ನವದೆಹಲಿ, ಜನವರಿ 15: ಭಾರತದಲ್ಲಿ ಮತ್ತು ಭಾರತದ ಮೂಲದ ಅನೇಕ ಬಿಲಿಯನೇರ್ ಗಳು ಯಶಸ್ಸಿನ ಕಥೆಗಳು ನಿರ್ಮಾಣವಾಗಿರುವುದು ಅವರ ಉತ್ಸಾಹ, ಕಠಿಣ ಪರಿಶ್ರಮ ಮತ್ತುಅವರಲ್ಲಿದ್ದ ಮಹತ್ವಾಕಾಂಕ್ಷೆಯಿಂದ. ಅವರು ಶತಕೋಟ್ಯಾಧಿಪತಿಗಳಾಗಲು ಉದ್ದೇಶಿಸದಿದ್ದರೂ, ಅವರ ಶ್ರಮ ಅವರನ್ನು ಸಾಧನೆಯ ಶಿಖರವೇರುವಂತೆ ಮಾಡಿದೆ. ಅವರಿಗೆ ಅಗಾಧ ಸಂಪತ್ತನ್ನು ತಂದುಕೊಟ್ಟಿದೆ.
ಈ ಲೇಖನದಲ್ಲಿ ಎಂದಿಗೂ ಬಹು-ಶತಕೋಟಿ ಡಾಲರ್ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸುವ ಕನಸು ಕಾಣದೆ ಕಠಿಣ ಪರಿಶ್ರಮದಿಂದ ಮುಂದೆ ಸಾಗಿದ ಓರ್ವ ಉದ್ಯಮಿಯ ಕುರಿತು ವಿವರಿಸುತ್ತೇವೆ. ಅವರು ಇಂದು 20,200 ಕೋಟಿ ರೂ. ಮಾರುಕಟ್ಟೆ ಕ್ಯಾಪ್ ಹೊಂದಿರುವ ಹೆಲ್ತ್‌ಕೇರ್ ದೈತ್ಯನ ನಿರ್ಮಾತೃ ಆಗಿದ್ದಾರೆ. ಅವರೇ ಡಾ ಆಜಾದ್ ಮೂಪೆನ್. ಅವರು ಓರ್ವ ವೈದ್ಯ, ಉದ್ಯಮಿ ಮತ್ತು ಲೋಕೋಪಕಾರಿ. ಆಸ್ಟರ್ ಡಿಎಂ ಹೆಲ್ತ್‌ಕೇರ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ.

70 ವರ್ಷದವರಾಗಿರುವ ಡಾ ಮೂಪೆನ್ ಅವರು, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ನಾಯಕ ದಿವಂಗತ ಎಂಎ ಮೂಪೆನ್ ಅವರ ಪುತ್ರ. ಮೂಪೆನ್ ಅವರು ತಮ್ಮ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದ ದಿನಗಳಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ಸ್ಥಳೀಯ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ MBBS ಮತ್ತು MD ಪದವಿ ಪಡೆದ ಅವರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಚಾರಿಟಿಗಾಗಿ ಯುಎಇಗೆ ಪ್ರಯಾಣ ಮಾಡಬೇಕಾದ ಒಂದು ಒಂದು ಅವಕಾಶ ಅವರ ಜೀವನದ ಪಥವನ್ನು ಬದಲಾಯಿಸಿತು.
ಡಾ ಮೂಪೆನ್ ಮೊದಲ ಬಾರಿಗೆ ಗಲ್ಫ್‌ಗೆ ಬಂದಿಳಿದಿದ್ದು 1980 ರ ದಶಕದಲ್ಲಿ. ಮಸೀದಿಯ ನವೀಕರಣಕ್ಕಾಗಿ ಹಣವನ್ನು ಸಂಗ್ರಹಿಸಲು ಅವರು ಗಲ್ಫ್ ಗೆ ತೆರಳಿದ್ದರು. ಒಂದು ಒಳ್ಳೆಯ ಉದ್ದೇಶಕ್ಕಾಗಿ ಅವರು ಭಾರತಕ್ಕೆ ಮರಳಬೇಕಿತ್ತು. ಆದರೆ ಅಲ್ಲಿದ್ದ ಅವರ ಸ್ನೇಹಿತ ಮತ್ತು ಕಾಲೇಜಿನ ಸೀನಿಯರ್ ಅವರನ್ನು ದುಬೈನಲ್ಲಿಯೇ ಉಳಿಯುವಂತೆ ಮನವೊಲಿಸಲು ಯಶಸ್ವಿಯಾದರು.
ಎರಡು ಬೆಡ್‌ರೂಮ್ ಫ್ಲಾಟ್‌ನಲ್ಲಿ ಒಂದು ಪುಟ್ಟ ಕ್ಲಿನಿಕ್ ತೆರೆದು ಸಾಮಾನ್ಯ ವೈದ್ಯರಾಗಿ ಸೇವೆ ಸಲ್ಲಿಸಲು ಆರಂಭಿಸಿದರು. ಗಲ್ಫ್‌ನಲ್ಲಿದ್ದ ಆರೋಗ್ಯ ಕ್ಷೇತ್ರದ ಕೊರತೆಯನ್ನು ತುಂಬಲು 12 ಗಂಟೆಗಳಿಗೂ ಹೆಚ್ಚು ವೈದ್ಯರಾಗಿ ಸೇವೆ ಸಲ್ಲಿಸುತ್ತಾ ಅವರು ಹಲವಾರು ಕ್ಲಿನಿಕ್‌ಗಳು, ಔಷಧಾಲಯಗಳು(pharmacies) ಮತ್ತು ಆಸ್ಪತ್ರೆಗಳನ್ನು ಒಂದೊಂದಾಗಿ ತೆರೆದರು. ಅವರು 2000 ರ ದಶಕದ ಆರಂಭದಲ್ಲಿ ತಮ್ಮ ವ್ಯವಹಾರ ತುಂಬಾ ದೊಡ್ಡದಾಗಿ್ ಬೆಳೆದು ನಿಂತ ಕಾರಣ ವೈದ್ಯರಾಗಿ ತಮ್ಮ ಕರ್ತವ್ಯಗಳನ್ನು ಮುಂದುವರಿಸಿವುದು ಕಷ್ಟಸಾಧ್ಯವಾಗಬಹುದು ಎಂದು ಅವರಿಗೆ ಮನವರಿಕೆಯಾಗಿತ್ತು.
ಡಾ ಮೂಪೆನ್ ತನ್ನ ವ್ಯಾಪಾರ ಸಾಮ್ರಾಜ್ಯದ ಬೃಹತ್ ಮೌಲ್ಯವನ್ನು ಅರಿತುಕೊಂಡಿದ್ದರಿಂದ 2008 ಒಂದು ಮಹತ್ವದ ತಿರುವು ದೊರಕಿ ಒಂದು ಖಾಸಗಿ ಈಕ್ವಿಟಿ ಸಂಸ್ಥೆಯು ಅವರ ಕಂಪನಿಯನ್ನು $100 ಮಿಲಿಯನ್‌ಗೆ ಮೌಲ್ಯೀಕರಿಸಿತು. ನಂತರ ಕೇವಲ 4 ವರ್ಷಗಳಲ್ಲಿ ಅಂದರೆ 2012 ರಲ್ಲಿ $ 400 ಮಿಲಿಯನ್ ಮೌಲ್ಯವನ್ನು ಹೊಂದಿತು.
ಡಾ ಮೂಪೆನ್ ಅವರ ಭಾರತದಲ್ಲಿನ ಮತ್ತು ಗಲ್ಫ್ ನ ವ್ಯವಹಾರಗಳು ಈಗ ಪರಸ್ಪರ ಸಂಬಂಧವಿಲ್ಲದೇ ಪ್ರತ್ಯೇಕವಾಗಿದೆ. ಇಂದು ಇವರ ಕಂಪನಿಯು ಸುಮಾರು 20 ಆಸ್ಪತ್ರೆಗಳು, 90 ಕ್ಲಿನಿಕ್‌ಗಳು ಮತ್ತು 200 ಔಷಧಾಲಯಗಳನ್ನು ನಡೆಸುತ್ತಿದ್ದು, ಪ್ರತಿ ವರ್ಷ ಸುಮಾರು 2 ಕೋಟಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. 9,000 ಕೋಟಿ ($1.1 ಬಿಲಿಯನ್) ನಿವ್ವಳ ಮೌಲ್ಯವನ್ನು ಹೊಂದಿರುವ ಡಾ ಮೂಪೆನ್ ಇಂದು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗ ಹೊರಹೊಮ್ಮಿದ್ದಾರೆ.
More From GoodReturns

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

T20 World Cup: ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಗೆಲುವು...ತಂಡಕ್ಕೆ ಸಿಕ್ಕ ಬಹುಮಾನಗಳೇನು?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications