Gold Schemes Secrets: ನೀವೂ ಕೂಡಾ ಗೋಲ್ಡ್‌ ಸ್ಕೀಮ್‌ಗಳಿಗೆ ಸೇರಿದ್ದೀರಾ? ಹಾಗಿದ್ರೆ ಈ ವಿಷಯ ನಿಮಗೆ ಗೊತ್ತಿರಲೇಬೇಕು

ಹಬ್ಬದ ಸಂದರ್ಭದಲ್ಲಿ ಮಾತ್ರವಲ್ಲ, ಸಾಮಾನ್ಯ ದಿನಗಳಲ್ಲೂ ಭಾರತೀಯರು (Indians) ಚಿನ್ನದ ಮೇಲೆ ಹೂಡಿಕೆ (Gold Investment) ಮಾಡುತ್ತಲೇ ಇರುತ್ತಾರೆ. ಭಾರತೀಯರಿಗೆ ಚಿನ್ನದ ಮೇಲಿನ ವ್ಯಾಮೋಹ ಸ್ವಲ್ಪ ಜಾಸ್ತಿ ಅಂತಾನೇ ಹೇಳಬಹುದು. ಇನ್ನು ಭಾರತೀಯರಿಗೆ ಹಬ್ಬಗಳು ಮತ್ತು ವಿಶೇಷ ಆಚರಣೆಯ ದಿನಗಳಲ್ಲಿ ಚಿನ್ನ ಖರೀದಿ ಮಾಡುವುದು ಸಂಪ್ರದಾಯವಿದ್ದಂತೆ. ಅದರಲ್ಲೂ ದೀಪಾವಳಿ ಮೊದಲು ಆಚರಿಸುವ ಧನ ತ್ರಯೋದಶಿ ಅಥವಾ ಧನ್ತೇರಸ್‌ ದಿನದಂದು (Dhanteras) ಚಿನ್ನ ಖರೀದಿಸುವುದು ಮಂಗಳಕರ ಎಂದು ಹೇಳಲಾಗುತ್ತದೆ. ಇನ್ನು ಈ ದಿನ ಚಿನ್ನ ಖರೀದಿಸಿದ್ರೆ ಅದೃಷ್ಟದ ಬಾಗಿಲು ತೆರೆಯುತ್ತೆ, ಮನೆಯಲ್ಲಿ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ.

Gold Scheme ಬಗ್ಗೆ ತಿಳಿಯಲೇಬೇಕಾದ ವಿಷಯಗಳಿವು!

ಇತ್ತೀಚಿಗೆ ಭಾರೀ ಟ್ರೆಂಡಿಂಗ್‌ನಲ್ಲಿರುವ, ಗೋಲ್ಡ್ ಇಟಿಎಫ್‌ಗಳು (Gold ETFs) ಅಥವಾ ವ್ಯವಸ್ಥಿತ ಹೂಡಿಕೆ ಯೋಜನೆಗಳನ್ನು (SIP) ಹಲವರು ಬಯಸುತ್ತಾರೆ. ಆದರೆ ಹಬ್ಬದ ಸೀಸನ್‌ನಲ್ಲಿ ಬಹುತೇಕರು ಭೌತಿಕ ಚಿನ್ನ ಖರೀದಿಸಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೇ ಒಮ್ಮೆಲೆ ದೊಡ್ಡ ಮೊತ್ತ ಹೂಡಿಕೆ ಮಾಡಲು ಸಾಧ್ಯವಾಗದವರಿಗೆ, ಈಗಾಗಲೇ ಹಲವಾರು ಆಭರಣ ಮಳಿಗೆಗಳು ಗೋಲ್ಡ್‌ ಸ್ಕೀಮ್‌ಗಳನ್ನು ಜಾರಿಗೆ ತಂದಿದೆ. (Gold Schemes) ಇದು ಹೂಡಿಕೆದಾರರಿಗೆ ಬಹಳಷ್ಟು ಪ್ರಯೋಜನಕಾರಿ. ಆದರೆ ಇಂತಹ ಚಿನ್ನದ ಯೋಜನೆಗಳಿಗೆ ಸೇರುವ ಮೊದಲು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಗೋಲ್ಡ್‌ ಸ್ಕೀಮ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಚಿನ್ನದ ಯೋಜನೆಗಳು ಗ್ರಾಹಕರಿಗೆ ಮಾಸಿಕ ಕಂತುಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಹೇಳಲಾಗುತ್ತದೆ. ಗ್ರಾಹಕರು ನಿರ್ದಿಷ್ಟ ಅವಧಿಗೆ ತಕ್ಕಂತೆ ಪ್ರತಿ ತಿಂಗಳು ಒಂದು ನಿಗದಿತ ಮೊತ್ತವನ್ನು ಪಾವತಿಸಬೇಕು. ಸಾಮಾನ್ಯವಾಗಿ, ಈ ಯೋಜನೆಗಳು 6 ರಿಂದ 12 ತಿಂಗಳ ಅವಧಿಯನ್ನು ಹೊಂದಿರುತ್ತವೆ.

12 ಕಂತುಗಳನ್ನು ಪಾವತಿಸಿದ ನಂತರ, ಗ್ರಾಹಕರು ಪಾವತಿಸಿದ ಹಣಕ್ಕೆ ಸರಿಯಾಗಿ ಚಿನ್ನವನ್ನು ಖರೀದಿ ಮಾಡಬಹುದು. ಇನ್ನು ಕೆಲವು ಆಭರಣ ಮಳಿಗೆಗಳಲ್ಲಿ ಇಂತಹ ಹೂಡಿಕೆ ಯೋಜನೆಗಳ ಮೂಲಕ ಖರೀದಿಸಿದ ಚಿನ್ನದ ಮೇಲೆ ಮೇಕಿಂಗ್ ಚಾರ್ಜ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಾರೆ ಅಥವಾ ಒಂದು ಕಂತಿನ ಹಣವನ್ನು ಅವರೇ ಪಾವತಿಸುತ್ತಾರೆ.

ಉದಾಹರಣೆಗೆ, ಸೆನ್ಕೋ ಗೋಲ್ಡ್ ಅಂಡ್ ಡೈಮಂಡ್ಸ್ 11 ತಿಂಗಳ ಗೋಲ್ಡ್‌ ಯೋಜನೆ ನೀಡುತ್ತದೆ. ಅದರಲ್ಲೂ ಒಂದು ಕಂತಿನಲ್ಲಿ ಹಲವು ಪ್ರಯೋಜನಗಳನ್ನು ಪಡೆಯಬಹುದು. ಅದೇ ರೀತಿ ಜಾಯ್ ಆಲುಕ್ಕಾಸ್ ಮೇಕಿಂಗ್ ಚಾರ್ಜ್‌ಗಳ ಮೇಲೆ 18% ರಿಯಾಯಿತಿ ನೀಡಿದರೆ, ಕ್ಯಾರೆಟ್‌ಲೇನ್ ಒಂಬತ್ತು ತಿಂಗಳವರೆಗೆ ಪಾವತಿಸಿದರೆ 10ನೇ EMI ಅನ್ನು ಕ್ಯಾರೆಟ್‌ಲೇನ್‌ ಉಚಿತವಾಗಿ ನೀಡುತ್ತದೆ.

ಯಾವುದು ಬೆಸ್ಟ್‌?
ಆಗ್‌ಮೆಂಟ್‌ನ ರಿಸರ್ಚ್ ಹೆಡ್ ರೆನಿಶಾ ಚೈನಾನಿ, "ಇಂತಹ ಚಿನ್ನದ ಮೇಲಿನ ಹೂಡಿಕೆ ಯೋಜನೆಗಳು ಗ್ರಾಹಕರನ್ನು ಚಿನ್ನದ ಬೆಲೆ ಏರಿಳಿತಗಳಿಂದ ರಕ್ಷಿಸುತ್ತವೆ. ಒಂದೇ ಬಾರಿಗೆ ದೊಡ್ಡ ಮೊತ್ತ ಪಾವತಿಸುವ ಬದಲಿಗೆ, ಹೀಗೆ ಹೂಡಿಕೆ ಮಾಡಿದ್ರೆ ಹೊರೆ ಸ್ವಲ್ಪ ಕಡಿಮೆಯಾಗುತ್ತದೆ." ಎಂದು ಹೇಳಿದ್ದಾರೆ.

ಚಿನ್ನದ ಇಎಂಐ ಯೋಜನೆಗಳಲ್ಲಿ ಎರಡು ವಿಧಗಳಿವೆ:
ಮೊದಲನೆಯದು 'ಓಪನ್ ರೇಟ್ ಪ್ಲಾನ್'. ಅಂದರೆ ನೀವು ಚಿನ್ನವನ್ನು ಖರೀದಿಸುವ ಸಮಯದಲ್ಲಿ ನೀವು ಕಟ್ಟಿದ ಹಣದ ಮೇಲೆ ಬೆಲೆ ನಿಗದಿಯಾಗುತ್ತದೆ. ಅಂದರೆ, ನೀವು ಕಂತುಗಳನ್ನು ಪಾವತಿಸುವಾಗ ಬೆಲೆಗಳು ಹೆಚ್ಚಾದರೆ, ಖರೀದಿ ಸಮಯದಲ್ಲಿ ನೀವು ಹೆಚ್ಚು ಪಾವತಿಸಬೇಕಾಗುತ್ತದೆ.

ಎರಡನೆಯದು 'ಫಿಕ್ಸ್ಡ್ ರೇಟ್ ಪ್ಲಾನ್'. ಇದರಲ್ಲಿ ನೀವು ಪ್ರತಿ ತಿಂಗಳು ಕಂತು ಪಾವತಿಸುವಾಗ ಆ ತಿಂಗಳಲ್ಲಿ ಎಷ್ಟು ಚಿನ್ನದ ಬೆಲೆ ಇರುತ್ತದೇಯೋ ಅದನ್ನೇ ಆಡ್‌ ಮಾಡಲಾಗುತ್ತದೆ. ಇಂತಹ ಯೋಜನೆ ಭವಿಷ್ಯದಲ್ಲಿ ಬೆಲೆ ಏರಿಕೆಯಿಂದ ನಿಮ್ಮನ್ನು ತಪ್ಪಿಸುತ್ತದೆ. ಇನ್ನು ಸೆನ್ಕೋ ಗೋಲ್ಡ್ ಅಂಡ್ ಡೈಮಂಡ್ಸ್‌ನ ಎಂಡಿ ಮತ್ತು ಸಿಇಒ ಸುವಂಕರ್ ಸೇನ್ ಪ್ರಕಾರ, "ಬೆಲೆಗಳು ಸ್ಥಿರವಾಗಿದ್ದಾಗ ಓಪನ್ ರೇಟ್ ಪ್ಲಾನ್‌ಗಳು ಬೆಸ್ಟ್‌ ಎಂದು ಹೇಳುತ್ತಾರೆ. ಆದರೆ ಚಿನ್ನದ ಬೆಲೆಗಳು ಹೆಚ್ಚಾದಾಗ, ಹೂಡಿಕೆ ಮಾಡೋದು ಸಹ ಕಷ್ಟಸಾಧ್ಯ. ಆದ್ದರಿಂದ ಈ ಸಮಯದಲ್ಲಿ ಫಿಕ್ಸ್ಡ್‌ ರೇಟ್‌ ಪ್ಲಾನ್‌ ಉತ್ತಮ ಎಂದು ಸಲಹೆ ನೀಡಿದ್ದಾರೆ.

ಅಲ್ಲದೆ, ಒಮ್ಮೆ ನೀವು ಯೋಜನೆಗೆ ಸೇರಿಕೊಂಡರೆ ಕಂತಿನ ಮೊತ್ತವನ್ನು ಪಾವತಿಸಲೇಬೇಕು. ಒಮ್ಮೆ ನಿಗದಿ ಮಾಡಿದ ಹಣವನ್ನು ಪ್ರತೀ ತಿಂಗಳು ಕಟ್ಟಬೇಕು. ನಿಮ್ಮ ಆರ್ಥಿಕ ಪರಿಸ್ಥಿತಿ ಬದಲಾದರೂ, ಯೋಜನೆ ಹಣ ಮಾತ್ರ ಕಟ್ಟದೇ ಇರುವಂತಿಲ್ಲ. ಇಲ್ಲದಿದ್ರೆ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ.

ಆದ್ದರಿಂದ, ಯೋಜನೆಗೆ ಸಹಿ ಹಾಕುವ ಮೊದಲು, ಗೋಲ್ಡ್‌ ಸ್ಕೀಮ್‌ನ ಎಲ್ಲಾ ನಿಯಮಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಿ ಎಂದು ಹೇಳುತ್ತಾರೆ ತಜ್ಞರು. ಮೇಕಿಂಗ್ ಚಾರ್ಜ್‌ಗಳ ರಿಯಾಯಿತಿ ಅಥವಾ ಉಚಿತ ಕಂತುಗಳು ಇದ್ಯಾ? ಇಲ್ವಾ? ಎಂದು ಚೆಕ್‌ಮಾಡಿಕೊಳ್ಳಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+