ಸಂಬಳ ಎಷ್ಟೇ ಇರಲಿ, ಉಳಿತಾಯ (Savings) ಅನ್ನೋದು ಬಹಳ ಮುಖ್ಯ. ಇದು ಇಂದಿಗೆ ಪ್ರಯೋಜಕಾರಿಯಲ್ಲದಿದ್ದರೂ, ಭವಿಷ್ಯದಲ್ಲಿ ಭಾರೀ ಉಪಯೋಗಕ್ಕೆ ಬರುತ್ತದೆ. ನಾಳೆ ಅನ್ನೋದು ಸುಳ್ಳು ಅನ್ನೋ ಮನೋಭಾವ ಇದ್ದವರೂ ಕೂಡಾ, ನಾಳೆಗೆ ಬೇಕಾಗುತ್ತೆ ಎಂಬ ಮನೋಭಾವದಿಂದಲೇ ಹೂಡಿಕೆ ಮಾಡುತ್ತಾರೆ. ಆದ್ದರಿಂದ ಇನ್ನೂ ಯಾರೆಲ್ಲಾ ಉಳಿತಾಯ, ಹೂಡಿಕೆ (Investments() ಮಾಡಲು ಶುರು ಮಾಡಿಲ್ಲವೋ? ಅವರಿಗೋಸ್ಕರ ಇಂದು ನಾವು ಕೆಲವು ಟಿಪ್ಸ್ ನೀಡಿದ್ದೇವೆ.

ನೀವು ಇನ್ನೂ 30ರ ಹರೆಯದಲ್ಲಿದ್ದು, ಇನ್ನೂ ಹೂಡಿಕೆ, ಉಳಿತಾಯ ಮಾಡಿಲ್ಲವೆಂದರೆ, ಈ ಸುದ್ದಿ ನಿಮಗಾಗಿ. 30, 35 ವರ್ಷಗಳಾಯ್ತು ಎಂದು ಭಯಪಡುವ ಬದಲು, ಆದಾಯಕ್ಕಾಗಿ ಏನು ಮಾಡಬೇಕೆಂದು ಯೋಚಿಸಿ. ನಿಮ್ಮ ನಿರ್ಧಾರಗಳಿಗಾಗಿ ಸಮಯ ಕೊಡಿ. ಈ ಮೂಲಕ ಉತ್ತಮ ಆದಾಯ ಸಂಪಾದಿಸಿ.
ನಿಮ್ಮ ಆಧಾರವನ್ನು ಗಟ್ಟಿಪಡಿಸಿಕೊಳ್ಳಿ:
ನಿಮ್ಮ ಹೂಡಿಕೆಯ ಮೊದಲ ಹೆಜ್ಜೆ, ಉತ್ತಮ ರಿಟರ್ನ್ಸ್, ಫಂಡ್‌ಗಳ ಬಗ್ಗೆ ಯೋಚಿಸುವ ಮೊದಲು ನಿಮ್ಮ ಆರ್ಥಿಕ ಆಧಾರದ ಬಗ್ಗೆ ಬಲಪಡಿಸಿ. ಕನಿಷ್ಠ 6 ತಿಂಗಳ ಖರ್ಚುಗಳ ಬಗ್ಗೆ ಯೋಚಿಸಿ. ಅದಕ್ಕಾಗಿ ಎಮರ್ಜೆನ್ಸಿ ಫಂಡ್ ರಚಿಸಿ. ಅಲ್ಲದೇ ಉದ್ಯೋಗವಿಲ್ಲದಿದ್ದರೂ ಆರೋಗ್ಯ ವಿಮೆ ಮಾಡಬೇಕು. ಇದೆಲ್ಲ ಇಲ್ಲದಿದ್ದರೆ, ಆರ್ಥಿಕವಾಗಿ ಸಮಸ್ಯೆಗೆ ಕಾರಣವಾಗಬಹುದು.
ಉಳಿತಾಯಕ್ಕಾಗಿ ಸರಿಯಾದ ಫಂಡ್ ಆಯ್ಕೆ ಮಾಡಿ:
35 ವರ್ಷದಲ್ಲಿ ನೀವು ಎಲ್ಲಿಯೂ ಹೂಡಿಕೆ ಮಾಡಿರದಿದ್ದರೆ, ನಂತರ ಎಲ್ಲಿ, ಎಷ್ಟು ಹೂಡಿಕೆ ಮಾಡುತ್ತೀರಿ ಎಂಬುದು ಬಹಳ ಮುಖ್ಯ. ಅಂದರೆ ಪ್ರತೀ ತಿಂಗಳು 50,000 ಹೂಡಿಕೆ ಮಾಡಿದರೆ, ಒಳ್ಳೆಯ ಆದಾಯ ಪಡೆಯಲು ಸಹಕಾರಿಯಾಗಲಿದೆ. ಇನ್ನು ಆದಾಯ ಹೆಚ್ಚಾದಾಗ, ಅದನ್ನೇ ಹೂಡಿಕೆಗೆ ಇಟ್ಟರೆ ಒಳ್ಳೆಯದು.
ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿ:
20-25 ವರ್ಷಗಳ ದೀರ್ಘವಧಿಯಲ್ಲಿ ಎಫ್‌ಡಿ ಅಥವಾ ಸೇವಿಂಗ್ಸ್ ಮಾತ್ರ ಸಾಕಷ್ಟು ಆದಾಯ ನೀಡಲಾಗದು. ಅದಕ್ಕಾಗಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಮೂಲಕ ಎಸ್‌ಐಪಿ ಪ್ರಾರಂಭಿಸಿ. ಮೊದಲೆರಡು ವರ್ಷಗಳಲ್ಲಿ ಆದಾಯ ನಿರೀಕ್ಷಿಸಬೇಡಿ. ಆದರೆ ಹೂಡಿಕೆ ಆರಂಭಿಸಿದ ಕೆಲವು ವರ್ಷಗಳ ನಂತರ ಆದಾಯ ಪಡೆಯಬಹುದು.
ಗುರಿ ಇಟ್ಟುಕೊಳ್ಳಿ:
ನೀವು ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ, ಅದನ್ನು ಏಕೆ ಮಾಡುತ್ತಿದ್ದೀರಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಮಕ್ಕಳ ಶಿಕ್ಷಣ, ಮನೆ ಖರೀದಿ, ಜೀವನೋಪಾಯ, ರಿಟೈರ್‌ಮೆಂಟ್, ಹೀಗೆ ಗುರಿಗಳನ್ನು ಇಟ್ಟುಕೊಳ್ಳಬೇಕು. ಗುರಿ ಇಲ್ಲದಿದ್ದರೆ ಸಾಧನೆಯೂ ಕಮ್ಮಿ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications