ಹಣ ಗಳಿಸಲು ನೂರಾರು ದಾರಿಗಳಿವೆ. ಕೆಲವರು ಹಾರ್ಡ್ವರ್ಕ್ ಮೂಲಕ ಹಣ ಗಳಿಸಿದರೆ, ಹಲವರು ಸ್ಮಾರ್ಟ್ ವರ್ಕ್ ಮೂಲಕ ಉತ್ತಮ ಹಣ ಗಳಿಸುತ್ತಿರುತ್ತಾರೆ. ಬಂಡವಾಳ ಹೂಡಿಕೆ ಮಾಡದೆ ಕೂಡ ಹಣ ಗಳಿಸುವ ಸುಲಭ ಉಪಾಯಗಳು ಇವೆ.
ಹಣ ಗಳಿಸಲು ನೂರಾರು ದಾರಿಗಳಿವೆ. ಕೆಲವರು ಹಾರ್ಡ್ವರ್ಕ್ ಮೂಲಕ ಹಣ ಗಳಿಸಿದರೆ, ಹಲವರು ಸ್ಮಾರ್ಟ್ ವರ್ಕ್ ಮೂಲಕ ಉತ್ತಮ ಹಣ ಗಳಿಸುತ್ತಿರುತ್ತಾರೆ. ಬಂಡವಾಳ ಹೂಡಿಕೆ ಮಾಡದೆ ಕೂಡ ಹಣ ಗಳಿಸುವ ಸುಲಭ ಉಪಾಯಗಳು ಇವೆ.
ನಿಮ್ಮ ಹತ್ತಿರ ಕಂಪ್ಯೂಟರ್ ಹಾಗು ಇಂಟರ್ನೆಟ್ ಸೌಲಭ್ಯ ಇದ್ದರೆ ನೀವೂ ಕೂಡ ಸುಲಭವಾಗಿ ಹಣ ಗಳಿಸಬಹುದು. ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಹಣ ಗಳಿಸಬಹುದಾದ ಐದು ವಿಧಾನಗಳನ್ನು ಇಲ್ಲಿ ನೀಡಲಾಗಿದೆ.. ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್
ಕಾಲ್ ಸೆಂಟರ್ ಏಜೆಂಟ್
ನೀವು ಮನೆಯಲ್ಲಿ ಕುಳಿತು ಕಾಲ್ ಸೆಂಟರ್ ಏಜೆಂಟ್ ರಾಗಿ ಕೆಲಸ ಮಾಡಬಹುದು. LiveOps.com ನಿಮಗೆ ಈ ಸೌಲಭ್ಯ ಒದಗಿಸುತ್ತಿದೆ.
LiveOps.com ಸೈಟ್ನಲ್ಲಿ ಕಂಪನಿ ಏಜೆಂಟ್ ಹೇಗಾಗುವುದು ಎನ್ನುವುದರ ಮಾಹಿತಿ ಇದ್ದು, ಇಂಗ್ಲೀಷ್ ಉತ್ತಮವಾಗಿದ್ದರೆ ಈ ಕೆಲಸ ಸುಲಭ. ಒಂದು ವೇಳೆ ಇಂಗ್ಲೀಷ್ ಬರದೆ ಹೋದಲ್ಲಿ ಕಂಪನಿ ಕಂಪ್ಯೂಟರ್ ಸ್ಕ್ರೀನ್ ಮೇಲೆ ಏನು ಹೇಳಬೇಕೆಂಬುದನ್ನು ತೋರಿಸುತ್ತದೆ. ಅದನ್ನು ಹೇಳಿದರೆ ಆಯಿತು. ಒಂದು ಗಂಟೆಗೆ 7 ರಿಂದ 15 ಡಾಲರ್ ಗಳಿಕೆ ಮಾಡಬಹುದಾಗಿದೆ. ಒಮ್ಮೆ ಓದಿ.. ಜೀವನದಲ್ಲಿ ಅದೆಷ್ಟೋ ಬಾರಿ ಸೋತು ಗೆದ್ದ ಜಗತ್ತಿನ ಸಾಧಕರಿವರು
ಸ್ವಾಗ್ ಬುಕ್ಸ್
ಆನ್ಲೈನ್ ಕೆಲಸ
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಕೆಲಸ ಸರ್ವೆಸಾಮಾನ್ಯ.
www.odesk.com ಮತ್ತು www.elance.com ವೆಬ್ಸೈಟ್ ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿದರೆ ಬೇರೆ ಬೇರೆ ವಿಧಗಳ ಮೂಲಕ ನೀವು ಹಣ ಗಳಿಸಬಹುದು. ನಿಮ್ಮ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡಬಹುದು. ಆದರೆ ಜಗತ್ತಿನಾದ್ಯಂತ ಹಲವು ಮೋಸಗೊಳಿಸುವ ಕಂಪನಿಗಳಿದ್ದು, ಅವುಗಳ ಬಗ್ಗೆ ಎಚ್ಚರವಿರಲಿ.
ಪುಸ್ತಕ ಪ್ರಕಟಣೆ
ಬರವಣಿಗೆ ಹವ್ಯಾಸ ಇದ್ದರೆ ನಿಮಗೆ ಕೆಲ ವೆಬ್ಸೈಟ್ ಗಳು ದುಡ್ಡು ಕೊಟ್ಟು ನಿಮ್ಮ ಪುಸ್ತಕ ಪ್ರಕಟಣೆಗೆ ಅವಕಾಶ ನೀಡುತ್ತದೆ. ಜೊತೆಗೆ ರಾಯಲ್ಟಿ ಕೂಡ ಸಿಗುತ್ತದೆ. ಹಿಗಾಗಿ ಕಥೆ, ಪುಸ್ತಕ ಬರೆದು ಯಾರು ಪ್ರಕಟಣೆ ಮಾಡುತ್ತಾರೆಂದು ಕಾಯುತ್ತ ಕೂರುವ ಅಗತ್ಯವಿಲ್ಲ.
ಅಮೆಜಾನ್ ಕಿಂಡಲ್ ನೇರವಾಗಿ ಪ್ರಕಟಣೆಗೆ ಅವಕಾಶ ನೀಡಿದ್ದು, ಪುಸ್ತಕ ಪ್ರಕಟಿಸಿ ಅಮೆಜಾನ್ ಕಿಂಡಲ್ ಗೆ ಹಾಕಿ. ನಿಮ್ಮ ಪುಸ್ತಕ ಖರೀದಿಯಾದಲ್ಲಿ ಶೇ.70 ರಷ್ಟು ಹಣ ನಿಮಗೆ ಸೇರುತ್ತದೆ. ಇದರ ಬಗ್ಗೆ https://kdp.amazon.com/ ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ.
ವಿಮರ್ಶೆ ಬರಹ
ಸಾಫ್ಟ್ವೇರ್ ಅಥವಾ ಇತರ ವಸ್ತುಗಳ ಮೇಲೆ ವಿಮರ್ಶೆ ಬರೆಯುವುದರ ಮೂಲಕ ಉತ್ತಮ ಆದಾಯ ಗಳಿಸಬಹುದು. ಉತ್ತಮ ಬರಹಗಾರರಿಗೆ ಇದೊಂದು ಒಳ್ಳೆ ಅವಕಾಶ. Vindale Research, ExpoTv.com ಸೈಟ್ ಮುಖಾಂತರ ವಿಮರ್ಶೆಗಳ ಮೇಲೆ ಗಳಿಕೆಗೆ ಅವಕಾಶ ಮಾಡಿಕೊಡುತ್ತದೆ.


Click it and Unblock the Notifications