ಕೇಂದ್ರ ಸರ್ಕಾರದ ನೌಕರರ ಚಿತ್ತ ಈಗ 8ನೇ ವೇತನ ಆಯೋಗದತ್ತ ನೆಟ್ಟಿದೆ. ಸಂಬಳ ಹೆಚ್ಚಳ, ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ಸೇರಿ ಹಲವು ಉಪಯೋಗಗಳು, ಈ ಆಯೋಗದಲ್ಲಿ ಬರುತ್ತವೆ. ಹೀಗಾಗಿ ಕೇಂದ್ರ ಸರ್ಕಾರದ ನೌಕರರು 8ನೇ ವೇತನ ಆಯೋಗ ಯಾವಾಗ ಜಾರಿಗೆ ಬರುತ್ತೆ ಎಂದು ಕಾದು ಕುಳಿತಿದ್ದಾರೆ ಇತ್ತೀಚೆಗಷ್ಟೇ ನೌಕರರು 18 ಪ್ರಶ್ನಾವಳಿಗೆ ಪ್ರಕ್ರಿಯೆ ಸಲ್ಲಿಸಲು ಅವಕಾಶ ನೀಡಿತ್ತು. ಅದಕ್ಕಾಗಿ ಮಾರ್ಚ್ 16ರ ವರೆಗೂ ಗಡುವು ನೀಡಿತ್ತು. ಆದರೆ ಈ ವಿಚಾರದಲ್ಲೀಗ ಮಹತ್ವದ ಕ್ರಮ ತೆಗೆದುಕೊಂಡಿದೆ.

ಹೌದು, 8ನೇ ವೇತನ ಆಯೋಗ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, 18 ಅಂಶಗಳ ಪ್ರಶ್ನಾವಳಿಗೆ ಪ್ರತಿಕ್ರಿಯೆ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಮೊದಲು ಈ ಗಡುವು ಮಾರ್ಚ್ 16, 2026ರವರೆಗೆ ಇತ್ತು. ಈಗ ಇದನ್ನು 15 ದಿನಗಳವರೆಗೆ ವಿಸ್ತರಿಸಿ ಮಾರ್ಚ್ 31, 2026ರವರೆಗೆ ಅವಕಾಶ ನೀಡಲಾಗಿದೆ. ಇದರ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಇತರ ಪಾಲುದಾರರಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹೆಚ್ಚುವರಿ ಸಮಯ ಸಿಕ್ಕಿದೆ.
ಈ ಪ್ರಶ್ನಾವಳಿಯ ಮೂಲಕ ಬಂದ ಸಲಹೆಗಳು 8ನೇ ವೇತನ ಆಯೋಗದ ಶಿಫಾರಸುಗಳನ್ನು ರೂಪಿಸುವಲ್ಲಿ ಉಪಯೋಗವಾಗಲಿವೆ. ವಿಶೇಷವಾಗಿ ವೇತನ ರಚನೆ, ಭತ್ಯೆಗಳು, ಪಿಂಚಣಿ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವಾಗ ಈ ಪ್ರತಿಕ್ರಿಯೆಗಳು ಗಮನಕ್ಕೆ ಬರಲಿವೆ. ಸರ್ಕಾರವು ಎಲ್ಲ ವರ್ಗದ ಪಾಲುದಾರರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದ್ದು, ಇದು ಮುಂದಿನ ನೀತಿ ರೂಪಣೆಗೆ ಸಹಾಯಕವಾಗಲಿದೆ.
ಪ್ರತಿಕ್ರಿಯೆಗಳನ್ನು ಕೇವಲ https://www.mygov.in/mygov-survey/8th-central-pay-commission-questionnaire/ಪೋರ್ಟಲ್ ಮೂಲಕವೇ ಸಲ್ಲಿಸಬೇಕು. ಪೇಪರ್ ಪ್ರತಿಗಳು, ಇಮೇಲ್ ಅಥವಾ ಪಿಡಿಎಫ್ ರೂಪದಲ್ಲಿನ ಉತ್ತರಗಳನ್ನು ಆಯೋಗ ಪರಿಗಣಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆಸಕ್ತರು MyGov ಪೋರ್ಟಲ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಬಳಸಿ ಲಾಗಿನ್ ಆಗಬೇಕು. ನಂತರ OTP ದೃಢೀಕರಣದ ಮೂಲಕ ಒಳನುಗ್ಗಿ 18 ಪ್ರಶ್ನೆಗಳಿಗೆ ಉತ್ತರಗಳನ್ನು ಸಲ್ಲಿಸಬಹುದು.
8ನೇ ವೇತನ ಆಯೋಗದ ಪ್ರಶ್ನಾವಳಿಯಲ್ಲಿ ಭಾಗವಹಿಸಬಹುದಾದವರಲ್ಲಿ ಸಚಿವಾಲಯಗಳು ಮತ್ತು ಇಲಾಖೆಗಳ ನೌಕರರು, ಕೇಂದ್ರಾಡಳಿತ ಪ್ರದೇಶಗಳ ನೌಕರರು, ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ನಿವೃತ್ತ ನೌಕರರು, ಪಿಂಚಣಿದಾರರು, ಸಂಶೋಧಕರು, ಶಿಕ್ಷಣ ತಜ್ಞರು, ಸಂಘಗಳು ಮತ್ತು ಅಧಿಕೃತ ನೋಡಲ್ ಅಧಿಕಾರಿಗಳು ಸೇರಿದ್ದಾರೆ. ಈ ವ್ಯಾಪಕ ಭಾಗವಹಿಸುವಿಕೆ ಮೂಲಕ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡಲಾಗಿದೆ.
ಪ್ರತಿಕ್ರಿಯೆ ಸಲ್ಲಿಸುವವರಿಗೆ ಇನ್ನೊಂದು ಭರವಸೆ ನೀಡಲಾಗಿದೆ. ಪ್ರಶ್ನಾವಳಿಗೆ ಉತ್ತರ ನೀಡುವವರ ಹೆಸರುಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಬಂದ ಪ್ರತಿಕ್ರಿಯೆಗಳನ್ನು ಒಟ್ಟಾರೆ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ. ಇದರಿಂದ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.
8ನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರ ಜನವರಿ 2025ರಲ್ಲಿ ಘೋಷಿಸಿತ್ತು. ಬಳಿಕ ಹಣಕಾಸು ಸಚಿವಾಲಯವು ಅದನ್ನು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿತು. ಆಯೋಗಕ್ಕೆ ಉಲ್ಲೇಖದ ನಿಯಮಗಳನ್ನು ಸರ್ಕಾರ ಈಗಾಗಲೇ ಅನುಮೋದಿಸಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ, ಪಿಂಚಣಿ ಹಾಗೂ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದ ಶಿಫಾರಸುಗಳನ್ನು ಸಲ್ಲಿಸಲು 18 ತಿಂಗಳ ಅವಧಿ ನೀಡಲಾಗಿದೆ.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)
More From GoodReturns

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ

Tumkur Railway: ತುಮಕೂರಿನ ಈ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿ; ಸುಮಾರು 25 ರೈಲುಗಳ ಸಂಚಾರ ವ್ಯತ್ಯಯ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

New Income Tax: ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ

Indian Railways: ತುಮಕೂರು ಪ್ರಯಾಣಿಕರೇ ಇಲ್ಲಿ ಗಮನಿಸಿ; ಇನ್ನೆರಡು ದಿನ ಈ ರೈಲುಗಳ ಸಂಚಾರ ರದ್ದು



Click it and Unblock the Notifications