ಹಣ ಮಾಡ್ಬೇಕು, ವ್ಯವಹಾರ ಆರಂಭಿಸಬೇಕು (Business), ಮನೆ ಕಟ್ಟಬೇಕು, ಕಾರು ಖರೀದಿಸಬೇಕು ಹೀಗೆ ಹತ್ತು ಹಲವು ಆಸೆಗಳು ಯಾರಿಗೆ ಇರಲ್ಲ ಹೇಳಿ. ಆದರೆ ಯಾವುದಕ್ಕೂ ಕಾಲ ಬರಬೇಕು ಅಂತಾರೆ. ಆದ್ರೆ ಕೆಲವರು ಸಾಲ ಮಾಡಿಯಾದ್ರೂ ಈ ಆಸೆಗಳನ್ನು ಪೂರೈಸಲು ಮುಂದಾಗುತ್ತಾರೆ. ಅದರಲ್ಲಿ ಕಾರು ಬಹುತೇಕರು ಸಾಲ (Car Loan) ಮಾಡಿಯಾದ್ರೂ ಖರೀದಿ ಮಾಡ್ತಾರೆ.

ಕಾರು ತೆಗೆದುಕೊಳ್ಳಬೇಕೆಂಬ ಆಸೆ ಎಲ್ಲರ ಮನಸ್ಸಲ್ಲಿದ್ದರೂ, ಇಂದಿನ ಹಣದುಬ್ಬರ ಯುಗದಲ್ಲಿ ನಗದು ರೂಪದಲ್ಲಿ ಹೊಸ ವಾಹನ ಖರೀದಿಸುವುದು ದೊಡ್ಡ ಸವಾಲಾಗಿದೆ. ಆದರೆ ಈ ಕನಸನ್ನು ನನಸು ಮಾಡುವ ಉದ್ದೇಶದಿಂದ ಬಹುತೇಕರು ಬ್ಯಾಂಕ್‌ಗಳಿಂದ ಕಾರು ಸಾಲ ಪಡೆಯುತ್ತಾರೆ. ಆದರೆ ಸಾಲ ತೆಗೆದುಕೊಳ್ಳುವಾಗ ಮಾಡುವ ಸಣ್ಣ ತಪ್ಪುಗಳು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಹಾಗಿದ್ರೆ ಕಾರ್ ಲೋನ್ ಮಾಡುವಾಗ ಮಾಡಬಾರದ ತಪ್ಪುಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಕ್ರೆಡಿಟ್ ಸ್ಕೋರ್ ಚೆನ್ನಾಗಿರಲಿ: ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬೇಕೆಂಬುದು ಹಲವರ ಗುರಿ. ಅದರಲ್ಲೂ ಕಾರ್ ಲೋನ್ ಕಮ್ಮಿ ಬಡ್ಡಿದರದಲ್ಲಿ ಪಡೆಯಲು ಉತ್ತಮ ಕ್ರೆಡಿಟ್ ಸ್ಕೋರ್ ಅತ್ಯಗತ್ಯ. ನಿಮ್ಮ ಸ್ಕೋರ್ ಸರಾಸರಿಯಾಗಿದ್ದರೂ ಸಾಲ ಮಂಜೂರಾಗುತ್ತದೆ. ಆದರೆ ಅದರಿಂದ ಬಡ್ಡಿದರವೂ ಹೆಚ್ಚಾಗುತ್ತದೆ. ಜೊತೆಗೆ ಇಎಂಐ ಹಣವೂ ದುಬಾರಿಯಾಗಬಹುದು. ಆದ್ದರಿಂದ ಯಾರೇ ಆಗಲಿ ಸಾಲ ಕೇಳುವ ಮುನ್ನ ಕ್ರೆಡಿಟ್ ಸ್ಕೋರ್ 700ಕ್ಕಿಂತ ಹೆಚ್ಚಿರುವಂತೆ ನೋಡಿಕೊಳ್ಳಿ.
ಡೌನ್ ಪೇಮೆಂಟ್ ಹೆಚ್ಚು ಪಾವತಿಸಿ: ಇನ್ನು ಯಾವುದೇ ಕಾರು ಖರೀದಿ ಮಾಡುವಾ ಡೌನ್ ಪೇಮೆಂಟ್ ಹೆಚ್ಚು ಪಾವತಿಸಬೇಕು. ಇದರಿಂದ ನಿಮ್ಮ ಇಎಂಐ ಕೂಡಾ ಕಡಿಮೆಯಾಗುತ್ತದೆ. ಉದಾಹರಣೆಗೆ ಕಾರಿನ ಒಟ್ಟು ಬೆಲೆಯ ಕನಿಷ್ಠ ಶೇ. 20% ಆದರೂ ಡೌನ್ ಪೇಮೆಂಟ್ ನೀಡಿದರೆ ಉತ್ತಮ. ಇದು ಇಎಂಐ ಮತ್ತು ಬಡ್ಡಿ ಎರಡನ್ನೂ ಕಡಿಮೆ ಮಾಡುತ್ತದೆ.
ಸರಿಯಾದ ಬ್ಯಾಂಕ್ ಆಯ್ಕೆ ಮಾಡಿ: ಇನ್ನು ನೀವು ಬ್ಯಾಂಕ್‌ನಿಂದ ಸಾಲ ಪಡೆಯುವುದಾದರೆ ಸರಿಯಾದ ಬ್ಯಾಂಕ್ ಆಯ್ಕೆ ಮಾಡಿ. ಸಿಕ್ಕ ಸಿಕ್ಕ ಬ್ಯಾಂಕ್‌ಗಳಲ್ಲಿ ಸಾಲ ಮಾಡಬೇಡಿ. ಯಾವುದೇ ಸಾಲ ತೆಗೆದುಕೊಳ್ಳುವ ಮೊದಲು ಬೇರೆ ಬ್ಯಾಂಕ್‌ಗಳೊಂದಿಗೆ ಬಡ್ಡಿಯನ್ನು ಹೋಲಿಕೆ ಮಾಡಿ. ಇದರಿಂದ ಸ್ವಲ್ಪ ಮಟ್ಟಿಗಾದರು ನಿಮ್ಮ ಹಣವನ್ನು ಉಳಿಸಬಹುದು.
ಅಲ್ಪಾವಧಿ ಸಾಲದ ಅವಧಿ ಆಯ್ಕೆ ಮಾಡಿ: ಸಾಲ ಕಟ್ಟುವ ಅವಧಿ ಹೆಚ್ಚಾದಷ್ಟೂ, ಬಡ್ಡಿ ಕೂಡಾ ಹೆಚ್ಚಾಗುತ್ತದೆ. ಆದ್ದರಿಂದ ದೀರ್ಘಾವಧಿ ಸಾಲ ಮಾಡಿದ್ರೆ ಹೆಚ್ಚು ಬಡ್ಡಿ ಕಟ್ಟಬೇಕಾಗುತ್ತದೆ. ಹೀಗಾಗಿ, ಕಾರು ಸಾಲಗಳಿಗೆ 4-5 ವರ್ಷಗಳ ಅಲ್ಪಾವಧಿ ಆಯ್ದುಕೊಂಡರೆ ಬಡ್ಡಿದರದಲ್ಲಿ ಸ್ವಲ್ಪ ಇಳಿಕೆಯಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications