For Quick Alerts
ALLOW NOTIFICATIONS  
For Daily Alerts

ಹೊಸ ಉದ್ಯೋಗ ಹುಡುಕುವುದು ಹೇಗೆ? ಇಲ್ಲಿವೆ 5 ಸುಲಭ ಮಾರ್ಗ

ಉದ್ಯೋಗ ಹುಡುಕುವುದು ಎಷ್ಟೊಂದು ಕಷ್ಟದ ಕೆಲಸ ಅನ್ನೋದು ಅದರ ಅನುಭವ ಆದವರಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಹೊಸ ಕೆಲಸ ಹುಡುಕುವುದು ತಳಮಟ್ಟದ ಕಠಿಣ ಪರಿಶ್ರಮವನ್ನು ಬಯಸುತ್ತದೆ. ಎಕಾನಾಮಿಕ್ ಟೈಮ್ಸ್ ನೊಂದಿಗೆ ತಜ್ಷರು ತಮ್ಮ ಅನು ವವನ್ನು ಹ

By Siddu
|

ಉದ್ಯೋಗ ಹುಡುಕುವುದು ಎಷ್ಟೊಂದು ಕಷ್ಟದ ಕೆಲಸ ಅನ್ನೋದು ಅದರ ಅನುಭವ ಆದವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಉದ್ಯೋಗ ಹುಡುಕುವುದು ತಳಮಟ್ಟದ ಕಠಿಣ ಪರಿಶ್ರಮವನ್ನು ಬಯಸುತ್ತದೆ. ಈ ಬಗ್ಗೆ ಎಕಾನಾಮಿಕ್ ಟೈಮ್ಸ್ ನೊಂದಿಗೆ ತಜ್ಞರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಇಲ್ಲಿ ನೀಡಲಾಗಿದೆ. ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

 

ನಿಮ್ಮ ಪ್ಯಾಶನ್ ಗುರುತಿಸಿ

ನಿಮ್ಮ ಪ್ಯಾಶನ್ ಗುರುತಿಸಿ

ಯಾವುದೇ ಒಂದು ಸಂದರ್ಭದಲ್ಲಿ ಪ್ಯಾಶನ್ ಅಥವಾ ಹುಚ್ಚು ಅನ್ನೋದು ನಿರ್ಣಾಯಕ ಅಂಶವಾಗಿರುತ್ತದೆ. ಅದಕ್ಕಾಗಿಯೇ ನಿಮ್ಮಲ್ಲಿರುವ ಈ ಪ್ಯಾಶನ್ ಗುರುತಿಸುವುದು ಮೊದಲ ಕಷ್ಟಕರ ಹೆಜ್ಜೆಯಾಗಿರುತ್ತದೆ ಎಂದು ಬಾರ್ಕ್ ಇಂಡಿಯಾ (BARC India) ಅಧಿಕಾರಿಯಾದ ಮಣಶಿ ಕುಮಾರ್ ಹೇಳುತ್ತಾರೆ. ನೀಮಗೆ ಹೆಚ್ಚು ಇಷ್ಟವಿರುವುದನ್ನು ನೀವು ಗುರುತಿಸಿದ ನಂತರ ಆ ದಿಕ್ಕಿನಲ್ಲಿ ಉದ್ಯೋಗ ಹುಡುಕುವಿಕೆಯನ್ನು ಗಮನಿಸುವುದು ಸುಲಭವಾಗಿರುತ್ತದೆ ಅವರು ಹೇಳುತ್ತಾರೆ.

ನಿಮ್ಮ ಗುರಿ ನಿಮ್ಮ ಕನಸು

ನಿಮ್ಮ ಗುರಿ ನಿಮ್ಮ ಕನಸು

ನಿಮ್ಮ ಗುರಿಯನ್ನು ಏನೆಂಬುದನ್ನು ನಿರ್ಧರಿಸಿದರೆ ಅದನ್ನು ಕಲ್ಪಿಸಿಕೊಳ್ಳುತ್ತಾ ಬಲವಾಗಿ ನಿರೂಪಿಸುತ್ತಿರಿ ಎಂದು ಬಾರ್ಕ್ ಇಂಡಿಯಾ ಕುಮಾರ್ ಹೇಳುತ್ತಾರೆ. ಹೆಚ್ಚಿನ ಸಂದರ್ಶಕರು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಅಥವಾ ಪ್ರಯಾಣದ ವಿವರ ಕೇಳಲು ಬಯಸುತ್ತಾರೆ. ನಿಮ್ಮ ಗುರಿಯ ಬಗ್ಗೆ, ಪ್ಯಾಶನ್ ಬಗ್ಗೆ ರೆಸ್ಯುಮ್(ಸಿವಿ) ನಲ್ಲಿ ಅದ್ಬುತವಾಗಿ ನಿರೂಪಿಸಿ ಎಂದಿದ್ದಾರೆ.

ನಿಮ್ಮನ್ನು ನೀವು ಪ್ರಮೋಟ್ ಮಾಡಿ
 

ನಿಮ್ಮನ್ನು ನೀವು ಪ್ರಮೋಟ್ ಮಾಡಿ

ನಮ್ಮನ್ನು ನಾವು ಪರಿಚಯಿಸಿಕೊಳ್ಳುವುದು ಅಥವಾ ಮಾರ್ಕೆಟಿಂಗ್ ಮಾಡಿಕೊಳ್ಳುವುದು ತುಂಬಾ ಪ್ರಮುಖ ಅಂಶವಾಗಿದೆ ಎಂದು ಮೋತಿಲಾಲ್ ಒಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ (ಎಮ್ಎಫ್ಎಸ್ಎಲ್) ನಿರ್ದೇಶಕ-ಎಚ್.ಆರ್ ಸುಧೀರ್ ಧರ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಸ್ವಯಂ ಬ್ರಾಂಡ್ ಅನ್ನು ರಚಿಸುವುದು ಸಾಧ್ಯವಾದಷ್ಟು ಪರಿಣಾಮಕಾರಿ ರೀತಿಯಲ್ಲಿ ಮಾಡಬೇಕಾಗಿದೆ. ಉದಾಹರಣೆಗೆ, ಲಿಂಕ್ಡ್ಇನ್, ಬ್ಲಾಗ್ ಗಳು ಮೂಲಕ ಲೇಖನಗಳನ್ನು ಬರೆಯುವುದು. ಸ್ಪೀಕರ್ ಆಗಿ ಸಮಾವೇಶ ಮತ್ತು ವಿಚಾರಗೋಷ್ಠಿಗಳಿಗೆ ಹಾಜರಾಗುವುದು ಇತ್ಯಾದಿ ವಿಧಾನಗಳನ್ನು ಅನುಸರಿಸಬೇಕು.

ಕಂಪನಿ ಬಗ್ಗೆ ತಿಳಿದುಕೊಳ್ಳಿ

ಕಂಪನಿ ಬಗ್ಗೆ ತಿಳಿದುಕೊಳ್ಳಿ

ಉದ್ಯೋಗಕ್ಕೆ ಸೇರುವ ಮುನ್ನ ಕಂಪನಿ, ಪ್ರೊಫೈಲ್ ಮತ್ತು ಪ್ರಸ್ತುತ ಇರುವ ಉದ್ಯೋಗಿಗಳ ಬಗ್ಗೆ ತಿಳಿದುಕೊಳ್ಳಿ. ಹೊಸ ಕಂಪನಿಯಲ್ಲಿ ನಿಮ್ಮ ಪಾತ್ರವೇನು? ಕಂಪನಿಯ ಸ್ಥಾನಮಾನವೇನು? ಉದ್ಯೊಗಿಗಳಿಂದ ಅದು ಏನು ಬಯಸುತ್ತದೆ? ಆ ಕೆಲಸಕ್ಕೆ ಅಗತ್ಯವಾದ ಕೌಶಲ್ಯಗಳು ಏನೆಂದು ತಿಳಿದುಕೊಳ್ಳಿ. ಇದೇ ರೀತಿಯ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳೊಂದಿಗೆ ಮಾತನಾಡಿ. ಅದರಲ್ಲಿನ ಸವಾಲುಗಳನ್ನು ಅರ್ಥಮಾಡಿಕೊಳ್ಳಿ.

ನಿಮ್ಮ ನೆಟ್ವರ್ಕ್ ಸಕ್ರಿಯೊಳಿಸಿ/ ಬಿಲ್ಡ್ ಮಾಡಿ

ನಿಮ್ಮ ನೆಟ್ವರ್ಕ್ ಸಕ್ರಿಯೊಳಿಸಿ/ ಬಿಲ್ಡ್ ಮಾಡಿ

ಹೊಸ ಉದ್ಯೋಗಗಳನ್ನು ಹುಡುಕುವಾಗ ರೆಫರೆನ್ಸುಗಳು ಅತ್ಯುತ್ತಮವಾದ ಮಾರ್ಗ ಆಗಬಲ್ಲವು. ನೀವು ಓದಿದ ಶಾಲೆ/ಕಾಲೇಜು, ಮಾಜಿ ಸಹದ್ಯೋಗಿಗಳ ಮೂಲಕ ಹಿಸ ಕೆಲಸ ಹುಡುಕುವುದು ಉತ್ತಮ ಮಾರ್ಗವಾಗಿದೆ ಎಂದು ಸುಧೀರ್ ಧರ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಉದ್ಯೋಗದಾತರನ್ನು ಅಥವಾ ಮ್ಯಾನೆಜರ್ ಗಳನ್ನು ನೇರವಾಗಿ ಸಂಪರ್ಕಿಸಬಹುದು.

English summary

How to Find A New Job? Here are 5 Ways

Job hunting can be a challenging affair even at the best of times. It takes a lot of groundwork and rigorous followup to land yourself the right one.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X