ಇಂದಿನ ಉಳಿತಾಯವೇ ನಾಳೆಯ ಆರ್ಥಿಕ ನಿಧಿ. ಕಷ್ಟ ಪಟ್ಟು ದುಡಿದ ಹಣದಲ್ಲಿ ಒಂದಷ್ಟು ಖರ್ಚು ಮಾಡಿ, ಇಂತಿಷ್ಟು ಉಳಿತಾಯ ಮಾಡದೇ ಇದ್ದರೆ ಬದುಕು ಕಷ್ಟಕ್ಕೆ ಬೀಳುತ್ತದೆ. ಹೀಗಾಗಿ ಉತ್ತಮ ಜೀವನಶೈಲಿಗೆ ಸೇವಿಂಗ್ಸ್ ಬಹಳ ಅಗತ್ಯ. ಆದರೆ ಈಗಿನ ಜೀವನ, ಹಣದುಬ್ಬರ, ಕಡಿಮೆ ವೇತನದ ನಡುವೆ ಉಳಿಸೋಕೆ ಆಗುತ್ತಾ? ನಿಜಕ್ಕೂ ಆಗುವುದಿಲ್ಲ. ಊಟಕ್ಕಿದ್ದರೆ, ಬಟ್ಟೆಗಿರಲ್ಲ ಎನ್ನುವಂತಾಗಿದೆ. ಹೀಗಿರುವಾಗ ಉಳಿತಾಯ ಹೇಗೆ ಸಾಧ್ಯ. ಆದರೆ ನೀವು ಈ 5 ವಿಚಾರದಲ್ಲಿ ಕಡಿಮೆ ಖರ್ಚು ಮಾಡಿದರೆ ನಿಜಕ್ಕೂ ಉತ್ತಮ ಸೇವಿಂಗ್ಸ್ ಸಿಗುತ್ತದೆ.

ಹೌದು, ದೊಡ್ಡ ಮಟ್ಟದ ಬದಲಾವಣೆ ಏನಲ್ಲ. ಕೆಲವೊಂದು ಚಿಕ್ಕದಾದ ಚಟುವಟಿಕೆಗಳಿಂದಲೇ ನಿಮಗೆ ಉಳಿತಾಯದ ದಾರಿ ಸುಲಭವಾಗಬಹುದು. ಇದರಲ್ಲಿ ಪ್ರಮುಖವಾದದ್ದು. ಖರ್ಚು ಇಲ್ಲದ ಸವಾಲುಗಳಲ್ಲಿ ಭಾಗವಹಿಸುವುದು. ಇವು ಸಂಪೂರ್ಣ ಉಚಿತವಾಗಿದ್ದರೂ, ನಿಮ್ಮ ಹಣದ ನಿಯಂತ್ರಣದ ಮೇಲೆ ಬಹುಮಟ್ಟಿಗೆ ಪ್ರಭಾವ ಬೀರುತ್ತವೆ. ಅವು ಯಾವುವೆಂದರೆ..
1. ದಿನಸಿ ಖರೀದಿ ನಿಯಂತ್ರಣ:
ದಿನಸಿ ಅತ್ಯಗತ್ಯ ಅದರಲ್ಲೇನು ಉಳಿತಾಯ ಮಾಡಲಾಗುವುದಿಲ್ಲ. ಆದರೆ ಒಂದು ತಿಂಗಳ ಕಾಲ ದಿನಸಿ ಖರೀದಿಯನ್ನು ಕಡಿತಗೊಳಿಸಲೇಬೇಕು. ಅಂದರೆ ಅಗತ್ಯವಾದ ವಸ್ತುಗಳನ್ನು ಮಾತ್ರ ಕೊಂಡು ಉಳಿದ ವಸ್ತುಗಳನ್ನು ಕಡೇಪಕ್ಷ ಒಂದು ತಿಂಗಳಿಗಾದರೂ ನಿಲ್ಲಿಸಿವಿಡಿ. ಅಥವಾ ಯಾವುದೇ ತುರ್ತು ಖರೀದಿ ಅಥವಾ ಆಫರ್‌ಗಿಂತ ಉತ್ಸಾಹದಲ್ಲಿ ಶಾಪಿಂಗ್ ಮಾಡುವುದನ್ನು ತಪ್ಪಿಸಬೇಕು. ಆಗ ನಿಮ್ಮ ಉಳಿತಾಯ ಸುಲಭ. ಹೀಗೆ ಮಾಡಲು ನೀವು ತಿಂಗಳ ಆರಂಭದಲ್ಲೇ ಖರೀದಿ ಪಟ್ಟಿ ತಯಾರಿಸಿ.
2. ಮನರಂಜನೆ ವೆಚ್ಚ ನಿಲ್ಲಿಸಿ:
ಇನ್ನು ಮನರಂಜನೆಗಾಗಿಯೇ ಸಾಕಷ್ಟು ವೆಚ್ಚ ತಗಲುತ್ತದೆ. ಸಿನಿಮಾ, ಔಟ್‌ಡೋರ್ ಡೈನಿಂಗ್, ಫಂಕ್ಷನ್ ಎಂದೆಲ್ಲಾ ಖರ್ಚಾಗುತ್ತದೆ. ಆದರೆ ಅದನ್ನು ಒಂದು ತಿಂಗಳ ಮಟ್ಟಿಗಾದರೂ ನಿಲ್ಲಿಸಿದರೆ ಉಳಿತಾಯ ನಿಜಕ್ಕೂ ಸುಲಭ. ಫ್ಯಾಮಿಲಿ ಬಾಂಡ್‌ನ್ನು ಗಟ್ಟಿಗೊಳಿಸಲು ಈ ಸಂದರ್ಭದಲ್ಲಿ ಸಮಯ ಉಪಯೋಗಿಸಿ.
3. ವಾರ್ಡ್ರೋಬ್ ಲಾಕ್‌ಡೌನ್:
ವಾರ್ಡ್ರೋಬ್ ಲಾಕ್‌ಡೌನ್..ಅಂದರೆ ಬಟ್ಟೆ ಬರೆ ತೆಗೆದುಕೊಳ್ಳುವುದನ್ನು ಖರ್ಚು ಮಾಡಿ. ಒಂದು ತಿಂಗಳ ಕಾಲ ಯಾವುದೇ ಹೊಸ ಬಟ್ಟೆ ಖರೀದಿಸಬಾರದು. ಈಗಾಗಲೇ ಇರುವ ಬಟ್ಟೆಗಳನ್ನು ಮಿಶ್ರಣ-ಹೊಂದಾಣಿಕೆ ಮಾಡಿ ಹೊಸ ಲುಕ್ ತಯಾರಿಸಬಹುದು. ಬಟ್ಟೆ ಮರುಬಳಕೆಗೆ ಪ್ರೋತ್ಸಾಹ ನೀಡುವ ಶೈಲಿಗಳನ್ನು ಹಂಚಿಕೊಳ್ಳಿ. ಇದು ನಿಮ್ಮ ಖರ್ಚುಗಳನ್ನು ತಗ್ಗಿಸುವಷ್ಟೇ ಅಲ್ಲ, ಪರಿಸರ ಸ್ನೇಹಿ ಜೀವನಶೈಲಿಗೆ ಪೂರಕವೂ ಹೌದು.
4. ಸಾರಿಗೆ ವೆಚ್ಚ ಕಡಿಮೆ ಮಾಡಿ:
ಪ್ರತಿ ದಿನದ ಪೇಟ್ರೋಲ್ ಅಥವಾ ಡೀಸೆಲ್ ಖರ್ಚು ನಿಮ್ಮ ಖಾತೆಗೆ ಭಾರಿ ಆಗುತ್ತಿದೆಯೇ? ಈ ಸವಾಲು ನಿಮಗೆ. ಒಂದು ತಿಂಗಳು ಸಾಧ್ಯವಾದಷ್ಟು ಕಾಲ ನಡೆದು ಹೋಗಿ, ಬೈಸಿಕಲ್ ಉಪಯೋಗಿಸಿ ಅಥವಾ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸಿ. ಇದು ಇಂಧನ ವ್ಯಯವನ್ನೇ ಕಡಿಮೆ ಮಾಡಲ್ಲ, ನಿಮ್ಮ ಆರೋಗ್ಯಕ್ಕೂ ಹಿತಕರ ಮಾರ್ಗ.
5. ಚಂದಾದಾರಿಕೆ ಪರಿಶೀಲನಾ ಸವಾಲು:
ಸ್ಟ್ರೀಮಿಂಗ್ ಸೇವೆಗಳು, ಫಿಟ್‌ನೆಸ್ ಆ್ಯಪ್‌ಗಳು, ನಿಯತಕಾಲಿಕೆಗಳು - ಇವೆಲ್ಲದರಲ್ಲೂ ಅನಗತ್ಯ ಚಂದಾದಾರಿಕೆಗಳು ಇರುತ್ತವೆ. ಬಳಸದ ಸೇವೆಗಳನ್ನು ರದ್ದುಪಡಿಸಿ ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ. ಇದರಿಂದ ವರ್ಷಕ್ಕೆ ಸಾವಿರಾರು ರೂಪಾಯಿಗಳ ಉಳಿತಾಯ ಸಾಧ್ಯವಿದೆ.
ಈ ರೀತಿಯ ಸವಾಲುಗಳಿಗೆ ನೀವು ಒಗ್ಗಿಕೊಂಡರೆ, ಇಂತಹ ಮಾಸಿಕ ಸವಾಲುಗಳು ನಿಮ್ಮ ಹಣದ ಮೇಲೆ ನಿಯಂತ್ರಣ ಪಡೆಯಲು ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತವೆ. ಈ ಕ್ರಮಗಳು ತಕ್ಷಣದ ಉಳಿತಾಯವನ್ನೂ ಒದಗಿಸುತ್ತವೆ, ಮತ್ತು ನಿಮಗೆ ಖರ್ಚು ಶಿಸ್ತನ್ನು ಬೆಳೆಸಲು ಸಹಾಯ ಮಾಡುತ್ತವೆ.
ಈ ನಿಲ್ಲಿಸಿದ ಖರ್ಚು ಸವಾಲುಗಳು ನಿಮ್ಮ ಹಣಕಾಸು ನಿಯಂತ್ರಣವನ್ನು ಸುಧಾರಿಸಲು ಮಾತ್ರವಲ್ಲ, ನಿಮ್ಮ ಜೀವನಶೈಲಿಯನ್ನೂ ಸರಳಗೊಳಿಸಿ ಹೆಚ್ಚು ಅರಿವಿನೊಂದಿಗೆ ಖರ್ಚು ಮಾಡುವ ಅಭ್ಯಾಸವನ್ನು ಬೆಳೆಸಲು ಸಹಾಯ ಮಾಡುತ್ತವೆ. ನೀವು ಯಾವ ಸವಾಲನ್ನು ಆರಿಸಬೇಕೆಂದು ತೀರ್ಮಾನಿಸುವ ಮೊದಲು, ನಿಮ್ಮ ನಿಜವಾದ ಖರ್ಚು ಪ್ಯಾಟರ್ನ್‌ಗಳನ್ನು ವಿಶ್ಲೇಷಿಸಿ. ಒಂದು ವೇಳೆ ಈ ಮಾಸಿಕ ಸವಾಲುಗಳಲ್ಲಿ ಒಂದನ್ನಾದರೂ ಇಂದಿನಿಂದಲೇ ಪ್ರಾರಂಭಿಸಿದರೆ, ನಿಮ್ಮ ಮುಂದಿನ ತಿಂಗಳ ಬಜೆಟ್‌ನಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು.


Click it and Unblock the Notifications