2018 Action Plan! ಜೀವನದಲ್ಲಿ ಯಶಸ್ವಿಯಾಗಲು ಈ 12 ಮಾರ್ಗ ತಪ್ಪದೇ ಅಳವಡಿಸಿ...

2018ನೇ ಹೊಸ ವರ್ಷದ ಪ್ರತಿ ತಿಂಗಳೂ ಒಂದು ಗುರಿಯನ್ನು ಹಮ್ಮಿಕೊಂಡು ಇದಕ್ಕೆ ಬದ್ದರಾಗಿರುವ ಮೂಲಕ ಹೆಚ್ಚಿನದನ್ನು ಸಾಧಿಸಬಹುದು. ಈ ಗುರಿಗಳನ್ನು ಆಯಾ ತಿಂಗಳಿನ ಪ್ರಥಮ ವಾರದಲ್ಲಿಯೇ ಸಾಧಿಸಬೇಕಾಗಿಲ್ಲ.

ನೆಮ್ಮದಿಯ ಜೀವನ ನಮ್ಮ ಆದಾಯದ ನಿರ್ವಹಣೆಯನ್ನು ಅಪಾರವಾಗಿ ಅವಲಂಬಿಸಿದೆ. ಸೂಕ್ತವಾದ ನಿರ್ವಹಣೆಯನ್ನು ವರ್ಷದ ಪ್ರಾರಂಭದಿಂದಲೇ ಪ್ರಾರಂಭಿಸುವ ಮೂಲಕ ಹಾಗೂ ಮುಂದಿನ ತಿಂಗಳುಗಳಲ್ಲಿ ಎದುರಾಗಬಹುದಾದ ಖರ್ಚುಗಳಿಗೆ ಮೊದಲೇ ತಯಾರಾಗಿರುವುದು ಜಾಣತನದ ಕ್ರಮ ಮಾತ್ರವಲ್ಲ, ನೆಮ್ಮದಿಯ ಜೀವನದ ಬುನಾದಿಯೂ ಆಗಿದೆ. ನಿಮ್ಮ ಆದಾಯವನ್ನೆಲ್ಲಾ ಪೂರ್ಣವಾಗಿ ಪರಿಗಣಿಸಿ ಖರ್ಚನ್ನು ಆಕರ್ಷಣೆಗಳಿಗೆ ಬಳಸಿಕೊಂಡುಬಿಟ್ಟರೆ ಒಂದನೆಯ ತಾರೀಖಿಗೆ ಬಂದ ವೇತನ ಹತ್ತನೆಯ ತಾರೀಖಿನೊಳಗೇ ಆವಿಯಾಗಿಬಿಟ್ಟಿರುತ್ತದೆ. ತಿಂಗಳ ಕೊನೆಗಂತೂ ಪುಡಿಗಾಸಿಗಾಗಿ ಅಂಗಲಾಚುವ ಪ್ರಮೇಯ ಎದುರಾಗಬಹುದು. ಆದ್ದರಿಂದ ದೀರ್ಘಾವಧಿಯ ಗುರಿಗಳನ್ನು ಹಮ್ಮಿಕೊಂಡು ಅದಕ್ಕೆ ಬದ್ದರಾಗುವ ಮೂಲಕ ಗುರಿಗಳನ್ನು ಸಾಧಿಸಿ ನೆಮ್ಮದಿಯ ಜೀವನ ಬಾಳಬಹುದು.

ಒಂದು ವೇಳೆ ಹಿಂದಿನ ವರ್ಷಗಳಲ್ಲಿ ಯಾವುದೇ ವಾಣಿಜ್ಯ ಗುರಿಗಳನ್ನು ಹಮ್ಮಿಕೊಂಡಿರದೇ ಇದ್ದರೆ ಈಗ ಇದನ್ನು ಸಾಧಿಸಲು ಸಕಾಲವಾಗಿದ್ದು, 2018ನೇ ಹೊಸ ವರ್ಷದ ಪ್ರತಿ ತಿಂಗಳೂ ಒಂದು ಗುರಿಯನ್ನು ಹಮ್ಮಿಕೊಂಡು ಇದಕ್ಕೆ ಬದ್ದರಾಗಿರುವ ಮೂಲಕ ಹೆಚ್ಚಿನದನ್ನು ಸಾಧಿಸಬಹುದು. ಈ ಗುರಿಗಳನ್ನು ಆಯಾ ತಿಂಗಳಿನ ಪ್ರಥಮ ವಾರದಲ್ಲಿಯೇ ಸಾಧಿಸಬೇಕಾಗಿಲ್ಲ, ಆ ತಿಂಗಳಿನ ಯಾವುದೇ ವಾರದಲ್ಲಿ ಅಥವಾ ಇಡಿಯ ವರ್ಷದ ಅವಧಿಯಲ್ಲಿ ಸಾಧಿಸಬಹುದು, ಆದರೆ ಗುರಿಯನ್ನು ಸಾಧಿಸುವುದು ಮುಖ್ಯ.
ಬನ್ನಿ, ನಿಮ್ಮ ನೆರವಿಗೆ ಕೆಳಗೆ ವಿವರಿಸುವ ಮಾಹಿತಿಗಳು ಬರಲಿವೆ..

1. ಉಳಿತಾಯದ ಗುರಿ ನಿಮ್ಮದಾಗಿರಲಿ

1. ಉಳಿತಾಯದ ಗುರಿ ನಿಮ್ಮದಾಗಿರಲಿ

ಈ ವರ್ಷಕ್ಕಾಗಿ ಒಂದು ಉಳಿತಾಯದ ಗುರಿಯನ್ನು ಹಮ್ಮಿಕೊಳ್ಳಿರಿ. ಈ ಗುರಿ ಕಾಲ್ಪನಿಕವಾಗಿರಬಾರದು. ನಿಮ್ಮ ತಿಂಗಳ ಆದಾಯ, ತಿಂಗಳ ಖರ್ಚು ಹಾಗೂ ಸಾಧಿಸಬಹುದಾದ ಉಳಿತಾಯದ ಮೊತ್ತವನ್ನು ಪರಿಗಣಿಸಿ ಒಂದು ವರ್ಷದಲ್ಲಿ ಎಷ್ಟು ಉಳಿತಾಯ ಸಾಧಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೆಲವು ತಿಂಗಳುಗಳಲ್ಲಿ ಖರ್ಚುಗಳು ಕೊಂಚ ಹೆಚ್ಚೇ ಇರುವ ಕಾರಣ ಹಾಗೂ ಕೆಲವು ತಿಂಗಳುಗಳಲ್ಲಿ ಕಡಿಮೆ ಇರುವ ಕಾರಣ ಆ ಖರ್ಚುಗಳನ್ನು ಸ್ಥೂಲವಾಗಿ ಪರಿಗಣಿಸಿಯೇ ಆಯ ಅಯಾ ತಿಂಗಳ ಉಳಿತಾಯವನ್ನೂ ಅಂದಾಜಿಸಿ ವಾರ್ಷಿಕ ಉಳಿತಾಯವನ್ನು ನಿಗದಿಪಡಿಸಬೇಕು.

2. ತುರ್ತು ಪರಿಸ್ಥಿತಿಗಾಗಿ ನಿಧಿ

2. ತುರ್ತು ಪರಿಸ್ಥಿತಿಗಾಗಿ ನಿಧಿ

ತುರ್ತು ಪರಿಸ್ಥಿತಿಗಾಗಿ ಒಂದು ನಿಧಿಯನ್ನು ಸ್ಥಾಪಿಸಿ. ಪ್ರತಿ ಕುಟುಂಬಕ್ಕೂ ಅಗತ್ಯವಾಗಿ ಬೇಕಾಗಿರುವ ಈ ನಿಧಿಯನ್ನು ನೀವು ಇದುವರೆಗೆ ಸ್ಥಾಪಿಸದೇ ಇದ್ದರೆ ಈ ವರ್ಷದಲ್ಲಿ ಈ ನಿಧಿಯನ್ನು ಸ್ಥಾಪಿಸುವುದನ್ನು ನಿಮ್ಮ ಪ್ರಮುಖ ಉದ್ದೇಶವನ್ನಾಗಿಸಿ. ಇದು ನಿಮ್ಮ ವೈಯಕ್ತಿಕ ಉಳಿತಾಯ ಗುರಿಯ ಜೊತೆಜೊತೆಗೇ ಸಾಗಬೇಕು. ಈ ನಿಧಿ ಎಷ್ಟಿರಬೇಕು ಎಂದರೆ ಯಾವುದೇ ಅನುತ್ಪಾದಕ ಪರಿಸ್ಥಿತಿಯಲ್ಲಿ ಮೂರು ತಿಂಗಳಿಂದ ಆರು ತಿಂಗಳ ನಿಮ್ಮ ಮನೆಯ ಖರ್ಚನ್ನು, ಅಂದರೆ ನಿಮ್ಮ ಮತ್ತು ನಿಮ್ಮನ್ನು ಅವಲಂಬಿಸಿದವರ ಅಗತ್ಯತೆಗಳನ್ನು ಭರಿಸುವಂತಿರಬೇಕು.

3. ನಿವೃತ್ತಿ ಖಾತೆ

3. ನಿವೃತ್ತಿ ಖಾತೆ

ಕೆಲವು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗಾಗಿ ನಿವೃತ್ತಿ ಯೋಜನೆಗಳನ್ನೂ ಕೆಲಸಕ್ಕೆ ಸೇರಿದಂದಿನಿಂದಲೇ ಪ್ರಾರಂಭಿಸಿಬಿಡುತ್ತವೆ. 401(k) ಅಥವಾ IRA ಖಾತೆಗಳು ಇದಕ್ಕೆ ಉತ್ತಮ ಉದಾಹರಣೆಗಳು. ಒಂದು ವೇಳೆ ಇದುವರೆಗೆ ನೀವು ನಿವೃತ್ತಿಗಾಗಿ ಯಾವುದೇ ಯೋಜನೆಯನ್ನು ಹೊಂದಿರದೇ ಇದ್ದರೆ 2018ರಲ್ಲಿ ಇದಕ್ಕೆ ಪ್ರಾಮುಖ್ಯತೆ ನೀಡಿ. ಒಂದು ವೇಳೆ ನಿಮ್ಮ ಉದ್ಯೋಗದ ಸಂಸ್ಥೆ ನಿವೃತ್ತಿಗಾಗಿ ನಿಮ್ಮ ವೇತನದಿಂದ ಕೊಂಚ ಮೊತ್ತವನ್ನು ಕಳೆಯುತ್ತಿದ್ದರೆ ಹಾಗೂ ನೀವು ಸಹಾ ಇದಕ್ಕೆ ಪಾವತಿಸಲು ಸಾಧ್ಯವಾಗುವಷ್ಟು ಮೊತ್ತಕ್ಕೆ ಮಾತ್ರವೇ ಸಹಿ ಹಾಕಿ. ಒಂದು ವೇಳೆ 401(k) ಯೋಜನೆ ನಿಮಗೆ ಲಭ್ಯವಿಲ್ಲದೇ ಇದ್ದರೆ ನೀವು IRA (individual retirement account) ಖಾತೆಯೊಂದನ್ನು ತೆರೆಯುವುದು ಅಗತ್ಯ. 401(k) ಖಾತೆಯಲ್ಲಿ ವಾರ್ಷಿಕವಾಗಿ ಉಳಿಸಬಹುದಾದ ಗರಿಷ್ಟ ಮೊತ್ತ $18,500 ಹಾಗೂ IRA ಖಾತೆಯಲ್ಲಿ $5,500 ನಷ್ಟು ಸಂಗ್ರಹವಾಗುವಂತೆ ನಿಮ್ಮ ಯೋಜನೆ ಹಮ್ಮಿಕೊಳ್ಳಿ.

4. ಆರ್ಥಿಕ ಸಾಮರ್ಥಕ್ಕನುಗುಣವಾದ ಯೋಜನೆ

4. ಆರ್ಥಿಕ ಸಾಮರ್ಥಕ್ಕನುಗುಣವಾದ ಯೋಜನೆ

ಉದ್ಯೋಗದಲ್ಲಿ ಮುಂದುವರೆಯುತ್ತಾ ಹೋದಂತೆ ಆರ್ಥಿಕ ಸ್ವಾತಂತ್ರ್ಯವೂ ಹತ್ತಿರಾಗುತ್ತಾ ಬರುತ್ತದೆ. ಇದು ಹತ್ತಿರಾಗುತ್ತಾ ಬರುತ್ತಿದ್ದಂತೆಯೇ ಹರ್ಷದ ಹೊನಲೂ ಹರಿಯಲು ಪ್ರಾರಂಭಿಸುತ್ತದೆ. ಒಂದು ವೇಳೆ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತಿದೆ ಎಂದು ನಿಮಗೆ ಅನ್ನಿಸಿದರೆ ನೀವು ಕುಟುಂಬಸಹಿತ ಪ್ರವಾಸವೊಂದನ್ನು ನಿಮ್ಮ ಆರ್ಥಿಕ ಸಾಮರ್ಥ್ಯವನ್ನು ಅನುಸರಿಸಿ ಕೈಗೊಳ್ಳುವುದು ಉತ್ತಮ ನಿರ್ಧಾರವಾಗಿದೆ. 2018ರ ಯಾವುದೋ ಒಂದು ತಿಂಗಳಲ್ಲಿ ಪ್ರವಾಸ ಹಮ್ಮಿಕೊಳ್ಳುವತ್ತ ಗಮನ ಹರಿಸಿ. ಕುಟುಂಬ ಸಹಿತ ಪ್ರವಾಸ ನೆಮ್ಮದಿಯ ಜೀವನಕ್ಕೆ ತುಂಬಾ ಅಗತ್ಯವಾಗಿದೆ.

5. ಖರ್ಚುಗಳನ್ನು ಪರಿಶೀಲಿಸಿಸುತ್ತಿರಿ

5. ಖರ್ಚುಗಳನ್ನು ಪರಿಶೀಲಿಸಿಸುತ್ತಿರಿ

ಒಂದು ವೇಳೆ ಪ್ರತಿ ತಿಂಗಳೂ ಎಷ್ಟು ಖರ್ಚು ಮಾಡಬೇಕೆಂದು ಗೊತ್ತಿಲ್ಲದೇ ಇದ್ದರೆ ನಿಮ್ಮ ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಸೋಲುತ್ತೀರಿ. ಆದ್ದರಿಂದ ನಿಮ್ಮ ಖರ್ಚುಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರುವುದು ಅಗತ್ಯವಾಗಿದೆ. ಮೊದಲಿಗೆ ಈ ತಿಂಗಳು ನಿಮ್ಮ ಅಗತ್ಯ ಖರ್ಚುಗಳಾದ ಬಾಡಿಗೆ, ವಿದ್ಯುತ್, ನೀರು, ದಿನಸಿ, ಪ್ರಯಾಣ, ಶಿಕ್ಷಣ ವೆಚ್ಚ ಮೊದಲಾದವುಗಳನ್ನು ಪರಿಶೀಲಿಸಿ. ಬಳಿಕ ಕಡಿಮೆ ಆದ್ಯತೆಯ ಖರ್ಚುಗಳನ್ನು ಪರಿಶೀಲಿಸಿ. ಇದರಲ್ಲಿ ವಾರಾಂತ್ಯದ ಹೋಟೆಲ್ ಊಟ, ಸಿನೆಮಾ, ವ್ಯಸನ, ಕಾಫಿ ಮೊದಲಾದವುಗಳನ್ನು ಪರಿಶೀಲಿಸಿ.

6. ಬದ್ದತೆಯ ಬಜೆಟ್ ನ್ನು ರಚಿಸಿ

6. ಬದ್ದತೆಯ ಬಜೆಟ್ ನ್ನು ರಚಿಸಿ

ಬಜೆಟ್ ರಚಿಸುವುದು ಕಷ್ಟವಲ್ಲ, ಆದರೆ ಇದಕ್ಕೆ ಬದ್ದರಾಗಿರುವುದು ಕಷ್ಟ. ಇವೆರಡೂ ಒಂದು ನದಿಯ ಎರಡು ತೀರಗಳಿದ್ದಂತೆ. ಆದ್ದರಿಂದ ಈ ತಪ್ಪು ಈ ವರ್ಷದಲ್ಲಿ ಆಗದಂತೆ 2018ರಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಾಗೂ ಎಲ್ಲಾ ಖರ್ಚುಗಳನ್ನು ಪರಿಗಣಿಸಿ ಬಜೆಟ್ ರಚಿಸಿ ಹಾಗೂ ಈ ಬಜೆಟ್ ಅನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಇದಕ್ಕೆ ಬದ್ದರಾಗಿರುವಂತೆ ನೋಡಿಕೊಳ್ಳುವ ಮೂಲಕ ಆರ್ಥಿಕ ಶಿಸ್ತನ್ನು ಪಡೆಯಬಹುದು.

7. ಹೂಡಿಕೆಗಳ ಬಗ್ಗೆ ಅನ್ವೇಶಿಸಿ

7. ಹೂಡಿಕೆಗಳ ಬಗ್ಗೆ ಅನ್ವೇಶಿಸಿ

ಕೈಯಲ್ಲಿರುವ ಹಣ ಹಾಗೇ ಮನೆಯಲ್ಲಿಡುವ ಬದಲು ಯಾವುದಾದರೊಂದು ಹೂಡಿಕೆಯಲ್ಲಿ ಹೂಡುವ ಮೂಲಕ ಹೆಚ್ಚಿನ ಆದಾಯವನ್ನು ಪಡೆಯಬಹುದು. ಆದರೆ ಯಾವುದರಲ್ಲಿ ಹೂಡುವುದು? ಇದಕ್ಕೆ ಉತ್ತರವನ್ನು ಇತರರಿಂದ ಪಡೆಯುವ ಮೊದಲು ನಿಮ್ಮದೇ ಖಾತೆಗಳನ್ನು ಪರಿಗಣಿಸಿ. ಉದಾಹರಣೆಗೆ ನಿಮ್ಮ ನಿವೃತ್ತಿ ಯೋಜನೆಯ ಖಾತೆ. ಉದಾಹರಣೆಗೆ IRA ಖಾತೆಯಲ್ಲಿ $2,000 ಇರಿಸುವುದು ಅಥವಾ after-tax account ಒಂದರಲ್ಲಿ $100,000 ಹಣವನ್ನಿರಿಸುವುದು. ಇದರ ಬದಲಿಗೆ ತಂತ್ರಜ್ಞಾನ ಆಧಾರಿತ ETF ಯೋಜನೆ, ರಿಯಲ್ ಎಸ್ಟೇಟ್ ಅಥವಾ ಮಿಥ್ಯಾ ಹಣವಾದ ಬಿಟ್ ಕಾಯಿನ್ ಮೊದಲಾದವುಗಳಲ್ಲಿ ಸಹಾ ಹೂಡಬಹುದು. ಅಥವಾ ಇವೆಲ್ಲದರಲ್ಲಿಯೂ ಕೊಂಚ ಕೊಂಚವಾಗಿ ಹೂಡಬಹುದು. ಕೆಲವು ವ್ಯಕ್ತಿಗಳಿಗೆ ಇವು ಯಾವುದೂ ಆಕರ್ಷಕವಾಗಿ ಕಾಣದೇ ಹೋಗಬಹುದು.

8. ನಿವೃತ್ತಿಯ ಹಣಕ್ಕೂ ಹೊರತಾಗಿ ಹೂಡಿಕೆಯ ಬಗ್ಗೆ ಅರಿಯಿರಿ

8. ನಿವೃತ್ತಿಯ ಹಣಕ್ಕೂ ಹೊರತಾಗಿ ಹೂಡಿಕೆಯ ಬಗ್ಗೆ ಅರಿಯಿರಿ

ಒಂದು ವೇಳೆ ಕೆಲವು ವರ್ಷಗಳಿಂದ ನಿಮ್ಮ ನಿವೃತ್ತಿ ಯೋಜನೆಯಲ್ಲಿ ಪಾಲ್ಗೊಂಡು ನಿಯಮಿತವಾಗಿ ಉಳಿತಾಯ ಸಾಧಿಸುತ್ತಾ ಬಂದಿದ್ದರೆ ಹಾಗೂ ಇದರ ಗರಿಷ್ಟ ಪ್ರಯೋಜನ ಪಡೆದ ಬಳಿಕವೂ ಕೊಂಚ ಹಣ ಮಿಗುವಂತಾದರೆ ಈಗ after-tax account ಖಾತೆಯೊಂದನ್ನು ಹೊಂದುವುದಕ್ಕೆ ಈಗ ಸಕಾಲವಾಗಿದೆ. ಅಂದರೆ ಮುಂದಿನ ಜೀವನಕ್ಕಾಗಿ ಹೂಡಿಕೆಯ ಖಾತೆಯೊಂದನ್ನು ಹೊಂದುವುದು ಈಗ ಅಗತ್ಯವಾಗಿದ್ದು ಅರವತ್ತಾದಾಗ ಪಡೆಯಬಹುದಾದ ಒಂದು ಮೊತ್ತವನ್ನೇ ಅವಲಂಬಿಸುವುದರಿಂದ ತಪ್ಪಿಸಬಹುದಾಗಿದೆ.

9. ಕ್ರೆಡಿಟ್ ಕಾರ್ಡ್ ಸಾಲ

9. ಕ್ರೆಡಿಟ್ ಕಾರ್ಡ್ ಸಾಲ

ಒಂದು ವೇಳೆ ಕ್ರೆಡಿಟ್ ಕಾರ್ಡ್ ಮೂಲಕ ನೀವು ಯಾವುದಾದರೊಂದು ವಸ್ತುವನ್ನು ಖರೀದಿಸಿದ್ದು ಕಂತುಗಳಲ್ಲಿ ಪರಿವರ್ತಿಸಿದ್ದರೆ ಈ ಕಂತುಗಳನ್ನು ಎಂದಿಗೂ ತಪ್ಪಿಸಬಾರದು. 2018ರಲ್ಲಿ ಈ ಕಂತುಗಳನ್ನು ಪೂರ್ಣವಾಗಿ ಪಾವತಿಸುವುದು ನಿಮ್ಮ ಆದ್ಯತೆಯಾಗಬೇಕು. ಏಕೆಂದರೆ ಕ್ರೆಡಿಟ್ ಕಾರ್ಡ್ ನ ಸಾಲದ ಬಡ್ಡಿಗಳು ವಿಪರೀತವಾಗಿದ್ದು ಇತರ ಸಾಲದ ಬಡ್ಡಿಗಿಂತಲೂ ಹೆಚ್ಚಾಗಿವೆ ಹಾಗೂ ಒಂದು ಕಂತು ತಪ್ಪಿಸಿದರೆ ಮುಂದಿನ ತಿಂಗಳು ಚಕ್ರಬಡ್ಡಿಯನ್ನು ನೀಡಬೇಕಾಗಿ ಬರುತ್ತದೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ನ ಸಾಲ ತೀರಿಸಲು ನಿಮ್ಮ ಉಳಿತಾಯದ ಗರಿಷ್ಟ ಮೊತ್ತವನ್ನು ಮೀಸಲಾಗಿರಿಸಿ ಇವನ್ನು ಪೂರ್ಣವಾಗಿ ತೀರಿಸಲು ಹೆಚ್ಚಿನ ಒತ್ತು ನೀಡಿ.

10. ನಿಮ್ಮ ಖರ್ಚುಗಳಿಗೆ ಸಮನಾದ ರಿವಾರ್ಡ್ಸ್ ನೀಡುವ ಕ್ರೆಡಿಟ್ ಕಾರ್ಡ್ ಕೊಳ್ಳಿ

10. ನಿಮ್ಮ ಖರ್ಚುಗಳಿಗೆ ಸಮನಾದ ರಿವಾರ್ಡ್ಸ್ ನೀಡುವ ಕ್ರೆಡಿಟ್ ಕಾರ್ಡ್ ಕೊಳ್ಳಿ

ಇಂದು ಹಲವಾರು ಕ್ರೆಡಿಟ್ ಕಾರ್ಡುಗಳು ನಿಮ್ಮ ಖರ್ಚುಗಳಿಗೆ ಸಮನಾದ ರಿವಾರ್ಡ್ ಪಾಯಿಂಟುಗಳೆಂಬ ಚಿಕ್ಕ ರೂಪದ ಬಹುಮಾನವನ್ನು ನೀಡುತ್ತವೆ. ಇಂದು ಇಂತಹ ಆಕರ್ಷಣೆ ಇರುವ ಕ್ರೆಡಿಟ್ ಕಾರ್ಡುಗಳು ಮಾರುಕಟ್ಟೆಯಲ್ಲಿ ಬಹಳವಾಗಿವೆ. ಆದರೆ ಇವು ನಿಮ್ಮ ಖರ್ಚು ಮತ್ತು ಬಜೆಟ್ ನ ನಿಯಂತ್ರಣದಲ್ಲಿರುವುದು ಅವಶ್ಯ. ಪ್ರತಿ ತಿಂಗಳೂ ಈ ಚಿಕ್ಕ ಚಿಕ್ಕ ಪ್ರಮಾಣದ ಬಹುಮಾನದ ಪಾಯಿಂಟುಗಳು ವರ್ಷದ ಬಳಿಕ ಒಟ್ಟಾಗಿ ಒಂದು ಮೊತ್ತವಾಗಬಹುದು ಅಥವಾ ಯಾವುದಾದರೊಂದು ಸೇವೆಯನ್ನು ಪಡೆಯಲು ನೆರವಾಗಬಹುದು. ಈ ಪಾಯಿಂಟುಗಳನ್ನು ನಿಮ್ಮ ಅಗತ್ಯಕ್ಕೆ ಬಳಸಲು ಸಾಧ್ಯವಾಗುವಂತಿರಬೇಕು.

11. ಸಂಗಾತಿಯೊಂದಿಗೆ ನಿಮ್ಮ ಖರ್ಚುಗಳ ಬಗ್ಗೆ ವಿಮರ್ಶಿಸಿ

11. ಸಂಗಾತಿಯೊಂದಿಗೆ ನಿಮ್ಮ ಖರ್ಚುಗಳ ಬಗ್ಗೆ ವಿಮರ್ಶಿಸಿ

ನಿಮ್ಮ ಖರ್ಚುಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸುವುದು ಅಗತ್ಯ. ಒಂದು ವೇಳೆ ನೀವು ಇನ್ನೂ ಅವಿವಾಹಿತರಾಗಿದ್ದು ವಿವಾಹವಾಗಲು ಯೋಜಿಸುತ್ತಿದ್ದರೆ ಹಾಗೂ ಹೊಸ ಸ್ಥಳಕ್ಕೆ ವರ್ಗಾವಣೆ ಪಡೆಯಲು ಯೋಜಿಸುತ್ತಿದ್ದರೆ ಇದಕ್ಕೆ ತಗಲುವ ಖರ್ಚುಗಳನ್ನು ನಿಮ್ಮ ಸಂಗಾತಿ/ವಿವಾಹವಾಗುವ ವ್ಯಕ್ತಿಯೊಡನೆ ಚರ್ಚಿಸುವುದು ಅಗತ್ಯ. ಒಂದು ವೇಳೆ ನೀವು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಸಾಲ ಪಡೆದುಕೊಂಡಿದ್ದು ಇನ್ನೂ ಪೂರ್ಣವಾಗಿ ಪಾವತಿಸಿಲ್ಲದಿದ್ದರೆ, ಈ ಸಮಯದಲ್ಲಿ ಈ ಮೊತ್ತದ ಬಗ್ಗೆ ಚರ್ಚಿಸುವುದೂ ಅಗತ್ಯ. ಇದರ ಜೊತೆಗೇ ಕ್ರೆಡಿಟ್ ಕಾರ್ಡ್ ಸಾಲ, ಆರ್ಥಿಕ ಗುರಿಗಳು ಹಾಗೂ ನಿಮ್ಮ ಖರ್ಚು ಮಾಡುವ ಗುಣ ಮೊದಲಾದವುಗಳ ಬಗ್ಗೆ ಚರ್ಚಿಸುವ ಮೂಲಕವೂ ಸಂಗಾತಿಯೊಡನೆ ಯಾವುದೇ ಮಾಹಿತಿ ಮುಚ್ಚಿಡದಿರುವ ಬದ್ದತೆಯನ್ನು ಪ್ರಕಟಿಸಬಹುದು.

12. ನಿಮ್ಮ ಉದ್ಯೋಗದಲಿ ಬಡ್ತಿ ಅಥವಾ ಬದಲಾವಣೆಯ ಬಗ್ಗೆ ಚರ್ಚಿಸಿ

12. ನಿಮ್ಮ ಉದ್ಯೋಗದಲಿ ಬಡ್ತಿ ಅಥವಾ ಬದಲಾವಣೆಯ ಬಗ್ಗೆ ಚರ್ಚಿಸಿ

ಈಗಿರುವ ಉದ್ಯೋಗದಲ್ಲಿ ಯಾವಾಗ ಭಡ್ತಿ ದೊರಕುತ್ತದೆ ಅಥವಾ ಇದೇ ಉದ್ಯೋಗದಲ್ಲಿ ಎಷ್ಟು ಕಾಲ ಮುಂದುವರೆಯುವುದು ಮೊದಲಾದ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ. ಈಗ ನೀವು ಮಾಡುತ್ತಿರುವ ಕೆಲಸ ನಿಮ್ಮ ನಿಜವಾದ ಸಾಮರ್ಥಕ್ಕೆ ಮೀರಿದ್ದು ನಿಮಗೆ ಕಡಿಮೆ ವೇತನ ದೊರಕುತ್ತಿದೆ ಎಂದೆನಿಸುತ್ತಿದ್ದರೆ ನೀವು ವೇತನದಲ್ಲಿ ಹೆಚ್ಚಳಕ್ಕೆ ಖಂಡಿತಾ ಕೇಳಬಹುದು. ಇದು ಸಾಧ್ಯವಾಗದಿದ್ದರೆ ಇದು ಯಾವಾಗ ಸಾಧ್ಯವಾಗಬಹುದು ಎಂಬ ಬಗ್ಗೆ ಪರಾಮರ್ಶಿಸಿ. ವೇತನದಲ್ಲಿ ಹೆಚ್ಚಳ ಪಡೆಯಬೇಕಾದರೆ ನಿಮಗೆ ಯಾವ ರೀತಿಯ ತರಬೇತಿಯ ಅಗತ್ಯವಿದೆ ಅಥವಾ ಯಾವ ಕೆಲಸವನ್ನು ಮಾಡಬೇಕಾಗಿ ಬರಬಹುದು ಎಂಬ ಬಗ್ಗೆ ಪರಿಶೀಲಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+