ಹಿಂದೂ ಧರ್ಮದಲ್ಲಿ (Hindu) ಯುಗಾದಿ ಹಬ್ಬಕ್ಕೆ (Ugadi Festival) ಬಹಳ ಪ್ರಾಧಾನ್ಯತೆ ನೀಡಲಾಗುತ್ತದೆ. ಯುಗಾದಿ ಹಬ್ಬ ಹಿಂದೂಗಳಿಗೆ ಹೊಸ ವರ್ಷ. ಇದು ಸಂವತ್ಸರ ಬದಲಾಗುವ ಸಮಯವಾಗಿದ್ದು, ಪ್ರತೀ ವರ್ಷ ಯುಗಾದಿಯಿಂದ ಹೊಸ ಸಂವತ್ಸರದಿಂದ ಆರಂಭವಾಗುತ್ತದೆ. ಅದೇ ರೀತಿ ಈ ವರ್ಷ ವಿಶ್ವಾವಸು ಸಂವತ್ಸರ ಮುಗಿದು, ಪರಾಭವನಾಮ ಸಂವತ್ಸರ ಆರಂಭವಾಗಲಿದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಮಾತ್ರ ಜನವರಿ 1 ರಂದು ಹೊಸ ವರ್ಷ ಅಂದುಕೊಂಡರೆ, ಯುಗಾದಿಯಂದು ಸಿಹಿ ಹಂಚಿ, ಹೊಸ ವರ್ಷ, ಹಬ್ಬವನ್ನು ಧಾರ್ಮಿಕ ನಂಬಿಕೆಗಳೊಂದಿಗೆ ಆಚರಿಸಲಾಗುತ್ತದೆ.

ಇನ್ನು ಈ ವರ್ಷದ ಯುಗಾದಿಯಿಂದ ಹಲವು ರಾಶಿಯವರಿಗೆ ಸಂಪತ್ತು ವೃದ್ಧಿಸಲಿದೆ. ಅದರಲ್ಲೂ ಒಂದು ರಾಶಿಯವರ ಅದೃಷ್ಟವೇ ಬದಲಾಗಲಿದೆ. ಹಾಗಿದ್ರೆ ಆ ರಾಶಿ ಯಾವುದು? ಯುಗಾದಿಯಿಂದ ಅವರ ಮೇಲಾಗುವ ಪರಿಣಾಮಗಳೇನು? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಈ ರಾಶಿಯವರಿಗೆ ಒಲಿದು ಬಂತು ಅದೃಷ್ಟ!
ಹಲವು ವರದಿಗಳ ಪ್ರಕಾರ, ಈ ಬಾರಿಯ ಹೊಸ ಸಂವತ್ಸರವಾದ ಪರಾಭವನಾಮದಿಂದಾಗಿ ಮೇಷ ರಾಶಿಯವರಿಗೆ ಅದೃಷ್ಟವೇ ಬದಲಾಗಲಿದೆ. ಅಂದರೆ ಆರ್ಥಿಕವಾಗಿ ಒಳ್ಳೆಯದಾಗಲಿದ್ದು, ಹೊಸ ವ್ಯಾಪಾರ ಮತ್ತು ಆಸ್ತಿ ಪಡೆಯುವ ಯೋಗ ಬರಲಿದೆ. ಆದರೆ ಆರೋಗ್ಯ, ಸಂಬಂಧದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಲಾಗಿದೆ. ಮೇಷ ರಾಶಿಯ ಅಧಿಪತಿ ಕುಜನು ರಾಜ ಮತ್ತು ಮಂತ್ರಿಯಾಗಿರುವುದರಿಂದ ಸಾಕಷ್ಟು ಅದೃಷ್ಟಗಳು ಒಲಿಯಲಿದೆ ಎಂದು ಹೇಳಲಾಗಿದೆ.
ಆರ್ಥಿಕ ಮತ್ತು ಆಸ್ತಿ ಭಾಗ್ಯ:
ರಾಹುವಿನ ಸಹಾಯದಿಂದ ಆಕಸ್ಮಿಕ ಧನಲಾಭ, ಹೊಸ ಸಂಬಂಧಗಳು, ವಿದೇಶ ಪ್ರಯಾಣದ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಅಲ್ಲದೇ ದೀಪಾವಳಿ ನಂತರ ಹೊಸ ಮನೆ ಅಥವಾ ಭೂಮಿ ಖರೀದಿ, ಮನೆ ನಿರ್ಮಾಣ ಯೋಗವೂ ಬರಲಿದೆ ಎನ್ನಲಾಗಿದೆ. ಗುರು ಗ್ರಹವು ಜೂನ್ 2026 ರ ನಂತರ ಕಟಕ ರಾಶಿಗೆ ಪ್ರವೇಶಿಸುವುದರಿಂದ, ಆಸ್ತಿ, ವಾಹನ ಖರೀದಿ ಮುಂತಾದ ಅವಕಾಶಗಳು ಕೂಡಿ ಬರಲಿದೆ.
ಉದ್ಯೋಗ ಮತ್ತು ಕುಟುಂಬ:
ಕುಟುಂಬದಲ್ಲಿ ಸಂತೋಷ, ಸಂತಾನ ಪ್ರಾಪ್ತಿ ಯೋಗ ಬರುವ ಸಾಧ್ಯತೆ ಇದೆ. ಅಲ್ಲದೇ ಪ್ರೀತಿ ಮತ್ತು ವಿವಾಹ ಜೀವನದಲ್ಲಿ ಸುಧಾರಿಸಲಿದ್ದು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಮತ್ತು ಉತ್ತಮ ಫಲಿತಾಂಶ ಸಿಗಲಿದೆ ಎನ್ನಲಾಗಿದೆ.
ಆರೋಗ್ಯದಲ್ಲಿ ಸಮಸ್ಯೆ:
ಅಷ್ಟೆಲ್ಲಾ ಧನಾತ್ಮಕ ಫಲಿತಾಂಶಗಳಿದ್ದರೂ, ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ತಲೆನೋವು, ಹೊಟ್ಟೆನೋವು, ಮೂಳೆ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ದರಿಂದ ಮಾನಸಿಕವಾಗಿ ಸದೃಢರಾಗಿರಲು ಪ್ರಯತ್ನಿಸಿದರೆ, ಯಾವುದೇ ಸಮಸ್ಯೆಯನ್ನು ತಡೆಯಬಹುದು ಎನ್ನಲಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications