ಗ್ರಾಹಕರಿಗೆ ಅದ್ಭುತ ರೀಚಾರ್ಜ್ ಪ್ಲಾನ್‌ಗಳನ್ನು (Recharge Plans) ಪರಿಚಯಿಸುವ ಮೂಲಕ, ಹಲವು ಟೆಲಿಕಾಂ ಕಂಪನಿಗಳು ತನ್ನ ಅಸ್ತಿತ್ವವನ್ನು ದೇಶದಲ್ಲಿ ಉಳಿಸಿಕೊಂಡಿದೆ. ಅದರಲ್ಲೂ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ ಹಲವಾರು ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಅದರಲ್ಲೂ ಕೈಗೆಟಕುವ ಬೆಲೆಯಲ್ಲಿ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುವ ಮೂಲಕ, ಗ್ರಾಹಕರನ್ನು ತನ್ನತ್ತ ಸೆಳೆದು ಅತೀ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇದೀಗ ಮತ್ತೆ ಹೊಸ ರೀಚಾರ್ಜ್ ಯೋಜನೆಗಳನ್ನು ಗ್ರಾಹಕರಿಗೆ ಪರಿಚಯಿಸಿದೆ.

ರಿಲಯನ್ಸ್ ಜಿಯೋ ಇತ್ತೀಚೆಗೆ ಭಾರತದಾದ್ಯಂತ ತನ್ನ ಬಳಕೆದಾರರಿಗಾಗಿ ₹450 ಬೆಲೆಯ ಹೊಸ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಮೈಜಿಯೋ ಅಪ್ಲಿಕೇಶನ್ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಈ ರೀಚಾರ್ಜ್ ಯೋಜನೆಯ ಮಾಹಿತಿಯನ್ನು ಪಡೆಯಬಹುದು. ಹಬ್ಬದ ಪ್ರಯುಕ್ತ ಜಾರಿಗೆ ತಂದಿರುವ ಈ ವಿಶೇಷ ಪ್ಲಾನ್ 36 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇದು ದೈನಂದಿನ ಡೇಟಾ ಮತ್ತು ಕರೆ ಸೌಲಭ್ಯಗಳ ಜೊತೆಗೆ, ಸ್ಟ್ರೀಮಿಂಗ್ ವಿಷಯ, ಕ್ಲೌಡ್ ಸ್ಟೋರೇಜ್ ಮತ್ತು ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ.
36 ದಿನಗಳ ಅಲ್ಪಾವಧಿಯ ಮಾನ್ಯತೆಯಿಂದಾಗಿ ಈ ಯೋಜನೆ ಕೇಳಲು, ನೋಡಲು ದುಬಾರಿ ಎನಿಸಬಹುದು. ಆದರೆ, ಜಿಯೋ ಇದನ್ನು ಡೇಟಾ ಮತ್ತು ಕರೆಗಳ ಜೊತೆಗೆ ಇತರೆ ಡಿಜಿಟಲ್ ಸೇವೆಗಳಿಗೂ ಒತ್ತು ನೀಡುವ ಹಬ್ಬದ ಪ್ಯಾಕೇಜ್ ಆಗಿ ಜಾರಿಗೆ ತಂದಿದೆ.
450 ರೂ. ರೀಚಾರ್ಜ್ ಪ್ಲಾನ್ ಪ್ರಯೋಜನಗಳು!
₹450 ಬೆಲೆಯ ಜಿಯೋ ಹಬ್ಬದ ಪ್ಲಾನ್ ಹಲವು ಪ್ರಯೋಜನಗಳನ್ನು ಹೊಂದಿದೆ. ಈ ಅಲ್ಪಾವಧಿಯ ಯೋಜನೆಯು 36 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರತಿದಿನ 2 GB ಹೈ-ಸ್ಪೀಡ್ ಡೇಟಾವನ್ನು ಸಹ ನೀಡುತ್ತದೆ. ಜಿಯೋ 5G ಲಭ್ಯವಿರುವ ಪ್ರದೇಶಗಳಲ್ಲಿ, ಬಳಕೆದಾರರು ದೈನಂದಿನ 2 GB ಡೇಟಾ ಮಿತಿಯ ನಂತರವೂ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸದೆ ಅನಿಯಮಿತ 5G ಡೇಟಾವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಈ ಪ್ಲಾನ್ ಭಾರತದಾದ್ಯಂತ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ವಾಯ್ಸ್ ಕರೆ ಸೌಲಭ್ಯ ನೀಡುತ್ತದೆ. ಇದರೊಂದಿಗೆ ಪ್ರತಿದಿನ 100 SMS ಗಳನ್ನು ಸಹ ಕಳುಹಿಸಬಹುದು. ಇವುಗಳ ಜೊತೆಗೆ, ಈ ಯೋಜನೆ ಮೂರು ತಿಂಗಳ ಜಿಯೋಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಷನ್ ಸೌಲಭ್ಯ ನೀಡುತ್ತದೆ. ಇದು ಬಳಕೆದಾರರಿಗೆ ತಮ್ಮ ಮೊಬೈಲ್ ಸಾಧನಗಳಲ್ಲಿ ಚಲನಚಿತ್ರಗಳು, ಟಿವಿ ಶೋಗಳು, ಕ್ರೀಡೆಗಳು ಮತ್ತು ಇತರ ಮನರಂಜನಾ ವಿಷಯವನ್ನು ಆನಂದಿಸಲು ಅವಕಾಶ ನೀಡುತ್ತದೆ.
ಡೇಟಾ ಮತ್ತು ಮನರಂಜನೆ ಹೊರತಾಗಿ, ಈ ₹450 ರೂ.ನ ರೀಚಾರ್ಜ್ ಯೋಜನೆಯು ಹೆಚ್ಚುವರಿ ಸೇವೆಗಳನ್ನು ಸಹ ನೀಡುತ್ತದೆ. ಇವುಗಳಲ್ಲಿ ಎರಡು ತಿಂಗಳ ಜಿಯೋ ಹೋಮ್ (Jio Home) ಟ್ರಯಲ್, 18 ತಿಂಗಳ ಗೂಗಲ್ ಜೆಮಿನಿ AI ಪ್ರೊ (Google Gemini AI Pro) ಪ್ಲಾನ್ ಮತ್ತು 50 GB ಜಿಯೋ ಕ್ಲೌಡ್ (Jio Cloud) ಸ್ಟೋರೇಜ್ ಸೇರಿವೆ. ಈ ಪ್ಲಾನ್ ಹೊಂದಿರುವ ಗ್ರಾಹಕರು ಜಿಯೋಮೀಟ್ (JioMeet), ಜಿಯೋ ಗೇಮ್ಸ್ (JioGames), ಜಿಯೋ ಸ್ಫಿಯರ್ (JioSphere) ಮತ್ತು ಜಿಯೋ ಫೈನಾನ್ಸ್ (JioFinance) ನಂತಹ ಅಪ್ಲಿಕೇಶನ್‌ಗಳಿಗೂ ಪ್ರವೇಶವನ್ನು ಪಡೆಯಬಹುದು.


Click it and Unblock the Notifications