Bajaj Finserv Personal Loan:ಅತೀ ಹೆಚ್ಚು ಬಡ್ಡಿ ಇಲ್ಲದೇನೆ ಪರ್ಸನಲ್‌ ಲೋನ್‌ ಪಡೆಯಬಹುದು! ಹೇಗೆ? ಇಲ್ಲಿ ತಿಳಿಯಿರಿ

ಈಗಂತೂ ಮನುಷ್ಯನಿಗೆ ಹಣ ಒಂದು ರೀತಿಯಲ್ಲಿ ಅವಿಭಾಜ್ಯ ಅಂಗವೇ ಆಗಿ ಬಿಟ್ಟಿದೆ. ಹಣದ ಸಹಾಯ ಇಲ್ಲದೇನೆ ಒಂದು ಹೆಜ್ಜೆ ಕೂಡ ಮನುಷ್ಯ ಸಾಗಲಾರ. ಇದೇ ಹಣವನ್ನ ಕೂಡಿಡಲು ಜನರು ಪ್ರತಿದಿನ ನಾನಾ ರೀತಿಯ ಸರ್ಕಸ್‌ಗಳನ್ನ ಮಾಡಬೇಕಿದೆ. ಆದ್ರೆ ಇನ್ನುಮುಂದೆ ನಿಮಗೆ ಆ ತೊಂದರೆ ಬರಲ್ಲ. ಇಂತಹ ಸಂದರ್ಭಗಳಿಂದ ಜನರನ್ನ ಪಾರು ಮಾಡಲೆಂದೆ ನಿಮಗೆ ಬಜಾಜ್‌ ಪಿನ್ಸರ್ವ್‌ ಲಿಮಿಟೆಡ್‌ ಜನರ ಕೈಗೆಟಕುವಂತೆ ಕಡಿಮೆ ಬಡ್ಡಿ ದರದಲ್ಲೇ ವೈಯಕ್ತಿಕ ಸಾಲವನ್ನ ನೀಡುತ್ತಿದೆ. ಇನ್ಮುಂದೆ ಜನರು ತಮ್ಮ ಕರ್ಚುವೆಚ್ಚಗಳನ್ನ ಪೂರೈಸಲು ಸಾಲದ ಮೊರೆ ಹೋಗಿ ನಂತರ ಬಡ್ಡಿ, ಚಕ್ರಬಡ್ಡಿ ಅಂತ ತೀರಿಸಲಾಗದೆ ಸೋತು ಹೋಗುವ ಅವಶ್ಯಕತೆ ಇಲ್ಲ.

ಅಲ್ಲದೆ ಪರ್ಸನಲ್‌ ಲೋನ್‌ ಎನ್ನುವುದು ಉದ್ಯಮಿಗಳಿಗೆ ಮತ್ತು ವೇತನದಾರರಿಗೆ ಹಣ ಪಡೆಯಲು ಸುಲಭ ಮಾರ್ಗವಾಗಿರುವುದರಿಂದ, ಅಂತವರ ಹಣದ ಸಮಸ್ಯೆಗಳನ್ನ ಬಜಾಜ್‌ ಪಿನ್ಸರ್ವ್‌ ಲಿಮಿಟೆಡ್‌ ಬಗೆಹರಿಸುತ್ತದೆ. ನೀವು ಉತ್ತಮ ಕ್ರೆಡಿಟ್‌ ಸ್ಕೋರ್‌ ಹೊಂದಿದ್ದರೆ ಸಾಕು ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಬಜಾಜ್‌ ಪಿನ್ಸರ್ವ್‌ ಲಿಮಿಟೆಡ್‌ ನಿಮಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನ ನೀಡುತ್ತದೆ. ಅದರಲ್ಲೂ ಕನಿಷ್ಟ ಡಾಕ್ಯುಮೆಂಟೇಶನ್ ಮತ್ತು ಸರಳವಾದ ಅರ್ಹತಾ ಮಾನದಂಡಗಳನ್ನ ಹೊಂದಿದ್ದವರು 40 ಲಕ್ಷ ರೂ.ಗಳವರೆಗಿನ ಪರ್ಸನಲ್‌ ಲೋನ್‌ ಅನ್ನು ನೀವು ತ್ವರಿತವಾಗಿ ಆನ್‌ಲೈನ್‌ ಮೂಲಕ ಬಜಾಜ್ ಫಿನ್ಸರ್ವ್ ನಿಮಗೆ ನೀಡುತ್ತದೆ. ಬಜಾಜ್‌ ಫಿನ್ಸರ್ವ್‌ ನಿಮಗೆ ಮೂರು ರೀತಿಯ ವೈಕ್ತಿಕ ಸಾಲವನ್ನ ನೀಡುತ್ತದೆ. ಅದರಲ್ಲಿ ನಿಮಗೆ ಬೇಕಾದ ಪರ್ಸನಲ್‌ ಲೋನ್‌ ಅನ್ನು ನೀವು ಪಡೆಯಬಹುದು. ಹಾಗೆ ನೀವು ನಿಮ್ಮ ಸಾಲವನ್ನು 96 ತಿಂಗಳವರೆಗೂ ಮುಂದುವರೆಸಿ ಮತ್ತೆ ಮರುಪಾವತಿಯನ್ನ ಮಾಡುವ ಅವಕಾಶ ಇರುತ್ತದೆ. ಇದರಿಂದ ಪ್ರತಿ ತಿಂಗಳು ನೀವು ಕಟ್ಟುವ ಕಂತು ಕಡಿಮೆಯಾಗುತ್ತದೆ. ಅಲ್ಲದೆ ಇದು ನಿಮ್ಮ ಹಣಕಾಸಿನ ಭಾರವನ್ನ ಕಡಿಮೆ ಮಾಡಿವಲ್ಲಿ ಸಹಾಯ ಮಾಡುತ್ತದೆ.

ಇನ್ಮುಂದೆ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯಿರಿ

ಕಡಿಮೆ ಬಡ್ಡಿ ದರದಲ್ಲಿ ಕೈಗೆಟುಕುವ ವೈಯಕ್ತಿಕ ಸಾಲವನ್ನು ಪಡೆಯುವ 5 ಪ್ರಮುಖ ಸಲಹೆಗಳು ಕೆಳಗಿವೆ:

1. ಉತ್ತಮ ಕ್ರೆಡಿಟ್‌ ಸ್ಕೋರ್‌ ಕಾಪಾಡಿಕೊಳ್ಳಿ

ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್‌ಲೋನ್‌ ಪಡೆಯಲು ಇಚ್ಛಿಸುವವರು ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳುವುದು ಅವಶ್ಯಕ. ಯಾಕೆಂದರೆ ಕ್ರೆಡಿಟ್ ಸ್ಕೋರ್ ನೀವು ತೆಗೆದುಕೊಳ್ಳಲು ಬಯಸುತ್ತಿರುವ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನು ನಿರ್ಧರಿಸುತ್ತದೆ. ಅಲ್ಲದೆ ನೀವು 685 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಕಡಿಮೆ ಬಡ್ಡಿ ದರವನ್ನು ಪಡೆಯುವ ಸಾಧ್ಯತೆ ಹೆಚ್ಚು. ನೀವು ಉತ್ತಮ ಸ್ಕೋರ್ ಹೊಂದಿದ್ದರೆ, ಉತ್ತಮ ಬಡ್ಡಿದರಗಳಿಗೆ ಲೋನ್ ನೀಡುವಂತೆ ಕೇಳಲು ಸಹಾಯಕವಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ಕೆಲ ಸಲಹೆಗಳ ಮಾಹಿತಿ ಇಲ್ಲಿದೆ:

ಸಮಯಕ್ಕೆ ಸರಿಯಾಗಿ ಪಾವತಿಸಿ: ನಿಮ್ಮ ಎಲ್ಲಾ ಬಿಲ್‌ಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಸಾಲದ ಕಂತು(EMI)ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ.

ಒಂದೇ ಸಮಯದಲ್ಲಿ ಹಲವು ಸಾಲಗಳಿಗೆ ಅರ್ಜಿ ಹಾಕಬೇಡಿ: ಹಲವು ಸಾಲಗಳಿಗೆ ಒಂದೇ ಸಮಯಕ್ಕೆ ಸರಿಯಾಗಿ ಪಾವತಿಸಿ: ಆದ್ರೆ ಒಂದೇ ಸಮಯದಲ್ಲಿ ಎಲ್ಲಾ ಕಡೆ ಅರ್ಜಿ ಹಾಕುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಬಹುದು.

2.ಅರ್ಹತೆಯ ಮಾನದಂಡ:

ಪರ್ಸನಲ್ ಲೋನ್‌ಗೆ ಅರ್ಜಿ ಸಲ್ಲಿಸುವಾಗ, ಸರಳ ಮತ್ತು ಸ್ಪಷ್ಟವಾದ ಅರ್ಹತಾ ಮಾನದಂಡಗಳನ್ನು ಹೊಂದಿರುವ ಸಾಲದಾತರನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಇದರಿಂದ ನಿಮಗೆ ಸುಲಭವಾಗಿ ಸಾಲ ದೊರೆಯುವ ಸಾಧ್ಯತೆ ಹೆಚ್ಚಿರುತ್ತದೆ. ಸಂಕೀರ್ಣವಾದ ಅರ್ಹತಾ ಮಾನದಂಡಗಳಿಂದಾಗಿ ಹೆಚ್ಚಿನ ಬಡ್ಡಿ ದರದಲ್ಲಿ ಅಥವಾ ಸಾಲದ ಮೊತ್ತದಲ್ಲಿ ರಾಜಿ ಮಾಡಿಕೊಳ್ಳುವಂತಹ ಸವಾಲುಗಳನ್ನು ಎದುರಾಗಬಹುದು.

3.ಉದ್ಯೋಗದಾತರ ವಿಶ್ವಾಸಾರ್ಹತೆ:

ನೀವು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತೀರಿ ಎಂಬುದು ಕೂಡ ನಿಮ್ಮ ವೈಯಕ್ತಿಕ ಸಾಲದ ಅರ್ಜಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಒಂದು ದೊಡ್ಡ, ಸ್ಥಾಪಿತ ಕಂಪನಿಯಲ್ಲಿ ಕೆಲಸ ಮಾಡುವುದು ಸಾಲದಾತರಿಗೆ ನೀವು ವಿಶ್ವಾಸಾರ್ಹ ಮತ್ತು ನಿಮ್ಮ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಸಾಮರ್ಥ್ಯ ಹೊಂದಿದ್ದೀರಿ ಎಂಬುದನ್ನ ತಿಳಿಯಪಡಿಸುತ್ತದೆ. ನಿಮ್ಮ EMIಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ನೀವು ಸ್ಥಿರವಾದ ಆದಾಯವನ್ನು ಹೊಂದಿರುವಿರಿ ಎಂಬ ಮಾಹಿತಿಯನ್ನ ಇದು ಸಾಲದಾತರಿಗೆ ನೀಡುತ್ತದೆ.

4. ನಿಮ್ಮ ಆದಾಯದ ಎಲ್ಲಾ ಮೂಲ ಸ್ಪಷ್ಟವಾಗಿ ತಿಳಿಸಿ:

ನೀವು ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದಾಗ ನಿಮ್ಮ ಎಲ್ಲಾ ಆದಾಯವನ್ನು ಸ್ಪಷ್ಟವಾಗಿ ತಿಳಿಸಿ. ಸಾಲಕ್ಕೆ ಅರ್ಜಿ ಹಾಕುವಾಗ, ನಿಮಗೆ ಎಲ್ಲೆಲ್ಲಿಂದ ಹಣ ಬರುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರೆ ಸಾಲದಾತರಿಗೆ ಹೆಚ್ಚಿನ ನಂಬಿಕೆ ಮೂಡುತ್ತದೆ. ಆದಾಯದಲ್ಲಿ ಸಂಬಳ ಮಾತ್ರವಲ್ಲದೆ ಇತರ ಆದಾಯದ ಮೂಲಗಳಾದ ಬಾಡಿಗೆ, ಹೂಡಿಕೆ ಸೇರಿದಂತೆ ನಿಮಗೆ ಬರುವಂತ ಲಾಭಗಳ ಬಗ್ಗೆ ತಿಳಿಸಿ. ಇದರಿಂದ ಸಾಲ ಕೊಡುವವರಿಗೆ ನಿಮ್ಮ ಬಗ್ಗೆ ಸೂಕ್ತ ಅಭಿಪ್ರಾಯ ಮೂಡುವಂತೆ ಮಾಡುತ್ತದೆ. ಅಲ್ಲದೆ ಇದು ನಿಮಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲಗಳನ್ನು ಪಡೆಯಲು ಸಹಾಯ ಮಾಡುವಲ್ಲಿ ಇವುಗಳು ಪ್ರಮುಖ ಪಾತ್ರವಹಿಸುತ್ತವೆ.

5. ಅತ್ಯುತ್ತಮ ಕೊಡುಗೆಗಳಿಗಾಗಿ ವಿವಿಧ ಸಾಲದಾತರನ್ನು ಹೋಲಿಕೆ ಮಾಡಿ:

ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವ ಮೊದಲು ಇತರೆ ಸಾಲದಾತರ ಕೊಡುಗೆಗಳನ್ನು ಹೋಲಿಸುವುದು ಮುಖ್ಯವಾಗಿರುತ್ತೆ.

ಹಾಗೆ ಪರ್ಸನಲ್ ಲೋನ್ ಪಡೆಯುವಾಗ ಇತರೆ ಸಾಲದಾತರ ಬಡ್ಡಿ ದರಗಳು, ನಿಯಮಗಳು, ಷರತ್ತುಗಳ ವ್ಯತ್ಯಾಸಗಳನ್ನು ಪರಿಶೀಲಿಸನೆ ಮಾಡುವುದು ಅತಿ ಅವಶ್ಯಕ. ಅದಕ್ಕಾಗಿ ನೀವು ಆನ್ಲೈನ್ ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಸಹ ಬಳಸಬಹುದು. ಏಕೆಂದರೆ ಇದು ಸಾಲದ ಹೋಲಿಕೆ ಪ್ರಕ್ರಿಯೆಯನ್ನು ಸುಲಭವಾಗಿ ನೋಡಲು ಸಹಾಯ ಮಾಡುತ್ತದೆ. ನಿಮ್ಮ ವೈಯಕ್ತಿಕ ಸಾಲದ ಬಡ್ಡಿ ದರದ ಆಧಾರದ ಮೇಲೆ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ತಿಂಗಳ ಕಂತುಗಳ ಲೆಕ್ಕಾಚಾರವನ್ನ ಮಾಡುತ್ತದೆ.

ನಿಮ್ಮ ಸಾಮರ್ಥ್ಯಕ್ಕೆ ಸರಿಹೊಂದುವ ಸಾಲದ ಮೊತ್ತವನ್ನು ಪಡೆಯಲು ಮತ್ತು ಎಷ್ಟು ಕಂತು ಕಟ್ಟಲು ಬರಬಹುದು ಎಂದು ಕಂಡುಹಿಡಿಯಲು ನಿಮ್ಮ ಅಘತ್ಯಕ್ಕೆ ತಕ್ಕಷ್ಟು ಬಾರಿ ನೀವು ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು. ಇದರಿಂದಾಗಿ Bajaj FinservLimited ನಂತಹ ಪ್ರಮುಖ ಸಾಲದಾತ ಸಂಸ್ಥೆ ಸಾಲದ ಅನುಮೋದನೆಯನ್ನ ಕೇವಲ 24 ಗಂಟೆಗಳ ಒಳಗೆ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಪೂರೈಸಬಹುದು.

*ನಿಯಮಗಳು ಮತ್ತು ಷರತ್ತುಗಳು ಅನ್ವಯ

ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಪಡೆಯುವ ಮೂಲಕ ನಿಮ್ಮ ಅವಶ್ಯಕತೆಗಳನ್ನು ನೀವು ತುರ್ತಾಗಿ ಪೂರೈಸಬಹುದು.ಇದು ನಿಮ್ಮ ಹಣಕಾಸಿನ ಯೋಜನೆಗೆ ಹೊಂದಿಕೊಳ್ಳಲು ಸುಲಭವಾಗುತ್ತದೆ.

ಬಜಾಜ್ ಫೈನಾನ್ಸ್ ನಿಮಗೆ ನಿಮ್ಮ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಉತ್ತಮ ಅವಕಾಶವನ್ನು ನೀಡುತ್ತದೆ. ವೈಯಕ್ತಿಕ ಸಾಲಗಳ ಮೇಲೆ ಕಾಲಕಾಲಕ್ಕೆ ತಕ್ಕಂತೆ ಆಕರ್ಷಕ ಕೊಡುಗೆಗಳನ್ನು ಸಹ ನೀಡಬಹುದು. ಅದರಲ್ಲೂ ಕ್ರಿಸ್‌ಮಸ್‌, ಹೊಸವರ್ಷದ ನೀರೀಕ್ಷೆಯಲ್ಲಿರುವವರು ಆಕರ್ಷಕ ಕೊಡುಗೆಗಳನ್ನ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+