ಹೆಚ್ಚಿನವರಿಗೆ ತಾವು ದುಡಿದ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಬೇಕು, ಸೇವಿಂಗ್ಸ್ ಮಾಡಬೇಕು ಎಂಬ ಆಸೆಗಳಿರುತ್ತದೆ. ಅಲ್ಲದೇ ಅದಕ್ಕಾಗಿ ಪೋಸ್ಟ್ ಆಫೀಸ್ (Post Office), ಬ್ಯಾಂಕ್, ಸ್ಟಾಕ್ ಮಾರ್ಕೆಟ್ ಹೀಗೆ ಹಲವು ದಾರಿಗಳಿವೆ. ಪ್ರಸ್ತುತ ಎಲ್ಲವೂ ಡಿಜಿಟಲ್‌ಮಯವಾಗಿದೆ. ಏನು ಬೇಕೆಂದರೂ, ಏನು ಕೇಳಬೇಕೆಂದರೂ ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದ್ರೆ ಸಾಕು, ಕ್ಷಣಮಾತ್ರದಲ್ಲಿ ಎಲ್ಲಾ ಮಾಹಿತಿ ಸಿಗುತ್ತೆ.

ಅದರಲ್ಲೂ ಎಐ (AI) ಬಂದ ನಂತರ, ಮಾನವರ ಕೆಲಸವೇ ಮತ್ತಷ್ಟು ಸುಲಭವಾಗಿಬಿಟ್ಟಿದೆ. ಕಂಟೆಂಟ್ ರೈಟಿಂಗ್‌ನಿಂದ ಹಿಡಿದು, ಫೋಟೋ, ವಿಡಿಯೋ ಎಡಿಟ್ ಮಾಡುವವರೆಗೂ ಎಲ್ಲವೂ ಈ ಎಐ ಮೂಲಕ ಪಡೆಯಬಹುದು. ಪ್ರಸ್ತುತ ವೈಯಕ್ತಿಕ ಹಣಕಾಸು ಸಲಹೆಗಾಗಿ Grok, ChatGPT ಮತ್ತು Gemini ಯಂತಹ ಕೃತಕ ಬುದ್ಧಿಮತ್ತೆ (AI) ಸಾಧನಗಳು ಈಗ ಹೆಚ್ಚು ಜನಪ್ರಿಯವಾಗಿವೆ. ಆದರೆ, ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, AI ಅನ್ನು ಕೇವಲ ಮಾಹಿತಿಗಾಗಿ ಬಳಸಬೇಕೇ ಹೊರತು, ಸಂಪೂರ್ಣವಾಗಿ ಅದಕ್ಕೆ ಅವಲಂಬಿತರಾಗಬಾರದು ಎಂದು ಹೇಳಿದ್ದಾರೆ.
ಎಐ ಟೂಲ್ಸ್‌ನತ್ತ, ಹೂಡಿಕೆದಾರರ ಚಿತ್ತ!
ಉಳಿತಾಯಕ್ಕಾಗಿ, ಹೂಡಿಕೆಗಾಗಿ, ವೈಯಕ್ತಿಕ ಹಣಕಾಸು ಸಲಹೆಗಾಗಿ ಜನರು Grok, ChatGPT, Gemini ಗಳಂತಹ AI ಜನರೇಟಿವ್ ಅಪ್ಲಿಕೇಶನ್‌ಗಳತ್ತ ಜನರು ಹೆಚ್ಚಾಗಿ ತಿರುಗುತ್ತಿದ್ದಾರೆ. ಹಿಂದೆ ತಜ್ಞರ ವಿಶೇಷ ಕ್ಷೇತ್ರವಾಗಿದ್ದ ಹಣಕಾಸು ಸಲಹೆಗಳು ಈಗ ಅಲ್ಪ ವೆಚ್ಚದಲ್ಲಿ, ಬೆರಳ ತುದಿಯಲ್ಲಿ AI ಚಾಟ್‌ಬಾಟ್‌ಗಳ ಮೂಲಕ ನೀಡುತ್ತಿರುವುದು, ಜನರನ್ನು ಮತ್ತಷ್ಟು ಆಕರ್ಷಿಸುತ್ತಿದೆ.
AI ಕಂಪನಿಗಳು ಕೂಡ ತಮ್ಮ ಚಾಟ್‌ಬಾಟ್‌ಗಳನ್ನು ಹಣಕಾಸು ಮತ್ತು ಹೂಡಿಕೆ ಸಲಹೆಗಳಿಗೆ ಹೆಚ್ಚು ಉಪಯುಕ್ತವಾಗಿಸಲು ನಿರಂತರ ಕೆಲಸ ಮಾಡುತ್ತಿದೆ. ಆದರೂ, ಕೆಲವೊಂದು ಮಾಹಿತಿಗಳು ಭಾರೀ ಅನುಮಾನಕ್ಕೆ ದಾರಿ ಮಾಡಿದೆ. ಹಾಗಾಗಿ, ವೈಯಕ್ತಿಕ ಹಣಕಾಸು ನಿರ್ವಹಣೆಗಾಗಿ ಈ ಚಾಟ್‌ಬಾಟ್‌ಗಳನ್ನು ಬಳಸುವುದು ಸರಿಯಾದ ಆಯ್ಕೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಹೂಡಿಕೆದಾರರಿಗೆ ಎಐ ಟಿಪ್ಸ್ ಸೂಕ್ತವೇ?
ಪ್ಲ್ಯಾನ್‌ರೂಪೀ ಇನ್ವೆಸ್ಟ್‌ಮೆಂಟ್ ಸರ್ವೀಸಸ್‌ನ ಸಂಸ್ಥಾಪಕ ಅಮೋಲ್ ಜೋಶಿ ಅವರು ಮನಿಕಂಟ್ರೋಲ್‌ಗೆ ತಿಳಿಸಿದಂತೆ, ವೈಯಕ್ತಿಕ ಹಣಕಾಸು ನಿರ್ವಹಣೆಯು 'ಒಂದು ಬಾರಿಯ ಚಟುವಟಿಕೆಯಲ್ಲ'. ಇದು ಒಬ್ಬರ ಹಣ ಹೂಡಿಕೆ ಅವಧಿ ಮತ್ತು ಲಾಭ, ನಷ್ಟದ ವಿಷಯವಾಗಿದೆ. "AI ಪ್ರಾಯೋಗಿಕವಾಗಿ ಈ ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ನಿರ್ವಹಿಸುವುದಿಲ್ಲ," ಎಂದು ಅವರು ಹೇಳಿದರು.
ಒಬ್ಬರು ತಮ್ಮ ಹೂಡಿಕೆ ಪೋರ್ಟ್‌ಫೋಲಿಯೊವನ್ನು ನಿಯಮಿತವಾಗಿ ನಿರ್ವಹಿಸಬೇಕು. ಅದನ್ನು ಸ್ವತಃ ಮಾಡಲು ಸಾಧ್ಯವಾಗದಿದ್ದರೆ, ಹಣಕಾಸು ತಜ್ಞರ ನೆರವು ಪಡೆಯಬೇಕು ಎಂದು ತಜ್ಞರು ತಿಳಿಸಿದ್ದಾರೆ. Finnovate ನ ಸಹ-ಸಂಸ್ಥಾಪಕಿ ಮತ್ತು CEO ನೆಹಲ್ ಮೋಟಾ ಅವರು Moneycontrol ಗೆ ಹೇಳಿದಂತೆ, ವೈಯಕ್ತಿಕ ಹಣಕಾಸು ನಿರ್ವಹಣೆಗಾಗಿ AI ಅನ್ನು ಅವಲಂಬಿಸುವುದು ಉತ್ತಮ ಆರಂಭಿಕ ಹಂತವಾಗಬಹುದು, ಆದರೆ ಅದು ಸ್ವತಃ ಒಂದು ಪರಿಹಾರವಲ್ಲ ಎಂದು ಹೇಳಿದ್ದಾರೆ.
Ai ಬಳಕೆಯ ಜೊತೆಗೆ ಭಾರೀ ಬೇಡಿಕೆ!
ಅಮೆರಿಕಾದಲ್ಲಿ ನಡೆಸಿದ ಸಮೀಕ್ಷೆಗ ಪ್ರಕಾರ, ಜನರೇಟಿವ್ ಎಐ ಬಳಸುವವರಲ್ಲಿ ಸುಮಾರು 66% ರಿಂದ 80% ಜನರು ಹಣಕಾಸು ಸಲಹೆಗಾಗಿ ಎಐ ಬಸಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ Gen Z ಪೀಳಿಗೆ ಎಐ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ವರದಿಯಲ್ಲಿ ತೋರಿಸಲಾಗಿದೆ. ಇನ್ನು ಭಾರತದಲ್ಲೂ ಎಐ ಬಳಕೆ ಹೆಚ್ಚಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications