For Quick Alerts
ALLOW NOTIFICATIONS  
For Daily Alerts

ಯಶಸ್ವಿ ಉದ್ಯಮಿಯಾಗಬೇಕೆ? ಇಲ್ಲಿ ನೋಡಿ..

ಸ್ವಂತ ಉದ್ಯಮ ಅಥವಾ ವ್ಯವಹಾರ ಪ್ರಾರಂಭಿಸುವಾಗ, ಅದನ್ನು ಹೇಗೆ ಯಶಸ್ವಿಗೊಳಿಸಬೇಕು ಎಂಬುದನ್ನೂ ತಿಳಿದಿರಬೇಕು. ಯಶಸ್ವಿ ಉದ್ಯಮದ ಮಾಲೀಕರಾಗಲು ಬಯಸುವವರಿಗೆ ಈ ಲೆಖನ ಉಪಯುಕ್ತ.

By Siddu
|

ಸ್ವಂತ ಉದ್ಯಮ ಅಥವಾ ವ್ಯವಹಾರ ಪ್ರಾರಂಭಿಸುವಾಗ, ಅದನ್ನು ಹೇಗೆ ಯಶಸ್ವಿಗೊಳಿಸಬೇಕು ಎಂಬುದನ್ನೂ ತಿಳಿದಿರಬೇಕು. ಯಶಸ್ವಿ ಉದ್ಯಮದ ಮಾಲೀಕರಾಗಲು ಬಯಸುವವರಿಗೆ ಈ ಲೆಖನ ಉಪಯುಕ್ತ. ಒಬ್ಬ ಯಶಸ್ವಿ ಉದ್ಯಮಿಗಿರಬೇಕಾದ ನಡವಳಿಕೆಗಳೇನೆಂಬುದನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ..

ಯಶಸ್ವಿ ಉದ್ಯಮಿಯಾಗಬೇಕೆ? ಇಲ್ಲಿ ನೋಡಿ..

ಉದ್ಯಮಿಗಳು ಎದುರಿಸುವ 3 ಸಾಮಾನ್ಯ ಸಮಸ್ಯೆಗಳು

1. ಹೆಚ್ಚು ಹಣ ಸಂಪಾದಿಸುವುದು
ಪ್ರತಿ ಉದ್ಯಮಿ ಎದುರಿಸುವ ಮೊದಲ ಸವಾಲೆಂದರೆ ಹೆಚ್ಚು ಹಣ ಗಳಿಸುವುದು. ಉದ್ಯಮಿಗಳು ವಿವಿಧ ವಿಧಾನಗಳನ್ನು ಅಳವಡಿಸಿಕೊಂಡು ಹೆಚ್ಚು ಹಣ ಗಳಿಸಬಹುದು. ಅದರಲ್ಲಿ ಅತ್ಯಂತ ಸಾಮಾನ್ಯ ವಿಧಾನಗಳೆಂದರೆ:
ಹೆಚ್ಚು ಉತ್ಪನ್ನಗಳನ್ನು ಮಾರುವುದು.
ಹೆಚ್ಚು ಉತ್ಪನ್ನ ಶ್ರೇಣಿಗಳನ್ನು ಪರಿಚಯಿಸುವುದು.
ಉತ್ಪನ್ನಗಳನ್ನು ನವೀಕರಿಸುವುದು.
ವ್ಯಾಪಾರವನ್ನು ಪ್ರಚುರಪಡಿಸುವುದು.

2. ಸಮಯ ನಿರ್ವಹಣೆ
ನೀವು ಉದ್ಯಮವನ್ನು ಪರಿಣಾಮಕಾರಿಯಾಗಿ ನಡೆಸಬೇಕಾದರೆ ಸಮಯವನ್ನು ಸರಿಯಾಗಿ ನಿರ್ವಹಿಸಬೇಕು. ಹೆಚ್ಚುವರಿ ಸಮಯವನ್ನು ಹೊಸ ಉತ್ಪನ್ನ ಅಥವಾ ವ್ಯವಹಾರ ವರ್ಧನೆಯ ಕುರಿತಾಗಿ ಯೋಚಿಸಲು ಉಪಯೋಗಿಸಬಹುದು.

3. ಉತ್ಪಾದಕ ಉದ್ಯೋಗಿಗಳನ್ನು ಹೊಂದಿರುವುದು
ಉದ್ಯಮಿಗೆ ಅಡ್ಡಿಯಾಗುವ ಮತ್ತೊಂದು ಸವಾಲು ತಂಡದಲ್ಲಿ ಉತ್ಪಾದಕ ಉದ್ಯೋಗಿಯನ್ನು ಇಟ್ಟುಕೊಳ್ಳುವುದು.ಸರಿಯಾದ ಕೆಲಸಕ್ಕೆ ಸೂಕ್ತ ವ್ಯಕ್ತಿಯ ಆಯ್ಕೆ ಖಂಡಿತವಾಗಿಯೂ ವ್ಯತ್ಯಾಸ ತರಬಲ್ಲದು.

ಯಶಸ್ಸಿಗೆ 3 ಹಂತದ ಪ್ರಕ್ರಿಯೆಗಳು

1. ಮನೋಭಾವ
ಯಶಸ್ವಿ ಉದ್ಯಮವನ್ನು ನಡೆಸಲು ಮನೋಭಾವವು ಅತ್ಯಂತ ನಿರ್ಣಾಯಕ ಅಂಶವಾಗಿದೆ. ಯಶಸ್ವಿಯಾಗಲು ನೀವು ಧನಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಮನೋಭಾವವು ಈ ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕು.
ಪರಿಹಾರದತ್ತ ಗಮನ ಕೇಂದ್ರೀಕರಿಸುವುದು, ಮಾಲೀಕತ್ವವನ್ನು ತೆಗೆದುಕೊಳ್ಳುವುದು, ಬಿಟ್ಟುಕೊಡದಿರುವ ಮನೋಭಾವ ಹಾಗು
ಕ್ರೆಡಿಟ್ ಕೊಡುವ ಗುಣವಿರಬೇಕು.

2. ಕಾರ್ಯ ತಂತ್ರ
ನಿಮಗೆ ಕಾರ್ಯತಂತ್ರವಿಲ್ಲದಿದ್ದರೆ ಜನರನ್ನು ಹೇಗೆ ನೇಮಿಸಿಕೊಳ್ಳುವುದು, ಜನರನ್ನು ತೆಗೆದುಹಾಕುವುದು ಹೇಗೆ, ನಿಮ್ಮ ಗ್ರಾಹಕರು ಯಾರು, ಸಂಭಾವ್ಯ ಮಾರುಕಟ್ಟೆಗಳು ಯಾವುದು ಎಂದು ತಿಳಿಯುವುದಿಲ್ಲ. ಕಾರ್ಯತಂತ್ರವು ಉದ್ದವಾದ ದಾಖಲೆಯಾಗಿರಬೇಕೆಂದಿಲ್ಲ. ಅದು ಕೇವಲ ಒಂದು ಪುಟದ ಕೈಪಿಡಿಯಾಗಿದ್ದರೆ ಸಾಕು. ವ್ಯವಹಾರ ಕಾರ್ಯತಂತ್ರವು ಒಂದು ಜೀವಂತ ದಾಖಲೆ. ಅದನ್ನು ನಿಯಮಿತವಾಗಿ ಮರುಪರಿಶೀಲನೆ ಮಾಡುತ್ತಿರಬೇಕು.

3. ಶಿಸ್ತು
ಯಶಸ್ವಿ ಉದ್ಯಮಿಯಾಗಲು ನಿಮ್ಮಲ್ಲಿ ಶಿಸ್ತು ಇರಬೇಕು. ಅನೇಕ ಕಂಪೆನಿಗಳು ವ್ಯವಹಾರ ಕಾರ್ಯತಂತ್ರ ಮತ್ತು ದಾಖಲೆಗಳನ್ನು ರಚಿಸುತ್ತವೆ. ಆದರೆ ಅದನ್ನು ಅನುಸರಿಸುವುದಿಲ್ಲ. ನೀವು ಹಾಕಿಕೊಂಡ ಯೋಜನೆಯ ಪ್ರಕಾರ ಕೆಲಸ ಮಾಡದಿದ್ದರೆ ನೀವು ಯಶಸ್ವಿಯಾಗುವುದಿಲ್ಲ.

English summary

How to become successful business man?

When you start your own business, you also should learn how to make business successful. If you are starting fresh and seeking help to become successful business owner we are herewith behavioral aspect of successful businessman.
Story first published: Wednesday, March 7, 2018, 16:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X