ಆಕ್ಸಿಸ್ ಬ್ಯಾಂಕ್‌ನ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು 2026ರ ಆಗಸ್ಟ್ 28, ಶುಕ್ರವಾರದಿಂದ ಜಾರಿಗೆ ಬರಲಿವೆ. ಇದರಿಂದಾಗಿ ಹಲವು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಡೈನಾಮಿಕ್ ಕರೆನ್ಸಿ ಕನ್ವರ್ಷನ್ (DCC) ವೆಚ್ಚಗಳು ಗಮನಾರ್ಹವಾಗಿ ಹೆಚ್ಚಾಗಲಿವೆ. ಜೊತೆಗೆ, ಗರಿಷ್ಠ ಲೇಟ್ ಪೇಮೆಂಟ್ ಶುಲ್ಕದಲ್ಲೂ ಏರಿಕೆಯಾಗಿದೆ. ಇನ್ಮುಂದೆ ಟೋಲ್ ಮತ್ತು ಗಿಫ್ಟ್ ಕಾರ್ಡ್‌ಗಳ ಮೇಲಿನ ವಹಿವಾಟಿಗೆ ಯಾವುದೇ ರಿವಾರ್ಡ್ ಪಾಯಿಂಟ್ ಸಿಗುವುದಿಲ್ಲ. ಪಾವತಿ ಹಂಚಿಕೆ (Payment Allocation) ಪ್ರಕ್ರಿಯೆಯನ್ನೂ ಬ್ಯಾಂಕ್ ಅಧಿಕೃತಗೊಳಿಸಿದೆ. ಕಾರ್ಡ್‌ಗೆ ತಕ್ಕಂತೆ ನಿಯಮಗಳು ಬದಲಾಗುವುದರಿಂದ, ಮುಂದಿನ ಬಾರಿ ಕಾರ್ಡ್ ಸ್ವೈಪ್ ಮಾಡುವ ಮುನ್ನ ಈ ಹೊಸ ಬದಲಾವಣೆಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.
ಪ್ರಮುಖ ಕಾರ್ಡ್‌ಗಳಲ್ಲಿ ಡೈನಾಮಿಕ್ ಕರೆನ್ಸಿ ಕನ್ವರ್ಷನ್ (DCC) ಮಾರ್ಕಪ್ ಶುಲ್ಕವನ್ನು ಶೇಕಡಾ 1.5 ರಿಂದ ಶೇಕಡಾ 3.5 ಕ್ಕೆ ಹೆಚ್ಚಿಸಲಾಗಿದೆ. ಆದರೆ ಆಕ್ಸಿಸ್ ಮ್ಯಾಗ್ನಸ್ ಮತ್ತು ಮ್ಯಾಗ್ನಸ್ ಫಾರ್ ಬರ್ಗುಂಡಿ ಕಾರ್ಡ್‌ಗಳಿಗೆ ಇದು ಶೇಕಡಾ 2 ರಷ್ಟಿದ್ದರೆ, ಒಲಿಂಪಸ್ ಕಾರ್ಡ್‌ಗೆ ಶೇಕಡಾ 1.8 ರಷ್ಟಿರುತ್ತದೆ. ಇನ್ನು ₹50,000 ಕ್ಕಿಂತ ಹೆಚ್ಚಿನ ಬಾಕಿ ಮೊತ್ತದ ಮೇಲೆ ₹1,300 ರ ಹೊಸ ಲೇಟ್ ಪೇಮೆಂಟ್ ಸ್ಲ್ಯಾಬ್ ಅನ್ವಯಿಸಲಿದ್ದು, ಸಣ್ಣ ಮೊತ್ತದ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ನೀವು ವಿದೇಶಕ್ಕೆ ಹೋದಾಗ DCC ಆಯ್ಕೆ ಬಂದರೆ, ಹೆಚ್ಚುವರಿ ಶುಲ್ಕದಿಂದ ಬಚಾವ್ ಆಗಲು ಸ್ಥಳೀಯ ಕರೆನ್ಸಿಯಲ್ಲೇ ಪಾವತಿ ಮಾಡುವುದು ಒಳ್ಳೆಯದು.

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮಗಳು: ರಿವಾರ್ಡ್‌ಗಳು, ಶುಲ್ಕ ವಿನಾಯಿತಿ ಮತ್ತು ಲಾಂಜ್ ಪ್ರವೇಶ
ಗಿಫ್ಟ್ ಕಾರ್ಡ್ ಖರೀದಿಗಳಿಗೆ ಇನ್ಮುಂದೆ ಯಾವುದೇ ರಿವಾರ್ಡ್ ಪಾಯಿಂಟ್ಸ್ ಅಥವಾ ಕ್ಯಾಶ್‌ಬ್ಯಾಕ್ ಸಿಗುವುದಿಲ್ಲ. ಅಷ್ಟೇ ಅಲ್ಲ, ವಾರ್ಷಿಕ ಶುಲ್ಕ ವಿನಾಯಿತಿ ಅಥವಾ ಮೈಲಿಗಲ್ಲು (ಮೈಲ್ಸ್‌ಸ್ಟೋನ್) ಪ್ರಯೋಜನಗಳ ಲೆಕ್ಕಾಚಾರಕ್ಕೂ ಈ ವೆಚ್ಚ ಸೇರುವುದಿಲ್ಲ. ಸೇತುವೆ, ರಸ್ತೆ ಮತ್ತು ಟೋಲ್ ಪಾವತಿಗಳ ಮೇಲೆಯೂ ರಿವಾರ್ಡ್ ಸಿಗುವುದು ಬಂದ್ ಆಗಲಿದೆ. ಅಲ್ಲದೆ ಗಿಫ್ಟ್ ಕಾರ್ಡ್‌ಗಳನ್ನು 'ವ್ಯಾಲೆಟ್' ವಿಭಾಗದಿಂದ ಪ್ರತ್ಯೇಕ 'ಗಿಫ್ಟ್ ಕಾರ್ಡ್' ಕೆಟಗರಿಗೆ ಬದಲಾಯಿಸಲಾಗಿದೆ. ಇನ್ನು ದೇಶೀಯ ವಿಮಾನ ನಿಲ್ದಾಣದ ಲಾಂಜ್‌ಗಳಿಗೆ ಪ್ರವೇಶಿಸಲು ನಿಮ್ಮ ಆಕ್ಸಿಸ್ ಕಾರ್ಡ್ ಅನ್ನೇ ತೋರಿಸಬೇಕಾಗುತ್ತದೆ. ಅಲ್ಲಿ ಪ್ರಯಾರಿಟಿ ಪಾಸ್ (Priority Pass) ಕೆಲಸ ಮಾಡುವುದಿಲ್ಲ. ಆದರೆ, ವಿದೇಶಿ ಟರ್ಮಿನಲ್‌ಗಳಲ್ಲಿ ಇಮಿಗ್ರೇಷನ್ ನಂತರ ಪ್ರಯಾರಿಟಿ ಪಾಸ್ ಬಳಸಬಹುದು. ಕಳೆದ ಮೂರು ತಿಂಗಳುಗಳಲ್ಲಿ ನೀವು ಮಾಡಿದ ಖರ್ಚಿನ ಆಧಾರದ ಮೇಲೆಯೇ ಲಾಂಜ್ ಅರ್ಹತೆ ನಿರ್ಧಾರವಾಗಲಿದೆ.
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಈಗ ಏನು ಮಾಡಬೇಕು?
ವಿದೇಶಗಳಲ್ಲಿ ಶಾಪಿಂಗ್ ಮಾಡುವಾಗ DCC ಶುಲ್ಕ ತಪ್ಪಿಸಲು ಸ್ಥಳೀಯ ಕರೆನ್ಸಿಯಲ್ಲೇ ಪಾವತಿಸಿ. ₹1,300 ರ ಭಾರಿ ಲೇಟ್ ಫೀ ತಪ್ಪಿಸಲು ನಿಮ್ಮ ದೊಡ್ಡ ಬಾಕಿ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಚುಕ್ತಾ ಮಾಡಿ. ವಾರ್ಷಿಕ ಶುಲ್ಕ ವಿನಾಯಿತಿ ಮತ್ತು ಮೈಲಿಗಲ್ಲು ಗುರಿಗಳ ಲೆಕ್ಕಾಚಾರದಿಂದ ಗಿಫ್ಟ್ ಕಾರ್ಡ್ ಹಾಗೂ ಟೋಲ್ ವೆಚ್ಚಗಳನ್ನು ಹೊರಗಿಟ್ಟು ಪ್ಲಾನ್ ಮಾಡಿ. ದೇಶೀಯ ಲಾಂಜ್‌ಗಳಿಗೆ ಹೋಗುವಾಗ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನೇ ಜೊತೆಯಲ್ಲಿಟ್ಟುಕೊಳ್ಳಿ. ಪ್ರಯಾರಿಟಿ ಪಾಸ್ ಅನ್ನು ವಿದೇಶಿ ಲಾಂಜ್‌ಗಳಲ್ಲಿ ಇಮಿಗ್ರೇಷನ್ ನಂತರವಷ್ಟೇ ಬಳಸಿ. ಹೊಸದಾಗಿ ಖರ್ಚು ಮಾಡುವ ಮುನ್ನ ನಿಮ್ಮ ಕಾರ್ಡ್‌ನ ಪರಿಷ್ಕೃತ ನಿಯಮಗಳನ್ನು ಒಮ್ಮೆ ಕಡ್ಡಾಯವಾಗಿ ಚೆಕ್ ಮಾಡಿ.
ಈ ಹೊಸ ನಿಯಮಗಳ ಪ್ರಭಾವ ನೀವು ಕಾರ್ಡ್ ಅನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ವಿದೇಶಕ್ಕೆ ಹೆಚ್ಚಾಗಿ ಪ್ರಯಾಣಿಸುವವರಿಗೆ DCC ಶುಲ್ಕದ ಬಿಸಿ ತಕ್ಷಣ ತಟ್ಟಲಿದೆ. ನಿತ್ಯ ಪ್ರಯಾಣಿಸುವವರು ಟೋಲ್‌ಗಳ ಮೇಲೆ ಸಿಗುತ್ತಿದ್ದ ಸುಲಭ ಪಾಯಿಂಟ್‌ಗಳನ್ನು ಕಳೆದುಕೊಳ್ಳಲಿದ್ದಾರೆ. ಇನ್ನು ಮೈಲಿಗಲ್ಲು ರಿವಾರ್ಡ್ ಬಯಸುವವರು ಗಿಫ್ಟ್ ಕಾರ್ಡ್‌ಗಳ ಹಂಗಿಲ್ಲದೇ ಹೊಸ ಯೋಜನೆ ರೂಪಿಸಬೇಕಾಗಿದೆ. 2026ರ ಆಗಸ್ಟ್ 28 ರಿಂದ ಜಾರಿಗೆ ಬರಲಿರುವ ಈ ನೂತನ ನಿಯಮಗಳಿಗೆ ತಕ್ಕಂತೆ ನಿಮ್ಮ ಕಾರ್ಡ್ ಬಳಕೆಯನ್ನು ಬದಲಾಯಿಸಿಕೊಳ್ಳುವುದು ಜಾಣತನ.


Click it and Unblock the Notifications