ಉದ್ಯೋಗ ಮಾಡುವ , ಉತ್ತಮ ಆದಾಯ ಗಳಿಸುವ ವ್ಯಕ್ತಿಗಳಿಗೆ ಸಾಮಾನ್ಯವಾಗಿ ದೀರ್ಘಾವಧಿಯ ಹೂಡಿಕೆಯ ಅವಕಾಶ ಸಿಗುತ್ತದೆ. ಸರಿ ಸುಮಾರು 30 ವರ್ಷಗಳವರೆಗೆ ಹೂಡಿಕೆ ಅವಕಾಶವಿರುತ್ತದೆ. ಒಂದು ಅಂದಾಜಿನ ಪ್ರಕಾರ ಒಬ್ಬ ವ್ಯಕ್ತಿ ಸಾಮಾನ್ಯವಾಗಿ 25ರ ವಯಸ್ಸಿನಲ್ಲಿ ವೃತ್ತಿ ಜೀವನ ಆರಂಭಿಸುತ್ತಾರೆ ಅಂದುಕೊಳ್ಳೋಣ.ಇವರು ಸೂಕ್ತವಾದ ನೆಲೆ ಕಂಡುಕೊಳ್ಳಲು ಮತ್ತು ಆರ್ಥಿಕವಾಗಿ ಸದೃಢರಾಗಲು ಸಮಯ ಬೇಕಾಗುತ್ತದೆ. ಉತ್ತಮ ಸಂಬಳ ಗಳಿಸಿದ ನಂತರ, ಅವರು ಹೆಚ್ಚಾಗಿ ಜೀವನಶೈಲಿ ಮತ್ತು ಕೌಶಲ್ಯ ಅಭಿವೃದ್ಧಿಗೆ ಗಮನ ಕೊಡುತ್ತಾರೆ. ಹೀಗಾಗಿ, 30ರ ವಯಸ್ಸಿನ ಆಸುಪಾಸಿನಲ್ಲಿ ಹೂಡಿಕೆ ಆರಂಭಿಸುವುದು ವಿವೇಕಯುತ ನಿರ್ಧಾರ ಎಂದು ಗಣನೆಗೆ ತೆಗೆದುಕೊಳ್ಳಬಹುದು.

ಆದರೆ ಅನೇಕರು ಮಾಡುವ ಸಾಮಾನ್ಯ ತಪ್ಪು ಅಂದ್ರೆ, ಸಂಬಳ ಸ್ವಲ್ಪ ಹೆಚ್ಚಾಗಲಿ, ದೊಡ್ಡ ಮೊತ್ತ ವೇತನದ ಸಿಕ್ಕಿದ್ರೆ ಹೂಡಿಕೆ ಶುರು ಮಾಡೋಣ ಎಂದು ಕಾಯುವುದು. ಈ ವಿಳಂಬವು ಭವಿಷ್ಯದಲ್ಲಿ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ. ಆದರೆ ತಮ್ಮ ಹೂಡಿಕೆಗಳ ಸಂಯುಕ್ತ ಬೆಳವಣಿಗೆಯ ಪ್ರಮುಖ ವರ್ಷಗಳನ್ನು ಕಳೆದುಕೊಳ್ಳುತ್ತಾರೆ. ಈ ಸಮಯವನ್ನು ಸರಿಯಾಗಿ ಬಳಸಿಕೊಂಡರೆ, ಅವರ ಹೂಡಿಕೆಗಳು ಗಣನೀಯವಾಗಿ ಬೆಳೆಯುತ್ತದೆ ಮತ್ತು ಭವಿಷ್ಯದಲ್ಲಿ ಉತ್ತಮ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ಕೇವಲ ಕೆಲವು ವರ್ಷಗಳ ವಿಳಂಬವು ನಿವೃತ್ತಿ ಹಣದಲ್ಲಿ ದೊಡ್ಡ ಕೊರತೆಗೆ ಕಾರಣವಾಗಬಹುದು. ಹೂಡಿಕೆಗೆ ಸಮಯವು ಬಹಳ ಪ್ರಾಮುಖ್ಯವಾದ ಅಂಶ. ಅದನ್ನು ಸರಿಯಾಗಿ ಬಳಸಿಕೊಂಡರೆ, ನಿಮ್ಮ ಹೂಡಿಕೆಗಳು ಅತ್ಯುತ್ತಮ ಲಾಭವನ್ನು ನೀಡಬಲ್ಲವು. ಕೆಲವು ವರ್ಷಗಳವರೆಗೆ ಮಾತ್ರ ಮಾಡುವ ದೊಡ್ಡ ಹೂಡಿಕೆಗೆ ಹೋಲಿಸಿದರೆ ಸಣ್ಣ ಹೂಡಿಕೆಯು ದೊಡ್ಡ ನಿಧಿಯನ್ನು ನಿರ್ಮಿಸುತ್ತದೆ ಎನ್ನುವುದು ಮರೆಯಬಾರದು.
"ಸಮಯ" ಹೂಡಿಕೆ ಬೆಳವಣಿಗೆಯ ಸಮಯವು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ?
ದೀರ್ಘಾವಧಿಯವರೆಗೆ ಹೂಡಿಕೆ ಮಾಡುವುದರಿಂದ ಚಕ್ರಬಡ್ಡಿಯ ಲಾಭವನ್ನು ಪಡೆಯಬಹುದು, ಇದು ನಿಮ್ಮ ಹಣವು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಉದಾಹರಣೆಗೆ, ನೀವು ಮ್ಯೂಚುವಲ್ ಫಂಡ್ ಯೋಜನೆಯಲ್ಲಿ 1 ಲಕ್ಷ ರೂಪಾಯಿಗಳನ್ನು ವಾರ್ಷಿಕವಾಗಿ ಶೇಕಡಾ 12 ರಷ್ಟು ಬೆಳವಣಿಗೆಯೊಂದಿಗೆ ಹೂಡಿಕೆ ಮಾಡಿದರೆ
10 ವರ್ಷಗಳಲ್ಲಿ, ನಿಮ್ಮ ಹೂಡಿಕೆಯ ಮೌಲ್ಯ ಸುಮಾರು 3.1 ಲಕ್ಷ ರೂಪಾಯಿಗಳಾಗುತ್ತದೆ. 20 ವರ್ಷಗಳಲ್ಲಿ, ಅದು ಸುಮಾರು 9.6 ಲಕ್ಷ ರೂ., 30 ವರ್ಷಗಳಲ್ಲಿ, ಅದು ಸುಮಾರು 30 ಲಕ್ಷ ರೂ., 40 ವರ್ಷಗಳಲ್ಲಿ, ಅದು ಬರೋಬ್ಬರಿ 93 ಲಕ್ಷ ರೂಪಾಯಿಗಳಾಗುತ್ತದೆ.
ನೀವು ಗಮನಿಸಿದರೆ, ಹೂಡಿಕೆಯ ಅವಧಿ ಹೆಚ್ಚಾದಂತೆ ನಿಮ್ಮ ಹಣದ ಬೆಳವಣಿಗೆಯ ವೇಗವೂ ಹೆಚ್ಚಾಗುತ್ತದೆ. 20 ವರ್ಷಗಳಿಗಿಂತ 40 ವರ್ಷಗಳ ಹೂಡಿಕೆಯಲ್ಲಿನ ವ್ಯತ್ಯಾಸವು 10 ಪಟ್ಟು ಹೆಚ್ಚಾಗಿದೆ. ಇದರರ್ಥ, ನೀವು ಎಷ್ಟು ಬೇಗ ಹೂಡಿಕೆ ಪ್ರಾರಂಭಿಸುತ್ತೀರೋ ಮತ್ತು ಎಷ್ಟು ದೀರ್ಘಕಾಲದವರೆಗೆ ಮುಂದುವರಿಸುತ್ತೀರೋ, ಅಷ್ಟು ಹೆಚ್ಚಿನ ಲಾಭವನ್ನು ಪಡೆಯಬಹುದು. ಹೀಗಾಗಿ, ಹೂಡಿಕೆಯನ್ನು ವಿಳಂಬ ಮಾಡಬಾರದು.
ಹೂಡಿಕೆಯ ಅವಧಿ ಮತ್ತು ಚಕ್ರಬಡ್ಡಿಯ ಶಕ್ತಿ
ನೀವು 35 ವರ್ಷಗಳ ಕಾಲ ಕೇವಲ 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಶೇಕಡಾ 12 ರಷ್ಟು ವಾರ್ಷಿಕ ಆದಾಯದೊಂದಿಗೆ, ಅದು ಸುಮಾರು 1 ಕೋಟಿ 5 ಲಕ್ಷದ 59 ಸಾವಿರದ 924 ರೂಪಾಯಿಗಳಾಗುತ್ತದೆ. ಇದರಲ್ಲಿ ನಿಮ್ಮ ಲಾಭಾಂಶ ಬರೋಬ್ಬರಿ 1 ಕೋಟಿ 3 ಲಕ್ಷದ 59 ಸಾವಿರದ 924 ರೂಪಾಯಿಗಳು.
ಇನ್ನು ಅದೇ ಶೇಕಡಾ 12 ರಷ್ಟು ವಾರ್ಷಿಕ ಆದಾಯದೊಂದಿಗೆ, ನೀವು ಕೇವಲ 14 ವರ್ಷಗಳ ಕಾಲ 20 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿಮ್ಮ ಕಾರ್ಪಸ್ ಸುಮಾರು 97 ಲಕ್ಷದ 74 ಸಾವಿರದ 225 ರೂಪಾಯಿಗಳಾಗುತ್ತದೆ. ಇಲ್ಲಿ ನಿಮ್ಮ ಲಾಭಾಂಶ 77 ಲಕ್ಷದ 74 ಸಾವಿರದ 225 ರೂಪಾಯಿಗಳು.
ಮೇಲ್ನೋಟಕ್ಕೆ, 20 ಲಕ್ಷ ರೂಪಾಯಿಗಳ ಹೂಡಿಕೆ ದೊಡ್ಡದಾಗಿದ್ದರೂ, ದೀರ್ಘಾವಧಿಯ ಹೂಡಿಕೆಯು (35 ವರ್ಷಗಳು) ಕಡಿಮೆ ಮೊತ್ತದ (2 ಲಕ್ಷ ರೂಪಾಯಿಗಳು) ಹೂಡಿಕೆಯನ್ನೂ ಸಹ ಗಮನಾರ್ಹವಾಗಿ ಬೆಳೆಸಿದೆ.
ಇದಕ್ಕೆ ಕಾರಣವೆಂದರೆ ಚಕ್ರಬಡ್ಡಿ. ನಿಮ್ಮ ಹೂಡಿಕೆಯ ಮೇಲೆ ಬರುವ ಲಾಭಾಂಶವನ್ನು ಮರುಹೂಡಿಕೆ ಮಾಡಿದಾಗ, ಆ ಲಾಭಾಂಶದ ಮೇಲೂ ಲಾಭ ಬರುತ್ತದೆ. ಇದು ಒಂದು ರೀತಿಯ "ಸ್ನೋಬಾಲ್" ಪರಿಣಾಮದಂತೆ ಕಾರ್ಯನಿರ್ವಹಿಸುತ್ತದೆ. ದೀರ್ಘಾವಧಿಯವರೆಗೆ ಹೂಡಿಕೆ ಮಾಡಿದಾಗ, ಈ ಚಕ್ರಬಡ್ಡಿಯ ಪರಿಣಾಮವು ಅತ್ಯುತ್ತಮವಾಗಿದೆ. ಹಾಗಾಗಿ, ಇದು ವ್ಯತಿರಿಕ್ತ ಫಲಿತಾಂಶವಲ್ಲ. ಬದಲಾಗಿ, ದೀರ್ಘಾವಧಿಯ ಹೂಡಿಕೆಯಲ್ಲಿ ಸಮಯವು ಎಷ್ಟೊಂದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಕಡಿಮೆ ಮೊತ್ತದ ಹೂಡಿಕೆಯಾಗಿದ್ದರೂ ಸಹ, ದೀರ್ಘಕಾಲದವರೆಗೆ ಹೂಡಿಕೆ ಮಾಡುವುದರಿಂದ ದೊಡ್ಡ ಮೊತ್ತದ ಹೂಡಿಕೆಗಿಂತ ಹೆಚ್ಚಿನ ಲಾಭವನ್ನು ಗಳಿಸಬಹುದು.
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications