೆ

ಅಂಗಸಂಸ್ಥೆ ರಚನೆ

ದೇಶದಲ್ಲಿನ ವಿವಿಧ ಅಂಶಗಳನ್ನು ನೋಡಿಕೊಳ್ಳಲು ಪೈನಾನ್ಸಿಯಲ್ ರೆಗ್ಯುಲೇಟರಿ ಪ್ಯಾನೆಲ್ ಕಳೆದ ವರ್ಷ ಹಣಕಾಸಿನ ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ ಎಂಬ ಅಂಗಸಂಸ್ಥೆಯನ್ನು ರಚಿಸಿದೆ.

ಗೋಲ್ಡ್ ಮಾನಿಟೈಸೇಶನ್ ಯೋಜನೆ

ಗೋಲ್ಡ್ ಮಾನಿಟೈಸೇಶನ್ ಯೋಜನೆ

 2015ರಲ್ಲಿ ಕೇಂದ್ರ ಸರ್ಕಾರ 'ಗೋಲ್ಡ್ ಮಾನಿಟೈಸೇಶನ್' ಯೋಜನೆ ಜಾರಿ ಮಾಡಿದ್ದು, ಜನರು ತಮ್ಮ ಚಿನ್ನದ ಮೇಲೆ ಬಡ್ಡಿಯನ್ನು ಗಳಿಸಬಹುದು. ಚಿನ್ನದ ಮಾರುಕಟ್ಟೆ ಮೇಲೆ ಸಕಾರಾತ್ಮಕ ಹಿಡಿತ ಸಾಧಿಸುವುದು ಮತ್ತು ಸಾಲ ಪಡೆಯುವಿಕೆಯ ಚಿನ್ನ ಹೇಗಿರಬೇಕು ಇತ್ಯಾದಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಚಿನ್ನವನ್ನು ಬಂಡವಾಳ ಅಥವಾ ಹೂಡಿಕೆ ರೂಪದಲ್ಲಿ ಬಳಕೆ ಮಾಡಿಕೊಳ್ಳಬಹುದು.

English summary

All gold transactions may soon require PAN

The panel that was set up to look at all aspects of household finance in India has recommended that PAN card should be required for all gold transactions.
Story first published: Monday, August 28, 2017, 13:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X