ಇಂದಿನಿಂದ ಜಿಯೋ ಫೋನ್ ಬುಕಿಂಗ್ ಆರಂಭ! ಆನ್ಲೈನ್, ಆಫ್ಲೈನ್ ಮೂಲಕ ಪಡೆಯೋದು ಹೇಗೆ?

ರಿಲಯನ್ಸ್ ಜಿಯೊ ಬಿಡುಗಡೆಗೊಳಿಸುತ್ತಿರುವ ರೂ. 1,500 ಬೆಲೆಯ ಸ್ಮಾರ್ಟ್‌ಫೋನ್‌ ಜಿಯೊ ಫೋನ್ ಮುಂಗಡ ಬುಕಿಂಗ್ ಇಂದಿನಿಂದ (ಆಗಸ್ಟ್ 24) ಆರಂಭವಾಗಲಿದೆ.

ರಿಲಯನ್ಸ್ ಜಿಯೊ ಬಿಡುಗಡೆಗೊಳಿಸುತ್ತಿರುವ ರೂ. 1,500 ಬೆಲೆಯ ಸ್ಮಾರ್ಟ್‌ಫೋನ್‌ ಜಿಯೊ ಫೋನ್ ಮುಂಗಡ ಬುಕಿಂಗ್ ಇಂದಿನಿಂದ (ಆಗಸ್ಟ್ 24) ಆರಂಭವಾಗಲಿದೆ.

ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸಂಸ್ಥೆಯ 40ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ (Jio Phone) ಬಿಡುಗಡೆ ಬಗ್ಗೆ ಮಾತನಾಡಿ, ವೈಶಿಷ್ಟ್ಯತೆಗಳ ಬಗ್ಗೆ ವಿವರಿಸಿದ್ದರು. ಜಿಯೋ ಫೋನ್ ಖರೀದಿಸುವವರು ಆನ್ಲೈನ್, ಆಫ್ಲೈನ್ ಪ್ರಕ್ರಿಯೆ ಮೂಲಕ ಬುಕಿಂಗ್ ಮಾಡಬಹುದಾಗಿದೆ.

ಎಲ್ಲೆಲ್ಲಿ ಬುಕಿಂಗ್ ಮಾಡಬಹುದು?

ಎಲ್ಲೆಲ್ಲಿ ಬುಕಿಂಗ್ ಮಾಡಬಹುದು?

ಜಿಯೊ ಆಪ್ ಮೂಲಕ ಬುಕಿಂಗ್ ಹೇಗೆ?

ಜಿಯೊ ಆಪ್ ಮೂಲಕ ಬುಕಿಂಗ್ ಹೇಗೆ?

ಜಿಯೊ ಆಪ್ ನಲ್ಲಿ ಕಾದಿರಿಸುವಾಗ Prebook now ಆಯ್ಕೆ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್, ಪಿನ್ ಕೋಡ್, ವಾಸವಾಗಿರುವ ವಿಳಾಸ ಒದಗಿಸಬೇಕು. ಇದಾದ ಬಳಿಕೆ ನಿಮಗೆ ಬುಕಿಂಗ್ ಐಡಿ ಮತ್ತು ಸಂದೇಶ ಬರುತ್ತದೆ.

ಪಾವತಿ ವಿಧಾನ

ಪಾವತಿ ವಿಧಾನ

ಮುಂಗಡವಾಗಿ ಕಾದಿರಿಸುವಾಗ ರೂ. 500 ಗಳನ್ನು ಜಿಯೋಮನಿ ವಾಲೆಟ್, ಪೇಟಿಎಂ, ಯುಪಿಐ, ಕ್ರೆಇಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇಲ್ಲವೆ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ಪಾವತಿಯಾದ ನಂತರ ನಿಮ್ಮ ನಂಬರ್ ಸಂದೇಶ ಬರುತ್ತದೆ. ಸೆಪ್ಟೆಂಬರ್‌ನಲ್ಲಿ ಜಿಯೋ ಮೊಬೈಲ್ ವಿತರಣೆ ಮಾಡುವಾಗ ಉಳಿದ ರೂ. 1,000 ಪಾವತಿಸಬೇಕು.

ಫೋನ್ ಬೆಲೆ 0!

ಫೋನ್ ಬೆಲೆ 0!

ಜಿಯೋಫೋನ್ ಖರೀದಿಸಿದ ಮೂರು ವರ್ಷಗಳ ನಂತರ ಗ್ರಾಹಕರು ಫೋನ್‌ ಹಿಂದಿರುಗಿಸಿದರೆ ರೂ. 1,500 ಮರಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ. ಅಂದರೆ ಜಿಯೋಫೋನ್ ನಿಮಗೆ ಜಿರೋ ಬೆಲೆಯಲ್ಲಿ ಸಿಕ್ಕಿದಂತಾಗುತ್ತದೆ.

ಜಿಯೋಫೋನ್ ಪ್ಲಾನ್ ಗಳೇನು?

ಜಿಯೋಫೋನ್ ಪ್ಲಾನ್ ಗಳೇನು?

ಪ್ರತಿ ತಿಂಗಳಿಗೆ ರೂ. 153 ಪಾವತಿಸಿದರೆ ಅನ್ ಲಿಮಿಡೆಟ್ ಕರೆ ಹಾಗು ಡೇಟಾ ಸೌಲಭ್ಯ ಜಿಯೋಫೋನ್ ಪ್ಲಾನ್ ವಿಶೇಷತೆಯಾಗಿದೆ.

ಜಿಯೋ 1500 ಫೋನ್ ವೈಶಿಷ್ಟ್ಯಗಳು

ಜಿಯೋ 1500 ಫೋನ್ ವೈಶಿಷ್ಟ್ಯಗಳು

ಸ್ಕ್ರೀನ್ ಡಿಸ್ಪ್ಲೇ: 2.40 ಇಂಚುಗಳು
ರೆಸಲ್ಯೂಷನ್: 240 × 320 ಪಿಕ್ಸೆಲ್
ವಿಸ್ತರಿಸಬಹುದಾದ ಸ್ಟೋರೆಜ್: ಲಭ್ಯವಿದೆ
ಬ್ಲೂಟೂತ್: V4.10 FM: ಲಭ್ಯ
ಹೆಡ್ಫೋನ್: ಲಭ್ಯವಿದೆ
ಸ್ಪೀಕರ್ ಗಳು: ಲಭ್ಯವಿದೆ
4 ಜಿ / ಎಲ್ ಟಿಇ: ಲಭ್ಯವಿದೆ
ಸಿಮ್ ಸ್ಲಾಟ್: ಸಿಂಗಲ್
* ಜಿಯೋಮ್ಯೂಸಿಕ್, ಜಿಯೋಟಿವಿ, ಜಿಯೋಸಿನಿಮಾ

50 ಕೋಟಿ ಗ್ರಾಹಕರ ಗುರಿ!

50 ಕೋಟಿ ಗ್ರಾಹಕರ ಗುರಿ!

ಜಿಯೋಫೋನ್ ಈಗಾಗಲೇ 50 ಕೋಟಿ ಗ್ರಾಹಕರನ್ನು ಪಡೆಯುವ ಗುರಿ ಹೊಂದಿದೆ. ಏರ್ಟೆಲ್ ಕೂಡ 50 ಕೋಟಿ ಗ್ರಾಹಕರ ಗುರಿ ಹೊಂದಿದೆ! ಜಿಯೋ ಸ್ಮಾರ್ಟ್ಫೋನ್ ಬಿಡುಗಡೆ ನಂತರ ಏರ್ಟೆಲ್ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಲಿರುವುದರಿಂದ ತನ್ನ ಗ್ರಾಹಕರನ್ನು ಉಳಿಸಲು ಏರ್ಟೆಲ್ ಕೂಡ ಸ್ಮಾರ್ಟ್ಫೋನ್ ಬಿಡುಗಡೆ ಮಾಡುತ್ತಿದೆ! ಇಲ್ಲಿಯವರೆಗೆ 2G, 3G ಸೇವೆ ಬಳಸುತ್ತಿದ್ದ ಗ್ರಾಹಕರು 4G ರುಚಿಯನ್ನು ನೋಡಬಹುದಾಗಿದೆ.

ಜಿಯೋ ಕಸ್ಟಮರ್ ಕೇರ್ ಸಂಖ್ಯೆಗಳು

ಜಿಯೋ ಕಸ್ಟಮರ್ ಕೇರ್ ಸಂಖ್ಯೆಗಳು

ಗ್ರಾಹಕರಿಗೆ ಯಾವುದೇ ತೊಂದರೆಗಳನ್ನು ಎದುರಾದರೆ ಈ ಕೆಳಗೆ ನೀಡಿರುವ ನಂಬರ್ ಗಳಿಗೆ ಸಂಪರ್ಕಿಸಬಹುದು.
JIO ಕಸ್ಟಮರ್ ಕೇರ್ ಟೋಲ್ ಫ್ರೀ ಸಂಖ್ಯೆ: 1800-88-99999
JIO ದೂರು ಸಂಖ್ಯೆ: 198
JIO ಸಾಮಾನ್ಯ ಸಹಾಯವಾಣಿ ಸಂಖ್ಯೆ: 199
ಡೇಟಾ ಮತ್ತು ಕರೆ ಸೇವೆಗಳಿಗಾಗಿ ಟೆಲಿ-ಪರಿಶೀಲನೆ ಸಂಖ್ಯೆ: 1977
ಕೇವಲ ಡೇಟಾ ಸೇವೆಗೆ ಟೆಲಿ-ಪರಿಶೀಲನಾ ಸಂಖ್ಯೆ: 1800-890-1977
LYF ಕಸ್ಟಮರ್ ಕೇರ್ ಟೋಲ್ ಫ್ರೀ ಸಂಖ್ಯೆ: 1800-890-9999 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+