For Quick Alerts
ALLOW NOTIFICATIONS  
For Daily Alerts

ಹ್ಯಾಪಿ ನ್ಯೂ ಇಯರ್! 2018ರಲ್ಲಿ ಏನೇನು ಯೋಜನೆ ರೂಪಿಸಬಹುದು?

2018ರಲ್ಲಿ ನಿಮ್ಮ ಹಣಕಾಸಿನ ನಿರ್ವಹಣೆ ಉತ್ತಮವಾಗಿರಬೇಕು ಎಂದರೆ ಹಿಂದಿನ ವರ್ಷದಲ್ಲಿ ತಪ್ಪಿ ಹೋಗಿದ್ದ ಅವಕಾಶಗಳನ್ನು ಈ ವರ್ಷ ಕೈ ತಪ್ಪಿ ಹೋಗದಂತೆ ನೋಡಿಕೊಳ್ಳುವುದು ಜಾಣತನ. ಬನ್ನಿ, ಈ ವರ್ಷದ ಪ್ರಮುಖ ನಿರ್ಧಾರಗಳು ಹೇಗಿರಬೇಕು ಎಂಬುದನ್ನು ನೋಡೋ

By Siddu
|

ನಿಮ್ಮ 2018ರ ಹಣಕಾಸಿನ ನಿರ್ವಹಣೆಯನ್ನು ನಿರ್ವಹಿಸುವ ಮುನ್ನ 2017ರಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಹೇಗಿತ್ತು ಎಂಬುದನ್ನು ಪರಿಗಣಿಸಬೇಕು.

ಕಳೆದ ವರ್ಷದಲ್ಲಿ ನೀವು ಯಾವುದಾದರೂ ಪ್ರಮುಖ ಘಟನೆಯೊಂದರ ಬಗ್ಗೆ ಮಾಹಿತಿ ಇಲ್ಲದೇ ವಂಚಿತರಾಗಿದ್ದೀರೋ ಅಥವಾ ಮುಂದೆ ಒಳ್ಳೆಯ ದಿನಗಳು ಬರಬಹುದು ಎಂದು ಅವಕಾಶವನ್ನು ಮುಂದೂಡಿದ್ದೀರೋ?

2018ರಲ್ಲಿ ನಿಮ್ಮ ಹಣಕಾಸಿನ ನಿರ್ವಹಣೆ ಉತ್ತಮವಾಗಿರಬೇಕು ಎಂದರೆ ಹಿಂದಿನ ವರ್ಷದಲ್ಲಿ ತಪ್ಪಿ ಹೋಗಿದ್ದ ಅವಕಾಶಗಳನ್ನು ಈ ವರ್ಷ ಕೈ ತಪ್ಪಿ ಹೋಗದಂತೆ ನೋಡಿಕೊಳ್ಳುವುದು ಜಾಣತನ. ಬನ್ನಿ, ಈ ವರ್ಷದ ಪ್ರಮುಖ ನಿರ್ಧಾರಗಳು ಹೇಗಿರಬೇಕು ಎಂಬುದನ್ನು ನೋಡೋಣ..

ಜನವರಿ

ಜನವರಿ

ಈ ವರ್ಷದಲ್ಲಿ ಮಾಡಬೇಕಾದ ಉಳಿತಾಯ ಹೇಗಿರಬೇಕು ಎಂಬುದನ್ನು ಈ ಪ್ರಥಮ ತಿಂಗಳಲ್ಲಿ ನಿರ್ಧರಿಸಬೇಕು.
ಮೊದಲು ನಿಮ್ಮ ಹೂಡಿಕೆಯ ರೂಪುರೇಷೆಗಳನ್ನು ವಿಮರ್ಶಿಸಿ. ಒಂದು ವೇಳೆ 2018ರಲ್ಲಿ ನಿಮ್ಮ ಹಿಂದಿನ ಹೂಡಿಕೆಯ ಅಂತಿಮ ಕಂತುಗಳು ಪಾವತಿಯಾಗುತ್ತಿದ್ದಲ್ಲಿ ಬಾಕಿ ಇರುವ ಕಂತುಗಳು ನಿಮ್ಮ ಗುರಿಯನ್ನು ತಲುಪಲು ನೆರವಾಗುವಂತೆ ನೋಡಿಕೊಳ್ಳಿ. ಈ ವರ್ಷದಲ್ಲಿ ನೀಡಬೇಕಾದ ಇತರ ಕಂತುಗಳಾದ ವಿಮೆ, ಗೃಹ ಕಂದಾಯ ಮೊದಲಾದವುಗಳನ್ನು ಸಕಾಲದಲ್ಲಿ ಪಾವತಿಸಲು ಆಯಾ ತಿಂಗಳ ದಿನಾಂಕಗಳನ್ನು ಗುರುತು ಹಾಕಿಡಿ. ಅಲ್ಲದೇ ವಿದ್ಯುತ್, ನೀರು ಮೊದಲಾದ ಸೇವೆಗಳ ಸೇವಾಶುಲ್ಕವನ್ನು ದಂಡವಿಲ್ಲದೇ ಸಕಾಲದಲ್ಲಿ ಪಾವತಿಸಲು ಈ ದಿನಾಂಕಗಳನ್ನೂ ಗುರುತು ಹಾಕಿಡಿ.

ತೆರಿಗೆಯ ಭಾರೀ ಹೊರೆಯಿಂದ ಪಾರಾಗಲು ತೆರಿಗೆ ಉಳಿಸುವ ದಾಖಲೆಗಳ ಪ್ರತಿಗಳನ್ನು ಸಿದ್ಧಪಡಿಸಿ ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಸಕಾಲದಲ್ಲಿ ನೀಡಿ ನಿಶ್ಚಿಂತರಾಗಿರಿ.

ಫೆಬ್ರವರಿ

ಫೆಬ್ರವರಿ

ಈ ತಿಂಗಳಲ್ಲಿ ಕೇಂದ್ರ ಬಜೆಟ್ ಮಂಡನೆಯಾಗುತ್ತದೆ. ಆದರೆ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಈ ವರ್ಷ ಪಾವತಿಸಬೇಕಾದ ತೆರಿಗೆ ಹಾಗೂ ಹೂಡಿಕೆಯ ಬಗ್ಗೆ ಬಜೆಟ್ ನಲ್ಲಿ ಹೆಚ್ಚಳವನ್ನು ನಿರೀಕ್ಷಿಸಿ. ಇದು ನಿಮ್ಮ ಮನೆಯ ಖರ್ಚುಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಮೊದಲೇ ಊಹಿಸಿ ಮಾನಸಿಕರಾಗಿ ಸಿದ್ದರಾಗಿ.
ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಸಲ್ಲಬೇಕಾಗಿರುವ ಬಾಕಿಗಳು, ಉದಾಹರಣೆಗೆ ತೆರಿಗೆಯ ಕಡಿತ, ವೈದ್ಯಕೀಯ ವೆಚ್ಚದ ಮರುಪಾವತಿ, ಉಪಯೋಗಿಸದೇ ಇದ್ದ ಪ್ರಯಾಣ ಭತ್ಯೆ ಅಥವಾ ರಜೆ ಭತ್ಯೆ ಮೊದಲಾದವುಗಳನ್ನು ನಿಮ್ಮ ಉದ್ಯೋಗದಾತರಿಂದ ಪಡೆದುಕೊಳ್ಳಿ. ಇವನ್ನು ಪಡೆದುಕೊಳ್ಳದೇ ಇದ್ದರೆ ನಿಮ್ಮ ತೆರಿಗೆಯೂ ಏರಬಹುದು.

ಮಾರ್ಚ್

ಮಾರ್ಚ್

ಮಾರ್ಚ್ 15, 2017-18ರ ಆರ್ಥಿಕ ವರ್ಷದಲ್ಲಿ ಮುಂಗಡವಾಗಿ ನೀಡಬೇಕಾದ ತೆರಿಗೆಯನ್ನು ಪಾವತಿಸಲು ಇದು ಕಡೆಯ ದಿನವಾಗಿದೆ.
ಮಾರ್ಚ್ 31, ನಿಮ್ಮ ತೆರಿಗೆ ಉಳಿಸುವ ಹಾಗೂ ಆದಾಯ ತೆರಿಗೆ ಪಾವತಿ- income tax return (ITR) ಸಂಬಂಧಿತ ದಾಖಲೆಗಳನ್ನು ಈ ದಿನಾಂಕದೊಳಗೆ ಪೂರ್ಣಗೊಳಿಸಿ.

ಮಾರ್ಚ್ 31: ಆಧಾರ್ ಕಾರ್ಡ್ ಅನ್ನು ವಿವಿಧ ಸೇವೆಗಳಿಗೆ ಲಿಂಕ್ ಮಾಡಲು ಇದು ಕಡೆಯ ದಿನವಾಗಿದೆ.

 

ಏಪ್ರಿಲ್

ಏಪ್ರಿಲ್

ಏಪ್ರಿಲ್ ಒಂದನೆಯ ತಾರೀಖಿನಿಂದ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದ ವಿಷಯಗಳು ಅನ್ವಯವಾಗುತ್ತವೆ.
ಈ ತಿಂಗಳಲ್ಲಿಯೇ ಹೊಸ ಶಾಲಾ ವರ್ಷವೂ ಪ್ರಾರಂಭವಾಗುತ್ತದೆ. ಈ ತಿಂಗಳಲ್ಲಿ ಮಕ್ಕಳ ಶಾಲಾ ಶಿಕ್ಷಣ ವೆಚ್ಚ, ಪುಸ್ತಕ, ಸಮವಸ್ತ್ರಗಳ ಖರ್ಚುಗಳೂ ಸೇರುವ ಕಾರಣ ಹೆಚ್ಚಿನ ಮೊತ್ತವನ್ನು ಮೊದಲೇ ತೆಗೆದಿಡಬೇಕು.
ಏಪ್ರಿಲ್ ಐದನೆಯ ಒಳಗಾಗಿ ನಿಮ್ಮ ಪಿಪಿಎಫ್ Public Provident Fund (PPF) ಖಾತೆಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಮೊತ್ತವನ್ನು ಜಮಾ ಮಾಡುವ ಮೂಲಕ ಹೆಚ್ಚಿನ ಬಡ್ಡಿಯನ್ನು ಪಡೆಯಿರಿ.
ನಿಮ್ಮ ರಜಾದಿನಗಳನ್ನು ಕಳೆಯುವ ಸ್ಥಳ ಹಾಗೂ ಇದಕ್ಕಾಗಿ ವಹಿಸುವ ಖರ್ಚಿನ ಬಗ್ಗೆ ಮೊದಲೇ ಯೋಜನೆ ತಯಾರಿಸಿ ಅದಕ್ಕಾಗಿ ಮುಂಗಡ ಪಾವತಿಸಿ ಖಚಿತಪಡಿಸಿಕೊಳ್ಳಿ. ತಡವಾದಷ್ಟೂ ರಜಾದಿನಗಳಲ್ಲಿ ಏರುವ ಬೆಲೆಗಳು ನಿಮ್ಮ ಪ್ರವಾಸಗಳನ್ನು ಇನ್ನಷ್ಟು ದುಬಾರಿಯಾಗಿಸಬಹುದು.

ಏಪ್ರಿಲ್ 18, ಇದು ಅಕ್ಷಯ ತೃತೀಯ ದಿನವಾಗಿದ್ದು ಬಂಗಾರವನ್ನು ಕೊಳ್ಳಲು ಅತ್ಯಂತ ಪ್ರಸಕ್ತವಾದ ದಿನವಾಗಿದೆ. ಚಿನ್ನವನ್ನು ಹೂಡಿಕೆಯಾಗಿ ಖರೀದಿಸಲು ಇದು ಸಕಾಲವಾಗಿದೆ. ಆದರೆ ನಿಮ್ಮ ಒಟ್ಟಾರೆ ಉಳಿತಾಯದ ಹತ್ತರಿಂದ ಹದಿನೈದು ಶೇಖಡಾಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಿ.

 

ಮೇ

ಮೇ

ಏಪ್ರಿಲ್ ತಿಂಗಳಲ್ಲಿ ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಅಳೆಯಲಾಗುತ್ತದೆ ಹಾಗೂ ಅರ್ಹರಿಗೆ ಮೇ ತಿಂಗಳಿಂದ ವೇತನದಲ್ಲಿ ಏಳ್ಗೆಗಳು ಪ್ರಾರಂಭವಾಗುತ್ತವೆ. ಹೆಚ್ಚಿನ ಸಂಸ್ಥೆಗಳು ಈ ಸಮಯದಲ್ಲಿಯೇ ವಾರ್ಷಿಕ ಬೋನಸ್ ಅನ್ನೂ ಪ್ರಕಟಿಸುತ್ತವೆ. ಒಂದು ವೇಳೆ ನಿಮಗೆ ಸಾಲವಿದ್ದರೆ ಈ ಮೊತ್ತವನ್ನಷ್ಟೂ ಸಾಲ ಪಾವತಿಸಲು ಉಪಯೋಗಿಸಿ. ಸಾಲವಿಲ್ಲದೇ ಇದ್ದರೆ ಇದನ್ನು ಯಾವುದೇ ರೀತಿಯಲ್ಲಿ ಖರ್ಚು ಮಾಡದೇ ಭವಿಷ್ಯದಲ್ಲಿ ಎದುರಾಗುವ ಸಂಕಟ ಕಾಲಕ್ಕೆಂದು ತೆಗೆದಿಡಿ.

ಒಂದು ವೇಳೆ ನಿಮಗೆ ವೇತನದಲ್ಲಿ ಹೆಚ್ಚಳ ದೊರೆತರೆ ಇದು ನಿಮ್ಮ ತೆರಿಗೆಯನ್ನೂ ಹೆಚ್ಚಿಸುತ್ತದೆ. ನಿಮ್ಮ ತೆರಿಗೆ ಉಳಿತಾಯದ ಯೋಜನೆ, ವೆಚ್ಚಗಳು ಹಾಗೂ ಹೂಡಿಕೆಯನ್ನು ಈ ಪ್ರಕಾರವೇ ನಿಯೋಜಿಸಿ.

ನಿಮ್ಮ ತಿಂಗಳ ಕಂತುಗಳು ಈಗಲೂ ಹೆಚ್ಚೇ ಇವೆಯೇ (ಸಾಲವನ್ನು ಮೂಲ ದರದಲ್ಲಿಯೇ ಸ್ಥಿತಗೊಳಿಸಲಾಗಿರುತ್ತದೆ) ಎಂದು ಪರಿಶೀಲಿಸಿ. Marginal Cost of Funds based Lending Rate (MCLR) ದರವನ್ನು ಮರು ಹೊಂದಿಸುವ ದಿನಾಂಕವನ್ನು ನೆನಪಿಡಿ ಹಾಗೂ ಒಂದು ವೇಳೆ ಇದರಿಂದ ಬಡ್ಡಿದರಗಳಲ್ಲಿ ಇಳಿಕೆಯಾಗಿದ್ದು ನಿಮ್ಮ ಸಾಲಕ್ಕೆ ಅನ್ವಯವಾಗುತ್ತದೆಯೇ ಎಂದು ಪರಿಶೀಲಿಸಿ.

ಜೂನ್

ಜೂನ್

ಜೂನ್ 15, 2019-2020 ರ ಹಣಕಾಸಿನ ವರ್ಷದ ಮುಂಗಡ ತೆರಿಗೆಯ ಪ್ರಥಮ ಕಂತು ಪಾವತಿಸಲು ಇದು ಅಂತಿಮ ದಿನಾಂಕವಾಗಿದೆ. ಈ ದಿನಾಂಕದ ಬಳಿಕ ಫಾರ್ಮ್ 16 ಮತ್ತು 16A ದಾಖಲೆಗಳನ್ನು ಸಂಗ್ರಹಿಸಿ ಆದಾಯ ತೆರಿಗೆಯನ್ನು ಯಾವುದೇ ತೊಂದರೆಯಿಲ್ಲದೇ ಪಾವತಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಿ.

ಜುಲೈ

ಜುಲೈ

ಜುಲೈ 31, 2018-19 ವರ್ಷದ ಆದಾಯ ತೆರಿಗೆ ಪಾವತಿಸಲು ಇದು ಅಂತಿಮ ದಿನಾಂಕವಾಗಿದೆ. ಅಂತಿಮ ದಿನಾಂಕಕ್ಕೂ ಒಂದೆರಡು ವಾರಗಳ ಮುಂಚೆಯೇ ಆನ್ಲೈನ್ ವಿಧಾನದ ಮೂಲಕ ತೆರಿಗೆಯನ್ನು ಪಾವತಿಸಿ. ಈ ಮೂಲಕ ಅಂತಿಮ ದಿನಾಂಕದ ನೂಕು ನುಗ್ಗಲಿನಿಂದ ಪಾರಾಗಿ. ಒಂದು ವೇಳೆ ಈ ದಿನಾಂಕವನ್ನು ತಪ್ಪಿಸಿಕೊಂಡರೆ ಕೆಲವು ತೆರಿಗೆ ಪ್ರಯೋಜನಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಈ ಹಣಕಾಸು ವರ್ಷದಿಂದ ತಡವಾಗಿ ಆದಾಯ ತೆರಿಗೆ ಪಾವತಿಸಿದರೆ ಹತ್ತು ಸಾವಿರ ರೂ ದಂಡವನ್ನೂ ವಿಧಿಸಲಾಗುತ್ತದೆ.

 

ಆಗಸ್ಟ್

ಆಗಸ್ಟ್

ನಿಮ್ಮ ಹಣಕಾಸು ಸಲಹೆಗಾರರ ಸಲಹೆಯನ್ನು ಪಡೆದು ನಿಮ್ಮ ಹಣಕಾಸಿನ ಅರ್ಧವಾರ್ಷಿಕ ಪುನರವಲೋಕನ ಮಾಡಿ.
ಆಗಸ್ಟ್15: ಸ್ವತಂತ್ರ ದಿನಾಚರಣೆ ಬುಧವಾರದಂದು ಹಾಗೂ ಪಾರ್ಸಿ ಹೊಸ ವರ್ಷ ಹದಿನೇಳನೇ ತಾರೀಖು ಶುಕ್ರವಾರದಂದು ಬರುತ್ತಿದೆ. ಇವೆರಡೂ ದಿನ ನಿಮಗೆ ರಜಾ ದಿನಗಳಾಗಿದ್ದರೆ ಆಗಸ್ಟ್ 16ರಂದು ಒಂದು ದಿನ ರಜೆ ತೆಗೆದುಕೊಳ್ಳುವ ಮೂಲಕ ಐದು ದಿನಗಳ ಪುಟ್ಟ ರಜಾ ಅವಧಿಯನ್ನು ಪಡೆಯಬಹುದು. ವರ್ಷದ ಮಧ್ಯದಲ್ಲಿ ಈ ಬಗೆಯ ಪುಟ್ಟ ಪ್ರವಾಸ ಎಲ್ಲರಿಗೂ ಇಷ್ಟವಾಗುತ್ತದೆ.

ಒಂದು ವೇಳೆ ಈ ಪ್ರವಾಸಕ್ಕೆ ನಿಮ್ಮ ಆರ್ಥಿಕ ಸ್ಥಿತಿ ಶಕ್ತವಿಲ್ಲದಿದ್ದರೆ, ಚಿಂತಿಸದಿರಿ. ಇದೇ ತಿಂಗಳ ಇಪ್ಪತ್ತೆರಡರಂದು ಈದ್ ಅಲ್ ಅಧಾ (ಬಕ್ರೀದ್ ಹಬ್ಬ) ಹಾಗೂ ಆಗಸ್ಟ್ ಇಪ್ಪತ್ತೆರಡರಂದು ಓಣಂ ಹಬ್ಬ ಬರುತ್ತಿದೆ.

ಸೆಪ್ಟೆಂಬರ್

ಸೆಪ್ಟೆಂಬರ್

ಸೆಪ್ಟೆಂಬರ್ 15: ಆದಾಯ ತೆರಿಗೆಯ ಮುಂಗಡ ಪಾವತಿಯ ಎರಡನೆ ಕಂತು ಕಟ್ಟಲು ಇದು ಕಡೆಯ ದಿನವಾಗಿದೆ.
ಒಂದು ವೇಳೆ ತೆರಿಗೆ ಉಳಿಸುವ ಹೂಡಿಕೆಗಳನ್ನು ನೀವು ಇದುವರೆಗೆ ಮಾಡಿರದೇ ಇದ್ದರೆ ಈಗಲೇ ಪೂರ್ಣಗೊಳಿಸಿ. ಏಕೆಂದರೆ ಮುಂಬರುವ ಹಬ್ಬದ ದಿನಗಳು ಈ ಹೂಡಿಕೆಯನ್ನು ಕರಗಿಸಬಹುದು.
ನಿಮ್ಮ ಆದಾಯ ತೆರಿಗೆಯ ಪಾವತಿಯನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಈಗಾಗಲೇ ದಾಖಲಿಸಲಾಗಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ನಿಮಗೆ ಇಲಾಖೆಯಿಂದ ಹಣ ಹಿಂದೆ ಬರಬೇಕಿದ್ದರೆ ಈ ಬಗ್ಗೆ ಸತತವಾಗಿ ವಿಚಾರಿಸುತ್ತಿರಿ.

ಅಕ್ಟೋಬರ್

ಅಕ್ಟೋಬರ್

ಈ ತಿಂಗಳಲ್ಲಿ ಹಬ್ಬಗಳು ಮನರಂಜಿಸಲಿದ್ದು ಮುಖ್ಯ ಹಬ್ಬವಾದ ದಸರಾ 19ರಂದು ಬರಲಿದೆ. ಹಬ್ಬದ ಕಡೆಯ ಕ್ಷಣದಲ್ಲಿ ದುಬಾರಿ ವಸ್ತುಗಳನ್ನು ಅನಿವಾರ್ಯವಾಗಿ ಕೊಳ್ಳುವ ಬದಲು ಮುಂಚಿತವಾಗಿಯೇ ಹಬ್ಬಕ್ಕಾಗಿ ಎಲ್ಲಾ ಸಿದ್ದತೆಗಳನ್ನು ನಡೆಸಿ.
ಈ ತಿಂಗಳಲ್ಲಿ ಹಬ್ಬದ ಭಾರೀ ರಿಯಾಯಿತಿಗಳು ಕಾಣಬರುತ್ತವೆ. ಆದರೆ ಇವುಗಳಿಗೆ ಮಣಿಯದೇ ನಿಮ್ಮ ನಿಯೋಜಿತ ಖರ್ಚುಗಳಿಗೆ ಬದ್ದರಾಗಿರಿ. ಅನಗತ್ಯವಾಗಿ ನಿಮ್ಮ ಖರೀದಿ ನಿಮ್ಮ ಉಳಿತಾಯವನ್ನು ನುಂಗಿಹಾಕದಂತೆ ನೋಡಿಕೊಳ್ಳಿ.

ನವೆಂಬರ್

ನವೆಂಬರ್

ಇದು ದೀಪಾವಳಿ ಹಬ್ಬದ ತಿಂಗಳಾಗಿದ್ದು ರಜಾದಿನಗಳನ್ನು ಪೂರ್ಣವಾಗಿ ಸಂಭ್ರಮಿಸಲು ತಯಾರಾಗಿ. ಆದರೆ ನಿಮ್ಮ ಖರ್ಚುಗಳನ್ನು ಮೊದಲೇ ನಿಗದಿಪಡಿಸಿಕೊಂಡು ಆ ಪ್ರಕಾರವೇ ಖರ್ಚು ಮಾಡಿ.

ಡಿಸೆಂಬರ್

ಡಿಸೆಂಬರ್

ಡಿಸೆಂಬರ್ 15: ಮುಂಗಡ ಆದಾಯ ತೆರಿಗೆಯ ಮೂರನೆಯ ಕಂತು ಪಾವತಿಸುವ ಕಡೆಯ ದಿನ
ಈ ವರ್ಷದಲ್ಲಿ ನಿಮ್ಮ ಹಣಕಾಸಿನ ನಿರ್ವಹಣೆ ಹೇಗಿತ್ತು ಎಂಬುದನ್ನು ನಿಮ್ಮ ಹೂಡಿಕೆಯ ವಿವರಗಳು, ಪಡೆದ ಲಾಭಗಳನ್ನು ವಿಮರ್ಶಿಸಿ.

ಡಿಸೆಂಬರ್ 31: ಇದು ಹೊಸ ವರ್ಷದ ಹಿಂದಿನ ದಿನವಾಗಿದ್ದು ಸಂಭ್ರಮಿಸುವ ದಿನವಾಗಿದೆ. ಈ ಸಂಭ್ರವಮನ್ನು ಆಚರಿಸಲು ಸ್ಥಳ ಹಾಗೂ ಖರ್ಚಿನ ವೆಚ್ಚದ ಮಿತಿಯನ್ನು ಮೊದಲೇ ನಿಗದಿಪಡಿಸಿ ಆ ಪ್ರಕಾರವೇ ನಡೆದುಕೊಳ್ಳಿ. ಈ ವರ್ಷ ನಿಮ್ಮ ಹಣಕಾಸಿನ ನಿರ್ವಹಣೆ ಸೂಕ್ತವಾಗಿತ್ತು ಎಂದು ಭಾವಿಸುತ್ತೇವೆ.

 

English summary

Here is a 2018 to-do list for money matters

Well, to make your money life more efficient in 2018, mark these important financial dates on your calendar.
Story first published: Saturday, December 30, 2017, 11:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X