ಸಾಲ ತೆಗೆದುಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ

ಸಾಲ ಪಡೆಯುವ ಸಮಯದಲ್ಲಿ ಏನೆಲ್ಲಾ ಕಷ್ಟಗಳು ಎದುರಾಗುತ್ತದೆ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ. ಆದರೆ ಕೆಲವೊಮ್ಮೆ ಸಾಲ ಪಡೆಯುವ ಅವಸರದಲ್ಲಿ ಅದರಲ್ಲಿನ ಗುಪ್ತ ನಿಬಂದನೆಗಳ ಬಗ್ಗೆ ತಿಳಿಯದೆ ಜನರು ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ ಒಂದು ವೇಳೆ ಇಂಥ ನಿಬಂದನೆಗಳನ್ನು ನಾವು ಸೂಕ್ತವಾಗಿ ಗಮನಿಸದಿದ್ದರೆ ಅದು ಮುಂದೆ ಬಹುದೊಡ್ಡ ಸಾಲದ ಶೂಲವಾಗಿ ನಮ್ಮ ಮೇಲೆ ಎರಗಬಹುದು. ಇನ್ನು ಮಿತಿಮೀರಿದ ಸಾಲದ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಂದ ಪಾರಾಗುವ ಬಗೆಯ ಬಗ್ಗೆ ತಿಳಿದುಕೊಳ್ಳವುದು ಅತೀ ಮುಖ್ಯವಾಗಿದೆ.

* ಅತಿಯಾದ ಸಾಲದಿಂದ ಉದ್ಬವಿಸುವ ಸಮಸ್ಯೆ ಹಾಗೂ ಅದರಿಂದ ಪಾರಾಗುವ ರೀತಿ ಏನು?

ಇನ್ನು ಸಾಲ ಪಡೆಯುವ ವೇಳೆ ಬಡ್ಡಿದರಗಳ ಪ್ರಕಾರಗಳಾದ ಸ್ಥಿರ ಹಾಗೂ ಬದಲಾಗುವ ವಿಧಾನಗಳು ಸಾಲದ ಮೇಲೆ ಒಟ್ಟಾರೆಯಾಗಿ ಹೇಗೆ ಪರಿಣಾಮ ಬೀರತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಇನ್ನೂ ಸಂಕ್ಷಿಪ್ತವಾಗಿ ಹೇಳವುದಾದರೆ ಸ್ಥಿರ ಬಡ್ಡಿದರವು ಸಾಲದ ಎಲ್ಲಾ ಹಂತಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿದ್ದರೆ ಬದಲಾಗುವ ವಿಧಾನ ಅಥವಾ ಫ್ಲೋಟಿಂಗ್‌ ದರವು ಮಾರಕಟ್ಟೆಗಳ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಫ್ಲೋಟಿಂಗ್‌ (ಬದಲಾಗುವ ದರ) ದರದಿಂದ ತಿಂಗಳಿನ ಸಾಲ ಪಾವತಿ ಸಮಯದಲ್ಲಿ ಏರಿಳಿತವಾಗುತ್ತದೆ.

ಸಾಲ ತೆಗೆದುಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ

ವಾರ್ಷಿಕ ಶೇಕಡಾವಾರು ದರ (APR)

ಇನ್ನು ವಾರ್ಷಿಕ ಶೇಕಡಾವಾರು ದರವು ಕೇವಲ ಬಡ್ಡಿದರವನ್ನು ಮಾತ್ರ ತೋರಿಸದೆ ಸಾಲದಲ್ಲಿ ಅಡಕವಾಗಿರುವ ಸಂಸ್ಕರಣಾ ಶುಲ್ಕಗಳು, ಆಡಳಿತಾತ್ಮಕ ಶುಲ್ಕಗಳು ಮುಂತಾದ ಇತರೆ ವೆಚ್ಚಗಳ ಬಗ್ಗೆ ಕೂಡ ತಿಳಿಸುತ್ತದೆ. ಉದಾಹರಣೆಗೆ ಹೇಳುವುದಾದರೆ ಎರವಲು ಪಡೆಯುವ ಮೊತ್ತವು ತೋರಿಕೆಯಲ್ಲಿ ಕಡಿಮೆ ಬಡ್ಡಿದರವನ್ನು ಹೊಂದಿದ್ದರೂ ಕೆಲವೊಮ್ಮೆ ಹೆಚ್ಚಿನ ಸಂಸ್ಕರಣಾ ಶುಲ್ಕಗಳು ವಾರ್ಷಿಕ ಶೇಕಡಾವಾರು ದರವನ್ನು ಗಣನೀಯವಾಗಿ ಹೆಚ್ಚಿಸಬಹುದು. ಪರಿಣಾಮ ಸಾಲವು ಹೆಚ್ಚು ದುಬಾರಿಯಾಗುವ ಸಾಧ್ಯತೆ ಇದೆ. ಹಾಗಾಗಿ ವಾರ್ಷಿಕ ಶೇಕಡಾವಾರು ದರವನ್ನು ತಿಳಿದುಕೊಂಡರೆ ಸಾಲದ ಒಟ್ಟು ವೆಚ್ಚದ ಸ್ಪಷ್ಟ ಚಿತ್ರಣ ನಮಗೆ ಲಭಿಸುತ್ತದೆ.

* ಸಾಲ ಪಡೆಯುವ ಮೊತ್ತದ ಬಗ್ಗೆ ನಿಖರತೆ ಇರಲಿ

ಕೆಲವೊಮ್ಮೆ ಜನರು ತಮಗೆ ಎಷ್ಟು ಪ್ರಮಾಣದಲ್ಲಿ ಹಣದ ಅಗತ್ಯವಿದೆ ಎಂಬ ಬಗ್ಗೆ ತಿಳಿದುಕೊಳ್ಳದೆ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ನಿರ್ಣಾಯಕ ಘಟ್ಟಗಳಲ್ಲಿ ಸಮಸ್ಯೆ ಸೃಷ್ಟಿಸಬಹುದು. ಅಲ್ಲದೆ ನಗದು ಕೊರತೆಯಿಂದ ದೈನಂದಿನ ಜೀವನದಲ್ಲಿ ಅನೇಕ ರೀತಿಯ ತೊಂದರೆಗಳು ಕೂಡ ಎದುರಾಗಬಹುದು. ಹಾಗಾಗಿ ಅಗತ್ಯ ಇರುವಷ್ಟು ಮಾತ್ರ ಸಾಲ ಪಡೆದುಕೊಂಡರೆ ಇದರಿಂದ ಮುಂದಾಗುವ ಸಮಸ್ಯೆ ತಪ್ಪಿಸಬಹುದು. ಸಾಲದ ವೇಳೆ ಸಮಯ ವ್ಯರ್ಥದಿಂದ ಅನೇಕ ರೀತಿಯ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಸಾಲದ ವೇಳೆಯ ದಾಖಲೆ ಪತ್ರಗಳನ್ನು ನಾವು ಮೊದಲೇ ತಯಾರಾಗಿ ಇಡಬೇಕು. ಸಾಲ ನೀಡುವ ಸಂಸ್ಥೆಯ ಜೊತೆ ಸಂವಹನವನ್ನು ಮುಂದುವರೆಸುತ್ತಿರಬೇಕು. ಇದರಿಂದ ಅಂತಿಮ ಹಂತದಲ್ಲಿ ಉಂಟಾಗುವ ಪೀಕಲಾಟಗಳನ್ನು ತಪ್ಪಿಸುತ್ತದೆ.

* ಸಾಲಮರುಪಾವತಿ ವೇಳೆ ಈ ತಪ್ಪುಗಳನ್ನು ಮಾಡದಿರಿ!

ಇನ್ನು ಸಾಲ ಮರುಪಾವತಿ ವೇಳೆ ಆರಂಭದ ವರ್ಷಗಳಲ್ಲಿ ಅನಿರೀಕ್ಷಿತ ವೆಚ್ಚಗಳಿಂದ ಕ್ರೆಡಿಟ್‌ ಸ್ಕೋರ್‌ಗಳಿಗೆ ಧಕ್ಕೆ ಉಂಟು ಮಾಡಬಹುದು. ಇದರಿಂದ ಹಣಕಾಸಿನ ಸ್ಥಿರತೆ ಮತ್ತು ಭವಿಷ್ಯದ ಸಾಲಗಳಿಗೆ ಸಮಸ್ಯೆ ಉಂಟುಮಾಡಬಹುದು. ಹಾಗಾಗಿ ಹಣಕಾಸಿನ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡುವ ಮರುಪಾವತಿ ಯೋಜನೆಯನ್ನು ಆಯ್ಕೆ ಮಾಡುವುದು ಅತೀ ಮುಖ್ಯ.

* ಸಾಲದ ಜೊತೆ ಹೂಡಿಕೆ ಅಭ್ಯಾಸ ಇರಲಿ

ಸಾಲವು ಹಣಕಾಸಿನ ಮೂಲವಾಗಿದ್ದರೂ ಒಂದು ವೇಳೆ ನಾವು ಸಾಕಷ್ಟು ಮುಂಚಿತವಾಗಿ ಸಣ್ಣ, ನಿಯಮಿತ ಹೂಡಿಕೆ ಮಾಡಿದ್ದರೆ ದೊಡ್ಡ ಪ್ರಮಾಣದಲ್ಲಿ ಸಾಲದ ಅವಲಂಬನೆ ತಪ್ಪಿಸುತ್ತದೆ. ಹಾಗಾಗಿ ಉಳಿತಾಯದಿಂದ ಹಣಕಾಸು ನಿರ್ವಹಣೆಯಲ್ಲಿ ಹೆಚ್ಚಿನ ಸಹಾಯ ನೀಡುತ್ತದೆ. ಅದರಲ್ಲೂ ಪ್ರತಿ ತಿಂಗಳು ನಾವು ಪಾವತಿಸುವ ಸಾಲದಷ್ಟೇ ಮೊತ್ತವನ್ನು ಹೂಡಿಕೆ ಮಾಡಲು ಆರಂಭಿಸಿದರೆ ಮುಂದೆ ಸಾಲವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಕೂಡ ನೆರವಾಗುತ್ತದೆ. ಅಲ್ಲದೆ ಸಾಲದ ಕಂತನ್ನು ಬೇಗವಾಗಿ ಮುಗಿಸಲು ಕೂಡ ಸಹಾಯಕವಾಗಲಿದೆ.

ಹಾಗಾಗಿ ಸಾಲ ಪಡೆಯುವ ಮುನ್ನ ಹಾಗೂ ಬಳಿಕ ನಾವು ಅತ್ಯಂತ ಜಾಗರೂಕತೆ ಜೊತೆ ಬುದ್ದಿವಂತಿಕೆಯಿಂದ ಕೂಡ ಮುಂದೆ ಸಾಗಬೇಕಿದೆ. ಸಾಲ ಪಡೆಯುವುದು ದುರಭ್ಯಾಸವಲ್ಲದಿದ್ದರೂ ನಂತರ ಅವುಗಳನ್ನು ಬುದ್ದಿವಂತಿಕೆ ಮೂಲಕ ನಿರ್ವಹಿಸುವುದು ಮುಖ್ಯ. ಪಡೆದ ಸಾಲವನ್ನು ಸರಿಯಾದ ರೀತಿಯಲ್ಲೇ ಹೂಡಿಕೆ ಮೂಲಕ ತೊಡಗಿಸಿ ಲಾಭ ಪಡೆಯುವಂತೆ ಮಾಡುವುದು ಸರಿಯಾದ ಕ್ರಮವಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ಸಲಹೆಗಾರರ ಮೊರೆ ಹೋಗುವುದು ಕೂಡ ತಪ್ಪಾಗಲಾರದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+