ಇಂದು (ಸೆಪ್ಟೆಂಬರ್ 22, 2026, ಮಂಗಳವಾರ) ಕರ್ಮ ಪೂಜೆ ಪ್ರಯುಕ್ತ ಜಾರ್ಖಂಡ್‌ನಲ್ಲಿ ಬ್ಯಾಂಕ್‌ಗಳು ಬಂದ್ ಆಗಿದ್ದರೆ, ನಾಳೆ (ಸೆಪ್ಟೆಂಬರ್ 23, ಬುಧವಾರ) ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನದ ನಿಮಿತ್ತ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ. ಬ್ಯಾಂಕ್ ಮುಚ್ಚಿರುವಾಗ ನಮ್ಮ ಇಎಂಐ, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಸರಿಯಾಗಿ ಕಟ್ ಆಗುತ್ತವಾ, ಖಾತೆಗೆ ಸಂಬಳ ಜಮಾ ಆಗುತ್ತಾ ಎಂಬ ಗೊಂದಲ ಹಲವರಲ್ಲಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ, ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ಹೆಚ್ಚಿನ ಡಿಜಿಟಲ್ ವಹಿವಾಟುಗಳು ಯಥಾರೀತಿ ನಡೆಯುತ್ತವೆ.
ರಜಾದಿನಗಳಲ್ಲೂ ಬ್ಯಾಂಕಿಂಗ್ ಸಿಸ್ಟಮ್‌ಗಳು ಆನ್‌ಲೈನ್‌ನಲ್ಲಿ ಸಕ್ರಿಯವಾಗಿರುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2021ರ ಆಗಸ್ಟ್ 1ರಿಂದಲೇ ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (NACH) ಸೇವೆಯನ್ನು ವಾರದ ಎಲ್ಲಾ ದಿನಗಳಲ್ಲೂ ಲಭ್ಯವಾಗುವಂತೆ ಮಾಡಿದೆ. ಇನ್ನು ಎನ್‌ಇಎಫ್‌ಟಿ (NEFT) 2019ರ ಡಿಸೆಂಬರ್ 16ರಿಂದ ಹಾಗೂ ಆರ್‌ಟಿಜಿಎಸ್ (RTGS) 2020ರ ಡಿಸೆಂಬರ್ 14ರಿಂದ 24/7 ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಯುಪಿಐ (UPI) ಮತ್ತು ಐಎಂಪಿಸಿ (IMPS) ಸೇವೆಗಳು ಸಹ ರಜಾದಿನಗಳಲ್ಲೂ ದಿನವಿಡೀ ಲಭ್ಯವಿರುತ್ತವೆ. ಆದ್ದರಿಂದ ನಿಮ್ಮ ಇಎಂಐ, ಎಸ್‌ಐಪಿ (SIP), ಇನ್ಶೂರೆನ್ಸ್ ಪ್ರೀಮಿಯಂ ಹಾಗೂ ಲೋನ್ ಇಸಿಎಸ್ (ECS) ಪಾವತಿಗಳು ಯಾವುದೇ ಅಡೆತಡೆಯಿಲ್ಲದೆ ಪ್ರಕ್ರಿಯೆಗೊಳ್ಳುತ್ತವೆ.

ಸೆಪ್ಟೆಂಬರ್ 22–23 ಬ್ಯಾಂಕ್ ರಜೆ: ಆಟೋ-ಡೆಬಿಟ್, NEFT, UPI ಮತ್ತು IMPS ವ್ಯವಸ್ಥೆ ಹೇಗಿರಲಿದೆ?
ಎನ್‌ಎಸಿಎಚ್ (NACH) ಅಥವಾ ಎನ್‌ಇಎಫ್‌ಟಿ (NEFT) ಮೂಲಕ ಬರುವ ಸಂಬಳ ಮತ್ತು ಪಿಂಚಣಿ ಹಣ ಇಂದು ಖಾತೆಗೆ ಜಮಾ ಆಗಬೇಕಿದೆ. ಆದಾಗ್ಯೂ, ಕೆಲವು ಸಂಸ್ಥೆಗಳು ರಜೆ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ಅಥವಾ ಮುಂದಿನ ಕೆಲಸದ ದಿನದಂದು ಸಂಬಳ ನೀಡುವಂತೆ ಶೆಡ್ಯೂಲ್ ಮಾಡಿರುತ್ತವೆ. ಮಧ್ಯಾಹ್ನದ ವೇಳೆಗೆ ನಿಮ್ಮ ಖಾತೆಗೆ ಹಣ ಜಮಾ ಆಗದಿದ್ದರೆ, ಮುಂದಿನ ಸೆಟಲ್ಮೆಂಟ್ ಸೈಕಲ್‌ವರೆಗೆ ಕಾಯುವುದು ಒಳಿತು. ಇನ್ನು NEFT ವಹಿವಾಟುಗಳಿಗೆ ಸಂಬಂಧಿಸಿದಂತೆ, ಸೆಟಲ್ಮೆಂಟ್ ಆದ ಎರಡು ಗಂಟೆಗಳ ಒಳಗೆ ಬ್ಯಾಂಕುಗಳು ಹಣವನ್ನು ಖಾತೆಗೆ ಜಮಾ ಮಾಡಬೇಕು ಅಥವಾ ಹಿಂತಿರುಗಿಸಬೇಕು. ತಪ್ಪಿದ್ದಲ್ಲಿ ವಿಳಂಬಕ್ಕಾಗಿ ಬ್ಯಾಂಕ್‌ಗಳು ದಂಡ ಸಹಿತ ಬಡ್ಡಿ ಪಾವತಿಸಬೇಕಾಗುತ್ತದೆ.
ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಇಂದು ಅಥವಾ ನಾಳೆ ಕೊನೆಯ ದಿನಾಂಕವಾಗಿದ್ದರೆ, ತಕ್ಷಣ ಬಿಲ್ ಪಾವತಿಸುವುದು ಒಳ್ಳೆಯದು. ಆರ್‌ಬಿಐ ನಿಯಮಗಳ ಪ್ರಕಾರ ಅಂತಿಮ ದಿನಾಂಕ ಮುಗಿದ ಮೂರು ದಿನಗಳ ನಂತರವಷ್ಟೇ ಖಾತೆಯನ್ನು 'ಬಾಕಿ' (Past Due) ಎಂದು ಗುರುತಿಸಲಾಗುತ್ತದೆ. ಆದರೂ, ನಿಗದಿತ ದಿನಾಂಕದಂದೇ ಹಣ ಜಮಾ ಆಗುವುದು ಸುರಕ್ಷಿತ. ಅಂದೇ ಬಿಲ್ ಸೆಟಲ್ ಮಾಡಲು ಯುಪಿಐ (UPI), ಐಎಂಪಿಸಿ (IMPS) ಅಥವಾ NEFT ಬೆಸ್ಟ್ ಆಪ್ಷನ್‌ಗಳಾಗಿವೆ. ಎಸ್‌ಬಿಐ ಕಾರ್ಡ್ (SBI Card) ಸೇರಿದಂತೆ ಹಲವು ಬ್ಯಾಂಕ್‌ಗಳಲ್ಲಿ ಈ ಆನ್‌ಲೈನ್ ವಿಧಾನಗಳ ಮೂಲಕ ತಕ್ಷಣವೇ ಬಿಲ್ ಅಪ್‌ಡೇಟ್ ಆಗುತ್ತದೆ.
ನೀವು ಇಂದು ಮಾಡಬೇಕಾದ್ದೇನು?: ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಅಲರ್ಟ್‌ಗಳನ್ನು ಚೆಕ್ ಮಾಡಿ, ನಿಮ್ಮ ಇಎಂಐ, ಎಸ್‌ಐಪಿ ಹಾಗೂ ಪ್ರೀಮಿಯಂ ಕಟ್ ಆಗಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ಆಟೋಪೇ ವಿಫಲವಾದರೆ, ಯುಪಿಐ ಅಥವಾ ಐಎಂಪಿಸಿ ಮೂಲಕ ಕನಿಷ್ಠ ಮೊತ್ತವನ್ನು (Minimum due) ತಕ್ಷಣ ಪಾವತಿಸಿ, ಅದರ ಸ್ಕ್ರೀನ್‌ಶಾಟ್ ಅಥವಾ ರಸೀದಿಯನ್ನು ಕಾಯ್ದಿರಿಸಿಕೊಳ್ಳಿ. ಹಣ ಜಮಾ ಆಗಲು ವಿಳಂಬವಾದರೆ ನಿಮ್ಮ ಬ್ಯಾಂಕ್ ಅಥವಾ ಕಾರ್ಡ್ ನೀಡಿದ ಸಂಸ್ಥೆಗೆ ದೂರು ನೀಡಿ ಹಾಗೂ 'ಡಿಜಿಸಾಥಿ' (DigiSaathi) ಸಹಾಯವಾಣಿಯನ್ನು ಸಂಪರ್ಕಿಸಿ. ಚೆಕ್ ಕ್ಲಿಯರೆನ್ಸ್ ಸಿಟಿಎಸ್ (CTS) ರಜಾದಿನಗಳ ವೇಳಾಪಟ್ಟಿಯನ್ನು ಅನುಸರಿಸುವುದರಿಂದ, ಚೆಕ್ ಡೆಪಾಸಿಟ್ ಮುಂದಿನ ಕೆಲಸದ ದಿನದಂದು ಸೆಟಲ್ ಆಗಬಹುದು. ದೇಶಾದ್ಯಂತ ಎಟಿಎಂಗಳ ಸೇವೆ ಲಭ್ಯವಿರಲಿದೆಯಾದರೂ, ಹಣ ಮರುತುಂಬಿಸುವ ಪ್ರಕ್ರಿಯೆಯು ಸ್ಥಳೀಯ ಲಾಜಿಸ್ಟಿಕ್ಸ್ ಮೇಲೆ ಅವಲಂಬಿತವಾಗಿರುತ್ತದೆ.


Click it and Unblock the Notifications
