ಕ್ರೆಡಿಟ್ ಕಾರ್ಡ್‌ಗಳು (Credit Cards) ಇಂದು ಕೇವಲ ಹಣ ಬಳಕೆಗೆ ಮಾತ್ರವಲ್ಲ, ಉಳಿತಾಯದ ಮಾರ್ಗಕ್ಕೂ ಸುಲಭವಾಗಿದೆ. 2026 ರಲ್ಲಿ ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್‌ಗಳು (Cash Back Credit Cards) ಇತ್ತೀಚೆಗೆ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ದಿನನಿತ್ಯದ ಖರ್ಚುಗಳಾದ ದಿನಸಿ ಖರೀದಿ, ಬಿಲ್ ಪಾವತಿ ಅಥವಾ ರೀಚಾರ್ಜ್ ಮೇಲೆ ಹಲವು ಕ್ರೆಡಿಟ್ ಕಾರ್ಡ್ ಕಂಪನಿಗಳು ತನ್ನ ಗ್ರಾಹಕರಿಗಾಗಿ ಆಕರ್ಷಕ ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್‌ಗಳನ್ನು ನೀಡುತ್ತವೆ. 2026 ರಲ್ಲಿ ಆನ್‌ಲೈನ್ ಶಾಪಿಂಗ್ (Online Shopping), ದೈನಂದಿನ ಖರೀದಿ, ಅಗತ್ಯ ಬಿಲ್‌ಗಳು ಅಥವಾ ಇತರ ಖರ್ಚುಗಳ ಮೇಲೆ ಸೂಪರ್ ಡೂಪರ್ ಕ್ಯಾಶ್ ಪಡೆಯಬಹುದು. ಹಾಗಿದ್ರೆ ಈ ವರ್ಷದ ಟಾಪ್ ಬೆಸ್ಟ್ 5 ಕ್ಯಾಶ್‌ಬ್ಯಾಕ್ ನೀಡುವ ಕ್ರೆಡಿಟ್ ಕಾರ್ಡ್‌ಗಳು ಯಾವುದು ಗೊತ್ತಾ? ಇಲ್ಲಿದೆ ನೋಡಿ.

Paisabazaar ಮತ್ತು ಇತರ ಹಣಕಾಸು ತಜ್ಞರ ಪ್ರಕಾರ, 2026 ರಲ್ಲಿ ತೆಗೆದುಕೊಳ್ಳಲು ಸೂಕ್ತವಾದ ಟಾಪ್ 5 ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್‌ಗಳ ಪಟ್ಟಿ ಇಲ್ಲಿದೆ.
ಯೆಸ್ ಬ್ಯಾಂಕ್ ಪೈಸಾಬಜಾರ್ ಪೈಸಾ ಸೇವ್ ಕ್ರೆಡಿಟ್ ಕಾರ್ಡ್:
ಜಾಯಿನಿಂಗ್ ಶುಲ್ಕವಿಲ್ಲದ ಈ ಕಾರ್ಡ್ ಸದ್ಯ ಭಾರೀ ಟ್ರೆಂಡಿಂಗ್‌ನಲ್ಲಿದೆ. ವಾರ್ಷಿಕ ಅಪ್‌ಗ್ರೇಡ್ ಶುಲ್ಕ ₹500 ರೂ. ಆಗಿದ್ದು, ಕಂಪನಿಯ ವೆಬ್‌ಸೈಟ್ ಪ್ರಕಾರ, ಪ್ರಯಾಣ ಹಾಗೂ ಊಟದ ಖರ್ಚುಗಳಿಗೆ ಶೇ 6 ಕ್ಯಾಶ್‌ಬ್ಯಾಕ್ ಲಭ್ಯ. ಇನ್ನು ಆನ್‌ಲೈನ್ ಖರೀದಿಗಳ ಮೇಲೆ ಹೆಚ್ಚಿನ ಕ್ಯಾಶ್‌ಬ್ಯಾಕ್, ದೈನಂದಿನ ಖರ್ಚುಗಳಲ್ಲೂ ರಿವಾರ್ಡ್‌ಗಳು ಲಭ್ಯವಿದೆ. ವಾರ್ಷಿಕ ₹1.2 ಲಕ್ಷ ಖರ್ಚು ತಲುಪಿದರೆ, ವಾರ್ಷಿಕ ಅಪ್‌ಗ್ರೇಡ್ ಶುಲ್ಕ ಮನ್ನಾ ಮಾಡಲಾಗುತ್ತದೆ.
ಬಾಬ್‌ಕಾರ್ಡ್ ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್ (ಬ್ಯಾಂಕ್ ಆಫ್ ಬರೋಡಾ):
BOBCARD ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್ ಆನ್‌ಲೈನ್ ಖರ್ಚುಗಳ ಮೇಲೆ ಶೇ 5, ಹಾಗೂ ಇತರೆ ಖರ್ಚುಗಳ ಮೇಲೆ ಶೇ 1 ಅನಿಯಮಿತ ಕ್ಯಾಶ್‌ಬ್ಯಾಕ್ ನೀಡುತ್ತದೆ ಎನ್ನಲಾಗಿದೆ. ಅಲ್ಲದೇ ಪೆಟ್ರೋಲ್, ಡೀಸೆಲ್ ಭರ್ತಿ ಮಾಡುವಾಗ ಕ್ರೆಡಿಟ್ ಕಾರ್ಡ್ ಬಳಸಿದರೆ ಬರುವ ಹೆಚ್ಚುವರಿ ಶುಲ್ಕವನ್ನು ಶೇ 1% ರಷ್ಟು ಮನ್ನಾ ಮಾಡಲಾಗುತ್ತದೆ. ದೊಡ್ಡ ಖರೀದಿಗಳಿಗೆ ಸುಲಭ ಇಎಂಐ, ಮತ್ತು ಕುಟುಂಬಕ್ಕೆ ಮೂರು ಉಚಿತ ಆಡ್-ಆನ್ ಕಾರ್ಡ್‌ಗಳ ಸೌಲಭ್ಯವಿದೆ. ಮಾಸಿಕ ಅಥವಾ ವಾರ್ಷಿಕ ಶುಲ್ಕ ಆಯ್ಕೆಯನ್ನೂ ಇದು ನೀಡುತ್ತದೆ.
ಕ್ಯಾಶ್‌ಬ್ಯಾಕ್ ಎಸ್‌ಬಿಐ ಕಾರ್ಡ್:
ಕ್ಯಾಶ್‌ಬ್ಯಾಕ್ ಎಸ್‌ಬಿಐ ಕಾರ್ಡ್‌ಗೆ ಜಾಯಿನಿಂಗ್ ಹಾಗೂ ವಾರ್ಷಿಕ ನವೀಕರಣ ಶುಲ್ಕ ತಲಾ ₹999 ರೂ. ಆಗಿರುತ್ತದೆ. ಎಲ್ಲಾ ಆನ್‌ಲೈನ್ ಖರ್ಚುಗಳ ಮೇಲೆ ಶೇ 5%, ಮತ್ತು ಆಫ್‌ಲೈನ್ ಖರ್ಚುಗಳ ಮೇಲೆ ಶೇ 1% ಕ್ಯಾಶ್‌ಬ್ಯಾಕ್ ನೀಡುತ್ತದೆ. ಈ ಪ್ರಯೋಜನಗಳು ನಿಯಮಿತ ಖರ್ಚು ಮಾಡುವವರಿಗೆ ಸೂಕ್ತವಾಗಿದೆ. ವಾರ್ಷಿಕ ಖರ್ಚು ₹2 ಲಕ್ಷ ತಲುಪಿದಾಗ ಅಪ್‌ಗ್ರೇಡ್ ಶುಲ್ಕ ಮನ್ನಾ ಆಗುತ್ತದೆ.
ಹೆಚ್‌ಡಿಎಫ್‌ಸಿ ಮಿಲೇನಿಯಾ ಕ್ರೆಡಿಟ್ ಕಾರ್ಡ್:
ಹೆಚ್‌ಡಿಎಫ್‌ಸಿ ಮಿಲೇನಿಯಾ ಕ್ರೆಡಿಟ್ ಕಾರ್ಡ್‌ಗೆ ಜಾಯಿನಿಂಗ್ ಹಾಗೂ ವಾರ್ಷಿಕ/ಅಪ್‌ಗ್ರೇಡ್ ಶುಲ್ಕ ತಲಾ ₹1,000. ಅಮೆಜಾನ್, ಬುಕ್‌ಮೈಶೋ, ಫ್ಲಿಪ್‌ಕಾರ್ಟ್, ಮಿಂತ್ರಾ, ಜೊಮಾಟೋ ಇತ್ಯಾದಿ ಪ್ಲಾಟ್‌ಫಾರ್ಮ್‌ಗಳಲ್ಲಿನ ಖರ್ಚುಗಳ ಮೇಲೆ ಶೇ 5%, ಹಾಗೂ ಇತರ ಖರ್ಚುಗಳ ಮೇಲೆ ಶೇ 1% ಕ್ಯಾಶ್‌ಬ್ಯಾಕ್ ಲಭ್ಯವಿದೆ.
ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್:
ಏರ್‌ಟೆಲ್‌ನ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಜಾಯಿನಿಂಗ್ ಮತ್ತು ವಾರ್ಷಿಕ ಶುಲ್ಕ ತಲಾ ₹500 ರೂ. ಆಗಿತ್ತು. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಏರ್‌ಟೆಲ್ ಮೊಬೈಲ್, ಡಿಟಿಎಚ್ ಇತ್ಯಾದಿ ಪಾವತಿಗೆ ಶೇ 25% ಕ್ಯಾಶ್‌ಬ್ಯಾಕ್ ಸಿಗುತ್ತದೆ. ಯುಟಿಲಿಟಿ ಬಿಲ್ ಪಾವತಿಗಳಿಗೂ ಇದೇ ಆಪ್ ಮೂಲಕ ಶೇ 10% ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications