ಅಂಚೆ ಕಚೇರಿ ಯೋಜನೆಗಳೆಂದರೆ ಭಾರತೀಯರಿಗೆ ಬಲುಪ್ರಿಯ. ಸಂಪ್ರದಾಯಿಕ ಹೂಡಿಕೆ ಇಷ್ಟಪಡುವವರು ಇಂದಿಗೂ ಕೂಡಾ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ವಿಶ್ವಾಸ ನಂಬಿಕೆ ಗಳಿಸಿಕೊಂಡಿರುವ ಅಂಚೆಕಚೇರಿ ಯೋಜನೆಗಳು ಸಣ್ಣ ಹೂಡಿಕೆಯೊಂದಿಗೆ ಆರಂಭಿಸಿ ಕಡಿಮೆ ಸಮಯದಲ್ಲಿಉತ್ತಮ ಸಂಪತ್ತನ್ನು ಗಳಿಸಬಹುದು. ಅಂಚೆಕಚೇರಿಯ ಅನೇಕ ಹೂಡಿಕೆಗಳಲ್ಲಿ ನೀವು 50 ರೂ. ಉಳಿಸಿದರೆ, ನೀವು ಕೇವಲ 5 ವರ್ಷಗಳಲ್ಲಿ ಉತ್ತಮ ನಿಧಿಯನ್ನು ಹುಟ್ಟುಹಾಕುವ ಯೋಜನೆ ಬಗ್ಗೆ ತಿಳಿಸಿಕೊಡುತ್ತೇವೆ. ಜೊತೆಗೆ ಈ ಯೋಜನೆಯ ಮುಕ್ತಾಯದ ಸಂಪೂರ್ಣ ಲೆಕ್ಕಾಚಾರವನ್ನು ಈ ಲೇಖನದಲ್ಲಿ ಅರ್ಥಮಾಡಿಕೊಳ್ಳಬಹುದು.
ಸುರಕ್ಷಿತ ಹೂಡಿಕೆ ಆಯ್ಕೆ
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಿಗೆ ಸರ್ಕಾರದಿಂದ ಬೆಂಬಲ ದೊರೆಯುವುದರಿಂದ ಇಲ್ಲಿ ಹೂಡಿಕೆ ಮಾಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಕಾರಣದಿಂದಾಗಿ ಜನರು ಅಂಚೆ ಕಚೇರಿ ಯೋಜನೆಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಾರೆ.

ಸಣ್ಣ ಉಳಿತಾಯದಿಂದ ದೊಡ್ಡ ಬಂಡವಾಳ
ಅಂಚೆ ಕಚೇರಿ ಯೋಜನೆಯಲ್ಲಿ ಪ್ರತಿದಿನ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ, ನೀವು ಕಾಲಾನಂತರದಲ್ಲಿ ದೊಡ್ಡ ಮೊತ್ತವನ್ನು ಠೇವಣಿ ಮಾಡಬಹುದು. ಅಂದರೆ ಕಡಿಮೆ ಹೂಡಿಕೆಯೊಂದಿಗೆ ನೀವು ಸುಲಭವಾಗಿ ಬಲವಾದ ನಿಧಿಯನ್ನು ರಚಿಸಬಹುದು.
ಪ್ರತಿದಿನ ₹ 50 ಉಳಿಸುವ ಮೂಲಕ ದೊಡ್ಡ ಫಂಡ್ ನಿರ್ಮಿಸಿ
ಉಳಿತಾಯ ಮಾಡಬೇಕು, ಒಂದಷ್ಟು ಹಣಕಾಸಿನ ನಿಧಿ ನಮ್ಮಲ್ಲಿದ್ದರೆ ಮುಂದಕ್ಕೆ ಅನುಕೂಲವಾಗುತ್ತದೆ ಎಂಬ ಯೋಚನೆ ಇದ್ದವರಿಗೆ ಹಾಗೂ ಅಧಿಕ ಹಣ ಹೂಡಿಕೆ ಮಾಡುವುದು ಕಷ್ಟ ಎನ್ನುವವರಿಗೆ ಕೇವಲ 50 ರೂಪಾಯಿಗಳನ್ನು ಉಳಿಸುವ ಮೂಲಕ ಉತ್ತಮ ಫಂಡ ನಿರ್ಮಿಸಿಬಹುದು. ಹೌದು, ನೀವು ಪ್ರತಿದಿನ ₹ 50 ಉಳಿಸಿದರೆ, ನೀವು 5 ವರ್ಷಗಳಲ್ಲಿ ₹ 1,07,050 ವರೆಗೆ ಬಂಡವಾಳವನ್ನು ರಚಿಸಬಹುದು.
ಪ್ರತಿದಿನ ₹ 50 ಅಂದರೆ ಮಾಸಿಕ ₹1500 ಹೂಡಿಕೆ
ಪ್ರತಿದಿನ ₹ 50 ರೂ. ಉಳಿಸಿ ನೀವು ಅಂಚೆಕಚೇರಿಯ ಯೋಜನೆಯಲ್ಲಿ ಪ್ರತಿ ತಿಂಗಳು ₹1500 ಹೂಡಿಕೆ ಮಾಡುವ ಮೂಲಕ, ನೀವು 5 ವರ್ಷಗಳಲ್ಲಿ ಒಟ್ಟು ₹90,000 ಠೇವಣಿ ಇಡಬಹುದು. ಇದರಲ್ಲಿ, ನಿಮಗೆ ಸುಮಾರು ₹17,050 ಹೆಚ್ಚುವರಿ ಬಡ್ಡಿ ಸಿಗುತ್ತದೆ.
ಒಂದು ವೇಳೆ ನೀವು ನೀವು 50 ರ ಬದಲು ₹100 ಉಳಿಸಿಲು ಮನಸ್ಸು ಮಾಡಿದ್ರೆ ನಿಮ್ಮ ನಿಧಿ ದ್ವಿಗುಣಗೊಳ್ಳುತ್ತದೆ. ಹೌದು, ನೀವು ಪ್ರತಿದಿನ ₹100 ಉಳಿಸಿದರೆ, ನೀವು 5 ವರ್ಷಗಳಲ್ಲಿ ₹2,14,097 ರ ದೊಡ್ಡ ಮೊತ್ತವನ್ನು ಗಳಿಸಬಹುದು.
ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ (RD) ಯೋಜನೆಯಲ್ಲಿ ವಾರ್ಷಿಕವಾಗಿ ಪ್ರಸ್ತುತ ಸುಮಾರು 6.7% ಬಡ್ಡಿಯನ್ನು ಪಡೆಯುತ್ತೀರಿ, ಇದು ಸ್ಥಿರ ಠೇವಣಿ ಮತ್ತು ಇತರ ಯೋಜನೆಗಳಿಗೆ ಹೋಲಿಸಿದರೆ ಆಕರ್ಷಕವಾಗಿದೆ. ಇದಲ್ಲದೇ ಪೋಸ್ಟ್ ಆಫೀಸ್ ರಿಕರಿಂಗ್ ಠೇವಣಿ (RD) ಯೋಜನೆಯಲ್ಲಿ ಕನಿಷ್ಠ 12 ಕಂತುಗಳನ್ನು ಠೇವಣಿ ಮಾಡಿದ ನಂತರ, ನಿಮ್ಮ ಠೇವಣಿ ಮೊತ್ತದ 50% ವರೆಗೆ ಸಾಲವನ್ನು ಪಡೆದುಕೊಳ್ಳುವ ಅವಕಾಶವೂ ಇದೆ.
ಒಂದು ವೇಳೆ ನೀವು ಹೂಡಿಕೆ ಮುಂದುವರಿಯಲು ಬಯಸಿದರೆ ಪೋಸ್ಟ್ ಆಫೀಸ್ ರಿಕರಿಂಗ್ ಠೇವಣಿ (RD) ಯೋಜನೆಯನ್ನು ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲು ಅವಕಾಶವಿದೆ.
ಅಕಾಲಿಕವಾಗಿ ಮುಚ್ಚುವ ಅವಕಾಶ
ಹೂಡಿಕೆಗೆ ಬೆಸ್ಟ್ ಎಂದು ಪರಿಗಣಿಸುಲಾದ ಈ ಯೋಜನೆಯಲ್ಲಿ, ಅನಿವಾರ್ಯತೆ ಬಂದ ಸಂದರ್ಭ ಖಾತೆಯನ್ನು 3 ವರ್ಷಗಳ ನಂತರ ಕೋಸ್ಲ್ ಮಾಡಬಹುದು. ಅಕಾಲಿಕವಾಗಿ ಮುಚ್ಚಿದ್ರೆ ಬಡ್ಡಿದರವು ಉಳಿತಾಯ ಖಾತೆಯ ಪ್ರಕಾರ ಇರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ತೆರಿಗೆ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು.
Disclaimer
The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications