ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್: ಆಗಸ್ಟ್ 28ರಿಂದ ಬದಲಾಗಲಿದೆ ಕ್ರೆಡಿಟ್ ಕಾರ್ಡ್ ನಿಯಮ!

ಆಕ್ಸಿಸ್ ಬ್ಯಾಂಕ್‌ ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದು, 2026ರ ಆಗಸ್ಟ್ 28ರಿಂದ ಜಾರಿಗೆ ಬರುವಂತೆ ಪ್ರಮುಖ ನಿಯಮಗಳನ್ನು ಬದಲಾಯಿಸುತ್ತಿದೆ. ಇನ್ಮುಂದೆ ಗಿಫ್ಟ್ ಕಾರ್ಡ್, ಟೋಲ್ ಹಾಗೂ ಫಾಸ್ಟ್ಯಾಗ್ (FASTag) ರೀಚಾರ್ಜ್‌ಗಳ ಮೇಲೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳು ಸಿಗುವುದಿಲ್ಲ. ಇದರ ಜೊತೆಗೆ, ವಿದೇಶಿ ವಹಿವಾಟಿನ ಶುಲ್ಕಗಳು ಮತ್ತು ದೇಶೀಯ ವಿಮಾನ ನಿಲ್ದಾಣಗಳ ಲಾಂಜ್ ಪ್ರವೇಶದ ನಿಯಮಗಳಲ್ಲೂ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ, ಅನಗತ್ಯ ಶುಲ್ಕ ತಡೆಯಲು ಮತ್ತು ನಿಮ್ಮ ಪಾಯಿಂಟ್‌ಗಳನ್ನು ಕಾಪಾಡಿಕೊಳ್ಳಲು ಕಾರ್ಡ್ ಬಳಕೆಯ ವಿಧಾನವನ್ನು ಈಗಲೇ ಪರಿಶೀಲಿಸುವುದು ಒಳಿತು.

ಇಲ್ಲಿ ಅತ್ಯಂತ ಪ್ರಮುಖ ಬದಲಾವಣೆ ಎಂದರೆ, ಡೈನಾಮಿಕ್ ಕರೆನ್ಸಿ ಕನ್ವರ್ಷನ್ (DCC) ಮಾರ್ಕಪ್ ಶುಲ್ಕವನ್ನು ಶೇ 1.5 ರಿಂದ ಶೇ 3.5 ಕ್ಕೆ ಹೆಚ್ಚಿಸಿರುವುದು. ಇದರಿಂದ ವಿದೇಶಿ ವ್ಯಾಪಾರಿಗಳ ಬಳಿ ಭಾರತೀಯ ರೂಪಾಯಿಯಲ್ಲಿ ಪಾವತಿಸಿದರೆ ಇನ್ಮುಂದೆ ಹೆಚ್ಚಿನ ಹಣ ತೆರಬೇಕಾಗುತ್ತದೆ. ಗಿಫ್ಟ್ ಕಾರ್ಡ್ ಖರ್ಚುಗಳನ್ನು ಪ್ರತ್ಯೇಕ 'ನಾನ್-ರಿವಾರ್ಡ್' ವಿಭಾಗಕ್ಕೆ ಸೇರಿಸಲಾಗಿದ್ದು, ಈ ಪಾವತಿಗಳನ್ನು ವಾರ್ಷಿಕ ಶುಲ್ಕ ಮನ್ನಾ ಅಥವಾ ಮೈಲಿಗಲ್ಲು (Milestone) ಗುರಿಗಳಿಗೆ ಪರಿಗಣಿಸಲಾಗುವುದಿಲ್ಲ. ಅಷ್ಟೇ ಅಲ್ಲ, ಮ್ಯಾಗ್ನಸ್ (MAGNUS) ಕಾರ್ಡ್‌ದಾರರು ಪ್ರಯಾರಿಟಿ ಪಾಸ್ (Priority Pass) ಮೂಲಕ ಪಡೆಯುತ್ತಿದ್ದ ದೇಶೀಯ ವಿಮಾನ ನಿಲ್ದಾಣಗಳ ಉಚಿತ ಲಾಂಜ್ ಲಭ್ಯತೆಯನ್ನೂ ಕಳೆದುಕೊಳ್ಳಲಿದ್ದಾರೆ.

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ

ಆಕ್ಸಿಸ್ ಕ್ರೆಡಿಟ್ ಕಾರ್ಡ್ ಪ್ರಮುಖ ಬದಲಾವಣೆಗಳ ಪಟ್ಟಿ

ವಿಭಾಗಹಳೆಯ ನಿಯಮಹೊಸ ನಿಯಮ (ಆಗಸ್ಟ್ 28 ರಿಂದ)
DCC ಮಾರ್ಕಪ್ ಶುಲ್ಕ1.5% ಮಾರ್ಕಪ್ ದರ3.5% ಮಾರ್ಕಪ್ ದರ
ಗಿಫ್ಟ್ ಕಾರ್ಡ್ ಮತ್ತು ಟೋಲ್ರಿವಾರ್ಡ್ ಪಾಯಿಂಟ್‌ಗಳು ಸಿಗುತ್ತಿದ್ದವುಯಾವುದೇ ರಿವಾರ್ಡ್ ಅಥವಾ ಕ್ಯಾಶ್‌ಬ್ಯಾಕ್ ಇಲ್ಲ
ವಿಳಂಬ ಶುಲ್ಕ (>₹50,000)₹1,200 ಶುಲ್ಕ₹1,300 ಶುಲ್ಕ

ನಿಮ್ಮ ಬಾಕಿ ಮೊತ್ತ ₹50,000 ಮೀರಿದ್ದು, ಪಾವತಿ ತಡವಾದರೆ ವಿಳಂಬ ಶುಲ್ಕ (Late fee) ₹1,300 ಕ್ಕೆ ಏರಿಕೆಯಾಗಲಿದೆ. ನೀವು ಬಿಲ್‌ನ ಭಾಗಶಃ ಮೊತ್ತವನ್ನು ಪಾವತಿಸಿದರೆ, ಆ ಹಣ ಮೊದಲು ಹೆಚ್ಚುವರಿ ಶುಲ್ಕಗಳು ಮತ್ತು ಇಎಮ್‌ಐ (EMI) ಬಾಕಿಗೆ ಜಮಾ ಆಗುತ್ತದೆ. ನಿಮ್ಮ ಮೂಲ ಖರೀದಿಯ ಮೊತ್ತ ಕೊನೆಯದಾಗಿ ಚುಕ್ತಾ ಆಗಲಿದೆ. ಹಾಗಾಗಿ, ನೀವು ಗಿಫ್ಟ್ ಕಾರ್ಡ್ ಅಥವಾ ಫಾಸ್ಟ್ಯಾಗ್ ಪಾವತಿಗೆ ಈ ಕಾರ್ಡ್ ಬಳಸುತ್ತಿದ್ದರೆ, ತಕ್ಷಣವೇ ಬೇರೆ ಕ್ರೆಡಿಟ್ ಕಾರ್ಡ್‌ಗೆ ಬದಲಾಯಿಸಿಕೊಳ್ಳಿ. ಇದರಿಂದ ನಿಮ್ಮ ರಿವಾರ್ಡ್ ಮತ್ತು ಮೈಲಿಗಲ್ಲು ಪಾಯಿಂಟ್‌ಗಳು ನಷ್ಟವಾಗುವುದು ತಪ್ಪುತ್ತದೆ.

ಯಾವುದೇ ಅನಿರೀಕ್ಷಿತ ವೆಚ್ಚಗಳನ್ನು ತಡೆಯಲು, ಈ ವಾರವೇ ನಿಮ್ಮ ಆಟೋಮ್ಯಾಟಿಕ್ ಬಿಲ್ ಪಾವತಿಗಳನ್ನು (Auto-debit) ಒಮ್ಮೆ ತಪಾಸಣೆ ಮಾಡಿ. ಒಂದು ವೇಳೆ ಈ ಕಾರ್ಡ್‌ಗಳನ್ನು ಬಂದ್ ಮಾಡುವ ಆಲೋಚನೆ ಇದ್ದರೆ, ಜಮೆಯಾಗಿರುವ ರಿವಾರ್ಡ್ ಪಾಯಿಂಟ್‌ಗಳನ್ನು ತಕ್ಷಣವೇ ರಿಡೀಮ್ ಮಾಡಿಕೊಳ್ಳಿ. ವಿದೇಶ ಪ್ರವಾಸದಲ್ಲಿದ್ದಾಗ ಹೆಚ್ಚಿನ DCC ಶುಲ್ಕದಿಂದ ಬಚಾವ್ ಆಗಲು ಆಯಾ ದೇಶದ ಸ್ಥಳೀಯ ಕರೆನ್ಸಿಯಲ್ಲೇ ಪಾವತಿಸಿ. ಆಗಸ್ಟ್ 28ಕ್ಕೂ ಮುನ್ನ ನಿಮ್ಮ ಕಾರ್ಡ್ ಬಳಕೆಯ ಯೋಜನೆಯನ್ನು ಕೊಂಚ ಬದಲಿಸಿಕೊಂಡರೆ ಅನಗತ್ಯ ನಷ್ಟದಿಂದ ಪಾರಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+