ತಳ್ಳುಗಾಡಿಗಳ ಮೂಲಕ ಉತ್ಪನ್ನ ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು ಭಾರತದ ಶ್ರೀಮಂತ ಉದ್ಯಮಿ

ಬೆಂಗಳೂರು, ಜನವರಿ 17: ಕೆಲವು ಜನರಿಗೆ ಕಷ್ಟಗಳು ಬರುವುದಿಲ್ಲ, ಆದರೆ ಅವರು ಹುಟ್ಟುವುದೇ ಕಷ್ಟಗಳ ಕೂಪದಲ್ಲಿ. ಹೀಗಾಗಿ ಜೀವನದ ಬಗ್ಗೆ ನಂಬಿಕೆಯನ್ನು ಬೆಳೆಸುತ್ತಾ , ನಿರಂತರವಾಗಿ ಶ್ರಮಿಸುತ್ತಾರೆ. ಇದೇ ರೀತಿ ದೃಢಸಂಕಲ್ಪ, ಕಠಿಣ ಪರಿಶ್ರಮ ಮತ್ತು ಸ್ಥಿರತೆಯ ಮೇಲಿನ ನಮ್ಮ ನಂಬಿಕೆಯನ್ನು ಬಲಪಡಿಸುವ ಒಂದು ಸ್ಪೂರ್ತಿದಾಯ ಕಥೆ ನಿಮಗಾಗಿ.

ಇಂದು ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್‌ನ ಅಧ್ಯಕ್ಷರಾಗಿರುವ 74 ವರ್ಷದ ಆರ್‌ಜಿ ಚಂದ್ರಮೊಗನ್, ಒಂದು ಕಾಲದ ಕಾಲೇಜ್ ಡ್ರಾಪ್‌ಔಟ್ ವಿದ್ಯಾರ್ಥಿಯಾಗಿದ್ದು, ತಳ್ಳುಗಾಡಿಗಳ ಮೂಲಕ ಐಸ್‌ಕ್ರೀಂ ಮಾರಾಟ ಮಾಡಿ ಇಂದು ಭಾರತದ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ.

ತಳ್ಳುಗಾಡಿಗಳ ವ್ಯಾಪಾರಿ ಈಗ ಭಾರತದ ಶ್ರೀಮಂತ ಉದ್ಯಮಿ

ಚೆನ್ನೈ ಮೂಲದವರಾಗಿರುವ ಉದ್ಯಮಿ ಚಂದ್ರಮೊಗನ್ ಅವರನ್ನು ತಮ್ಮ ಉತ್ಪನ್ನಗಳ ಮಾರಾಟದ ವಿಷಯದ ಸಂಖ್ಯೆಗಳ ಜ್ಞಾನಕ್ಕಾಗಿ ಕೆಲವರು ಅವರನ್ನು ಮಾನವ-ಕಂಪ್ಯೂಟರ್ ಎಂದೇ ಕರೆದಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ ಅವರು ಗಣಿತ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಕೇವಲ 21ನೇ ವಯಸ್ಸಿನಲ್ಲಿ ವ್ಯವಹಾರ ಜಗತ್ತಿಗೆ ಕಾಲಿರಿಸಬೇಕಾಯಿತು.

ಚಂದ್ರಮೊಗನ್ ಅವರ ತಂದೆ ಸಣ್ಣ ಪ್ರಾವಿಷನ್ ಅಂಗಡಿಯನ್ನು ನಿರ್ವಹಿಸುತ್ತಿದ್ದರು. ಚಂದ್ರಮೊಗನ್ ಟಿಂಬರ್ ಡಿಪೋದಲ್ಲಿ 65 ರೂಪಾಯಿ ಸಂಬಳದ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅದರ ಮುಂದಿನ ವರ್ಷವೇ ಅಂದರೆ 1970 ರಲ್ಲಿಯೇ ಅವರು ಕೆಲಸವನ್ನು ತ್ಯಜಿಸಿ 250 ಚದರ ಅಡಿ ಕೊಠಡಿಯಲ್ಲಿ ಕೇವಲ ಮೂರು ಕಾರ್ಮಿಕರೊಂದಿಗೆ ಐಸ್ ಕ್ರೀಮ್ ವ್ಯಾಪಾರವನ್ನು ಆರಂಭಿಸಲು ಯೋಜಿಸಿದರು. ಇದಕ್ಕಾಗಿ ಅವರು ತಮ್ಮ ಕುಟುಂಬದ ಆಸ್ತಿಯನ್ನು ಕೇವಲ 13,000 ರೂ. ಗೆ ಮಾರಾಟ ಮಾಡಿ ಐಸ್ ಕ್ರೀಮ್ ಮಾರಾಟ ವ್ಯಾಪಾರ 15 ತಳ್ಳುಗಾಡಿಗಳ ಮೂಲಕ ಮಾಡಿದರು.

ಆರಂಭದ ಕೆಲವು ತಿಂಗಳುಗಳಲ್ಲಿ ಕಂಪನಿಯ ಅಸ್ತಿತ್ವಕ್ಕಾಗಿ ಹರಸಾಹಸ ಪಡಬೇಕಾಯಿತು. ಆದರೆ ಮೊದಲ ವರ್ಷದಲ್ಲಿಯೇ 1.5 ಲಕ್ಷ ರೂ. ಗಳಿಗಿಂತ ಹೆಚ್ಚಿನ ಗಳಿಕೆಯೂ ಅವರಿಗೆ ಈ ಉದ್ಯಮದಲ್ಲೇ ಮುಂದುವರಿಯುವ ಉತ್ತೇಜನ ನೀಡಿತು.

1981 ರಲ್ಲಿ ಅಷ್ಟೇನೂ ಅಭಿವೃದ್ದಿ ಕಾಣದೇ ಸಣ್ಣ ವ್ಯಾಪಾರವಾಗಿಯೇ ಇದ್ದ ಚಂದ್ರಮೊಗನ್ ಅವರ ಉದ್ಯಮವು, ಸಣ್ಣ ಪಟ್ಟಣಗಳಿಗೆ ಐಸ್ ಕ್ರೀಮ್ ಗಳ ಸೇವೆಯನ್ನು ಕೊಟ್ಟಾಗ, ಅವರ ಉದ್ಯಮದಲ್ಲಿ ಬದಲಾವಣೆಯ ಮಹತ್ವದ ತಿರುವು ದೊರಕಿತು

ದೊಡ್ಡ ದೊಡ್ಡ ಬ್ರಾಂಡ್‌ಗಳಿಂದ ನಿರ್ಲಕ್ಷಕ್ಕೆ ಒಳಗಾದ ಮಾರುಕಟ್ಟೆಯನ್ನು ತಲುಪುವ ಮಾಡುವ ಮೂಲಕ, ಚಂದ್ರಮೊಗನ್ ತಮ್ಮ 'ಅರುಣ್' ಐಸ್ ಕ್ರೀಮ್ ಬ್ರ್ಯಾಂಡ್ ಅನ್ನು ತಮಿಳುನಾಡಿನಲ್ಲಿ ಮಾರುಕಟ್ಟೆ ದೈತ್ಯನಾಗಿ ಸ್ಥಾಪಿಸುವಲ್ಲಿ ಯಶಸ್ವಿಯಾದರು. 1986 ರಲ್ಲಿ, ಅವರು ತಮ್ಮ ಬ್ರ್ಯಾಂಡ್‌ನ ಹೆಸರನ್ನು ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ ಆಗಿ ಬದಲಾಯಿಸಿದರು.

ಪ್ರಸ್ತುತ, ಭಾರತದ ಅತಿದೊಡ್ಡ ಖಾಸಗಿ ಡೈರಿ ಕಂಪನಿಗಳಲ್ಲಿ ಒಂದಾದ ಹ್ಯಾಟ್ಸನ್ ಪ್ರತಿದಿನ 10,000 ಹಳ್ಳಿಗಳಲ್ಲಿ 4 ಲಕ್ಷ ರೈತರಿಂದ ಹಾಲನ್ನು ಸಂಗ್ರಹಿಸುತ್ತದೆ. ಹೀಗೆ ತೀರಾ ಕೆಳ ಮಟ್ಟದಿಂದ ಬೃಹತ್ ಉದ್ಯಮವಾಗಿ ಬೆಳೆದು ನಿಂತ ಹಾಟ್ಸನ್ ಆಗ್ರೋ ಪ್ರಾಡಕ್ಟ್ ಇಂದು 20,000 ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ.

2024 ರ ಜನವರಿಯ ಮೊದಲ ವಾರದಲ್ಲಿ ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ 25,527 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಚಂದ್ರಮೋಗನ್ ಅವರು ಇದನ್ನು ಈಗ ವ್ಯವಸ್ಥಾಪಕ ನಿರ್ದೇಶಕರಾದ ಅವರ ಮಗ ಸಿ ಸತ್ಯನ್ ಅವರ ಸಹಾಯದಿಂದ ನಡೆಸುತ್ತಿದ್ದಾರೆ. ಫೋರ್ಬ್ಸ್ ರಿಚ್ ಲಿಸ್ಟ್ ಪಟ್ಟಿಯ ಪ್ರಕಾರ ಚಂದ್ರಮೊಗನ್ ಅವರ ನಿವ್ವಳ ಮೌಲ್ಯವು 13,000 ಕೋಟಿ ರೂ . ($ 1.7 ಬಿಲಿಯನ್) ಆಗಿದೆ. ಇಂದು ಅವರ ಕಂಪನಿಯ ಡೈರಿ ಉತ್ಪನ್ನಗಳನ್ನು 42 ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೀಗೆ, ಎಲ್ಲಿಂದಲೋ ಆರಂಭಿಸಿ ಇಂದು ದೇಶದ ಅತಿದೊಡ್ಡ ಖಾಸಗಿ ಡೈರಿ ಕಂಪನಿಯಾಗಿ ಬೆಳೆದು ನಿಂತ, ಯಶಸ್ಸಿಗೆ ನಿರಂತರತೆ, ಉತ್ಸಾಹ ಮತ್ತು ಸಮರ್ಪಣೆಯೇ ಎಂದು ಚಂದ್ರಮೊಗನ್ ಸಾಬೀತುಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+