ನಮ್ಮ ಜೀವನದಲ್ಲಿ ಹಣಕಾಸಿನ ಅಗತ್ಯಗಳು ಅನಿರೀಕ್ಷಿತವಾಗಿ ಯಾವಾಗ ಬೇಕಾದರೂ ಬರಬಹುದು. ಅವುಗಳಿಗೆ ನಾವು ಸಿದ್ದರಾಗಿರುವುದು ಅಗತ್ಯವಾಗಿದೆ. ನಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಉಳಿತಾಯವಿದ್ದರೂ ಕೆಲವು ತುರ್ತು ಪರಿಸ್ಥಿತಿಗಳಿಗೆ ನಾವು ಕೂಡಿಟ್ಟ ಹಣ ಸಾಲುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ (personal loan) ಪಡೆಯುವುದು ಉತ್ತಮ ಆಯ್ಕೆಯಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಕಡಿಮೆ ಬಡ್ಡಿದರ ಸಾಲವನ್ನು ಆಯ್ಕೆ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ವೇತನದಾರರು ಮತ್ತು ಉದ್ಯಮಿಗಳಿಗೆ ಪರ್ಸನಲ್ ಲೋನ್ ಎನ್ನುವುದು ಒಂದು ಹಣ ಪಡೆಯಲು ಸುಲಭ ಮಾರ್ಗವಾಗಿದ್ದು, ಇದು ತುರ್ತು ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸುತ್ತದೆ.

ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ಬ್ಯಾಂಕ್ ಗಳು ಸೇರಿದಂತೆ ಇತರ ಪ್ರಮುಖ ಹಣಕಾಸು ಸಂಸ್ಥೆಗಳಾದ ಬಜಾಜ್ ಫಿನ್ಸರ್ವ್ ಲಿಮಿಟೆಡ್ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತವೆ. ಅದರಲ್ಲೂ ಬಜಾಜ್ ಫಿನ್ಸರ್ವ್ ನಿಮಗೆ ಕನಿಷ್ಟ ಡಾಕ್ಯುಮೆಂಟೇಶನ್ ಮತ್ತು ಸರಳವಾದ ಅರ್ಹತಾ ಮಾನದಂಡಗಳೊಂದಿಗೆ 40 ಲಕ್ಷ ರೂ.ಗಳವರೆಗಿನ ಪರ್ಸನಲ್ ಲೋನ್ ನನ್ನು ಆನ್ಲೈನ್ನಲ್ಲಿ ತ್ವರಿತವಾಗಿ ಅನುಮೋದನೆ ನೀಡುತ್ತದೆ. ಬಜಾಜ್ ಫಿನ್ಸರ್ವ್ ನಿಮಗೆ ಮೂರು ವಿಧದ ವೈಯಕ್ತಿಕ ಸಾಲಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಇದರಿಂದ ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ತಕ್ಕಂತೆ ಸಾಲವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಈ ಸಾಲವನ್ನು 96 ತಿಂಗಳವರೆಗೆ ವಿಸ್ತರಿಸಿ ಮರುಪಾವತಿ ಮಾಡಬಹುದಾದ ಅವಕಾಶವನ್ನು ನೀಡುತ್ತದೆ. ಇದರಿಂದ ಪ್ರತಿ ತಿಂಗಳ ಕಂತು ಕಡಿಮೆ ಇದ್ದು ,ಇದು ನಿಮ್ಮ ಹಣಕಾಸಿನ ಭಾರ ಕಡಿಮೆ ಮಾಡುತ್ತದೆ.

ಕಡಿಮೆ ಬಡ್ಡಿ ದರದಲ್ಲಿ ಕೈಗೆಟುಕುವ ವೈಯಕ್ತಿಕ ಸಾಲವನ್ನು ಪಡೆಯಲು ನಿಮಗೆ ಸಹಾಯಕವಾಗುವ 5 ಪ್ರಮುಖ ಸಲಹೆಗಳು ಕೆಳಗಿವೆ:
1. ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳಿ:
ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯಲು ಬಯಸುವವರು ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಯಾಕೆಂದರೆ ಕ್ರೆಡಿಟ್ ಸ್ಕೋರ್ ನೀವು ತೆಗೆದುಕೊಳ್ಳಲು ಯೋಚನೆ ಮಾಡುತ್ತಿರುವ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನು ನಿರ್ಧರಿಸುತ್ತದೆ. ನೀವು 685 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಕಡಿಮೆ ಬಡ್ಡಿ ದರವನ್ನು ಪಡೆಯುವ ಸಾಧ್ಯತೆ ಹೆಚ್ಚು. ನೀವು ಉತ್ತಮ ಸ್ಕೋರ್ ಹೊಂದಿದ್ದರೆ, ಸ್ಪರ್ಧಾತ್ಮಕ ಮತ್ತು ಉತ್ತಮ ಬಡ್ಡಿದರಗಳಿಗೆ ಲೋನ್ ನೀಡುವಂತೆ ಮಾತುಕತೆ ನಡೆಸಲು ಸಹಾಯಕವಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ಕೆಲ ಸಲಹೆಗಳು ಇಲ್ಲಿದೆ:
ಸಮಯಕ್ಕೆ ಸರಿಯಾಗಿ ಪಾವತಿಸಿ: ನಿಮ್ಮ ಎಲ್ಲಾ ಬಿಲ್ಗಳು, ಕ್ರೆಡಿಟ್ ಕಾರ್ಡ್ ಬಿಲ್ಗಳು ಮತ್ತು ಸಾಲದ ಕಂತು(EMI)ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ.
ಒಂದೇ ಸಮಯದಲ್ಲಿ ಹಲವು ಸಾಲಗಳಿಗೆ ಅರ್ಜಿ ಹಾಕಬೇಡಿ: ಹಲವು ಸಾಲಗಳಿಗೆ ಒಂದೇ ಸಮಯಕ್ಕೆ ಸರಿಯಾಗಿ ಪಾವತಿಸಿ: ಸಮಯದಲ್ಲಿ ಅರ್ಜಿ ಹಾಕುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಬಹುದು.
2.ಅರ್ಹತೆಯ ಮಾನದಂಡ:
ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವಾಗ, ಸರಳ ಮತ್ತು ಸ್ಪಷ್ಟವಾದ ಅರ್ಹತಾ ಮಾನದಂಡಗಳನ್ನು ಹೊಂದಿರುವ ಸಾಲದಾತರನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ನಿಮಗೆ ಸಾಲ ಸುಲಭವಾಗಿ ದೊರೆಯುವ ಸಾಧ್ಯತೆ ಹೆಚ್ಚು. ಸಂಕೀರ್ಣವಾದ ಅರ್ಹತಾ ಮಾನದಂಡಗಳು ಹೆಚ್ಚಿನ ಬಡ್ಡಿ ದರದಲ್ಲಿ ಅಥವಾ ಸಾಲದ ಮೊತ್ತದಲ್ಲಿ ರಾಜಿ ಮಾಡಿಕೊಳ್ಳುವಂತಹ ಸವಾಲುಗಳನ್ನು ತಂದೊಡ್ಡಬಹುದು.
3.ಉದ್ಯೋಗದಾತರ ವಿಶ್ವಾಸಾರ್ಹತೆ:
ನೀವು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತೀರಿ ಎಂಬುದು ನಿಮ್ಮ ವೈಯಕ್ತಿಕ ಸಾಲದ ಅರ್ಜಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.
ಒಂದು ದೊಡ್ಡ, ಸ್ಥಾಪಿತ ಕಂಪನಿಯಲ್ಲಿ ಕೆಲಸ ಮಾಡುವುದು ಸಾಲದಾತರಿಗೆ ನೀವು ವಿಶ್ವಾಸಾರ್ಹ ಮತ್ತು ನಿಮ್ಮ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಸಾಮರ್ಥ್ಯ ಹೊಂದಿದ್ದೀರಿ ಎಂಬ ಸಂಕೇತವನ್ನು ನೀಡುತ್ತದೆ. ನಿಮ್ಮ EMI ಗಳನ್ನು ಸಮಯೋಚಿತವಾಗಿ ಪಾವತಿಸಲು ಸಹಾಯ ಮಾಡುವ ನೀವು ಸ್ಥಿರವಾದ ಆದಾಯವನ್ನು ಹೊಂದಿರುವಿರಿ ಎಂಬ ನಿರ್ಣಾಯಕ ಸಂದೇಶವನ್ನು ಇದು ಸಾಲದಾತರಿಗೆ ನೀಡುತ್ತದೆ.
4. ನಿಮ್ಮ ಆದಾಯ ಎಲ್ಲಾ ಮೂಲ ಸ್ಪಷ್ಟವಾಗಿ ತಿಳಿಸಿ:
ನೀವು ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದಾಗ ನಿಮ್ಮ ಎಲ್ಲಾ ಆದಾಯವನ್ನು ಸ್ಪಷ್ಟವಾಗಿ ತಿಳಿಸಿ. ಸಾಲಕ್ಕೆ ಅರ್ಜಿ ಹಾಕುವಾಗ, ನಿಮಗೆ ಎಲ್ಲೆಲ್ಲಿಂದ ಹಣ ಬರುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರೆ ಸಾಲದಾತರಿಗೆ ಹೆಚ್ಚಿನ ನಂಬಿಕೆ ಮೂಡುತ್ತದೆ. ಆದಾಯದಲ್ಲಿ ಸಂಬಳ ಮಾತ್ರವಲ್ಲದೆ ಇತರ ಆದಾಯದ ಮೂಲಗಳಾದ ಬಾಡಿಗೆ, ಹೂಡಿಕೆ, ಲಾಭಾಂಶವು ಸೇರಿದೆ. ಇದರಿಂದ ಸಾಲ ಕೊಡುವವರಿಗೆ ನಿಮ್ಮ ಬಗ್ಗೆ ಸೂಕ್ತ ಅಭಿಪ್ರಾಯ ಮೂಡುವಂತೆ ಮಾಡುತ್ತದೆ ಮತ್ತು ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲಗಳನ್ನು ಪಡೆಯಲು ನಿಮಗೆ ಸಹಾಯ ಮಾಡುವಲ್ಲಿ ಈ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ.
5. ಅತ್ಯುತ್ತಮ ಕೊಡುಗೆಗಳಿಗಾಗಿ ವಿವಿಧ ಸಾಲದಾತರನ್ನು ಹೋಲಿಕೆ ಮಾಡಿ:
ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವ ಮೊದಲು ವಿವಿಧ ಸಾಲದಾತರ ಕೊಡುಗೆಗಳನ್ನು ಹೋಲಿಸುವುದು ಬಹಳ ಮುಖ್ಯ.
ಪರ್ಸನಲ್ ಲೋನ್ ಬಡ್ಡಿ ದರಗಳು, ನಿಯಮಗಳು ಮತ್ತು ಷರತ್ತುಗಳಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲು ವಿವಿಧ ಸಾಲದಾತರಿಂದ ಕೊಡುಗೆಗಳನ್ನು ಮೌಲ್ಯಮಾಪನ ಮಾಡುವುದು ಅತಿ ಅವಶ್ಯಕ. ನೀವು ಆನ್ಲೈನ್ ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಅಂದಾಜು ಮಾಡಲು ಬಳಸಬಹುದು. ಏಕೆಂದರೆ ಇದು ಸಾಲದ ಹೋಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಇಎಂಐ ಕ್ಯಾಲ್ಕುಲೇಟರ್ ವೈಯಕ್ತಿಕ ಸಾಲದ ಬಡ್ಡಿ ದರ, ಅವಧಿ ಮತ್ತು ಬಡ್ಡಿ ದರದ ಆಧಾರದ ಮೇಲೆ ಇಎಂಐಗಳನ್ನು ಲೆಕ್ಕಾಚಾರ ಮಾಡುತ್ತದೆ.
ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಸರಿಹೊಂದುವ ಸಾಲದ ಮೊತ್ತವನ್ನು ಪಡೆಯಲು ಮತ್ತು ಎಷ್ಟು ಕಂತು ಕಟ್ಟಲು ಬರಬಹುದು ಎಂದು ಕಂಡುಹಿಡಿಯಲು ಅಗತ್ಯವಿರುವಷ್ಟು ಬಾರಿ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು. Bajaj FinservLimited ನಂತಹ ಪ್ರಮುಖ ಸಾಲದಾತ ಸಂಸ್ಥೆ ಸಾಲದ ಅನುಮೋದನೆಯನ್ನ ಕೇವಲ 24 ಗಂಟೆಗಳ ಒಳಗೆ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಪೂರೈಸಬಹುದು.
( *ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.)
ಈ ಮೂಲಕ ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಪಡೆಯುವ ನಿಮ್ಮ ಅವಶ್ಯಕತೆಗಳನ್ನು ತುರ್ತಾಗಿ ಪೂರೈಸಬಹುದು.ಇದು ನಿಮ್ಮ ಹಣಕಾಸಿನ ಯೋಜನೆಗೆ ಹೊಂದಿಕೊಳ್ಳಲು ಸುಲಭವಾಗುತ್ತದೆ.
ಬಜಾಜ್ ಫೈನಾನ್ಸ್ ನಿಮಗೆ ಹಬ್ಬದ ಋತುವಿನಲ್ಲಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಉತ್ತಮ ಅವಕಾಶವನ್ನು ನೀಡುತ್ತದೆ. ವೈಯಕ್ತಿಕ ಸಾಲಗಳ ಮೇಲೆ ಆಕರ್ಷಕ ಕಾಲಕಾಲಕ್ಕೆ ತಕ್ಕಂತೆ ಕೊಡುಗೆಗಳನ್ನು ನೀಡಬಹುದು. ಅದರಲ್ಲೂ ಸಾಮಾನ್ಯವಾಗಿ ದೀಪಾವಳಿ ಸಮಯದಲ್ಲಿ ಆಕರ್ಷಕ ಕೊಡುಗೆಗಳನ್ನು ಪಡೆಯಲು ಸೂಕ್ತ ಸಮಯವಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications