SIP ಹೂಡಿಕೆ: 30 ವರ್ಷಗಳಲ್ಲಿ 3,000 ರೂ. ಅಥವಾ 10 ವರ್ಷಗಳಲ್ಲಿ 30,000 ರೂ. ಯಾವುದು ಹೆಚ್ಚು ಲಾಭದಾಯಕ?

ವ್ಯವಸ್ಥಿತ ಹೂಡಿಕೆ ಯೋಜನೆ ಅಥವಾ SIP (Systematic Investment Plan) ಎಂಬುದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಒಂದು ವಿಧಾನವಾಗಿದೆ. ಇಲ್ಲಿ ನೀವು ದೊಡ್ಡ ಮೊತ್ತವನ್ನು ಒಂದೇ ಬಾರಿಗೆ ಹೂಡಿಕೆ ಮಾಡುವ ಬದಲು, ಸಣ್ಣ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡಬಹುದು. ಇದು ನಿಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

30 ವರ್ಷಗಳ SIP vs 10 ವರ್ಷಗಳ SIP:ಯಾವುದು ಉತ್ತಮ?

ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಬದಲು, ನೀವು ವಾರಕ್ಕೊಮ್ಮೆ, ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಹೂಡಿಕೆ ಮಾಡಲು ಆಯ್ಕೆ ಮಾಡಬಹುದು. ಯಾರೇ ಆದರೂ SIPಯಲ್ಲಿ ಹೂಡಿಕೆ ಆರಂಭಿಸಬೇಕು ಅಂದ್ರೆ ಅದಕ್ಕೂ ಮೊದಲು ತಮ್ಮ ಗುರಿಯನ್ನು ನಿರ್ಧರಿಸಬೇಕು. ಇದು ನಿವೃತ್ತಿ, ಶಿಕ್ಷಣ, ಕಾರು ಅಥವಾ ಮನೆ ಖರೀದಿ ಅಥವಾ ಯಾವುದೇ ಇತರ ಉದ್ದೇಶ ಹೀಗೆ ಯಾವುದಾದ್ರೂ ಆಗಿರಬಹುದು. ನಿಮ್ಮ ಹಣಕಾಸಿನ ಗುರಿಗಳನ್ನು ಪೂರೈಸಲು ನಿಮ್ಮ SIP ಅವಧಿಯನ್ನು ಸಹ ನೀವು ನಿರ್ಧರಿಸಬೇಕು. SIP ಬಗ್ಗೆ ಉತ್ತಮವಾದ ವಿಚಾರವೆಂದರೆ ಅದು ಹೂಡಿಕೆದಾರರನ್ನು ಶಿಸ್ತುಬದ್ಧ ಹೂಡಿಕೆದಾರರನ್ನಾಗಿ ಮಾಡಲು ಪ್ರೋತ್ಸಾಹ ನೀಡುತ್ತದೆ ಜೊತೆಗೆ ಇದರಿಂದ ಸಂಯೋಜನೆ ಶಕ್ತಿ(power of compounding)ನ ಲಾಭವನ್ನು ಸಹ ಪಡೆಯಬಹುದು.

SIP ಯಲ್ಲಿ ನಿಮಗೆ ಹೊಂದಿಕೆಯಾಗುವ ಮೊತ್ತವನ್ನು ಬಳಸಿಕೊಂಡು ಹೂಡಿಕೆ ಮಾಡಬಹುದು. ಜೊತೆಗೆ ಇದರಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರಬೇಕಾದ ಅಗತ್ಯವೂ ಇಲ್ಲ. ಜೊತೆಗೆ ಪೋರ್ಟ್ ಫೋಲಿಯೋವನ್ನು ವೈವಿಧ್ಯಗೊಳಿಸುವುದರಿಂದ ರಿಸ್ಕ್ ಕಡಿಮೆ ಮಾಡಬಹುದು. SIP ನಲ್ಲಿ ನೀವು ಹೂಡಿಕೆ ಮಾಡಬಹುದಾದ ಮೊತ್ತಕ್ಕೆ ಯಾವುದೇ ಮಿತಿಯಿಲ್ಲದ ಕಾರಣ ನೀವು ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತ ತಿಂಗಳಿಗೆ ರೂ 500 ಆಗಿದೆ. SIP ಗಳಲ್ಲಿ ನೀವು ಸುಮಾರು ಶೇಕಡಾ 12-15 ರಷ್ಟು ವಾರ್ಷಿಕ ಆದಾಯವನ್ನು ಪಡೆಯಬಹುದು.

30 ವರ್ಷಗಳವರೆಗೆ ಮಾಸಿಕ ರೂ. 3,000 SIP ಅಥವಾ 10 ವರ್ಷಗಳವರೆಗೆ ಮಾಸಿಕ ರೂ. 30,000 SIP

ಈ ಲೇಖನದಲ್ಲಿ ನೀವು SIPಯಲ್ಲಿ ತಿಂಗಳಿಗೆ 3,000 ರೂಪಾಯಿಯಂತೆ 30 ವರ್ಷಗಳವರೆಗೆ ಹೂಡಿಕೆ ಮಾಡಿದ್ರೆ ಲಾಭ ಅಧಿಕವೇ ಅಥವಾ 10 ವರ್ಷಗಳವರೆಗೆ ಮಾಸಿಕ ರೂ. 30,000 SIPಯಲ್ಲಿ ಹೂಡಿಕೆ ಮಾಡಿದ್ರೆ ಲಾಭ ಅಧಿಕವೇ ಎಂಬುವುದನ್ನು ಹೋಲಿಕೆ ಮಾಡಿ ನೋಡೋಣ.

30 ವರ್ಷಗಳವರೆಗೆ ಮಾಸಿಕ 3,000 ರೂ. ಮತ್ತು 10 ವರ್ಷಗಳವರೆಗೆ ಮಾಸಿಕ 30,000 ರೂ. ಪ್ರತಿಯೊಂದು ಪ್ರಕರಣದಲ್ಲೂ ವಾರ್ಷಿಕ ಆದಾಯವು ಶೇಕಡಾ 12 ರಷ್ಟಿರುತ್ತದೆ.

30 ವರ್ಷದ ಮಾಸಿಕ 3,000 ರೂ. SIP ಹೂಡಿಕೆಯಿಂದ ಬರುವ ಫಂಡ್ ಎಷ್ಟು?

30 ವರ್ಷಗಳಲ್ಲಿ, ನೀವು ತಿಂಗಳಿಗೆ 3,000 ರೂ ಹೂಡಿಕೆ ಮಾಡುವ ಮೂಲಕ 1,05,89,741 ರೂಗಳನ್ನು ಸಂಗ್ರಹಿಸಬಹುದು. 30 ವರ್ಷಗಳಲ್ಲಿನ ಒಟ್ಟು ಹೂಡಿಕೆ 10,80,000 ರೂ ಆಗಿರುತ್ತದೆ ಮತ್ತು ಒಟ್ಟು ಅಂದಾಜು ಆದಾಯವು 95,09,741 ರೂ ಆಗಿರುತ್ತದೆ.

10 ವರ್ಷಗಳಲ್ಲಿ ಮಾಸಿಕ 30,000 ರೂ. SIP ಹೂಡಿಕೆಯಿಂದ ಬರುವ ನಿಧಿ ಎಷ್ಟು?

10 ವರ್ಷಗಳಲ್ಲಿ, ನೀವು ತಿಂಗಳಿಗೆ 30,000 ರೂ. ಹೂಡಿಕೆ ಮಾಡುವ ಮೂಲಕ 69,70,172 ರೂ.ಗಳನ್ನು ಸಂಗ್ರಹಿಸಬಹುದು. ಒಟ್ಟು ಹೂಡಿಕೆಯು 36,00,000 ರೂ.ಗಳಾಗಿದ್ದು, ಒಟ್ಟು ಅಂದಾಜು ಆದಾಯವು 33,70,172 ರೂ.ಗಳಾಗಿರುತ್ತದೆ.

ಇದು ಕೇವಲ ಒಂದು ಅಂದಾಜು ಲೆಕ್ಕಾಚಾರ. ಮ್ಯೂಚುವಲ್ ಫಂಡ್‌ಗಳ ಆದಾಯವು ಮಾರುಕಟ್ಟೆಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. SIP ಹೂಡಿಕೆಯು ದೀರ್ಘಾವಧಿಗೆ ಉತ್ತಮ. ದೀರ್ಘಾವಧಿಯಲ್ಲಿ, ಮಾರುಕಟ್ಟೆಯ ಏರಿಳಿತಗಳ ಪರಿಣಾಮ ಕಡಿಮೆ ಇರುತ್ತದೆ ಮತ್ತು ಸಂಯೋಜನೆಯ ಶಕ್ತಿಯಿಂದ (compound interest) ಹೆಚ್ಚಿನ ಲಾಭ ಪಡೆಯಬಹುದು.

Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+