ಕೌಂಟರ್ ಕೋಡೋದು ಅಂದ್ರೆ ಇದೇ ಇರಬೇಕು! ಟೆಲಿಕಾಂ ಕಂಪನಿಗಳು ಜಿಯೋಗೆ ಎದುರಾಗಿ ಒಂದರ ಮೇಲೊಂದು ಕೌಂಟರ್ ಕೋಡುತ್ತಿವೆ! ಗ್ರಾಹಕರ ಸುಲಿಗೆ ಮಾಡುತ್ತಿದ್ದ ಕಂಪನಿಗಳು ಜಿಯೋ ಪ್ರವೇಶಾತಿ ನಂತರ ನಿದ್ದೆಯಿಂದ ಎದ್ದಿವೆ!! ಗ್ರಾಹಕರಿಗೆ ಸುಗಿಯೋ ಸುಗ್ಗಿ!!
ಕೌಂಟರ್ ಕೋಡೋದು ಅಂದ್ರೆ ಇದೇ ಇರಬೇಕು! ಟೆಲಿಕಾಂ ಕಂಪನಿಗಳು ಜಿಯೋಗೆ ಎದುರಾಗಿ ಒಂದರ ಮೇಲೊಂದು ಕೌಂಟರ್ ಕೋಡುತ್ತಿವೆ! ಗ್ರಾಹಕರ ಸುಲಿಗೆ ಮಾಡುತ್ತಿದ್ದ ಕಂಪನಿಗಳು ಜಿಯೋ ಪ್ರವೇಶಾತಿ ನಂತರ ನಿದ್ದೆಯಿಂದ ಎದ್ದಿವೆ!! ಯಾರಿಗುಂಟು ಯಾರಿಗಿಲ್ಲ, ಗ್ರಾಹಕರಿಗಂತೂ ಸುಗಿಯೋ ಸುಗ್ಗಿ..!!
ಜಿಯೋ ಆಫರ್ ಗಳಿಗೆ ಎದುರಾಗಿ ಅನೇಕ ಕಂಪನಿಗಳು ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಿವೆ. ಈಗಾಗಲೇ ಏರ್ಟೆಲ್, ಐಡಿಯಾ ತಮ್ಮ ಗ್ರಾಹಕರಿಗೆ ನೂತನ ಕೊಡುಗೆಗಳನ್ನು ಘೋಷಿಸಿವೆ. ಇದೀಗ ಭಾರತ್ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಸರದಿ..
ಜಿಯೋ ಎದುರು ತಮ್ಮ ಗ್ರಾಹಕರನ್ನು ಉಳಿಸುವ ಹಾಗೂ ಆಕರ್ಷಿಸುವ ಸವಾಲು ಟೆಲಿಕಾಂ ಕಂಪನಿಗಳ ಮುಂದಿದೆ.
ರೂ. 429 ಪ್ಲಾನ್
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ಪ್ರಿಪೇಡ್ ಗ್ರಾಹಕರಿಗಾಗಿ ರೂ. 429 ಯೋಜನೆಯಡಿ ಹೊಸ ಆಫರ್ ಘೋಷಿಸಿದೆ. ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಮಾಡಬಹುದು. 90 ದಿನಗಳ ಅವಧಿಯ ಆಫರ್ ಎಲ್ಲಾ ನೆಟ್ವರ್ಕ್ ಗಳಿಗೂ ಅನ್ವಯಿಸುತ್ತದೆ.
90GB ಡೇಟಾ
ಈ ಯೋಜನೆಯಡಿ ಪ್ರತಿದಿನ 1GBಯಂತೆ 90 ದಿನಗಳವರೆಗೆ 90GB ಡೇಟಾ ಸೌಲಭ್ಯ ಸಿಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಜಿಯೋ, ಏರ್ಟೆಲ್ ಆಫರ್ ಗಳಿಗೆ ಹೋಲಿಸಿದರೆ ಬಿಎಸ್ಎನ್ಎಲ್ ಆಫರ್ ಅತ್ಯುತ್ತಮ ಎಂದು ಕಂಪನಿ ಹೇಳಿದೆ. ಈ ಆಫರ್ ಕೇರಳ ರಾಜ್ಯದಲ್ಲಿ ಲಭ್ಯವಿರುವುದಿಲ್ಲ.
ಚೌಕ 444 ಆಫರ್
ಬಿಎಸ್ಎನ್ಎಲ್ ಹಿಂದೆ ರೂ. 444 ಯೋಜನೆಯಡಿ 90 ದಿನಗಳ ವ್ಯಾಲಿಡಿಟಿಯೊಂದಿಗೆ 2g/3g ವೇಗದ 360GB ಘೋಷಣೆ ಮಾಡಿತ್ತು. ಸ್ಪೇಷಿಯಲ್ ಟ್ಯಾರಿಪ್ ವೋಚರ್ (STV) ಅಡಿಯಲ್ಲಿ ಪ್ರತಿದಿನ 4gb ಡೇಟಾ ಒದಗಿಸುತ್ತದೆ.
ಸಿಕ್ಸರ್ 666 ಆಫರ್
ಬಿಎಸ್ಎನ್ಎಲ್ ರೂ. 666 ಯೋಜನೆಯಡಿ ಅನಿಯಮಿತ ಕರೆ ಮತ್ತು 120gb ಡೇಟಾ ಬಿಡುಗಡೆ ಮಾಡಿದೆ. ಇದು 60 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಜಿಯೋ ರೂ. 509 ಪ್ಲಾನ್ ಗೆ ಕೌಂಟರ್ ನೀಡುವುದಕ್ಕಾಗಿ ಪರಿಚಯಿಸಿದೆ. ಈ ಯೋಜನೆ ಪ್ರಿಪೇಡ್ ಗ್ರಾಹಕರಿಗಾಗಿ ಇದ್ದು, ಪ್ರತಿದಿನ 2gb ಡೇಟಾ ಹಾಗು ಅನ್ ಲಿಮಿಟೆಡ್ ಧ್ವನಿ ಕರೆ ಒದಗಿಸುವ ಉದ್ದೇಶ ಹೊಂದಿದೆ.
ಏರ್ಟೆಲ್ 399 ಪ್ಲಾನ್
ಏರ್ಟೆಲ್ ತನ್ನ ಪ್ರಿಪೇಡ್ ಗ್ರಾಹಕರಿಗೆ ರೂ. 399ಕ್ಕೆ ಹೊಸ ಪ್ಲಾನ್ ಘೋಷಣೆ ಮಾಡಿದೆ. ಈ ಮೂಲಕ ಅನ್ ಲಿಮಿಟೆಡ್ ಕರೆ ಹಾಗು ಪ್ರತಿದಿನ 1GB ಯಂತೆ 84 ದಿನ 4G ವೇಗದ ಡೇಟಾ ನೀಡಲಿದೆ. ಜಿಯೋ ಕೂಡ ರೂ. 399 ಇದೇ ಆಫರ್ ನ್ನು ಹಿಂದೆಯೇ ಪರಿಚಯಿಸಿತ್ತು.
ಜಿಯೋ 399 ಪ್ಲಾನ್
399 ರೂ. ಗಳಿಗೆ ಜಿಯೋ ಧನ್ ಧನಾ ಧನ್ ಆಫರ್ ಮುಂದುವರೆದಿದೆ. ಮೂರು ತಿಂಗಳ ಅವಧಿಗೆ ಪೋಸ್ಟ್ ಪೇಡ್ ಗ್ರಾಹಕರಿಗೆ ಪ್ರತಿದಿನ 1GBಯಂತೆ 90GB ಸಿಗಲಿದೆ. ಇದು ಅನಿಯಮಿತ ಕರೆ, ಎಸ್ಟಿಡಿ, ರೋಮಿಂಗ್, ಎಸ್ಎಂಎಸ್ ಸೌಲಭ್ಯ ಒಳಗೊಂಡಿದೆ. ಪ್ರಿಪೇಡ್ ಗ್ರಾಹಕರಿಗೆ ಪ್ರತಿದಿನ 1GBಯಂತೆ 84 ದಿನಗಳ ಅವಧಿಗೆ 84GB ಸಿಗಲಿದೆ.
ಜತೆಗೆ ಜಿಯೋ ತನ್ನ ಗ್ರಾಹಕರಿಗೆ ಘೋಷಿಸಿರುವ ಪ್ರಮುಖ ಆಫರ್ ಗಳಲ್ಲಿ ರೂ. 309 ರ ಉತ್ತಮ ಆಫರ್ ಪ್ರಕಟಿಸಿದೆ. ಈ ಆಫರ್ ಮೂಲಕ ಗ್ರಾಹಕರು 2 ತಿಂಗಳು 1GB 4G ಡೇಟಾ ಹಾಗೂ ಇನ್ನಿತರ ಅನ್ ಲಿಮಿಟೆಡ್ ಸೇವೆಗಳಿವೆ. ಪ್ರತಿದಿನ 1GBಯಂತೆ 56 ದಿನಗಳವರೆಗೆ 56GB ಡೇಟಾ ಸೌಲಭ್ಯವಿದೆ.


Click it and Unblock the Notifications