ಎಸ್‌ಐಪಿ...ಅಂದರೆ ನಿಯಮಿತ ಹೂಡಿಕೆ. ಮಾರುಕಟ್ಟೆ ಎರಿಳಿತದಲ್ಲಿದ್ದಾಗ ಹೂಡಿಕೆ ಪ್ರಾರಂಭಿಸಿದವರು, ಕೆಲವು ತಿಂಗಳಲ್ಲಿ ತೀವ್ರ ನಕಾರಾತ್ಮಕ ಲೆಕ್ಕ ನೋಡಿದರೆ ಭಯ ಪಡೋದು ಸಾಮಾನ್ಯ. ಅಂದರೆ ನೀವೇ ಈಗ 20,000 ರೂ. ಹೂಡಿಕೆ ಮಾಡಿದ್ದೀರ ಎಂದುಕೊಳ್ಳಿ. ಎರಡು ತಿಂಗಳ ನಂತ -71% ತೋರಿಸುತ್ತದೆ. ಆಗ ನೀವು ಹಣ ನಷ್ಟ ಎಂದುಕೊಳ್ಳುತ್ತೀರ. ಆದರೆ ಇದು ಸುಳ್ಳು ವಾಸ್ತವದಲ್ಲಿ ಹೀಗೆ ಆಗುವುದಿಲ್ಲ. ಹಾಗಾದ್ರೆ ಏನಾಗುತ್ತದೆ ಎಂದು ಓದಿ ತಿಳಿಯಿರಿ.

ಹೌದು, ನೀವು ತೀವ್ರ ನಕಾರಾತ್ಮಕ ಸಂಖ್ಯೆ ನೋಡಿದರೆ ಅದು ನಿಜವಾದ ನಷ್ಟವಲ್ಲ. ಅದಕ್ಕೂ ಮೊದಲು ನೀವು ತಿಳಿಯಬೇಕಿರುವುದೇನೆಂದರೆ, ನಿಯಮಿತ ಹೂಡಿಕೆ ಅಂದ್ರೆ ಒಂದೇ ಬಾರಿಗೆ ಹಣ ಹಾಕೋದಲ್ಲ. ಬದಲಿಗೆ ಪ್ರತಿ ತಿಂಗಳು ಇಂತಿಷ್ಟು ಹೂಡಿಕೆ ಮಾಡೋದು. ನೀವು ಕೆಲವು ತಿಂಗಳುಗಳ ಕಾಲ ಹೂಡಿಕೆ ಮಾಡುವಿರಿ ಅಂದುಕೊಳ್ಳಿ. ಆಗ ಫಲಿತಾಂಶ ಕೂಡ ವಿಭಿನ್ನವಾಗಿರುತ್ತದೆ. ಮೊದಲ ಹಂತದಲ್ಲಿ ಕುಸಿತ ನೋಡಿದ ಮೊತ್ತ, ಕೊನೆಯ ತಿಂಗಳಿಗೆ ಹತ್ತಿರವಿರೋವಾಗ ಏರಿಕೆಯೂ ನೋಡಬಹುದು. ಹೀಗೆ ಏರಿಳಿತಗಳು ಸಾಮಾನ್ಯ.
ಸಮಯದ ವ್ಯತ್ಯಾಸದ ಮೇಲೆ ಹೂಡಿಕೆಯ ಮೇಲೆ ಪರಿಣಾಮ:
ನಿಯಮಿತ ಹೂಡಿಕೆಯು ಪ್ರತಿಯೊಂದು ಹಂತವನ್ನು ವಿಭಿನ್ನ ಸಮಯದಲ್ಲಿ ಹೂಡಿಸಿಕೊಳ್ಳುತ್ತದೆ. ಅಂದರೆ ನೀವು ಜನವರಿಯಲ್ಲಿ 10,000 ರೂ. ಹೂಡಿಕೆ ಮಾಡಿದರೆ, ಕೆಲವು ತಿಂಗಳಲ್ಲಿ ಕುಸಯಬಹುದು. ಮಾರ್ಚ್‌ನಲ್ಲಿ ಹೂಡಿಕೆ ಮಾಡಿದರೆ ₹10,000 ಹಂತವು ಕಡಿಮೆ ಸಮಯದಲ್ಲಿ ಏರಬಹುದು. ನೀವು ಯಾವಾಗ ಹೂಡಿಕೆ ಮಾಡುತ್ತೀರ ಎಂಬುದರ ಮೇಲೆ ಲಾಭ ನಷ್ಟ ಪರಿಗಣಿಸಬಹುದು.
ಹೂಡಿಕೆಯ ಲೆಕ್ಕಾಚಾರ ಹೇಗಿದೆ ಅರ್ಥಮಾಡಿಕೊಳ್ಳಿ:
ಎಸ್‌ಐಪಿ ಹೂಡಿಕೆಯ ಆದಾಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದನ್ನು ಅರ್ಥ ಮಾಡಿಕೊಳ್ಳಲು ಕೆಲವು ವಿಧಾನಗಳಿವೆ. ಅವುಗಳನ್ನು ತಿಳಿಯಿರಿ
ಒಂದು ವರ್ಷಕ್ಕಿಂತ ಕಡಿಮೆ ಹೂಡಿಕೆ: ಒಟ್ಟು ಆದಾಯ (Absolute Return) ನೋಡಿ. ಉದಾಹರಣೆ: ₹30,000 ಹೂಡಿಕೆ ಮಾಡಿದ್ದರೆ, ಈಗ ₹27,000 ಇದ್ದರೆ ನಷ್ಟ = -10% ಆಗಿರುತ್ತದೆ,
ಒಂದು ವರ್ಷಕ್ಕಿಂತ ಹೆಚ್ಚು ಹೂಡಿಕೆ: ವಾರ್ಷಿಕ ಲೆಕ್ಕ (Annualized Return) ನೋಡಬೇಕು. ಇದು ಹೂಡಿಕೆಯು ವರ್ಷಾಂತರದಲ್ಲಿ ಹೇಗೆ ಬೆಳೆಯುತ್ತದೆ ಅಥವಾ ಕುಸಿಯುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಈ ವಿಧಾನದಿಂದ, ಆರಂಭದಲ್ಲಿ ತೀವ್ರ ನಕಾರಾತ್ಮಕ ಲೆಕ್ಕ ತೋರಿದರೂ, ದೀರ್ಘಾವಧಿಯಲ್ಲಿ ನಿಜವಾದ ಆದಾಯವನ್ನು ಅರ್ಥಮಾಡಿಕೊಳ್ಳಬಹುದು.
ನಿಯಮಿತ ಹೂಡಿಕೆ ಯಾಕೆ ಬೆಸ್ಟ್?
ಈ ನಿಯಮಿತ ಹೂಡಿಕೆಯ ಅವಧಿ ಮತ್ತು ಸಮಯದ ವ್ಯತ್ಯಾಸವನ್ನು ಸಮನಾಗಿಸುತ್ತೆ. ಇದು ಹೂಡಿಕೆದಾರರಿಗೆ ಮಾರುಕಟ್ಟೆ ಏರಿಳಿತಳ ಪರಿಣಾಮವನ್ನು ತೀವ್ರವಾಗಿ ಅನುಭವಿಸಲು ಬಿಡದೆ ಕಾಪಾಡುತ್ತೆ. ತಾತ್ಕಾಲಿಕ ಏರಿಳಿತ ಅಥವಾ ಕುಸಿತದಿಂದ ತೀವ್ರವಾಗಿ ತೊಂದರೆಯಾದ್ರೆ ಆತಂಕಪಡುವುದು ಕೂಡ ಬೇಡ. ಏಕೆಂದರೆ ನಿಯಮಿತ ಹೂಡಿಕೆ ದೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಒಟ್ಟಿನಲ್ಲಿ ನಿಯಮಿತ ಹೂಡಿಕೆ ದೀರ್ಘಾವಧಿ ಸಂಪತ್ತು ನಿರ್ಮಾಣಕ್ಕೆ ಶ್ರೇಷ್ಠ ಮಾರ್ಗ. ಸಮಯ, ತಾಳ್ಮೆ ಮತ್ತು ಸರಿಯಾದ ಲೆಕ್ಕಾಚಾರದಿಂದ, ಹೂಡಿಕೆದಾರರು ಶಾಂತವಾಗಿ ತಮ್ಮ ಹೂಡಿಕೆಯನ್ನು ನಿರ್ವಹಿಸಬಹುದು ಮತ್ತು ಮಾರುಕಟ್ಟೆ ಏರಿಳಿತಗಳಿಂದ ಗಾಬರಿಯಾಗದಿರುತ್ತಾರೆ.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)


Click it and Unblock the Notifications