ಎಸ್‌ಬಿಐ ಕ್ರೆಡಿಟ್ ಕಾರ್ಡ್ (SBI Credit Card) ಬಳಕೆದಾರರು ಓದಲೇಬೇಕಾದ ಸುದ್ದಿ. ಎಸ್‌ಬಿಐ ಕಾರ್ಡ್ ತನ್ನ ಸೇವಾ ಶುಲ್ಕ ಮತ್ತು ಇತರೆ ಶುಲ್ಕಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಗ್ರಾಹಕರು ಈ ಸುದ್ದಿ ಓದಲೇಬೇಕು. ಈ ಹೊಸ ನಿಯಮಗಳು ನವೆಂಬರ್ 1, 2025 ರಿಂದ ಜಾರಿಗೆ ಬರಲಿವೆ ಎನ್ನಲಾಗಿದೆ. ಶಿಕ್ಷಣ ಶುಲ್ಕ ಪಾವತಿ, ವಾಲೆಟ್ ಲೋಡ್ ಮತ್ತು ಕಾರ್ಡ್ ಬದಲಿ ಸೇರಿದಂತೆ ಕೆಲವು ವಹಿವಾಟುಗಳಿಗೆ ಈ ಹೊಸ ಶುಲ್ಕಗಳು ಅನ್ವಯವಾಗಲಿದೆ.

ಶಿಕ್ಷಣ ಶುಲ್ಕ ಪಾವತಿಗಳಿಗೆ: ಮೂರನೇ ವ್ಯಕ್ತಿಯ ಅಪ್ಲಿಕೇಶನ್, ಕಾರ್ಡ್ ಮೂಲಕ ಶಾಲಾ ಅಥವಾ ಕಾಲೇಜು ಶುಲ್ಕ ಪಾವತಿಸಿದರೆ, ವ್ಯವಹಾರದ ಮೊತ್ತದ ಮೇಲೆ ಶೇ.1 ರಷ್ಟು ಶುಲ್ಕ ವಿಧಿಸಲಾಗುತ್ತದೆ. ಆದಾಗ್ಯೂ, ಶಾಲಾ-ಕಾಲೇಜು ಅಥವಾ ವಿಶ್ವವಿದ್ಯಾಲಯದ ವೆಬ್‌ಸೈಟ್ ಅಥವಾ ಪಿಒಎಸ್ (POS) ಯಂತ್ರದ ಮೂಲಕ ಪೇಮೆಂಟ್ ಮಾಡಿದರೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ ಎಂದು ಎಸ್‌ಬಿಐ ಕಾರ್ಡ್ ಸ್ಪಷ್ಟನೆ ನೀಡಿದೆ.
ವ್ಯಾಲೆಟ್ ಲೋಡ್ ಶುಲ್ಕಗಳು: ನಿಮ್ಮ ವ್ಯಾಲೆಟ್‌ಗೆ 1,000 ರೂ. ಗಿಂತ ಹೆಚ್ಚು ಲೋಡ್ ಮಾಡಿದರೆ, ಶೇ.1 ರಷ್ಟು ಶುಲ್ಕ ಅನ್ವಯವಾಗುತ್ತದೆ. ಈ ಶುಲ್ಕವು ಕೆಲವು ವ್ಯಾಪಾರಿ ಕೋಡ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.
ಇತರೆ ಶುಲ್ಕಗಳು: ಎಸ್‌ಬಿಐ ಕಾರ್ಡ್ ತನ್ನ ಕೆಲವು ಹಳೆಯ ಶುಲ್ಕಗಳನ್ನು ಹಿಂದಿನಂತೆಯೇ ಮುಂದುವರೆಸಿದೆ. ಇವುಗಳಲ್ಲಿ ನಗದು ಪಾವತಿ, ಚೆಕ್ ಪಾವತಿ, ಕಾರ್ಡ್ ಬದಲಿ ಮತ್ತು ಲೇಟ್ ಪೇಮೆಂಟ್ ಫೀಸ್‌ಗಳು ಸಹ ಸೇರಿವೆ.
ನಗದು ಪಾವತಿ ಶುಲ್ಕ: ₹250
ನಗದು ಮುಂಗಡ ಶುಲ್ಕ: ವ್ಯವಹಾರದ ಶೇ.2.5% (ಕನಿಷ್ಠ ₹500)
ಕಾರ್ಡ್ ಬದಲಿ ಶುಲ್ಕ: ₹100 ರಿಂದ ₹250 (ಆರಮ್ ಕಾರ್ಡ್‌ಗಳಿಗೆ ₹1,500)
ಪಾವತಿ ತಿರಸ್ಕಾರ ಶುಲ್ಕ: ಪಾವತಿ ಮೊತ್ತದ ಶೇ.2% (ಕನಿಷ್ಠ ₹500)
ಚೆಕ್ ಪಾವತಿ ಶುಲ್ಕ: ₹200
ವಿದೇಶದಲ್ಲಿ ತುರ್ತು ಕಾರ್ಡ್ ಬದಲಿ: ವೀಸಾ ಕಾರ್ಡ್‌ಗಳಿಗೆ $175 ಮತ್ತು ಮಾಸ್ಟರ್‌ಕಾರ್ಡ್‌ಗಳಿಗೆ $148
ತಡವಾದ ಪಾವತಿ ಶುಲ್ಕಗಳು: ಕನಿಷ್ಠ ಪಾವತಿಸಬೇಕಾದ ಮೊತ್ತವನ್ನು (MAD) ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ, ಎಸ್‌ಬಿಐ ಕಾರ್ಡ್ ಈ ಕೆಳಗಿನಂತೆ ತಡವಾದ ಶುಲ್ಕಗಳನ್ನು ವಿಧಿಸುತ್ತದೆ:
₹0 - ₹500: ಯಾವುದೇ ಶುಲ್ಕವಿಲ್ಲ
₹500 - ₹1,000: ₹400
₹1,000 - ₹10,000: ₹750
₹10,000 - ₹25,000: ₹950
₹25,000 - ₹50,000: ₹1,100
₹50,000 ಕ್ಕಿಂತ ಹೆಚ್ಚು: ₹1,300
ಎರಡು ಸತತ ಬಿಲ್ಲಿಂಗ್ ಸೈಕಲ್‌ಗಳಿಗೆ ಕನಿಷ್ಠ ಮೊತ್ತವನ್ನು (MAD) ಪಾವತಿಸದಿದ್ದರೆ, ಹೆಚ್ಚುವರಿ ₹100 ಲೇಟ್ ಪೇಮೆಂಟ್ ಫೀಸ್ ವಿಧಿಸಲಾಗುತ್ತದೆ. ಈ ಶುಲ್ಕ ಬದಲಾವಣೆಗಳಿಂದ ವ್ಯವಹಾರದಲ್ಲಿ ಯಾವುದೇ ದೋಷಗಳಾಗುವುದಿಲ್ಲ ಮತ್ತು ಯಾವ ವ್ಯವಹಾರಗಳಿಗೆ ಶುಲ್ಕ ಅನ್ವಯವಾಗುತ್ತದೆ ಎಂಬುದರ ಕುರಿತು ಕಾರ್ಡ್ ಬಳಕೆದಾರರಿಗೆ ಉತ್ತಮ ಮಾಹಿತಿ ನೀಡುತ್ತವೆ ಎಂದು ಎಸ್‌ಬಿಐ ಕಾರ್ಡ್ ತಿಳಿಸಿದೆ.
ಅಷ್ಟೇ ಅಲ್ಲದೇ, ಅನಗತ್ಯ ಶುಲ್ಕಗಳು ಅಥವಾ ಬಡ್ಡಿಯನ್ನು ತಪ್ಪಿಸಲು ಬಳಕೆದಾರರು ತಮ್ಮ ಕಾರ್ಡ್‌ಗಳನ್ನು ಎಚ್ಚರಿಕೆಯಿಂದ ಬಳಸಬೇಕು ಮತ್ತು ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ಮಾಡುವುದು ಉತ್ತಮ. ಆದ್ದರಿಂದ ನವೆಂಬರ್ 1, 2025 ರಿಂದ, ಎಸ್‌ಬಿಐ ಕಾರ್ಡ್ ಬಳಕೆದಾರರು ಕೆಲವು ಪೇಮೆಂಟ್‌ಗಳ ಮೇಲೆ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಆದರೆ ಮುಂದಿನ ಪೇಮೆಂಟ್‌ನಲ್ಲಿ ನಿಮ್ಮ ಶುಲ್ಕದ ಮಾಹಿತಿ ತಿಳಿದುಕೊಳ್ಳುವುದು ಮುಖ್ಯ.


Click it and Unblock the Notifications