ಬೆಳಕಿನ ಹಬ್ಬ ದೀಪಾವಳಿ (Deepavali) ಹತ್ತಿರ ಬರುತ್ತಿದೆ. ಅದಕ್ಕೂ ಮುನ್ನವೇ ಸಂಪತ್ತಿನ ಅಧಿಪತಿ ಲಕ್ಷ್ಮೀ ದೇವಿಯನ್ನು ಪೂಜಿಸುವ ಧನ್ತೇರಸ್ ಹಬ್ಬ (Dhanteras) ಕೂಡಾ ಬರಲಿದೆ. ಈ ಹಬ್ಬ ಅಥವಾ ಏನಾದರೊಂದು ಕಾರ್ಯಕ್ರಮಗಳು ಬಂದಾಗ ಮನೆಯಲ್ಲಿ ಖರ್ಚುಗಳಾಗೋದು ಸಹಜ. ಆದ್ರೆ ಉಳಿದ ದಿನಗಳಿಗೆ ಹೋಲಿಸಿದ್ರೆ ಹಬ್ಬದ ಸಮಯದಲ್ಲಿ ಬಹಳಷ್ಟು ವೆಚ್ಚಗಳಿರುತ್ತವೆ. ಅಲ್ಲದೇ ಅನೇಕರು ಮನೆ, ಕಾರು, ಬಂಗಾರ ಖರೀದಿ ಹೀಗೆ ಹಲವು ಪ್ಲಾನ್‌ಗಳನ್ನು ಮಾಡಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಹಣದ ಕೊರತೆ ಬರೋದು ಸಾಮಾನ್ಯ. ಆ ಸಂದರ್ಭದಲ್ಲಿ ಕೆಲವು ಸಾಲ (Personal Loan) ಮಾಡಲು ಮುಂದಾಗುತ್ತಾರೆ.

ಸಾಲದ ಅಗತ್ಯ ಇದ್ದಾಗ ಅನೇಕರು ಬ್ಯಾಂಕ್, ಇನ್ನಿತರ ಸಾಲ ನೀಡುವ ಸಂಸ್ಥೆಗಳತ್ತ ಮೊರೆ ಹೋಗುತ್ತಾರೆ. ಇನ್ನೂ ಕೆಲವರು ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಗಳಿಂದ ಸಾಲ ಪಡೆಯುವ ಬಗ್ಗೆ ಆಲೋಚಿಸಬಹುದು. ಆದರೆ ಇಂದಿನ ದಿನದಲ್ಲಿ ಕ್ಷಣಮಾತ್ರದಲ್ಲಿ ಮೊಬೈಲ್ ಮೂಲಕ ಸಾಲ ಸೌಲಭ್ಯವನ್ನು ಪಡೆಯಬಹುದು. ಈ ಮೂಲಕ ಗ್ರಾಹಕರಿಗೆ ದುಬಾರಿ ಉಡುಗೊರೆಗಳನ್ನು ಖರೀದಿಸಲು ಅಥವಾ ಮನೆಯ ದುರಸ್ತಿಗಾಗಿ ಹಬ್ಬದ ಸೀಸನ್‌ನಲ್ಲಿ ಹಣದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.
ಆದರೆ, ಯಾವುದೇ ಬ್ಯಾಂಕ್ ಅಥವಾ ಮೊಬೈಲ್ ಬ್ಯಾಂಕ್, ಕ್ರೆಡಿಟ್ ಕಾರ್ಡ್‌ಗಳಿಂದ ಸಾಲ ಪಡೆಯುವ ಮುನ್ನ ಕೆಲವು ಪ್ರಮುಖ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಅತ್ಯಗತ್ಯ. ವೈಯಕ್ತಿಕ ಸಾಲಗಳನ್ನು ಪಡೆಯುವ ಮುನ್ನ ಗಮನಿಸಬೇಕಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲಿದೆ ಓದಿ.
ನಿಮ್ಮ ಅಗತ್ಯತೆಯನ್ನು ನೋಡಿಕೊಳ್ಳಿ: ಮೊದಲನೆಯದಾಗಿ, ನೀವು ಮಾಡುವ ಸಾಲ ನಿಮಗೆ ಅಗತ್ಯವಾಗಿ ಬೇಕಿದೆಯೇ ಅಥವಾ ನಿಧಾನವಾಗಿ ತೆಗೆದುಕೊಳ್ಳಬಹುದಾ ಎಂದು ಯೋಚಿಸಿಕೊಳ್ಳಿ. ಉದಾಹರಣೆಗೆ, ಮನೆಯನ್ನು ದುರಸ್ತಿ ಮಾಡುವುದಾದ್ರೆ ತುರ್ತಾಗಿ ಹಣ ಬೇಕಾಗುತ್ತದೆ. ಆದ್ರೆ ಒಂದು ಮನೆಯಿದ್ದು, ಮತ್ತೊಂದು ಏನಾದರು ಮಾಡಲು ಬಯಸಿದ್ರೆ ಸದ್ಯಕ್ಕೆ ಸಾಲ ಮಾಡೋದನ್ನು ತಪ್ಪಿಸಿ.
ಹೆಚ್ಚಿನ ಬಡ್ಡಿ ದರ: ವೈಯಕ್ತಿಕ ಸಾಲಗಳು ಅಸುರಕ್ಷಿತವಾಗಿರುತ್ತದೆ. ಅಲ್ಲದೇ ಕೆಲವು ಬ್ಯಾಂಕ್‌ಗಳು ಮಾತ್ರ ನಿಮಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಅಲ್ಲದೇ ವೈಯಕ್ತಿಕ ಸಾಲಗಳು ಸಾಮಾನ್ಯವಾಗಿ ಹೆಚ್ಚಿನ ಬಡ್ಡಿ ದರಗಳನ್ನು ಹೊಂದಿರುತ್ತವೆ. ಆದ್ದರಿಂದ, ಸಾಲ ತೆಗೆದುಕೊಳ್ಳುವ ಮೊದಲು ವಿವಿಧ ಬ್ಯಾಂಕ್‌ಗಳ ಜೊತೆಗೆ, ಸಾಲ ನೀಡುವವರ ಜೊತೆ ಮಾತನಾಡಿ, ಬಡ್ಡಿದರ, ನಿಯಮಗಳ ಬಗ್ಗೆ ತಿಳಿಯುವುದು ಮುಖ್ಯ.
ಹಣಕಾಸಿನ ಗುರಿ: ನೀವು ಸಾಲ ಮಾಡುವ ಮುನ್ನ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, ಈ ಸಾಲವು ನಿಮ್ಮ ಹಣಕಾಸಿನ ಗುರಿಗಳಿಗೆ ಅಡ್ಡಿಯಾಗಬಾರದು. ನೀವು ಹೊಸ ಕಾರು ಖರೀದಿಸಲು ಎರಡು ತಿಂಗಳ ನಂತರ ಸಾಲ ಪಡೆಯಲು ಯೋಜಿಸಿದ್ದರೆ, ಈ ಹಂತದಲ್ಲಿ ನಿಮ್ಮ ಅಗತ್ಯಕ್ಕೆ ಹೆಚ್ಚಾದ ಸಾಲವನ್ನು ತೆಗೆದುಕೊಳ್ಳಲು ಮುಂದಾಗಬೇಡಿ. ಏಕೆಂದರೆ ಆರಂಭದಲ್ಲಿ ತೆಗೆದುಕೊಂಡ ಸಾಲ, ನಂತರ ಹೊರೆಯಾಗಬಾರದು.
ಉಳಿತಾಯ ಮಾಡಿ: ಮತ್ತೊಂದು ವಿಷಯ ಏನೆಂದರೆ, ದೀಪಾವಳಿ ಸಮಯದಲ್ಲಿ ಮಾಡುವ ಖರ್ಚನ್ನು ಮನದಲ್ಲಿಟ್ಟುಕೊಂಡು, ನೀವು ಮೊದಲೇ ಸೇವಿಂಗ್ಸ್ ಪ್ಲಾನ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಖರ್ಚಿಗೆ ಸಹಕಾರಿಯಾಗಬಹುದು.
ಇನ್ನು ನೀವು ಯಾವುದೇ ದೊಡ್ಡ ಮೊತ್ತದಲ್ಲಿ ಸಾಲ ಪಡೆಯುವ ಬದಲಿಗೆ, ನೀವು ಸಣ್ಣ ಸಾಲವನ್ನು ತೆಗೆದುಕೊಳ್ಳಬಹುದು, ಏಕೆಂದರೆ ಈ ಸಣ್ಣ ಸಾಲವನ್ನು ಮುಂದಿನ ಆರು ತಿಂಗಳಲ್ಲಿ ಸುಲಭವಾಗಿ ಮರುಪಾವತಿಸಬಹುದು.


Click it and Unblock the Notifications