ನಿಮಗಿದು ಗೊತ್ತೆ..? ಜಿಎಸ್ಟಿ ತೆರಿಗೆ ಹೆಸರಲ್ಲಿ ಗ್ರಾಹಕರನ್ನು ಮೋಸ ಮಾಡ್ತಾರೆ! ತಪ್ಪದೇ ಓದಿ..

ರೆಸ್ಟೊರೆಂಟ್/ಹೋಟೆಲ್ ಗಳಲ್ಲಿ ಊಟ ಮಾಡಿದ ನಂತರ ಬಿಲ್ ಪಡೆದು ಅದನ್ನು ಪಾವತಿಸಿ ಹೊರ ನಡೆಯುವುದು ಸಾಮಾನ್ಯ. ಆದರೆ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ಎಸ್ಜಿಎಸ್ಟಿ (ರಾಜ್ಯ) ಮತ್ತು ಸಿಜಿಎಸ್ಟಿ (ಕೇಂದ್ರ) ಜಿಎಸ್ಟಿ ತೆರಿಗೆ ಇರುತ್ತದೆ.

ರೆಸ್ಟೊರೆಂಟ್/ಹೋಟೆಲ್ ಗಳಲ್ಲಿ ಊಟ ಮಾಡಿದ ನಂತರ ಬಿಲ್ ಪಡೆದು ಅದನ್ನು ಪಾವತಿಸಿ ಹೊರ ನಡೆಯುವುದು ಸಾಮಾನ್ಯ. ಆದರೆ ಒಮ್ಮೆ ಅದನ್ನು ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ಎಸ್ಜಿಎಸ್ಟಿ (ರಾಜ್ಯ) ಮತ್ತು ಸಿಜಿಎಸ್ಟಿ (ಕೇಂದ್ರ) ಜಿಎಸ್ಟಿ ತೆರಿಗೆ ಇರುತ್ತದೆ.

ಹೋಟೆಲ್ ಗಳು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೋಂದಣಿ ಸಂಖ್ಯೆ ಪಡೆಯದೆ 18% ತೆರಿಗೆ ವಿಧಿಸಿದ್ದಲ್ಲಿ ಅದು ಕಾನೂನುಬಾಹೀರವಾಗಿರುತ್ತದೆ. ಬಿಲ್ ಪಾವತಿಸಿ ಹೊರಡುವ ಮುನ್ನ ಒಮ್ಮೆ ನೋಡಿ.. ಯಾಕೆ ನೋಡಬೇಕು ಅಂತಿರಾ ಮುಂದೆ ಓದಿ...

ಮೋಸ ಹೋಗದಿರಿ

ಮೋಸ ಹೋಗದಿರಿ

ನೀವು ಊಟ ಮಾಡಿದ ರೆಸ್ಟೋರೆಂಟ್/ಹೋಟೆಲ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಂಬರ್ ಹೊಂದಿದೆಯೇ ಎಂಬುದನ್ನು ಗಮನಿಸಿ. ಒಂದು ವೇಳೆ ನೀವು ಊಟ ಮಾಡಿದ ರೆಸ್ಟೋರೆಂಟ್ ನೀಡುವ ಬಿಲ್ ನಲ್ಲಿ ಜಿಎಸ್ಟಿ ನೋಂದಣಿ ಸಂಖ್ಯೆ ಇಲ್ಲದಿದ್ದರೆ ಶೇ. 18ರಷ್ಟು (SGST 9%, CGST 9%) ಜಿಎಸ್ಟಿ ವಿಧಿಸುವಂತಿಲ್ಲ. ಹೀಗಾಗಿ ಹೋಟೆಲ್ ಜಿಎಸ್ಟಿ ನೋಂದಣಿ ಸಂಖ್ಯೆ ನೋಡಿ ಬಿಲ್ ಪಾವತಿಸಿ.

ಬಿಲ್ ಮೇಲೆ GST ನೋಂದಣಿ ಸಂಖ್ಯೆ ಇಲ್ಲದಿದ್ದಲ್ಲಿ ಏನ್ ಮಾಡ್ಬೇಕು?

ಬಿಲ್ ಮೇಲೆ GST ನೋಂದಣಿ ಸಂಖ್ಯೆ ಇಲ್ಲದಿದ್ದಲ್ಲಿ ಏನ್ ಮಾಡ್ಬೇಕು?

ರೆಸ್ಟೋರೆಂಟ್/ಹೋಟೆಲ್ ಜಿಎಸ್ಟಿ ನೋಂದಣಿ ಸಂಖ್ಯೆ ಇಲ್ಲದೆಯೂ ಜಿಎಸ್ಟಿ ತೆರಿಗೆ ವಿಧಿಸಿದ್ದಲ್ಲಿ ಏನು ಮಾಡಬೇಕು ಎಂಬುದಕ್ಕೆ ಇಲ್ಲಿ ಉತ್ತಮ ಉದಾಹರಣೆ ಇದೆ.
ಪುಣೆ ಮೂಲದ ಚಾರ್ಟೆಡ್ ಅಕೌಂಟೆಡ್ ಆಗಿರುವ ಜಗದಿಶ್ ಲಾಡೆ ಎಂಬುವರು ಆಗಸ್ಟ್ 18, 2017ರಂದು ಅಲ್ಲಿನ ರೆಸ್ಟೋರೆಂಟ್ ಊಟಕ್ಕೆ ಹೋದಾಗ ಜಿಎಸ್ಟಿ ಶೇ. 18% ತೆರಿಗೆ ಅಡಿಯಲ್ಲಿ ರೂ. 25 ಶುಲ್ಕ ವಿಧಿಸಿತು. ಆದರೆ ಆ ರೆಸ್ಟೋರೆಂಟ್ ಜಿಎಸ್ಟಿ(GST) ಸಂಖ್ಯೆ ಹೊಂದಿರಲಿಲ್ಲ. ಹೀಗಾಗಿ ಹೋಟೆಲ್ ನವರು ವಿಧಿಸಿದ್ದ 25 ರೂ.ಗಳನ್ನು ಪಾವತಿಸಲು ಜಗದಿಶ್ ಲಾಡೆ ವಿರೋಧಿಸಿದರು.

ರೆಸ್ಟೋರೆಂಟ್ ಮ್ಯಾನೆಜರ್ ಮಾಡಿದ್ದೇನು?

ರೆಸ್ಟೋರೆಂಟ್ ಮ್ಯಾನೆಜರ್ ಮಾಡಿದ್ದೇನು?

ಜಿಎಸ್ಟಿ ನೋಂದಣಿಯಾಗದೆ ಗ್ರಾಹಕರಿಂದ ಶೇ, 18ರಷ್ಟು ತೆರಿಗೆ ವಿಧಿಸುತ್ತಿರುವುದು ಕಾನೂನುಬಾಹೀರ ಎಂದು ಜಗದೀಶ ಆರೋಪಿಸಿದರು. ತದನಂತರ ಹೋಟೆಲ್ ಮ್ಯಾನೆಜರ್ ತಮ್ಮ ಅನೇಕ ಚಾರ್ಟೆಡ್ ಅಕೌಂಟೆಡ್ ಗಳೊಂದಿಗೆ ಮಾತನಾಡಿ, ಶೀಘ್ರದಲ್ಲಿಯೇ ಜಿಎಸ್ಟಿ ನೋಂದಣಿ ಸಂಖ್ಯೆ ಪಡೆಯುತ್ತೇವೆ ಎಂದರು. ಜತೆಗೆ ತೆರಿಗೆ ಮೊತ್ತವನ್ನು ಲಾಡೆಗೆ ಹಿಂದಿರುಗಿಸಿದರು.

ಜಗದೀಶ್ ಲಾಡೆ ಮಾಹಿತಿ ವೈರಲ್

ಜಗದೀಶ್ ಲಾಡೆ ಮಾಹಿತಿ ವೈರಲ್

ಜಗದೀಶ್ ಲಾಡೆ ತಮ್ಮ ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದ ರೆಸ್ಟೋರೆಂಟ್ ಬಿಲ್ ಮಾಹಿತಿ ವೈರಲ್ ಆಗಿ, ಎರಡು ವಾರಗಳಲ್ಲಿ 1,32,000 ಶೇರ್ ಹಾಗು 35,೦೦೦ ಲೈಕ್, ಕಮೆಂಟ್ ಗಳನ್ನು ಪಡೆದಿದೆ.

ಜಿಎಸ್ಟಿ ನೋಂದಣಿ ನಂಬರ್ ಪರಿಶಶಿಲಿಸುವುದು ಹೇಗೆ?

ಜಿಎಸ್ಟಿ ನೋಂದಣಿ ನಂಬರ್ ಪರಿಶಶಿಲಿಸುವುದು ಹೇಗೆ?

ರೆಸ್ಟೋರೆಂಟ್ ಅಥವಾ ಎಲ್ಲಿಯಾದರೂ ನೀವು ಪಡೆಯುವ ಬಿಲ್ ನಲ್ಲಿ ಜಿಎಸ್ಟಿ ತೆರಿಗೆ ವಿಧಿಸಿದ್ದಲ್ಲಿ, ಆ ಬಿಲ್ ಮೇಲಿನ ಮುದ್ರಿತ ಜಿಎಸ್ಟಿ ನಂಬರ್ ಪರಿಶಿಲಿಸಲು ಈ ಲಿಂಕ್ ಬಳಸಿ. https://services.gst.gov.in/services/searchtp

ಸುಲಿಗೆ ಮಾಡುವವರ ಬಗ್ಗೆ ಎಚ್ಚರವಿರಲಿ!

ಸುಲಿಗೆ ಮಾಡುವವರ ಬಗ್ಗೆ ಎಚ್ಚರವಿರಲಿ!

ಜಿಎಸ್ಟಿ ಹೆಸರಿನಲ್ಲಿ ಶೇ. 18ರಷ್ಟು ತೆರಿಗೆ ವಿಧಿಸಿ ಗ್ರಾಹಕರನ್ನು ಸುಲಿಗೆ ಮಾಡುವ ರೆಸ್ಟೋರೆಂಟ್ ಗಳ ಬಗ್ಗೆ ಎಚ್ಚರವಿರಬೇಕಾಗುತ್ತದೆ. ಇಲ್ಲದಿದ್ದರೆ ಗ್ರಾಹಕರ ಸಾವಿರಾರು ರೂಪಾಯಿ ಇಂತವರ ಜೇಬು ಸೇರುತ್ತದೆ. ಜಿಎಸ್ಟಿ ಸಂಖ್ಯೆ ಹೊಂದಿರದ ಹೋಟೆಲ್ ಗಳು ತೆರಿಗೆ ವಿಧಿಸುವಂತಿಲ್ಲ.

ಜಿಎಸ್ಟಿ ಶುಲ್ಕಗಳ ಬಗ್ಗೆ ಅರಿವಿರಲಿ

ಜಿಎಸ್ಟಿ ಶುಲ್ಕಗಳ ಬಗ್ಗೆ ಅರಿವಿರಲಿ

ಜಗದೀಶ್ ಲಾಡೆ ಒಬ್ಬ ಚಾರ್ಟೆಡ್ ಅಕೌಂಟೆಡ್ ಆಗಿದ್ದು, ಸ್ವಂತ ಉದ್ಯಮ ನಡೆಸುವವರು. ಹೀಗಾಗಿ ಅವರಿಗೆ ಜಿಎಸ್ಟಿ ಬಗ್ಗೆ ಅರಿವಿದೆ. ಆದರೆ ಜನಸಾಮಾನ್ಯರಲ್ಲಿ ಜಿಎಸ್ಟಿ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಜಿಎಸ್ಟಿ ಹೆಸರಲ್ಲಿ ನಡೆಯುವ ಮೋಸಗಳ ಬಗ್ಗೆ ಗ್ರಾಹಕರು ಎಚ್ಚರವಹಿಸಬೇಕಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+