For Quick Alerts
ALLOW NOTIFICATIONS  
For Daily Alerts

ಬ್ಯಾಂಕಿಂಗ್ - ಹಣಕಾಸು ವ್ಯವಹಾರಕ್ಕಾಗಿ ಈ ಅಪ್ಲಿಕೇಶನ್ಸ್ (Apps) ನಿಮ್ಮ ಬಳಿ ಇರಲಿ..

ಒಂದು ಕಾಲದಲ್ಲಿ ತಮ್ಮ ಹಣವನ್ನು ಕಾಗದದಲ್ಲಿ ಬರೆದಿಡುವ ಮೂಲಕ ಜನರು ತಮ್ಮ ಹಣಕಾಸಿನ ಖರ್ಚು ವೆಚ್ಚಗಳನ್ನು ನಿರ್ವಹಣೆಯನ್ನು ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ಡಿಜಿಟಲ್ ಯುಗದಲ್ಲಿ ನಾವು ಸಾಗುತ್ತಿದ್ದೇವೆ..

By Siddu
|

ಒಂದು ಕಾಲದಲ್ಲಿ ತಮ್ಮ ಹಣವನ್ನು ಕಾಗದದಲ್ಲಿ ಬರೆದಿಡುವ ಮೂಲಕ ಜನರು ತಮ್ಮ ಹಣಕಾಸಿನ ಖರ್ಚು ವೆಚ್ಚಗಳನ್ನು ನಿರ್ವಹಣೆಯನ್ನು ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ಡಿಜಿಟಲ್ ಯುಗದಲ್ಲಿ ನಾವು ಸಾಗುತ್ತಿದ್ದೇವೆ.. ಈಗ ಎಲ್ಲಾ ವ್ಯವಹಾರಗಳು ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಗಳ ಬಳಕೆಯಿಂದ ನಿರ್ವಹಿಸಲ್ಪಡುತ್ತದೆ. ಇದು ಹೆಚ್ಚಿನ ಸಮಯವನ್ನು ಉಳಿಸುತ್ತದೆ ಮತ್ತು ನಮ್ಮ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ನಮಗೆ ಅವಕಾಶ ಮಾಡಿಕೊಡುತ್ತದೆ.

ಆದ್ದರಿಂದ, ಈ ಲೇಖನದಲ್ಲಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರ, ಬಜೆಟ್ ಯೋಜನೆಗಾಗಿ ಬಳಸಲಾಗುವ ಅಪ್ಲಿಕೇಶನ್ ಗಳ ಬಗ್ಗೆ ತಿಳಿಯೋಣ..

ಡಿಜಿಟ್ (DIGIT)

ಡಿಜಿಟ್ (DIGIT)

ಈ ಅಪ್ಲಿಕೇಶನ್ ಬಳಕೆದಾರರಿಗೆ ತಿಳಿಯದ ಹಾಗೆಯೇ ಹಣವನ್ನು ಉಳಿಸಲು ಅನುವು ಮಾಡಿಕೊಡುತ್ತದೆ. ಇದು ಬಳಕೆದಾರರ ಆದಾಯ, ಖರ್ಚುವೆಚ್ಚಗಳ ವಿವರಗಳನ್ನು ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡುತ್ತದೆ ಮತ್ತು ಸಣ್ಣ ಪ್ರಮಾಣದಲ್ಲಿ ಉಳಿತಾಯವನ್ನು ವರ್ಗಾವಣೆ ಮಾಡುತ್ತದೆ. ಆದ್ದರಿಂದ ಅದನ್ನು ನಿರ್ವಹಿಸಲು ಒಂದು ಪ್ರತ್ಯೇಕ ಖಾತೆಯ ಅಗತ್ಯವಿವುದಿಲ್ಲ ಎಂದು ತೋರುತ್ತದೆ. ಅಲ್ಲದೆ ವ್ಯಕ್ತಿಯು ಉಳಿತಾಯ ಖಾತೆಯಿಂದ ಯಾವ ಸಮಯದಲ್ಲಾದರೂ ಹಿಂತೆಗೆದುಕೊಳ್ಳಬಹುದು. ಆದರೆ ಅದರ ಮೇಲೆ ಬಡ್ಡಿಯನ್ನು ಪಡೆಯಲು ಸಾಧ್ಯವಿಲ್ಲ. ಈ ಅಪ್ಲಿಕೇಶನ್ ಅನ್ನು ಫೆಬ್ರವರಿಯಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಗಿದೆ ಮತ್ತು ಗೂಗಲ್ ನ ಬೆಂಬಲವನ್ನು ಹೊಂದಿದೆ.

ಕ್ರೆಡಿಟ್ ಕರ್ಮ (CREDIT KARMA)

ಕ್ರೆಡಿಟ್ ಕರ್ಮ (CREDIT KARMA)

ಈ ಅಪ್ಲಿಕೇಶನ್ ಉಚಿತ ಕ್ರೆಡಿಟ್ ಅಂಕಗಳು ಮತ್ತು ವರದಿಗಳನ್ನು ನೀಡುತ್ತದೆ. ಅದರ ಆಧಾರದ ಮೇಲೆ ಉತ್ತಮ ಕ್ರೆಡಿಟ್ ಕಾರ್ಡ್ ಅಥವಾ ಸಾಲದ ಕೊಡುಗೆಗಳನ್ನು ಶಿಫಾರಸು ಮಾಡಬಹುದು ಮತ್ತು ನಮ್ಮ ಹಣಕಾಸನ್ನು ಮತ್ತಷ್ಟು ಹೆಚ್ಚಿಸಬಹುದು. ಇದಲ್ಲದೆ, ಬಳಕೆದಾರರು ಕೆಳಗಿನ ಹೆಚ್ಚುವರಿ ಸೇವೆಗಳಿಗೆ ಪ್ರವೇಶವನ್ನು ಹೊಂದಿದ್ದಾರೆ-
* ಉಚಿತ ಕ್ರೆಡಿಟ್ ಕಾರ್ಡ್ ಮೇಲ್ವಿಚಾರಣೆ: ಅವನ/ಅವಳ ಕ್ರೆಡಿಟ್ ವರದಿಯಲ್ಲಿನ ಪ್ರಮುಖ ಬದಲಾವಣೆಗಳ ಬಗ್ಗೆ ಬಳಕೆದಾರರು ಎಚ್ಚರಿಕೆಯ ಸಂದೇಶವನ್ನು ಪಡೆಯಬಹುದು. * ನೇರ ದೂರು: ತನ್ನ ವರದಿಯಲ್ಲಿ ವ್ಯಕ್ತಿಗೆ ಏನಾದರೂ ದೋಷ ಕಂಡುಬಂದರೆ, ಅವರು ಕ್ರೆಡಿಟ್ ಕರ್ಮವನ್ನು ಬಿಡದೆಯೇ ದೂರನ್ನು ಸಲ್ಲಿಸಬಹುದು.
* ಉಚಿತ ಶಿಕ್ಷಣ, ಸಲಹೆಗಳು ಮತ್ತು ಪರಿಕರಗಳು
* ವೈಯಕ್ತೀಕರಿಸಿದ ಶಿಫಾರಸುಗಳು

ಆಕ್ರಾನ್ (ACORN)

ಆಕ್ರಾನ್ (ACORN)

ಕಡಿಮೆ ವೆಚ್ಚದ ETF (ಎಕ್ಸ್ಚೇಂಜ್ ಟ್ರೇಡೆಡ್ ಫಂಡ್) ನಲ್ಲಿ 3500 ಕ್ಕೂ ಹೆಚ್ಚಿನ ಸ್ಟಾಕ್ ಗಳು ಮತ್ತು ಬಾಂಡ್ ಗಳಲ್ಲಿ ಸಣ್ಣ ಪ್ರಮಾಣದ ಹೂಡಿಕೆ ಮಾಡಲು ವ್ಯಕ್ತಿಗೆ ಅವಕಾಶ ನೀಡುವ ಒಂದು ಅಪ್ಲಿಕೇಶನ್ ಇದು. ಈ ಪ್ರಕ್ರಿಯೆಯು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಬಳಕೆದಾರ ಸರಾಸರಿ $30 ರಿಂದ $180 ತಿಂಗಳಿಗೆ ಹೂಡಿಕೆ ಮಾಡಬಹುದು. ಆದರೆ ಬಳಕೆದಾರ ಅದಕ್ಕಿಂತಲೂ ಹೆಚ್ಚು ಹೂಡಿಕೆ ಮಾಡಲು ಬಯಸಿದರೆ, ನಂತರ ಅವನು $30,000 ವರೆಗೆ ಮೊತ್ತವನ್ನು ಹೂಡಬಹುದು. ಈ ಅಪ್ಲಿಕೇಶನ್ ಒದಗಿಸುವ ವೈಶಿಷ್ಟ್ಯಗಳು ಕೆಳಕಂಡಂತಿವೆ:
* ವ್ಯಕ್ತಿಯು ಪುನಾರವರ್ತಿತ ಹೂಡಿಕೆಗಳು, ಒಂದು ಸಲದ ಹೂಡಿಕೆಗಳು, ಉಲ್ಲೇಖಗಳು ಇತ್ಯಾದಿಗಳೊಂದಿಗೆ ಹೆಚ್ಚು ಹೂಡಿಕೆಯನ್ನು ಮಾಡಬಹುದು.
* ಎಲ್ಲಿಂದಲಾದರೂ ಅವನ/ಅವಳ ಬ್ಯಾಂಕ್ ಖಾತೆಯನ್ನು ಪರಿಶೀಲಿಸುವ ಮೂಲಕ ನೀಡಿದ ಅಪ್ಲಿಕೇಶನ್ ಪ್ರಗತಿಯನ್ನು ಟ್ರ್ಯಾಕ್ ಮಾಡಬಹುದು.
* ಇದು ವ್ಯಕ್ತಿಯ ಹಣಕಾಸಿನ ಪ್ರಕಟಣೆ, ನಿಯತಕಾಲಿಕೆಗಳು ಇತ್ಯಾದಿಗಳಿಗೆ ಪ್ರವೇಶಿಸಲು ಅವಕಾಶ ನೀಡುತ್ತದೆ.
* ಯಾವುದೇ ಶುಲ್ಕವಿಲ್ಲದೆ ಯಾವುದೇ ಸಮಯದಲ್ಲಿ ಹಣವನ್ನು ಹಿಂತೆಗೆದುಕೊಳ್ಳಬಹುದು.

ಗುಡ್ ಬಜೆಟ್ (GOODBUDGET)

ಗುಡ್ ಬಜೆಟ್ (GOODBUDGET)

ಈ ಅಪ್ಲಿಕೇಶನ್ ಹಣವನ್ನು ನಿರ್ವಹಿಸುವ ಮತ್ತು ಖರ್ಚುವೆಚ್ಚಗಳ ಟ್ರ್ಯಾಕರ್ ಆಗಿದೆ. ಇದನ್ನು ಮನೆಯ ಬಜೆಟ್ ಮಾಡುವ ಯೋಜನೆಯಲ್ಲಿ ಉತ್ತಮ ಸಾಧನವಾಗಿ ಬಳಸಲಾಗುತ್ತದೆ. ಇದು ಸ್ಮಾರ್ಟ್ ಪೋನ್ ನಲ್ಲಿ ಸಮಯ ಪರೀಕ್ಷಿತ ಹೊಂದಿಸುವ ಬಜೆಟ್ ವಿಧಾನವನ್ನು ಜಾರಿಗೆ ತರುತ್ತದೆ ಮತ್ತು ಈ ಕೆಳಗಿನ ವೈಶಿಷ್ಟ್ಯಗಳನ್ನು ಒದಗಿಸುತ್ತದೆ-
* ಆಂಡ್ರಾಯ್ಡ್, ಐಫೋನ್ ಮತ್ತು ವೆಬ್ ಮೂಲಕ ಬಳಕೆದಾರ ಬಜೆಟ್ ಅನ್ನು ಬಜೆಟ್ ಪಾಲುದಾರರೊಂದಿಗೆ ಹಂಚಿಕೊಳ್ಳಲು ಸಿಂಕ್ ಮಾಡಬಹುದು.
* ಈ ಅಪ್ಲಿಕೇಶನ್ ನಲ್ಲಿ ವೈಯಕ್ತಿಕ ಹಣಕಾಸು ನಿರ್ವಾಹಕವನ್ನು ವರ್ಚುವಲ್ ಅಪ್ಡೇಟ್ ನ ವೈಶಿಷ್ಟ್ಯವಾಗಿ ಸೇರಿಸಿರುವುದರಿಂದ ಬಿಲ್ಲುಗಳು ಮತ್ತು ಹಣಕಾಸುಗಳ ಮೇಲೆ ನಮ್ಮ ಗಮನವಿರುವಂತೆ ಪೂರ್ವಭಾವಿ ಬಜೆಟ್ ಯೋಜಕವಾಗಿ ಕಾರ್ಯನಿರ್ವಹಿಸುತ್ತದೆ.
* ಒಬ್ಬ ವ್ಯಕ್ತಿಯು ತನ್ನ ಹಣಕಾಸಿನ ಕುರಿತಾದ ಒಳನೋಟವುಳ್ಳ ವರದಿಗಳನ್ನು ಕೂಡ ಪಡೆಯಬಹುದು.

ಮಿಂಟ್ (MINT)

ಮಿಂಟ್ (MINT)

ಹೆಚ್ಚು ಜನರು ಬಳಸುವ ಪ್ರಮುಖ ಅಪ್ಲಿಕೇಶನ್ ಗಳಲ್ಲಿ ಒಂದು. ಸಂಪೂರ್ಣ ಹಣವನ್ನು ಒಂದೇ ಸ್ಥಳದಲ್ಲಿ ನಿರ್ವಹಿಸಲು ಸುಲಭ ಸಾಧ್ಯವಾದ ಮತ್ತು ಉಚಿತವಾದ ಅಪ್ಲಿಕೇಶನ್ ಮಿಂಟ್. ಈ ಅಪ್ಲಿಕೇಶನಲ್ಲಿ, ಎಲ್ಲವೂ ಗ್ರಾಪ್ ಗಳು ಮತ್ತು ಚಾರ್ಟ್ ಗಳ ರೂಪದಲ್ಲಿ ಸರಳವಾಗಿ ತೋರಿಸಲ್ಪಡುತ್ತದೆ. ಹಾಗಾಗಿ ವ್ಯಕ್ತಿ ತನ್ನ ಹಣಕಾಸಿನ ಬಗ್ಗೆ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಅಪ್ಲಿಕೇಶನ್ನೊಂದಿಗೆ, ವ್ಯಕ್ತಿಯ ಬ್ಯಾಂಕ್ ಖಾತೆಗಳು, ಕ್ರೆಡಿಟ್ ಕಾರ್ಡ್ ಗಳು, ಬಿಲ್ ಗಳು, ಹೂಡಿಕೆಗಳು ಇತ್ಯಾದಿಗಳನ್ನು ಒಟ್ಟಿಗೆ ನೋಡಬಹುದು.
* ಆರ್ಥಿಕ ಜೀವನದ ಸಂಪೂರ್ಣ ಚಿತ್ರಣವನ್ನು ಪಡೆಯಿರಿ
* ಬಿಲ್ ಗಳು ಮತ್ತು ಹಣವನ್ನು ಒಟ್ಟಾಗಿ ನಿರ್ವಹಿಸಿ
* ನಿಮ್ಮ ಸಮಯ ಮತ್ತು ಹಣವನ್ನು ಉಳಿಸಿ
* ಬಜೆಟ್ ಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ
* ಕ್ರೆಡಿಟ್ ಸ್ಕೋರ್ ಬಗ್ಗೆ ಉತ್ತಮ ತಿಳುವಳಿಕೆ ಪಡೆಯಿರಿ

ಲೆವೆಲ್ ಮನಿ (LEVEL MONEY)

ಲೆವೆಲ್ ಮನಿ (LEVEL MONEY)

ಇದನ್ನು ಮೊಬೈಲ್ ಮನಿ ಮೀಟರ್ ಎಂದೂ ಕರೆಯಲಾಗುತ್ತದೆ. ಇದು ಒಬ್ಬ ವ್ಯಕ್ತಿಯ ಹಣಕಾಸಿನ ಚಿತ್ರಣವನ್ನು ಸ್ವಯಂಚಾಲಿತವಾಗಿ ವಿಶ್ಲೇಷಿಸುವ ಒಂದು ಸರಳ ಸಾಧನವಾಗಿದೆ ಮತ್ತು ಈ ಕೆಳಗಿನ ಲಕ್ಷಣಗಳನ್ನು ಒದಗಿಸುತ್ತದೆ-
ಬಳಕೆದಾರನು ವೈಯಕ್ತಿಕ ಖರ್ಚು ಮಾರ್ಗದರ್ಶಿಯ ಸಹಾಯವನ್ನು ಪಡೆಯುವ ಮೂಲಕ ಅವನು ಹೇಗೆ ಮತ್ತು ಯಾವ ರೀತಿ ಸುರಕ್ಷಿತವಾಗಿ ಹಣ ಖರ್ಚು ಮಾಡಬಹುದೆಂದು ತಿಳಿಯಬಹುದು.
ಬಳಕೆದಾರನಿಗೆ ತನ್ನ ಸ್ವಂತ ಟ್ರ್ಯಾಕರ್ ರಚಿಸಲು ಅನುವು ಮಾಡಿಕೊಡುವುದರಿಂದ ಅವನಿಗೆ ಸಂಬಂಧಿಸಿದ ಖರ್ಚು ವೆಚ್ಚಗಳನ್ನು ನೋಡಬಹುದು.
ಒಬ್ಬರು ಮತ್ತೊಬ್ಬರ ಹಣಕಾಸಿನ ಲೆಕ್ಕಾಚಾರದ ಒಳನೋಟವನ್ನು ಪಡೆಯಬಹುದು.
ಒಬ್ಬರು ಮತ್ತೊಬ್ಬರ ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಸುರಕ್ಷಿತವಾಗಿ ವೀಕ್ಷಿಸಬಹುದು.

ವ್ಯಾಲಿ (WALLY)

ವ್ಯಾಲಿ (WALLY)

ಇದು ನಿಮ್ಮ ವ್ಯಕ್ತಿಯ ದೈನಂದಿನ, ವಾರದ ಅಥವಾ ಮಾಸಿಕ ಖರ್ಚುವೆಚ್ಚಗಳ ಸಂಪೂರ್ಣ ಚಿತ್ರಣವನ್ನು ಒದಗಿಸುತ್ತದೆ. ಈ ಅಪ್ಲಿಕೇಶನ್ ನ ಅತ್ಯುತ್ತಮ ವೈಶಿಷ್ಟ್ಯವೆಂದರೆ, ವ್ಯಕ್ತಿಯು ತನ್ನ ರಸೀದಿಗಳನ್ನು ಸ್ಕ್ಯಾನ್ ಮಾಡುವುದರಿಂದ ಸ್ವಯಂಚಾಲಿತವಾಗಿ ಅಪ್ಲಿಕೇಶನ್ ಖರಿದಿಸಿದ ಎಲ್ಲಾ ವಿವರಗಳನ್ನು ಇನ್ಪುಟ್ ಮಾಡುತ್ತದೆ. ಅಪ್ಲಿಕೇಶನ್ ಎಲ್ಲಾ ರಸೀದಿಗಳ ವಿವರಗಳನ್ನು ಸ್ವಯಂಚಾಲಿತವಾಗಿ ಉಳಿಸುವುದರಿಂದ ಬಳಕೆದಾರರು ಅವರ ಖರ್ಚಿನ ಪ್ರತಿಯೊಂದು ವಿವರಗಳನ್ನು ಟೈಪ್ ಮಾಡುವ ಅಗತ್ಯವಿಲ್ಲ.

Read more about: banking money finance news savings
English summary

Best Personal Finance Apps for Personal Finance

You can take some of the guesswork out of moving your finances to mobile with this list of the best personal finance apps.
Story first published: Wednesday, August 22, 2018, 11:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X