ಹೂಡಿಕೆ (Investment) ಮಾಡಬೇಕು, ಉಳಿತಾಯ (Savings) ಮಾಡಬೇಕು ಅನ್ನೋದು ಹಲವರ ಕನಸು. ಎಷ್ಟೇ ಕಡಿಮೆ ಸಂಬಳ ಇರಲಿ, ಆದ್ರೆ ಹೂಡಿಕೆ ಅಭ್ಯಾಸ ಹೊಂದಿರಬೇಕು ಎಂದು ತಜ್ಞರು ಹೇಳುತ್ತಲೇ ಇರುತ್ತಾರೆ. ನಾವು ಮಾಡುವ ಸಣ್ಣ ಉಳಿತಾಯ, ದೀರ್ಘಾವಧಿಯಲ್ಲಿ ದೊಡ್ಡ ಮಟ್ಟಿನಲ್ಲಿ ಆದಾಯ ತಂದುಕೊಡಬಹುದು. 2026ನೇ ಸಾಲಿಗೆ ಭಾರತದಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ, ಕಡಿಮೆ-ಅಪಾಯದ ಹಾಗೂ ಸುರಕ್ಷಿತ ಹೂಡಿಕೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಮೂಲಕ ಕಡಿಮೆ ಹೂಡಿಕೆಯೊಂದಿಗೆ, ಉತ್ತಮ ಆದಾಯ ಪಡೆಯಬಹುದು. ಸರ್ಕಾರಿ ಬೆಂಬಲಿತ ಪಿಪಿಎಫ್ (PPF), ಎಸ್‌ಎಸ್‌ವೈ (SSY) ಯೋಜನೆಗಳಿಂದ ಆರ್‌ಬಿಐ ಫ್ಲೋಟಿಂಗ್ ರೇಟ್ ಬಾಂಡ್‌ಗಳವರೆಗೆ, ಇಲ್ಲಿದೆ ನೋಡಿ ಉತ್ತಮ ಆದಾಯ ಪಡೆಯುವ ಯೋಜನೆಗಳು.

2026ರ ಈ ಟಾಪ್ 5 ಸುರಕ್ಷಿತ ಹೂಡಿಕೆ ಯೋಜನೆಗಳನ್ನು ಅವುಗಳ ಆದಾಯ, ತೆರಿಗೆ ಲಾಭಗಳು ಮತ್ತು ಲಾಕ್-ಇನ್ ಅವಧಿಗಳ ಆಧಾರದ ಮೇಲೆ ವಿವರಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಸಾರ್ವಜನಿಕ ಭವಿಷ್ಯ ನಿಧಿ (Public Provident Fund - PPF): ದೀರ್ಘಾವಧಿ ಸುರಕ್ಷಿತ ಹೂಡಿಕೆಗಾಗಿ PPF ಬೆಸ್ಟ್ ಎಂದು ಪರಿಗಣಿಸಲಾಗಿದೆ. ಇದು ಭಾರತ ಸರ್ಕಾರದಿಂದ ಸ್ವಾಮ್ಯದಡಿ EEE (Exempt-Exempt-Exempt) ತೆರಿಗೆ ಸ್ಥಿತಿಯನ್ನು ಹೊಂದಿದೆ. ಅಂದರೆ ಗಳಿಸಿದ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತ ಸಂಪೂರ್ಣ ತೆರಿಗೆ-ಮುಕ್ತವಾಗಿರುತ್ತದೆ.
ವಾರ್ಷಿಕ 7.1% ಬಡ್ಡಿ ನೀಡುವ ಈ ಯೋಜನೆಗೆ 15 ವರ್ಷಗಳ ಹೂಡಿಕೆ ಅವಧಿಯಿದ್ದು, ಇದನ್ನು 5 ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸಬಹುದು. ವಾರ್ಷಿಕ ಗರಿಷ್ಠ ₹1.5 ಲಕ್ಷ ಹೂಡಿಕೆಗೆ ಅವಕಾಶವಿದೆ.
ಆರ್‌ಬಿಐ ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್‌ಗಳು (RBI Floating Rate Savings Bonds - FRSB): ಬ್ಯಾಂಕ್ FD ಗಿಂತ ಹೆಚ್ಚಿನ ಆದಾಯ ಬಯಸುವವರಿಗೆ FRSB ಉತ್ತಮ ಆಯ್ಕೆಯಾಗಿದೆ. ಇವು ಆರ್‌ಬಿಐ ಸರ್ಕಾರದ ಪರವಾಗಿ ನೀಡುವ ಬಾಂಡ್‌ಗಳಾಗಿದ್ದು, ಬಡ್ಡಿದರವನ್ನು ಪ್ರತಿ ಆರು ತಿಂಗಳಿಗೊಮ್ಮೆ ನೀಡಲಾಗುತ್ತದೆ.
ಪ್ರಸ್ತುತ ಬಡ್ಡಿದರ (ಜನವರಿ-ಜೂನ್ 2026) ವಾರ್ಷಿಕ 8.05%, ಇದು NSC ದರಕ್ಕಿಂತ 0.35% ಹೆಚ್ಚು. ಇದರ ಅವಧಿ 7 ವರ್ಷ. ಬಡ್ಡಿ ಆದಾಯವು ನಿಮ್ಮ ತೆರಿಗೆ ಸ್ಲ್ಯಾಬ್ ಪ್ರಕಾರ ಸಂಪೂರ್ಣ ತೆರಿಗೆಗೆ ಒಳಪಟ್ಟಿರುತ್ತದೆ. ಸರ್ಕಾರದ ಗ್ಯಾರಂಟಿಯೊಂದಿಗೆ ಉತ್ತಮ ಬಡ್ಡಿ ಬಯಸುವವರಿಗೆ ಇದು ಬೆಸ್ಟ್.
ಸ್ಥಿರ ಠೇವಣಿಗಳು (Fixed Deposits - ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್‌ಗಳು): ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎಫ್‌ಡಿಗಳು ಇಂದಿಗೂ ಭಾರೀ ಬೇಡಿಕೆಯಲ್ಲಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಉತ್ತಮ ಭದ್ರತೆ ನೀಡಿದರೆ, ಪೋಸ್ಟ್ ಆಫೀಸ್ ಎಫ್‌ಡಿಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಸುರಕ್ಷಿತವಾಗಿದೆ
ಪೋಸ್ಟ್ ಆಫೀಸ್ 5 ವರ್ಷದ ಎಫ್‌ಡಿಗೆ ವಾರ್ಷಿಕ 7.5% ನೀಡಿದರೆ, ಪ್ರಮುಖ ಬ್ಯಾಂಕ್‌ಗಳು 6.5%-7.25%, ಸಣ್ಣ ಹಣಕಾಸು ಬ್ಯಾಂಕುಗಳು 8.0% ವರೆಗೆ ಬಡ್ಡಿದರ ನೀಡುತ್ತದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Savings Certificate - NSC): NSC, ಅಂಚೆ ಕಚೇರಿಗಳಲ್ಲಿ ಲಭ್ಯವಿರುವ ಉತ್ತಮ ಆದಾಯ ನೀಡುವ ಯೋಜನೆ ಎಂದೆನಿಸಿದೆ. ಮಧ್ಯಮ ಆದಾಯದ ಹೂಡಿಕೆದಾರರು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಉಳಿಸಲು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಬಡ್ಡಿದರ ವಾರ್ಷಿಕ 7.7% ಆಗಿರುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana - SSY): ಹೆಣ್ಣುಮಕ್ಕಳಿಗಾಗಿ ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡಾ ಒಂದು.ಅತ್ಯಧಿಕ ಬಡ್ಡಿ ನೀಡುವ ಮೂಲಕ ಭಾರೀ ಜನಪ್ರಿಯತೆ ಪಡೆದಿದೆ. ಇನ್ನು ಈ ಯೋಜನೆಯಲ್ಲಿ ಬಡ್ಡಿದರ ವಾರ್ಷಿಕ 8.2% ಆಗಿದೆ. ಖಾತೆ ತೆರೆದ 21 ವರ್ಷಗಳ ನಂತರ ಮೆಚ್ಯೂರಿಟಿ ಪಡೆಯುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications