ಜನವರಿ 22, 2024 ರಂದು, ಭಾರತದಾದ್ಯಂತ ಕೆಲವು ಬ್ಯಾಂಕ್‌ಗಳನ್ನು ಭಾಗಶಃ ಬಂದ್ ಆಗಿರಲಿದೆ. ಜನವರಿ 18 ರಂದು ಹಣಕಾಸು ಸಚಿವಾಲಯ ಹೊರಡಿಸಿದ ನಿರ್ದೇಶನದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದ ಗೌರವಾರ್ಥವಾಗಿ ಇಂದು ಜನವರಿ 22 ರಂದು ಅರ್ಧ ದಿನ ಬಂದ್ ಆಗಿರಲಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಯು) ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಜನವರಿ 22 ರಂದು ಅರ್ಧ ದಿನ ಬಂದ್ ಸೂಚನೆ ನೀಡಲಾಗಿದೆ. ಖಾಸಗಿ ವಲಯದ ಬ್ಯಾಂಕ್‌ಗಳು ಜನವರಿ 22ಕ್ಕೆ ಯಾವುದೇ ಅಧಿಕೃತ ರಜೆಯ ಸೂಚನೆ ನೀಡಿಲ್ಲ. ಈ ವಿಷಯದ ಕುರಿತು ಇತ್ತೀಚಿನ ಅಪ್‌ಡೇಟ್‌ಗಾಗಿ ಗ್ರಾಹಕರು ತಮ್ಮ ಸ್ಥಳೀಯ ಶಾಖೆಗಳಲ್ಲಿ ವಿಚಾರಣೆ ಮಾಡಬಹುದು.

ರಾಜ್ಯ ಸರ್ಕಾರ ಮತ್ತು ಕೇಂದ್ರವು ಖಾಸಗಿ ವಲಯದ ಕಚೇರಿಗಳು ಮತ್ತು ಕಂಪನಿಗಳಿಗೆ ರಜಾದಿನಗಳ ಯಾವುದೇ ಸಲಹೆಯನ್ನು ನೀಡಿಲ್ಲ. ಉದ್ಯೋಗಿಗಳು ತಮ್ಮ ಕಂಪನಿಯ ಎಚ್‌ಆರ್ ಅನ್ನು ಸಂಪರ್ಕಿಸಿ. ಈ ಬಗ್ಗೆ ಅಧಿಕ ಮಾಹಿತಿ ಮುಂದೆ ಓದಿ...
ಜನವರಿ 22 ರಂದು ಪಿಎಸ್‌ಯು ಬ್ಯಾಂಕ್‌ಗಳ ಕೆಲಸದ ಸಮಯ
"ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾವನ್ನು 22 ಜನವರಿ 2024 ರಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ನೌಕರರು ಆಚರಣೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಲು, ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳನ್ನು 22 ಜನವರಿ 2024 ರಂದು 1430 ಗಂಟೆಗಳವರೆಗೆ ಅರ್ಧ ದಿನ ಮುಚ್ಚಲು ನಿರ್ಧರಿಸಲಾಗಿದೆ," ಎಂದು ಡಿಒಪಿಟಿ ಆದೇಶವು ತಿಳಿಸಿದೆ.
"ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಜನವರಿ 22 ರಂದು (ಮಧ್ಯಾಹ್ನ 2.30 ರವರೆಗೆ) ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಕಾರಣ ಅರ್ಧ ದಿನದವರೆಗೆ ಮುಚ್ಚಲ್ಪಡುತ್ತವೆ," ಎಂದು ಪಿಟಿಐ ವರದಿ ಮಾಡಿದೆ.
ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.
ಜನವರಿ 22 ರಂದು ಈ ಬ್ಯಾಂಕ್‌ಗಳು ಬಂದ್
ಖಾಸಗಿ ವಲಯದ ಪ್ರಮುಖ ಸಾಲದಾತರು, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಇಂದು ಉತ್ತರ ಪ್ರದೇಶದಲ್ಲಿ ಮುಚ್ಚಲ್ಪಡುತ್ತವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಯುಪಿ ಮತ್ತು ಉತ್ತರಾಖಂಡದಲ್ಲಿ ಪೂರ್ಣ ದಿನ ಮುಚ್ಚಿರುತ್ತದೆ. ಆಕ್ಸಿಸ್ ಬ್ಯಾಂಕ್ ಉತ್ತರ ಪ್ರದೇಶದಲ್ಲಿ ಇಡೀ ದಿನ ಮುಚ್ಚಿರುತ್ತದೆ. ಇಂಫಾಲ್, ಕಾನ್ಪುರ, ಲಕ್ನೋ ಮತ್ತು ಪಣಜಿಯಲ್ಲಿನ ಬ್ಯಾಂಕ್‌ಗಳು ಸೋಮವಾರ, ಜನವರಿ 22 ರಂದು ಮುಚ್ಚಿರುತ್ತದೆ. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಇವು ರಜಾದಿನಗಳಾಗಿವೆ.


Click it and Unblock the Notifications