ಹೂಡಿಕೆ (Investment) ಮಾಡೋದು ಹಲವರ ಅಭ್ಯಾಸ. ಆದ್ರೆ ಕೆಲವರಿಗೆ ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಒಳ್ಳೆಯದು? ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹಾಗಿದ್ದರೆ, ಕೇಂದ್ರ ಸರ್ಕಾರದ ಅಡಿಯಲ್ಲಿರುವ ಅಂಚೆ ಕಚೇರಿ ಯೋಜನೆಗಳು (Post Office Scheme) ಒಂದು ಉತ್ತಮ ಆಯ್ಕೆಯಾಗಿವೆ. ಅನೇಕ ಜನರು ನಿವೃತ್ತಿಗೆ ಹತ್ತಿರವಾದಾಗ ಮಾತ್ರ ಆದಾಯದ ಮೂಲಕ್ಕಾಗಿ ಬಳಸುತ್ತಾರೆ. ಆದರೆ ಹೂಡಿಕೆಯ ಪ್ಲಾನ್ ಇರುವವರಿಗೆ ಇಲ್ಲೊಂದು ಬೆಸ್ಟ್ ಯೋಜನೆ ಇದೆ ನೋಡಿ.

ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಹಿರಿಯ ನಾಗರಿಕರಿಗೆ ಅತ್ಯುತ್ತಮ ಮತ್ತು ಉತ್ತಮ ಆದಾಯವನ್ನು ನೀಡುತ್ತದೆ. ಪ್ರಸ್ತುತ, ಈ ಯೋಜನೆಗೆ ಅಂಚೆ ಕಚೇರಿ 8.2% ಬಡ್ಡಿದರವನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಒಮ್ಮೆಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಸಿದ್ಧರಿದ್ದರೆ, ಭವಿಷ್ಯದಲ್ಲಿ ಉತ್ತಮ ಲಾಭ ಗಳಿಸಬಹುದು. ಈ ಯೋಜನೆ ಅಪಾಯವೂ ಕಡಿಮೆ, ಆದಾಯವೂ ಹೆಚ್ಚು.
ಯಾರು ಅಕೌಂಟ್ ತೆರೆಯಬಹುದು?
60 ವರ್ಷಕ್ಕಿಂತ ಮೇಲ್ಪಟ್ಟ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ (VRS) ಪಡೆಯುವವರು 60 ವರ್ಷಕ್ಕಿಂತ ಮೊದಲು ಈ ಯೋಜನೆಯ ಲಾಭ ಪಡೆಯಬಹುದು. ವಿಆರ್‌ಎಸ್ ಪಡೆಯುವವರು 55 ವರ್ಷದಿಂದ ಮತ್ತು ರಕ್ಷಣಾ ಕ್ಷೇತ್ರದ ನೌಕರರು 50 ವರ್ಷದಿಂದ ಈ ಯೋಜನೆಯನ್ನು ಬಳಸಿಕೊಳ್ಳಬಹುದು. ಪತಿ ಮತ್ತು ಪತ್ನಿ ಜಂಟಿ ಹೂಡಿಕೆಯ ಮೂಲಕ ಈ ಯೋಜನೆಯಿಂದ ಆದಾಯ ಗಳಿಸುವ ಅವಕಾಶವೂ ನೀಡಲಾಗಿದೆ.
ಯೋಜನೆಯ ಪ್ರಯೋಜನಗಳು:
ಈ ಯೋಜನೆಯಲ್ಲಿ 1000 ರೂಪಾಯಿಗಳಿಂದ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ ಗರಿಷ್ಠ 30 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಆದರೆ, ಈ ಯೋಜನೆಯಲ್ಲಿ ಹೂಡಿಕೆ ಒಮ್ಮೆಲೇ ಮಾಡಬೇಕಾಗುತ್ತದೆ. ಬಡ್ಡಿಯನ್ನು ತ್ರೈಮಾಸಿಕವಾಗಿ ಜಮಾ ಮಾಡಲಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಸಹ ಈ ಯೋಜನೆ ಮೂಲಕ ಪಡೆಯಬಹುದು.
ನಿಯಮಗಳು:
ಯೋಜನೆಯ ಅವಧಿ 5 ವರ್ಷಗಳಾಗಿರುತ್ತದೆ. ಹೂಡಿಕೆದಾರರು ಬಯಸಿದರೆ ಇದನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು. ಹೂಡಿಕೆದಾರರು ಯಾವಾಗ ಬೇಕಾದರೂ ಖಾತೆಯನ್ನು ಮುಚ್ಚುವ ಆಯ್ಕೆಯನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೇ, ಖಾತೆ ತೆರೆದು ಒಂದು ವರ್ಷದೊಳಗೆ ಹಿಂಪಡೆದರೆ, ಯಾವುದೇ ಬಡ್ಡಿ ಸಿಗುವುದಿಲ್ಲ. 1-2 ವರ್ಷಗಳೊಳಗೆ ಖಾತೆ ಮುಚ್ಚಿದರೆ, ಅಸಲು ಮೊತ್ತದ 1.5% ಕಡಿತಗೊಳಿಸಲಾಗುತ್ತದೆ. 5 ವರ್ಷದೊಳಗೆ ಮುಚ್ಚಿದರೆ, ಅಸಲು ಮೊತ್ತದ 1% ಕಡಿತಗೊಳಿಸಲಾಗುತ್ತದೆ.
ತಿಂಗಳಿಗೆ 45,100 ರೂಪಾಯಿ ಆದಾಯ:
ಒಬ್ಬ ವ್ಯಕ್ತಿಯು ಗರಿಷ್ಠ 30 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಆದರೆ, ತ್ರೈಮಾಸಿಕವಾಗಿ 45,100 ರೂಪಾಯಿ ಪಡೆಯಲು ನೀವು ಒಟ್ಟು 22 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಸಾಕು. ಅಂದರೆ, ನೀವು ನಿಮ್ಮ ಸಂಗಾತಿಯೊಂದಿಗೆ ಜಂಟಿ ಹೂಡಿಕೆ ಮಾಡುವುದಾದರೆ, ಇಬ್ಬರೂ ತಲಾ 11 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಅಂದರೆ ತ್ರೈಮಾಸಿಕವಾಗಿ 45,100 ರೂಪಾಯಿ ಎಂದರೆ, ತಿಂಗಳಿಗೆ 15,000 ರೂಪಾಯಿಯಂತೆ ಸಿಗಲಿದೆ. ಅವಧಿ ಪೂರ್ಣಗೊಂಡ ನಂತರ ನಿಮ್ಮ ಹೂಡಿಕೆ ಮೊತ್ತವು ನಿಮಗೆ ಸಿಗಲಿದೆ.


Click it and Unblock the Notifications